ಪಂಢರಪುರ ಯಾತ್ರೆಗೆ ಹೋಗೋಣ ಬನ್ನಿ ಜು.27 ಆಷಾಢ ಶುದ್ಧ ಏಕಾದಶಿ. ಭಗವಂತ ಯೋಗನಿದ್ರೆ ಆರಂಭಿಸುವ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆಯುತ್ತಾರೆ. ಇಲ್ಲಿದೆ ಅವರ ಬಗ್ಗೆ ವಿಸ್ತೃತ ಲೇಖನ. ಧಾವಾ ಧಾವಾ ಅತಾ ಪಂಢರಿ ವಿಸಾವ (ಓಡಿ ಓಡಿ ವಿಠ್ಠಲ ದರ್ಶನ ನೀಡಲು ನಿಂತಿದ್ದಾನೆ)…. ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರ ವಿಠ್ಠಲನ ಭಕ್ತರ ಮನದಲ್ಲಿ ಈ ಅಭಂಗ (ಮರಾಠಿ ಭಕ್ತಿಗೀತೆ)ದ ಸಾಲು ಅನುರಣಿಸುತ್ತದೆ. ಲಕ್ಷಾಂತರ ಜನ ತಮ್ಮ […]
Month: July 2015
ಪಂಢರಪುರ ಯಾತ್ರೆಗೆ ಹೋಗೋಣ ಬನ್ನಿ
ಪಂಢರಪುರ ಯಾತ್ರೆಗೆ ಹೋಗೋಣ ಬನ್ನಿ ಜು.27 ಆಷಾಢ ಶುದ್ಧ ಏಕಾದಶಿ. ಭಗವಂತ ಯೋಗನಿದ್ರೆ ಆರಂಭಿಸುವ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆಯುತ್ತಾರೆ. ಇಲ್ಲಿದೆ ಅವರ ಬಗ್ಗೆ ವಿಸ್ತೃತ ಲೇಖನ. ಧಾವಾ ಧಾವಾ ಅತಾ ಪಂಢರಿ ವಿಸಾವ (ಓಡಿ ಓಡಿ ವಿಠ್ಠಲ ದರ್ಶನ ನೀಡಲು ನಿಂತಿದ್ದಾನೆ)…. ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರ ವಿಠ್ಠಲನ ಭಕ್ತರ ಮನದಲ್ಲಿ ಈ ಅಭಂಗ (ಮರಾಠಿ ಭಕ್ತಿಗೀತೆ)ದ ಸಾಲು ಅನುರಣಿಸುತ್ತದೆ. ಲಕ್ಷಾಂತರ ಜನ ತಮ್ಮ […]
ಡಾ.ಅಬ್ದುಲ್ ಕಲಾಂ ವಿಧಿವಶ
ಡಾ.ಅಬ್ದುಲ್ ಕಲಾಂ ವಿಧಿವಶ ಇಂದು 2015ರ ಜುಲೈ 27 ರಂದು ರಾತ್ರಿ 9 ಗಂಟೆಯ ವೇಳೆಗೆ ಸ್ನೇಹಿತರಾದ ಎಲ್.ಮಂಜುನಾಥರವರು ಓದಲು ಕೊಟ್ಟಿದ್ದ ಹೊಸನಗರ ತಾಲೂಕಿನ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ ಕೊಡಸೆಯವರ ಪಯಣ ಕಿರು ಕಾದಂಬರಿಯ ಏಳನೆಯ ಅಧ್ಯಾಯ ಮದಲೆ ಚೌಡಿ ಹಬ್ಬ ಎಂಬ ಭಾಗದ ಓದಿನಲ್ಲಿ ನಿರತನಾಗಿದ್ದೆ. ಮಗ ಭಾರ್ಗವ ನಾನಿದ್ದ ಸ್ಥಳಕ್ಕೆ ಬಂದು ಅಬ್ದುಲ್ ಕಲಾಂ ತೀರಿ ಕೊಂಡರಂತೆ ಟಿವಿಯಲ್ಲಿ ಸುದ್ದಿ ಬರುತ್ತಿದೆ ಎಂದ. ಪುಸ್ತಕವನ್ನು ಅಲ್ಲಿಯೆ ಮಡಿಚಿಟ್ಟು ಟೆಲಿವಿಜನ್ ಮುಂದೆ […]
