*ಚಂದಿರನ ಬಂಧನ*
ಅರೆ ಅದೆಷ್ಟು ಕತ್ತಲು ಕವಿಯಿತು
ಹುಣ್ಣಿಮೆಯ ಊರಲ್ಲಿಂದು
ಒಹ್ ಅರ್ಥವಾಯ್ತು:
ಇಷ್ಟು ಬೇಗ ಬಂಧಿಸಿದೆಯಾ ಹುಡುಗಿ
ಚುಕ್ಕಿ ಚಂದ್ರಮರೆಲ್ಲರನ್ನು
ಕಣ್ಣ ರೆಪ್ಪೆಯಂಚಲ್ಲಿ..::
ಹೇ ಚಂದ್ರ
ನಿಲ್ಲೋ ಮಾರಾಯ
ನಂದೊಂದು ಮಾತು ಕೇಳಿಂದು
ನೀನೂ ಮರುಳಾಗಬೇಡ
ಮುಂಗುರುಳ ಕಂಡು ನನ್ನಂತೆ..::
ಎಷ್ಟು ಹೇಳಿದರೂ ಕೇಳಲೊಲ್ಲೆ
ನಾನೇನು ಮಾಡಲಿ ಹೇಳು
ಅದೆಷ್ಟೇ ಧಾರ್ಷ್ಟ್ಯನಾಗಿದ್ದರೂ ಭಯವಿದೆ ನನಗೆ
ಕಾರಣ ಅವಳ ಬೆಂಬಲವಿದೆ ನಿನಗೆ..::
ಒಮ್ಮೆ ತಿರುಗಿನೋಡು ನಿನ್ನೂರಿನೆಡೆಗೆ
ಬೆಳಕಿಲ್ಲದ ಬಾಂದಳ
ಚಿಮಣಿ ಬುಡ್ಡಿಯ ಆಶ್ರಯಿಸುತ್ತಿದೆ
ಈಗಂತೂ ಅವಳ ಬಿಸಿಯುಸಿರು
ಚಿಮಣಿಯ ಆಯಸ್ಸನ್ನೂ ಕಸಿಯುತ್ತಿದೆ
ಮತ್ತೆ ಕತ್ತಲಾವರಿಸುತ್ತಿದೆ…:
✍ಚೇತನ್ ನಾಗರಾಳ…: