ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ
ಶೈಶವ, ಬಾಲ್ಯ, ಹರೆಯ, ವೃದ್ಧಾಪ್ಯ
ಬದುಕಿನ ನಾಲ್ಕು ಹಂತಗಳು-
ಪಾಳಿಯ ಮೇಲೆ ಎಲ್ಲವನ್ನೂ
ಒಂದೊಂದಾಗಿ ಅನುಭವಿಸಲೇಬೇಕು-
ನಮ್ಮಿಚ್ಛೆಯಂತಲ್ಲ-
ಅವನಿಚ್ಛೆಯಂತೆ—
ನಾನೋಬ್ಬನೇ ಅಲ್ಲ – ಪ್ರತಿಯೊಬ್ಬರೂ…
ಅವನು “ಸುರೇಶ”ನಿರಲಿ “ಭುವೀಶ”ನಿರಲಿ
ಏನೂ ವ್ಯತ್ಯಾಸವಾಗುವದಿಲ್ಲ—
ಇಲ್ಲಿ ಯಾವುದೇ ಲಾಬಿ ಕೆಲಸ ಮಾಡುವದಿಲ್ಲ
ಹಾ, ಒಂದು ಮಾತು..ನಿನ್ನ ದಾರಿ ಸರಿಯಿದ್ದರೆ
ಉದ್ದೇಶ ಪ್ರಾಮಾಣಿಕವಿದ್ದರೆ…
ಕಾಣದೊಂದು ದೈವ ನಿನ್ನ ಬ್ಯಾಟರಿ
ಆದಾಗಲೆಲ್ಲ ಮಾಡಬಹುದು.
ಅದೃಷ್ಟ ಕೈ ಕೊಟ್ಟಾಗಲೆಲ್ಲ ಕೈ
ಹಿಡಿದು ಮೇಲೆತ್ತಬಹುದು..
ಗುರಿಕಾಣಿಸಬಹುದು.
ಆದರೆ.. ಆದರೆ..
ನೀನೂ ಉಳಿದವರನ್ನು ಮೇಲೆತ್ತುವ
ಮನಸುಳ್ಳವ ಎಂದು ಆ ದೈವಕ್ಕೆ
ಖಚಿತವಾಗಬೇಕಷ್ಟೇ-