ಭೂಮಿ ತಾಯಿ ಆಣೆ
ಭೂಮಿ ತಾಯಿ ಆಣೆ ಗದಗ ರೈಲ್ವೆ ಸ್ಟೇಶನ್ನಿಂದ ಇಳಿದು ಮುನಸಿಪಲ್ ಹೈಸ್ಕೂಲ್ ಮುಂದೆ ಹಾದು ಹುಯಿಲಗೋಳ ನಾರಾಯಣರಾವ್ ಸರ್ಕಲ್ದಾಟಿ ಮುಂದೆ ಹೋದರೆ ತೋಂಟದ ಸ್ವಾಮಿ ಮಠಾ. ಅಲ್ಲಿಂದ ಬಲಕ್ಕ ಹೊಳ್ಳಿದರ ಕಾಜಗಾರ ಓಣಿ. ಕಾಜಗಾರ ಓಣಿಯ ಒಂದು ಚಾಳಿನಲ್ಲಿ ಸಾಲಕ ನಾಕು ಮನಿ. ಮೂರನೇದ್ದರಲ್ಲಿ ಪಡದಯ್ಯ ಅಜ್ಜ ತನ್ನ ಮಗನೊಂದಿಗೆ ವಾಸವಾಗಿದ್ದ. ಆದರೆ ಅವನ ಮನಸು ಜಂತಲಿ ಹದ್ದಿಗೆ ಹೊಂದಿಕೊಂಡಿದ್ದ ತನ್ನ ಹೊಲದ ಮೇಲಿತ್ತು. ತಾನು ಹೊಲದಲ್ಲಿ ನಿಂತು ಕಳೆ ಕೀಳುವ ಆಳುಗಳಿಗೆ ದನಕ್ಕೆ ಬೆದರಿಸುವಂತೆ ಬೆದರಿಸಿದಂತೆಯೂ […]
ಕಿರಾನಾ ಘರಾಣೆಯ ಮೋಡಿಗಾರ್ತಿ ಮಾಲಾಬಾಯಿ
ಕಿರಾನಾ ಘರಾಣೆಯ ಮೋಡಿಗಾರ್ತಿ ಮಾಲಾಬಾಯಿ ಈ ಸೃಷ್ಟಿಯಲ್ಲಿ ಸಂಗೀತದ ಮೋಡಿಗೆ ಮನಸೋಲದ ಜೀವಿಯೇ ಇಲ್ಲ. ಸ್ವರಗಳ ಮಾಧುರ್ಯಕ್ಕೆ ಸಸ್ಯಗಳೂ ತಲೆದೂಗಿ ಸಮೃದ್ಧ ಫಲ ನೀಡುತ್ತವೆ ಎಂಬುದನ್ನು ವಿಜ್ಞಾನವೂ ಸಾರಿ ಹೇಳುತ್ತಿದೆ. ಸಂಗೀತ ವಿಜ್ಞಾನವೂ ಹೌದು, ಅಧ್ಯಾತ್ಮವೂ ಹೌದು, ಅವೆರಡರ ಪವಿತ್ರ ಸಂಗಮವೂ ಹೌದು. ಅಮ್ಮನ ಮಡಿಲಿನಲ್ಲಿ ಹಸುಗೂಸು ಜೋಗುಳ ಆಲಿಸಿ ನಲಿಯುವುದು ಎಷ್ಟು ಸತ್ಯವೋ, ಅಷ್ಟೇ ನಂದಗೋಕುಲದಲ್ಲಿ ಕೃಷ್ಣನ ವೇಣು ನಾದಕ್ಕೆ ಹಸುಗಳು ತಲೆದೂಗಿದ್ದು. ಇದನ್ನೆಲ್ಲ […]
ದುರಂತ ನಾಯಕಿ ಮೀನಾಕುಮಾರಿ
