Your Cart

Need help? Call +91 9535015489

📖 Print books shipping available only in India. ✈ Flat rate shipping

ಇನಿತೇನಿಲ್ಲವೊ ಈ ಚಳಿಗಾಲ

ಇನಿತೇನಿಲ್ಲವೊ ಈ ಚಳಿಗಾಲ — ಶೈಲಜಾ ಹೂಗಾರ ಇನ್ನೇನು ಕುಳಿರ್ಗಾಳಿ ಬೀಸುತಲಿದೆ ಅನ್ನುವಾಗಲೂ ಮಳೆಗಾಲದ ಹಸಿ ಹಸಿ ನೆನಪ ಮಳಿ ಹನಿಯುವುದು ನಿಂತಿರಲಿಲ್ಲ. ಹಳೆಯದರ ಹಳವಂಡ ಅಷ್ಟು ಬೇಗ ಹೋಗಲೊಲ್ಲದಲ್ಲ. ಆ ಗುಟುರುವ ಕಪ್ಪೆ, ಮಳೆಹನಿಗೆ ತೊಪ್ಪೆಯಾದ ಮನವೀಗ ಚಳಿಗೆ ನಿಧಾನವಾಗಿ ಹೇಗೆ ಹೊಂದಿಕೊಳ್ಳುವುದೆಂದು ಹಲವು ಹಾದಿ ಹೊಳಹು. ಕನಸು ಕನವರಿಕೆಗಳಿಗೆಲ್ಲ ಪ್ರಶಸ್ತ ಸುದೀರ್ಘ ಕತ್ತಲು ಕಾಲ. ಅವುಗಳ ನನಸಿಗೆ ಇರುವ ಸಮಯ ಅತ್ಯಲ್ಪ ಎಂಬ ನೀತಿ ಸಾರಿಬಿಡುತ್ತದೆ ನಿಸರ್ಗ ಚಳಿಗಾಲದ ಹಗಲಿನಲೆ. ಮುಂದೆ ಇನ್ನೇನು ಆ […]

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು                                                                                — ರಘೋತ್ತಮ್ ಕೊಪ್ಪರ್ ಇಂದಿನ ದಿನಗಳಲ್ಲಿ ಹಳೆಯ ಕಾಲದ ಸಂತೆಗಳು ಸಿಗುವುದು ತೀರಾ ವಿರಳ. ಎಲ್ಲೊ ಹಳ್ಳಿಗಳಲ್ಲಿ, ಸಣ್ಣ ನಗರಗಳಲ್ಲಿ ಕಾಣಬಹುದು. ಈಗ ಎಲ್ಲಾ ಬದಲಾಗಿಬಿಟ್ಟಿದೆ. ಸೂಪರ್ ಮಾರ್ಕೆಟ್‍ಗಳು ಲಗ್ಗೆ ಇಟ್ಟು ಆ ಹಳೆಯ ಮಾರುಕಟ್ಟೆಯ ಸೊಗಡನ್ನು ನಮ್ಮಿಂದ ದೂರವಾಗಿಸಿಬಿಟ್ಟಿವೆ. ನಮ್ಮ ಮುಂದಿನ ಜನಾಂಗದವರಿಗೆ ಇವೆಲ್ಲವನ್ನು ಹೇಗೆ ತೋರಿಸಬೇಕು? ಚಿಂತಿಸಬೇಡಿ ಅದಕ್ಕೆಂದೆ ಇದೆ ಒಂದು ಸೂಕ್ತ ಪ್ರವಾಸಿ ಕೇಂದ್ರ. ಅದರ ಹೆಸರು ಉತ್ಸವ ರಾಕ್ ಗಾರ್ಡನ್. […]

ಬೋರು – ನೀರು – ಹನಿಗವನ

ಬೋರು – ನೀರು ಊರು ಹೊರಗೊಂದು ಬೋರು ಅದರಲ್ಲಿ ಸಿಹಿ ನೀರು ಊರು ಒಳಗೆ ಹಲವು ಬೋರು ಅವುಗಳಲ್ಲಿ ಇಲ್ಲ ನೀರು —- ರಘೋತ್ತಮ್ ಕೊಪ್ಪರ್

