ಅಂದು ಸಾರ್ವಜನಿಕ ರಜೆ, ಬಸ್ಸುಗಳು ಕೊಂಚ ವಿರಳವಾಗಿದ್ದ ಹೊತ್ತು. ಯಾವುದೂ ಕೆಲಸದ ನಿಮಿತ್ತ ಮಾರ್ಕೆಟಿಗೆ ಹೋಗುವ ಬಸ್ ಏರಿ ಕುಳಿತಿದ್ದೆ. ಬಸ್ಸು ಹೊರಡುವ ಸಮಯ. ಸೀಟುಗಳೆಲ್ಲಾ ಆಗಲೇ ಭರ್ತಿಯಾಗಿದ್ದವು. ಪ್ರಯಾಣಿಕರೆಲ್ಲ ಡ್ರೈವರ ನಿರೀಕ್ಷೆಯಲ್ಲಿದ್ದರು. ಆ ಹೊತ್ತಿಗೆ ಹಸುಗೂಸೊಂದನ್ನು ಸೊಂಟಕ್ಕೇರಿಸಿಕೊಂಡು ಬಸ್ಸು ಏರಿದ ಹೆಂಗಸು, ದಯಾದ್ರರ್ ಳಾಗಿ ಅಕ್ಕಾ…. ಅಣ್ಣಾ….. ಅಮ್ಮಾ…. ತಾಯಿ…. ಎನ್ನುತ್ತಾ, ತನ್ನ ಹಸುಗೂಸನ್ನು ತೋರಿಸುತ್ತ ಕಾಸಿಗಾಗಿ ಕೈ ಚಾಚಿ ಕಾಡತೊಡಗಿದಳು. ಪ್ರಯಾಣಿಕರಿಂದ ಅಷ್ಟೋ – ಇಷ್ಟೋ ಕಾಸು ಗಿಟ್ಟಿಸಿಕೊಂಡು ಬಸ್ಸಿನಿಂದಿಳಿದವಳು, ಅಲ್ಲೇ ಪಕ್ಕದ ಮರದ […]
Month: May 2015
ತರಾವರಿ ಈ ಬದುಕು
ಬದುಕು ದುಸ್ತರವೆನಿಸೆ ಮನದ ಬೆನ್ನು ಸವರಿ ನುಡಿವೆ ಹೆದರುವೆ ಏಕೆ ಬದುಕೇನು ಸ್ಥಿರವೆ? ತರವೋ ದುಸ್ತರವೋ ಜೀವಿಸಿಬಿಡೊಮ್ಮೆ ಇರುವುದೊಂದೇ ಬದುಕು ಈ ಜನುಮಕೆ..
ಅಧಿಕ ಮಾಸ – ಸಂಕ್ಷಿಪ್ತ ವಿವರಣೆ
ರವಿ ಅಶ್ವಿನಿ ನಕ್ಷತ್ರದ ಆರಂಭದ ಬಿಂದುವಿನಿಂದ ಪ್ರಾರಂಭಿಸಿ ಕ್ರಾಂತಿವ್ರತ್ತದಲ್ಲಿ ಸಂಚರಿಸುತ್ತ ತಿರುಗಿ ಅದೇ ಬಿಂದುವಿನ ಬಳಿ ಬರುವ ಕಾಲಾವಧಿಗೆ ಒಂದು ಸೌರ ವರ್ಷ ಎನ್ನುತ್ತಾರೆ. ಸೂರ್ಯ ಸಿದ್ಧಾಂತದ ಪ್ರಕಾರ ಸೌರ ವರ್ಷದ ಕಾಲಾವದಿ ೩೬೫ ದಿವಸ ೧೫ ಘಟಿಕ ೨೨ ಪಳ ೫೨.೫೮ ವಿಪಳ ಎಂದು ಹೇಳಲಾಗಿದೆ. ಚಂದ್ರ ಹಾಗೂ ರವಿ ಒಂದು ಯುತಿ ಬಿಂದುವಿನಿಂದ (ಅಮಾವಾಸ್ಯೆ) ತಮ್ಮ ದೈನಂದಿನ ಗತಿಯಿಂದ ಸಂಚರಿಸುತ್ತ ಮುಂದಿನ ಯುತಿ ಬಿಂದುವಿನ (ಅಮಾವಾಸ್ಯೆ) ವರೆಗೆ ತಲುಪುವ ಕಾಲಕ್ಕೆ ಒಂದು ಚಾಂದ್ರಮಾಸ ಎನ್ನುತ್ತಾರೆ. […]