ದುರಂತ ನಾಯಕಿ ಮೀನಾಕುಮಾರಿ ಮೊನ್ನೆ ರಾತ್ರಿ ಸರಿ ಸುಮಾರು 10 ಗಂಟೆಯ ಸಮಯ ಮಳೆ ಗಾಳಿಗಳ ಅಬ್ಬರದ ನಡುವೆ ಕತ್ತಲಾವರಿಸುತ್ತಿತ್ತು. ಬೆಳಗಿನಿಂದ ಇಲ್ಲವಾಗಿದ್ದ ಕರೆಂಟ್ ತನ್ನ ಅಸ್ತಿತ್ವ ತೋರಿಸಿ ಮರೆಯಾಗಿತ್ತು. ಓದಲು ಚಿಮಣಿಯ ಬೆಳಕು ಸಾಲದು ಎಂದು ಗೋಕಾಕರ ‘ಭಾರತ ಸಿಂಧು ರಶ್ಮಿಯ’ ಎರಡನೆಯ ಭಾಗವನ್ನು ಮಡಿಚಿಟ್ಟು ಪಕ್ಕದಲ್ಲಿದ್ದ ಟ್ರಾನ್ಸಿಸ್ಟರ್‍ನ್ನುಆನ್ ಮಾಡಿದೆ. ‘ಚಲೋ ದಿಲ್ದಾರ ಚಲೋ ಚಾಂದ್ ಕೆ ಪಾರ ಚಲೋ’ ಎನ್ನುವ ಹಿಂದಿ ಚಿತ್ರಗೀತೆಯೊಂದು ಸ್ಟೆಶನ್ ಒಂದರಿಂದ ಪ್ರಸಾರಗೊಳ್ಳುತ್ತಿತ್ತು. ಸುಶ್ರಾವ್ಯವಾದ ಸಂಗೀತ ಸಂಯೋಜನೆ ಲತಾಳ ಸಿರಿ […]
ಯಶೋಧರೆಯ ಅಂತರಂಗ
ಯಶೋಧರೆಯ ಅಂತರಂಗ ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ ರಾಜ ಕುವರ ಸಿದ್ಧಾರ್ಥ ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ ಪವಡಿಸಿದ್ದಾಳೆ ಸುರ ಸುಂದರಿ ಪತ್ನಿ ‘ಯಶೋಧರೆ’ ಮುದ್ದು ಮಗ ರಾಹುಲನ ಜೊತೆ ಮುಗಿಯದ ತೊಳಲಾಟ ಆತನದು ಇದೇ ಬದುಕು ಮುಂದುವರಿಸುವುದೆ ಇಲ್ಲ ಜಗದ ಸತ್ಯವನರಸಿ ಹೊರಡುವುದೆ ತೆರೆದ ಕಿಟಕಿಯ ಸಂದಿಯಲಿ ಸುಮಗಳ ಸೌಗಂಧವನು ಹೊತ್ತು ತೂರಿ ಬರುತಿಹ ತಂಗಾಳಿ ಕಿಟಕಿಯ ಹೊರಗಾಚೆ ‘ಅನಂತ ದಿಗಂತ’ ನೆರೆದಿದೆ ಅಲ್ಲಿ ಚುಕ್ಕಿಗಳ ಸಮೂಹ ಕೊನೆಯಿರದ ಕತ್ತಲು ಮುಗಿಯದಾಕಾಶ […]

ಚಿಂತೆ ಚಿತೆಯಾಗಲಿಲ್ಲ
ಚಿಂತೆ ಸುಟ್ಟಿತೆನ್ನ ಕಳೆದ ಪಾಪ ಕರ್ಮವ ಚಿಂತೆ ಧಹಿಸಿತೆನ್ನ ದುರಹಂಕಾರವ ಚಿಂತೆ ಸೂಸಿತೊಂದು ಹೊಂಬೆಳಕ ಕಿರಣ ಚಿಂತೆ ಬಡಿದೆಬ್ಬಿಸಿತೆನ್ನ ಆತ್ಮಸ್ಥೈರ್ಯ ಚಿಂತೆ ತೋರಿತು ಮೂಡಣದಲಿ ನವಮಾರ್ಗ ಚಿಂತೆಯ ಮಥನದಿಂದಾಯಿತು ಹೊಸ ಚಿಂತನೆ ಚಿಂತೆಯಿಂದಾಯಿತೆನ್ನ ಪುನರ್ಜನ್ಮ ಚಿಂತೆ ಏರಿಸಲಿಲ್ಲ ಎನಗೆ ಚಿತೆಯ ಚಿಂತೆ ಶಬ್ಧಕಾಗಲಿ ಇನ್ನು ಹೊಸ ಚಿಂತನೆಯು. – ಉಮಾ ಭಾತಖಂಡೆ