Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು – ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!

     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (28.3.2015) 118ವಸಂತಗಳನ್ನು ಕಂಡು 119ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.      ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, […]

ಹಾಗೇ – ಸುಮ್ಮನೆ

ಹಿಡಿದೆನೊಂದು ಲೇಖನಿ ಇಂದು ಕ್ಷಣ ಕಣ್ಣ ರೆಪ್ಪೆ ಮುಚ್ಚಿ ನೆನೆದೆ ಬೇಂದ್ರೆ, ಕುವೆಂಪು ನರಸಿಂಹರ ಹಾಗೆ ಸುಮ್ಮನೆ ಇಳಿಯುತಿತ್ತು ಆಳಕೆ ಯೋಚನೆ ಮಿಡಿಯಿತು ಹೃದಯ ಝೆಂಕಾರದಿ ನೆನೆದು ಮಾಸ್ತಿ, ಅನಂತ ಡಿ.ವಿ.ಜಿ ಯರ ಹಾಗೆ ಸುಮ್ಮನೆ ಬರೆವ ಇಚ್ಛೆಯೊಂದು ಬಂದು ಸಾಗಿತು ಕೈ ಮುಂದೆ ಮುಂದೆ ಕೋಣೆಯೊಂದು ಸೇರಿ ಹಿಡಿದೆನೊಂದು ರಟ್ಟನು ಬಿಳಿಯ ಹಾಳೆ ಹಾಗೆ ಸುಮ್ಮನೆ ಮನದ ಮಾತು ಹೊರಗೆ ಇಣಕಿ ತೋರುತಿತ್ತು ಹಲವು ಮಾರ್ಗ ಸಿದ್ದಳಾಗೆಂದಿತು ಚಿತ್ತ ಹಾಗೆ ಸುಮ್ಮನೆ ಗಹನ ವಿಷಯದಾಳದಲ್ಲಿ ಮನವು […]

ದೇವರು: ಒಂದು ತರ್ಕವಿತರ್ಕ- 3

      ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್,  ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು […]

ಜಯಶ್ರೀ

ಸಂಗೀತಕ್ಕೆ ಭಾಷೆಯ ಹಂಗಿಲ್ಲ ಮತ್ತು ಗಡಿಇಲ್ಲ ಅಂತಾರೆ. ಅದು ನಿಜವೂ ಹೌದು ಆದರೆ ಅದೇ ಸಂಗೀತಗಾರ್ತಿಗೆ ಪ್ರದೇಶ ಅಥವಾ ಭಾಷೆಯ ನೆಲೆ ಕಲ್ಪಿಸಿ ಅವರನ್ನು ಉಪೇಕ್ಷಿಸಲಾಗುತ್ತದೆ ಎನ್ನಲು ಜಯಶ್ರೀ ಪಾಟ್ನೇಕರ್ ಒಂದು ಉತ್ತಮ ಉದಾಹರಣೆ. ಜನ್ಮಭೂಮಿ ಮಹಾರಾಷ್ಟ್ರವಾದರೂ ಕರ್ಮಭೂಮಿ ಕರ್ನಾಟಕ. 3 ದಶಕಗಳ ಕಾಲ ಧಾರವಾಡ ಆಕಾಶವಾಣಿ ಎ ಗ್ರೇಡ್ ಕಲಾವಿದೆಯಾಗಿರುವ ಜಯಶ್ರಿಗೆ ಸಿಕ್ಕ ಮನ್ನಣೆ ಅಷ್ಟಕ್ಕಷ್ಟೇ. ಕರ್ನಾಟಕದವರು ಅಂತಾ ಮಹಾರಾಷ್ಟ್ರದವರು ಮಹಾರಾಷ್ಟ್ರದವರು ಅಂತ ಕರ್ನಾಟಕದವರು ಉಪೇಕ್ಷಿಸುತ್ತ ಬಂದ ಪರಿಣಾಮ ಸಂಗೀತಲೋಕದ ಅನಘ್ರ್ಯ ರತ್ನದ ಮೇಲೆ ಬೆಳಕು […]