ಶೋಧನೆಗಳು ಮತ್ತು ನಮ್ಮ ಜೀವನ – ೨
ಮೊದಲ ಸರಣಿಯ ಲೇಖನ ಓದಿ ಒಬ್ಬ ಓದುಗ ಕೇಳಿದ ಪ್ರಶ್ನೆ – ಈ ಸರಣಿಯ ಉದ್ದೇಶ ವಿಜ್ಞಾನ ಅಥವಾ ತಂತ್ರಜ್ಞಾನದ ಶೋಧನೆ ತಪ್ಪೆಂದು ತಿಳಿಸಲೇನು? ಖಂಡಿತ ನನ್ನ ಉದ್ದೇಶ ತಪ್ಪೆಂದು ತೋರಿಸುವದಲ್ಲ, ಪ್ರತಿಯೊಂದು ಶೋಧನೆಯ ಪ್ರಭಾವ ಜೀವನದಲ್ಲಿ ಎರಡು ವಿಧದಲ್ಲಿ ಆಗುತ್ತದೆ ೧. ರಚನಾತ್ಮಕ ಮತ್ತು ೨. ವಿನಾಶಕಾರಕ. ಶೋಧನೆಯ ಪ್ರಭಾವ ಉಪಯೋಗಿಸುವರಿಗೆ ಗೊತ್ತಿದ್ದೋ, ಗೊತಿಲ್ಲದೆಯೋ ತನ್ನ ಹಾದಿ ಹಿಡಿದು ಹೊರಡುತ್ತದೆ. ಗೊತ್ತಿದ್ದೂ ರಚನಾತ್ಮಕದ ಪ್ರಭಾವದಿಂದ ವಿನಾಶಕಾರಕದ ಹಾದಿ ಹಿಡಿದ ಒಂದು ಶೋಧನೆಯ ಉದಾಹರಣೆ ಅಣ್ವಸ್ತ್ರ ಸಿಡಿಗುಂಡು […]
ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೧
‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ. ಆದರೆ ದಾಸರು ಈ ಬಗ್ಗೆ ಚಿಂತಿಸಿದವರಲ್ಲ. ‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು ಕೇಳಿದ್ದಾರೆ. ೧೨ನೆಯ ಶತಮಾನದ ಬಸವಣ್ಣನವರು ಇದೇ ರೀತಿಯಲ್ಲಿ ‘ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ […]
ಆಹಾ, ನಾವ್ ಆಳುವವರು!!
