Shopping Cart

Need help? Call +91 9535015489

📖 Paperback books shipping available only in India.

✈ Flat rate shipping

“ಶ್ರೇಯಾ ಸಿರಿಕಂಠಕ್ಕೆ ಮನಸೋತ ಪ್ರೇಕ್ಷಕ”

ಮಳೆ ಸುರಿಸುವ ಮೋಡಗಳು ಸಂಜೆಯ ಹೊತ್ತಿಗೆ ಒಂದೆಡೆ ಸೇರುತ್ತಿದ್ದಂತೆ;ಮಹದೇವಪುರ ರಸ್ತೆಯ ಫೀನಿಕ್ಸ್‌ ಮಾಲ್‌ ಒಳಗೆ ಸಂಗೀತಾಸಕ್ತರು ಒಂದುಗೂಡಿದ್ದರು. ಅತ್ತ ಸುಳಿಗಾಳಿ ತೇಲುತ್ತಿದ್ದಂತೆ, ಇತ್ತ ಬಾಲಿವುಡ್ ಹಾಗೂ ಕನ್ನಡ ಗೀತೆಗಳೂ ಅಲೆ ಅಲೆಯಾಗಿ ತೇಲಿಬಂದವು.ಸುನ್‌ರಹಾ ಹೈ.., ಮನವಾ ಲಾಗೇ.., ಬರಸೋರೆ ಮೇಘಾ.. – ಹೀಗೆ ಒಂದಿನಿತೂ ಬಿಡುವು ಕೊಡದಂತೆ ತಮ್ಮದೇ ಗೀತೆಗಳಿಗೆ ಮತ್ತೆ ದನಿಯಾದರು ಶ್ರೇಯಾ ಘೋಷಾಲ್. ಜೇನಿನ ಕಂಠದ ಅವರ ಹಾಡುಗಳನ್ನು ಕೇಳಿದ ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ.ಫೀನಿಕ್ಸ್ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು;ಇತ್ತೀಚೆಗೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರ ಮನ ಸೆಳೆಯಿತು.ಕನ್ನಡದ ಮಾಧುರ್ಯಪೂರ್ಣ ಗೀತೆಗಳು ಶ್ರೇಯಾ ಕಂಠದಲ್ಲಿ ನಲಿದಾಡಿದವು.ಸಂತಸ, ಪ್ರೀತಿ, ಮಮತೆಯ ಉತ್ಕಟತೆ ಹೆಚ್ಚಿಸಿದವು. ಅಷ್ಟು ಹೊತ್ತು ಕಾದು ಕುಳಿತಿದ್ದ ವರುಣ, ಕಾರ್ಯಕ್ರಮದ ಕೊನೆಯ ಹೊತ್ತಿಗೆ ಮಳೆಯ ಸಿಂಚನ ಮಾಡಿ ಪುಳಕ ಮೂಡಿಸಿದ.

courtsey:prajavani.net

https://www.prajavani.net/artculture/music/shreya-ghoshal-640189.html

This site uses Akismet to reduce spam. Learn how your comment data is processed.