ಪಶ್ಚಿಮ ಘಟ್ಟ ಸಂರಕ್ಷಣೆ

ಎತ್ತ ಸಾಗಿದೆ ಪಶ್ಚಿಮಘಟ್ಟ ಸಂರಕ್ಷಣೆ? -ಪ್ರಸನ್ನ ಕರ್ಪೂರ  ಪಶ್ಚಿಮ ಘಟ್ಟ ಸಂರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಕಸ್ತೂರಿರಂಗನ್ ಕಾರ್ಯಪಡೆ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಜತೆಗೆ ಡಾ. ಮಾಧವ ಗಾಡ್ಗೀಳ ನೇತೃತ್ವದ ಸಮಿತಿಯನ್ನೂ ರಚಿಸಿ ವರದಿ ತಯಾರಿಕೆಗೆ ಸೂಚಿಸಿತು. ಎರಡೂ ಸಮಿತಿಗಳು ತಮ್ಮ ತಮ್ಮ ವರದಿ ನೀಡಿದ್ದವು. ಆದರೆ ಇದೀಗ ಕೇಂದ್ರ ಕಸ್ತೂರಿರಂಗನ್ ವರದಿ ಮಾನ್ಯತೆ ನೀಡಿ ಗಾಡ್ಗೀಳ ವರದಿಯನ್ನು ತಳ್ಳಿಹಾಕಿದೆ. ಹಾಗಾದರೆ ಏನಿದು ವರದಿ? ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕೊಟ್ಟ ಸಲಹೆ ಸೂಚನೆಗಳೇನು? ಇಲ್ಲಿದೆ ವಿಸ್ತøತ ವಿವರ. ನಮ್ಮ […]

ಉತ್ಸವ ರಾಕ್ ಗಾರ್ಡನ್ ನಲ್ಲಿ ಗ್ರಾಮರಾಜ್ಯದ ಪುನರುತ್ಥಾನ

ಕಾರ್ಪೋರೇಟ್ ಜಗತ್ತಿನ ಅಬ್ಬರದ ಪರಿಣಾಮ ನಮ್ಮ ಜನಪದ ಸಂಸ್ಕøತಿ, ದೇಶೀಯತೆ ಅನ್ನೋದು ಬರೀ ಭಾಷಣದ ಸರಕಾಗಿದೆ. ಅದರ ಕಲ್ಪನೆಯೂ ಮಕ್ಕಳಿಗಿಲ್ಲ. ಅದರ ಬಗ್ಗೆ ಕಲ್ಪನೆ ಮೂಡಿಸುವ ಪ್ರಯತ್ನಗಳೂ ಕಡಿಮೆನೇ ಅಂತ ಹೇಳಬಹುದು. ಹಾಗಾದರೆ ಈ ಮಕ್ಕಳಿಗೆ ಇವೆಲ್ಲದರ ಪರಿಚಯ ಬೇಡವೇ? ಬೇಕು ಯಾರು ಈ ಕೆಲಸ ಮಾಡಬೇಕು. ಹೇಗೆ ಮಾಡಬೇಕು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಗೋಟಗೋಡಿಯಲ್ಲಿದೆ. ಇಂದಿನದು ಧಾವಂತದ ಬದುಕು. ಯಾವುದಕ್ಕೂ ಸಮಯಾವಕಾಶವಿಲ್ಲ.ಇದಕ್ಕೆ ಜೀವನದ ಮಹತ್ವಘಟ್ಟವೆಂದೇ ಕರೆಯಲ್ಪಡುವ ಮದುವೆಯೂ ಹೊರತಾಗಿಲ್ಲ.ಸುದೀರ್ಘ ಆಚರಣೆಗಳಿಗೆ ಗುಡ್‍ಬೈ ಹೇಳಿ ಫಟಾಫಟ್ […]