ಆಹಾ, ನಾವ್ ಆಳುವವರು ಓಹೋ ನಾವ್ ಅಳಿಸುವವರು ||ಪ|| ಕುರ್ಚಿಯ ಕಾಲ್ಗಳನೊತ್ತುವೆವು ತಡೆದರೆ ಕೈಯನೆ ಕಡಿಯುವೆವು| ದೇಶವ ಪೊರೆಯುವ ಹಿರಿಗಣರು ಖಜಾನೆ ಕೊರೆಯುವ ಹೆಗ್ಗಣರು| ಜಾತ್ಯಾತೀತರು ಎನ್ನುವೆವು ಜಾತೀಯತೆಯ ಬೆಳೆಸುವೆವು|
ಪದಬಂಧದ ಪ್ರಬಂಧ
ನಾವು ಸಣ್ಣವರಿದಾಗ ಕಲಿತ ಅಭ್ಯಾಸಗಳು ಅಷ್ಟು ಸುಲಭವಾಗಿ ಬಿಡುವುದಕ್ಕೆ ಆಗದು. ಅಷ್ಟಿಲ್ಲದೆ ತಿಳಿದವರು ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕಲಿಸುವುದು ತುಂಬಾ ಮುಖ್ಯ. ಹಾಗಂತ ಹೇಳುವಾಗ ಇನ್ನೊಂದು ಗಾದೆ ನೆನಪಿಗೆ ಬರುತ್ತಿದೆ. ‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?’. ಕೆಲವೊಂದು ಅಭ್ಯಾಸ, ವಿದ್ಯೆಗಳು, ದೊಡ್ಡವರಾದ ಮೇಲೆ ಕಲಿಯುವುದು ಕಷ್ಟ. ನನ್ನ ಅನುಭವದಲ್ಲಿ ಹೇಳುವುದಾದರೆ, ನಾನು ಸಣ್ಣವಳಿದ್ದಾಗಿನಿಂದ ತುಂಬಾ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಜುವುದ ಮಾತ್ರ ಕಲಿಯಲಿಲ್ಲ. ಈಗ ಸುಮಾರು ಐದು […]
ಸತ್ಯ
ಕಷ್ಟವೇನಲ್ಲ, ಹುಡುಕಿದರೆ ಸಿಕ್ಕೀತು ಬದುಕಲಗತ್ಯದ ಪ್ರೀತಿ! ಕಠಿಣಾತಿ ಕಷ್ಟ, ಹುಡುಕಿದರೂ ಸಿಕ್ಕದು ಎಲ್ಲಿಹುದದು ಸತ್ಯ?
ಶೋಧನೆಗಳು ಮತ್ತು ನಮ್ಮ ಜೀವನ – ೧
ಜಗತ್ತಿನ ಎಲ್ಲ ಜೀವಿಗಳಲ್ಲಿ ಮನುಷ್ಯನಿಗೆ ವಿಶಿಷ್ಟವಾದ ವರದಾನವಿದೆ, ಅದುವೇ ಮನುಷ್ಯನ ಬುದ್ದಿಶಕ್ತಿ. ಮನುಷ್ಯನ ಹೊಸಶೋಧನೆಯ ತುಡಿತಕ್ಕೆ ಎಲ್ಲೆಯೇ ಇಲ್ಲ…. ಕಲ್ಲು ಕುಟ್ಟಿ ಬೆಂಕಿ ಹುಟ್ಟಿಸುವದರಿಂದ ಬೆಂಕಿಪೆಟ್ಟಿಗೆ, ಕುಟ್ಟಿ ಕುಟ್ಟಿ ಕಳುಹಿಸುವ ತಂತಿ ಸಂದೇಶದಿಂದ ಅಂತರ್ಜಾಲದ ತುರ್ತು ಸಂದೇಶಕ್ಕೆ ಮುಟ್ಟಿದೆ. ಮಹಾಭಾರತದಲ್ಲಿ ಸಂಜಯ ಅರಮನೆಯಲ್ಲಿ ಕುಳಿತು ಧ್ರುತರಾಷ್ಟ್ರನಿಗೆ ಯುದ್ಧದ ವರ್ಣನೆ ಮಾಡಿದನು, ಈಗ ನಾವು ದೂರದರ್ಶನದ ಸಂಜಯನ ಮುಖಾಂತರ ಭಾರತ-ಪಾಕಿಸ್ತಾನ ಗೂಟಾಟದ (ಕ್ರಿಕೆಟ್) ಯುದ್ಧ ನೋಡುತ್ತೇವೆ. ಮನುಷ್ಯ ತನ್ನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸಲು ಶೋಧನೆಯ ಹಾದಿ ಹಿಡಿದಿದ್ದಾನೆ […]