Your Cart

Need help? Call +91 9535015489

📖 Print books shipping available only in India. ✈ Flat rate shipping

ಎಳೆಯರ ಪರೀಕ್ಷೆ

  ಅರಳು ಕುಸುಮಗಳಿಗೆ ಇಂದು ಮುದುಡಿಕೊಳುವ ಸಮಯ ಬಂತು ಮೈಯ ಬೆವರು ತರಿಸಿ ಧೀರ್ಘ ಉಸಿರು ಬಿಡುವ ಪರಿಯ ಕಂಡೆನು ವರ್ಷವಿಡೀ ಗ್ರಹಿಸಿದೆಲ್ಲವನ್ನೂ ಎರಡೇ ಗಂಟೆಯಲ್ಲಿ ಉರುಹಬೇಕು

ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೨

ದಾಸ ಸಾಹಿತ್ಯದ ಮುಖ್ಯ ತತ್ವ ಭಕ್ತಿ, ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು. ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ದಾಸರು ಭಕ್ತಿಯ ದಾರಿಯಲ್ಲಿ ಭಗವಂತನೆಂಬ ಮೂಲ ಸತ್ಯವನ್ನು ಹುಡುಕಲು ಹೊರಟವರು. ಹಾಗೆ ಅವರು ಹೊರಟಾಗ ಭಕ್ತಿಯ ದಾರಿಗೆ ತಮ್ಮನ್ನಷ್ಟೇ ತೆರೆದುಕೊಳ್ಳಲಿಲ್ಲ. ಅದನ್ನು ಇಡೀ ಸಮುದಾಯಕ್ಕೆಯೇ ತೆರೆದಿಟ್ಟರು. ಅದುವೆ ಇಲ್ಲಿಯ ವಿಶೇಷ. ಹಾಗೆ ತೆರೆದಿಡುವಾಗ ಬದುಕೆಂದರೇನು? ಹೇಗೆ ಬದುಕಬೇಕು ? ಎಂಬುದನ್ನು ತಿಳಿಸುತ್ತ ಹೋದರು. ಕನ್ನಡ ದಾಸ ಸಾಹಿತ್ಯ […]

ವಿಚಿತ್ರ ಸತ್ಯ

ಪರರ ದೊಡ್ಡ ತಪ್ಪಗಳನ್ನು ಮನ್ನಿಸಿ ಮರೆವ ಮನಸು ಅದೇಕೋ ತನ್ನವರ ಸಣ್ಣ ತಪ್ಪುಗಳ ಆಗಾಗ ಹಾಕುತ್ತಲೇ ಇರುತ್ತೆ ಮೆಲುಕು!

ಹಸುರಿನ ಹಾದಿ

ಮುಂಜಾವಿನ ಚುಮುಚುಮು ಬೆಳಕಲ್ಲಿ ನಾ ಸಾಗುತ್ತಿದ್ದ ಸಮಯದಲ್ಲಿ ದೀರ್ಘ ಕಾಲು ಹಾದಿಯಲ್ಲಿ ಹಸುರಿನ ಸಾಲು ಇಕ್ಕೆಲದಲ್ಲಿ ಬುಲ್ ಬುಲ್, ಕಾಜಾಣ, ಗಿಳಿ, ಶಿಳ್ಳು ಹಕ್ಕಿಗಳ ಕೂಜನವಿಲ್ಲಿ ಹಿತವಾದ ಮಾರುತದ ಸೊಂಕಿನಲ್ಲಿ ಕಣ್ಣಿಗೆ ಹಬ್ಬದ ಸಂಭ್ರಮ ಅಕ್ಕಪಕ್ಕದಲ್ಲಿ ಆಗಾಗ ಇಣುಕುತ್ತಿದ್ದ ಸೂರ್ಯನ ಮಂದ ಬೆಳ್ಳಿ ಕಿರಣಗಳ ಕಳ್ಳ ನೋಟದಲ್ಲಿ ಹೂವಿನ ಹಾಸಿಗೆಯ ಸ್ವಾಗತವಿತ್ತು ಗುಲ್ ಮೊಹರ ಗಿಡಗಳ ಸಾಲಿನಲ್ಲಿ ಸುತ್ತ ಮೌನವಾವರಿಸಿರಲಾಗಿ ಜೀರುಂಡೆಗಳ ಗುಂಯ್ ಗುಡುವ ನಿನಾದದಲ್ಲಿ ಹೆಜ್ಜೆ ಹೆಜ್ಜೆಗೂ ಆಸರೆಯ ಬಯಸಿ ಬಳುಕಿ ನಲಿಯುತ್ತಿದ್ದ ತರುಲತೆಗಳಲ್ಲಿ ಸೌಗಂಧಿ […]

ದೇವರು: ಒಂದು ತರ್ಕವಿತರ್ಕ – 1

‘ಮಾಮಿ ಜೋತ ಮಾಡು ಪುಟ್ಟಾ’      ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು ‘ಮಾಮಿ ಜೋತ ಮಾಡು’ ಎಂದಾಗಲೆಲ್ಲಾ ಕೈ ಜೋಡಿಸುತ್ತದೆ, ದೇವರ ಕೋಣೆಯ ಕಡೆಗೋ, ದೇವರ ಪಟವನ್ನೋ ನೋಡುತ್ತದೆ. ಮುಂದುವರೆದು ಹಣೆ ನೆಲಕ್ಕೆ ಮುಟ್ಟಿಸುತ್ತದೆ. ದೊಡ್ಡವರು ಅದನ್ನು ಕಂಡು ಸಂಭ್ರಮಿಸಿದಾಗ ಮಗುವೂ ಸಂತಸಪಡುತ್ತದೆ. ಸಾಮಾನ್ಯವಾಗಿ ಅವರವರ ಮನೆಯ ಪದ್ಧತಿ, ಸಂಸ್ಕಾರ, ರೀತಿ-ನೀತಿಗಳನ್ನು ಅನುಸರಿಸಿ ಮಕ್ಕಳಿಗೆ ಈ ರೀತಿಯ […]

ಗುರು

ಗುರು ನೀ ಪ್ರೇಮ ಕರುಣೆಯ ಸಾಗರ ನಂಬಿಕೆ, ಪ್ರೀತಿ, ವಿಶ್ವಾಸ ತೋರಿದಲ್ಲಿ ನೀ ಅಮರ ಕೊಡುವುದಾದರೆ ಶಿಷ್ಯನಿಗೆ ಸಹಕಾರ ಕೈಗೆಟುಕುವುದು ಉತ್ತುಂಗದ ಶಿಖರ ಸಾಕು ಅರಳಿಸಿದರೆ ಕೋಮಲ ಸುಪ್ತ ಪ್ರತಿಭೆಯ ತೋರು ನೀ ಬರಿಯ ಗುರುತಿಸುವ ದಾರಿಯ ಬೇಡ ಕೈಹಿಡಿದು ನಡೆಸುವ ಬಿಡು ಮುಟ್ಟಲು ಜ್ಞಾನವೆಂಬ ಶಿಖರ ಸಾಗರ ಎಡರು ತೊಡರುಗಳ ತೀಡಿ ಹಾಕು ಭವಿಷ್ಯಕ್ಕೆ ಬುನಾದಿ ಆಗದಿರಲಿ ಶಿಶು ಕೂಚುಬಟ್ಟ ಓದಿ ಓದಿ ಮಾಡು ಭವಿಷ್ಯದ ನಾಯಕ ನೀನಾಗು ಮೌಲ್ಯ ತಿಳಿಸುವ ಸಮರ್ಥಕ ತಿಳಿಯದಿರೆ ಹಿರಿದು […]

ಶ್ರಾವಣದಾಗಮನ

ಇಳೆಯು ಬಿಸಿಯ ಮುಕ್ತಿಪಡೆದು ನಭದಿ ಧರೆಗೆ ಜಲಧಾರೆ ಸುರಿದು ಕಾನನದಿ ಧರೆ ಹಸಿರು ಸೀರೆಯುಟ್ಟು ಗಿಡಮರಗಳ ಚಿಗುರ ಬಸಿರು ಮೊಳಕೆಯೊಡೆದು ಹಳ್ಳ ಕೊಳ್ಳ ಕೆರೆ ಕಾಲುವೆ ಮೈತುಂಬಿ ನದಿಯು ಬಿಂಕದಿಂದ ಬೀಗಿ ಹಾಲ ಹಳ್ಳದಂತೆ ಜಲಪಾತದ ರುದ್ರನರ್ತನ ಸಾಟಿ ಯಾರಿಗೆ? ಈ ಅನಂತ ದಿವ್ಯ ದರ್ಶನ ಹಸನು ಕಣ್ಣೆ ಚಲುವ ಚಿತ್ತಾರ ಮನಕೆ ಜಗಕೆ ಮತ್ತೆ ನವ ಚೇತನ ನಾ ತೀರಿಸಲೆಂತು ಧರೆಯ ಋಣ                                                                                                       – ಉಮಾ ಭಾತಖಂಡೆ 102

ತೊರೆ ಮತ್ತು ನಾನು

ನಾ ಹರಿವ ಝರಿ ನಾ ಕುಣಿಯುತ ಸಾಗುವ ತೊರೆ ನಾ ನಿನಾದದಿ ಧುಮುಕುವ ಜಲಪಾತ ಆ ಬಾಲ್ಯದಲ್ಲಿ ಆ ಯೌವನದಲ್ಲಿ ನಾ ಪಡೆದ ಹೊಸದೊಂದು ತಿರುವು ನಾ ಕಂಡಿದ್ದು ಅಡ್ಡಡ್ಡ ಬಂಡೆ ನಾ ಚಡಪಡಿಸಿದೆ ಸಿಗದೆ ಇಳಿಜಾರು ನಾ ನಿಂತೆ ನಾ ನಿಂತೆ ಗಂಟಿನ ನಂಟಿನಲಿ ನಾನೇ ಬಿಗಿದಪ್ಪಿದೆನೆ ಈ ಹಾದಿ? ತಿರುವಿನ ನೀರಲ್ಲರಾಡಿ ರಾಡಿ. ಈ ತೊರೆ ಈ ಝರಿ ಈ ಜಲಪಾತ ನಿಲ್ಲದಲ್ಲ ಸಿಕ್ಕೊಡನೆ ಬಂಡೆ? ನಾ ಅರಿತೆ ನಾ ಅಂತೆ ನನಗೀಗ ಬೇಕು […]

ಮೊರೆ

ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು|| ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ| ಸರ್ವದೂಷಿತನಾಗಿ ನೆಲೆಗಾಣದಿದೆ ಮನವು|| ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ| ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||