ಭವ್ಯ ವೃಕ್ಷಸಂಪತ್ತಿನ ಭೀಮಗಡ ವನ್ಯಧಾಮ

ನೀವು ನಗರ ಜೀವನದ ಜಂಜಾಟದಿಂದ ಬೇಸತ್ತಿದ್ದೀರಾ? ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹೇಳಲು ಇಷ್ಟಪಡುತ್ತೀರಾ? ಪರಿಶುದ್ಧ ಗಾಳಿ, ನೆಮ್ಮದಿ ಅರಸುತ್ತಿದ್ದೀರಾ? ಹಾಗಾದರೆ ತಡವೇಕೆ ಇಂದೇ ಹೊರಡಿ ಗಡಿ ಜಿಲ್ಲೆ ಬೆಳಗಾವಿ ತಾಲೂಕಿನ ಖಾನಾಪೂರದ ಅರಣ್ಯಪ್ರದೇಶಕೆ. ಇಲ್ಲಿ ಭೀಮಗಡ ವನ್ಯಧಾಮ, ಲೊಂಡಾ ಬಳಿ ದೂಧಸಾಗರ್ ಜಲಪಾತ, ಕಾರಂಜಾಳ ಕೆರೆ ಒಂದೇ ಎರಡೇ ಹಲವು ವಿಶೇಷವನ್ನೊಳಗೊಂಡ ವೃಕ್ಷ ಸಂಪತ್ತಿನ ಜತೆಗೆ ಹವಾಮಾನದ ಹಲವು ಮುಖಗಳ ವಿರಾಟದರ್ಶನ ಇಲ್ಲಿದೆ. ಮಳೆಗಾಲ ಆರಂಭವಾಗಿದೆ. ದಟ್ಟ ಕಾಡು ಹಸಿರು ತೊಟ್ಟು ನಿಂತಿದೆ. ಮಳೆ ಇಲ್ಲಿನ […]

ದೇವರು: ಒಂದು ತರ್ಕ ವಿತರ್ಕ – 2

‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ – ಒಬ್ಬನೇ ದೇವರು, ಒಂದೇ ಸತ್ಯ, ವಿಶೇಷ ಪ್ರಜ್ಞಾವಂತರು ಅದನ್ನು ಬಹುರೀತಿಯಲ್ಲಿ ಹೇಳುತ್ತಾರೆ. ಹಿಂದೂಗಳು ಬಹು ದೇವತಾರಾಧನೆ ಮಾಡುವವರಾದರೂ ಒಬ್ಬನೇ ದೇವರೆಂಬುದನ್ನು ನಂಬುತ್ತಾರೆ. ಮುಸ್ಲಿಮರೂ, ಕ್ರಿಶ್ಚಿಯನರೂ ಸಹ ಒಬ್ಬನೇ ದೇವರೆನ್ನುತ್ತಾರೆ. ಯಾರು ಆ ಒಬ್ಬ ದೇವರು? ಇಲ್ಲೇ ಸಮಸ್ಯೆ! ನಮ್ಮ ದೇವರೇ ಆ ಒಬ್ಬ ದೇವರು ಎಂದು ವಾದಿಸುವವರಿಂದಲೇ ಈ ಸಮಸ್ಯೆ. ಒಬ್ಬನೇ ದೇವರು ಅಂದಾಗ ಅವನನ್ನು ಯಾವ ಹೆಸರಿನಿಂದ ಕರೆದರೆ ಏನು? ಅಲ್ಲಾ ಅನ್ನಲಿ, ಏಸು ಅನ್ನಲಿ, ರಾಮ […]

ಸಂಗಾತಿಯ ಕಾಣಿಕೆ

  ಓ ಜೀವನ ಸಂಗತಿಯೆ ಕೇಳು ಶುಭ್ರ ಬಿಳಿ ಹಾಳೆಯಲಿ ನಾ- ಕುಂಚವ ಹಿಡಿದು ನೂರು ಬಣ್ಣಗಳ ಚಿತ್ತಾಕರ್ಷಕ ಚಿತ್ರವ ನಾ ನಿನಗಾಗಿ ತಂದಿದ್ದೆ ಹಚ್ಚ ಹಸುರಿನ ಹೂ – ತೋಟವ ಬರೆದು ಮೊಗ್ಗುಗಳಲ್ಲಿ ನೂರು