ಮಾಯೆ

ಮಾಯೆ  ಮನುಜನೆ ಮಾಯೆಯ ಭಯವಿರಲಿ ಅಂತರಗದಲ್ಲದು ಅವರಿಸದಿರಲಿ ಮಾಯೆಯ ಬೆಂಬತ್ತಿದ ಮನುಜಗೆ ಮಾಯಾ ಜಾಲವದು ಸುತ್ತುವುದು ಮನುಜ ಬುದ್ಧಿಯ ಬದಿಗೊತ್ತುವುದು ಚಿತ್ತವ ಜಾಲಾಡುವುದೀ ಮಾಯೆ ಬಿಟ್ಟು ಬಿಡದೆ ಆಮಿಷ ಬಡ್ಡಿ ಪರೀಕ್ಷೆಯ ಮಾಡುವುದೀ ಮಾಯೆ ತಿಮ್ಮ ನಾಯ್ಕನಿಗೆ ಒದಗಿತು ನಿಧಿರೂಪದಿ ಧರೆಯೊಳು ಮಾಯೆ ಧನಕನಕಗಳ ಮಾಯೆಗೆ ಸಿಲುಕದೆ ಜಯ ಸಾಧಿಸದನನ್ದು ತಿಮ್ಮನು ಕನಕದಾಸನೆನ್ದೆನುತಲಿ ವಿಜ್ರಂಭಿಸಿದನು. ಜಿಪುಣ ಶೆಟ್ಟಿ ಶ್ರೀನಿವಾಸ ನಾಯ್ಕನ ದೋ ಬಿದ್ದಿರೆ ಹಣದ ಮಾಯೆಯಲಿ ಮರುಗಳಿಗೆಯ ಜ್ಞಾನೋದಯದಲಿ ಮಾಯೆ ಕ್ಷಣಿಕವೆಂದೆನುತಲಿ ಸಕಲವೂ ದಾನವ ಮಾಡಿರಲು ಶ್ರೀನಿವಾಸ […]

ಸಾಹಿತ್ಯ ಸಂಭ್ರಮ ೨೦೧೪ – ನಾಟಕ ಹುಟ್ಟುವ ರೀತಿ

ವಿವಿಡ್ಲಿಪಿ ತಂಡವು ಸಾಹಿತ್ಯ ಸಂಭ್ರಮ ಹಾಗು ಇತರೆ ಸಾಹಿತ್ಯದ ವಿವರಗಳನ್ನು ನಿಮಗಾಗಿ ಅಂತರ್ಜಾಲದ ತಾಣದಲ್ಲಿ ಪ್ರಕಟಿಸುತ್ತೇವೆ ಭೇಟಿ ಕೊಡುತ್ತಿರಿ….. ಸಾಹಿತ್ಯ ಸಂಭ್ರಮ ೨೦೧೪ ಗೊಷ್ಠಿ – ೧ ನಾಟಕ ಹುಟ್ಟುವ ರೀತಿ ನಾಟಕವೊಂದರ ಬೀಜ ಮೊಳೆಯುವುದು ಹೇಗೆ? ಅದು ಬೆಳೆದು ಕೊನೆ ಮುಟ್ಟುವುದು ಹೇಗೆ? ಬರೆಯಲು ಆರಂಭಿಸುವಾಗ ಪೂರ್ತಿ ನಾಟಕದ ಶಿಲ್ಪ, ಪಾತ್ರ, ಸನ್ನಿವೇಶಗಳು ಮೊದಲೇ ಸಿದ್ದವಾಗಿರುತ್ತದೋ, ಅಥವಾ ಒಂದು ಅಸ್ಪಷ್ಟ ಚಿತ್ರದಿಂದ ಆರಂಭವಾಗಿ ಬರವಣಿಗೆಯಲ್ಲಿಯೇ ಸ್ಪಷ್ಟತೆ ಪಡೆಯುತ್ತ ಹೋಗುತ್ತದೋ? ನಿಮಗಾಗಿ ಸಾಹಿತ್ಯ ಸಂಭ್ರಮ ೨೦೧೪ ರ […]

ಹನಿಗವನಗಳು

ಸಿಕ್ಕು ಕೇಳಲು ಶಬ್ದವೋ ಶಬ್ದ ನೋಡಲು ಮಾತ್ರ ಎಲ್ಲಾ ಸ್ತಬ್ದ ಇದೇನಿದು ಮ್ಯಾಜಿಕ್ಕು ಅದು ಬೆಂಗಳೂರಿನ ಟ್ರಾಫ಼ಿಕ್ಕು! ——————————————

The Journey Tread!

I stand here on the road And look back and watch The path I have walked I see the shining asphalted road With the beautiful curves Running far and far Touching the horizon Beyond a point There is no visibility I could recollect the potholes And the bumpy rides Ah! Those mud roads And the […]

ಉತ್ಪಾತ

ಲೋಕ ವ್ಯಾಪಾರಕು ಎನಗು ಸಂಬಂಧವಿಲ್ಲ ಸುರಿದು ಮುಳುಗಿಸುವಂಥ ಛಲವೇನು ಎನಗಿಲ್ಲ ಹರಿಯುತಿದ್ದೆ ಹಿಂಗುತಿದ್ದೆ ಸೇರುತಿದ್ದೆ ನೆದೊಡಲ ಹಿಡಿದು ನಿಲಿಸುವರಿಲ್ಲ ಗಿಡಮರಗಳುಳಿದಿಲ್ಲ ಹರಿದೆಂದಿನಂತಾನು ಸೇರೆ ಸಾಗರವನ್ನು ರವಿ ಸೆಳೆದು ಕರೆದೊಯ್ದ ನೀಲ ಮುಗಿಲಿಗೆ ತಾನು ಹಗುರವೇ ನಾನೇನು ಹಿಡಿಯಲಾರದ ಭಾನು ಬಲಮೀರಿ ಹಿಡಿದಿದ್ದ ತೋಳ ಸೆಳೆತದ ತನಕ ಯಾರ ಹಣೆಬರಹ ಹೇಗಿತ್ತೋ ಏನೋ ಹೀಗಾಯತಲ್ಲ ಇದೆ ವಿಧಿಬರಹವೇನೋ

ಪ್ರೇಮಾಲಾಪ

ಪ್ರೇಮದಾಳವ ಹೇಗೆ ತಿಳಿಸಲಿನಾ ನಿನಗೆ ಪ್ರಿಯೆ ಸೌಂದರ್ಯವ ವರ್ಣಿಸಲೆ? ನೀ ತಿಳಿಯದುದದೇನಿದೆ ಗುಣವ ಹೊಗಳಲೆ? ನಿನ್ನ ಹೋಲಿಸಲದಾವುದಿದೆ ನಿನ್ನ ನುಡಿಗಳೋ ನನ್ನ ಮಾತನ್ನೇ ಮರೆಸಿದೆ ನಗುವು ನಿನ್ನ ಸಪ್ತಸ್ವರದ ಗಾನ ಲೋಕಕೆಳೆದಿದೆ ನಿನ್ನ ಹಾಡದನಿಗೆ ನಾಚಿ ಕೋಗಿಲೆ ತಾನಡಗಿದೆ ನೀರೆ ನಿನ್ನ ನಡೆಯು ನನಗೆ ನಾಟ್ಯೋತ್ಸವವಾಗಿದೆ ನಿನ್ನೊಲವಿನ ನೋಟಕೆನ್ನ ಹೃದಯ ಕರಗಿ ಹರಿದಿದೆ ಸುಮಗಳೆಲ್ಲ ಕೋಮಲತೆಯ ನಿನಗೆ ಧಾರೆ ಎರೆದಿವೆ ಮಂದಸ್ಮಿತ ವದನ ಚಂದಮಾಮನನ್ನು ಮರೆಸಿದೆ ಸುಳಿದಾಡಲು ತಂಗಾಳಿಯು ಪರಿಮಳವನು ಸೂಸಿದೆ ಮಾತುಮುಗಿದು ಮೂಕನಾದೆ ನಗೆಚೆಲ್ಲಲು ತರುಣಿಯೆ