ವಿವಿಡ್ಲಿಪಿ ತಂಡದಿಂದ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು…. ೨೦೧೭ ರ ನವೋದಯದ ಕಿರಣಲೀಲೆ ತಮ್ಮೆಲ್ಲರಿಗೂ ಸುಖ, ಶಾಂತಿ, ಹರುಷ ತರಲೆಂದು ಆಶಿಸುತ್ತೇವೆ. ತಮ್ಮೆಲ್ಲರಿಗಾಗಿ… ಹೊಸ ವರುಷಕೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಒಂದು ಭಾವಗೀತೆ ನವೋದಯದ ಕಿರಣಲೀಲೆ ಕನ್ನಡದೀ ನೆಲದ ಮೇಲೆ ಶುಭೋದಯವ ತೆರೆದಿದೆ. ನದನದಿಗಳ ನೀರಿನಲ್ಲಿ ಗಿರಿವನಗಳ ಮುಡಿಗಳಲ್ಲಿ ಶಿಲ್ಪ ಕಲಾ ಗಾನ ಕಾವ್ಯ ಗುಡಿಗೋಪುರ ಶಿಖರದಲ್ಲಿ ಶುಭೋದಯವ ತೆರೆದಿದೆ. ಮುಗ್ಧ ಜಾನಪದಗಳಲ್ಲಿ ದಗ್ಧ ನಗರ ಗೊಂದಲದಲಿ ಯಂತ್ರತಂತ್ರದ ಅಟ್ಟಹಾಸ ಚಕ್ರಗತಿಯ ಪ್ರಗತಿಯಲ್ಲಿ ಶುಭೋದಯವ […]
Year: 2016
ಶ್ರೀಮಂತ
ಶ್ರೀಮಂತ ಕಾಸುಂಡವನ ಒಡನೆ ಅರಿಯಲು ಬಹುದು ದೇಹ ಸುತ್ತಿಹುದು ಸಂಪತ್ತಿನ ಜಾಲದಲಿ ಸದಾ ಗಂಟಿವನ ಮುಖಮುದ್ರೆ ಕಂಡರೂ ಕಾಣದಂತೆ ನಟಿಸಿ ಮಾಡುವರು ಪರರ ನಿಂದೆ ಕಾಸಿಲ್ಲದವನ ನೋಡಿ ಹೇಸುವರು ತೋರುವರು ಬಲು ಗಂಭೀರ ಹಾವ ಭಾವ! ಒಡನೆ ಮಾತಾಡಲು ಕಾಸುದುರಿ ಹೋಗುವ ಭಯವು ಕಾಸುಂಡು ತೇಗಿದವರಿಗೆ ಒಡನೆ ಗುರುತಿಸುವರಿವರು ಸಡಿಲಿಸುವರು ಬಿಗಿ ಗಲ್ಲಗಳ ಪ್ರೀತಿ ಪ್ರೇಮಕೆ ಕಾಸು ತೆರಬೇಕೆ? ಸವಿ ನುಡಿಯಲು ಕಾಸು ತೆರಬೇಕೆ? ಶುಭ್ರ ನಗುವಿಗೆ ಕಾಸು ತೆರಬೇಕೆ? ಹೃದಯವಂತಿಕೆಗೆ ಕಾಸು ತೆರಬೇಕೆ? ಇದಾವುದೂ ಸಿಗದು […]
ಡಾ. ಗುರುರಾಜ ಕರಜಗಿ ಅವರ ಕಿರು ಭಾಷಣ
ಡಾ. ಗುರುರಾಜ ಕರಜಗಿ ಅವರು ಧಾರವಾಡದ ಕೆ. ಇ ಬೋರ್ಡ್ ೮೦ನೆ ವರುಷ ತುಂಬಿದ ಸಮಾರಂಭ ಸಂದರ್ಭದಲ್ಲಿ ಮಾತನಾಡಿದ ಮುತ್ತಿನಂತ ನುಡಿಗಳು ಎಲ್ಲರೂ ಕೇಳಲೆಂದು ಹಂಚಿಕೊಳ್ಳುತ್ತಿದ್ದೇವೆ. ಅವರ ಅನುಭವದ ಮಾತುಗಳು ಮುಂದೆ ಬರುವ ತಲೆಮಾರಿಗೆ ಅತೀ ಅಮೂಲ್ಯವಾದವು.
ರಾಷ್ಟ್ರೀಯವಾದಿ ಸಾಹಿತಿ, ರಾಷ್ಟ್ರಕವಿ ಸುಬ್ರಮಣ್ಯ ಭಾರತಿ
ರಾಷ್ಟ್ರೀಯವಾದಿ ಸಾಹಿತಿ, ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಸುಬ್ರಮಣ್ಯ ಭಾರತಿ: ಮಹಾಕವಿ ಭಾರತಿಯಾರ್ ಎಂದೇ ಪ್ರಸಿದ್ಧರಾದ, ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾದ ತಮಿಳುನಾಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರು ಶ್ರೀ ಸುಬ್ರಮಣ್ಯ ಭಾರತಿ. ತಮ್ಮ ರಾಷ್ಟ್ರೀಯವಾದಿ ಸಾಹಿತ್ಯದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದಲ್ಲಿ ಜನಸಮೂಹವನ್ನು ಸಂಘಟಿಸುವಲ್ಲಿ ಸುಬ್ರಮಣ್ಯ ಭಾರತಿಯವರ ಪಾತ್ರ ಬಲು ದೊಡ್ಡದು. ಅವರ ಹಲವಾರು ಕೃತಿಗಳು ಭಾರತೀಯ ಸ್ವಾತಂತ್ಯ ಆಂದೋಲನದ ಕಾಲದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಜ್ವಾಲೆಯನ್ನು ಪ್ರಖರಗೊಳಿಸುವಲ್ಲಿ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೯: ಕನ್ನಡ ಮಾಧ್ಯಮ – ಮುಂದೇನು?
ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೯: ಕನ್ನಡ ಮಾಧ್ಯಮ – ಮುಂದೇನು? ಗೋಷ್ಠಿಯ ನಿರ್ದೇಶಕ ಹಾಗು ಕನ್ನಡಪರ ಹೋರಾಟಗಾರ ಸ. ರ. ಸುದರ್ಶನ ಹೇಳಿದ್ದು ” ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಣಯಿಸುವ ಹಕ್ಕು ಪಾಲಕರದ್ದು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ನಿಂದಿಸಬಾರದು, ಆದರೆ ಅದನ್ನು ಪರಾಮರ್ಶಿಸಬಹುದು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮಗಿರುವ ಆಯ್ಕೆಗಳ ಬಗ್ಗೆ ಚಿಂತನೆ ನಡೆಸಬೇಕು”. “ನಾಲ್ಕು ವರ್ಷಗಳ ಕಾಲ ಕಲಿತ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಇಂಗ್ಲಿಷ್ನಲ್ಲಿ ಓದದೇ ನನ್ನ ನೆಲದ ಭಾಷೆ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು
ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು ಕವಿಗಳು ತಮ್ಮ ಸ್ವಂತ ಕವಿತೆಗಳನ್ನು ಓದುವ ಕವಿಗೋಷ್ಠಿಗಳು ಸಾಮಾನ್ಯ. ಆದರೆ ಈ ಗೋಷ್ಠಿಯಲ್ಲಿ ಕವಿಗಳು ಪು. ತಿ. ನ. ಹಾಗು ವಿ. ಕೃ. ಗೋಕಾಕರ ತಮಗಿಷ್ಟವಾದ ಒಂದು ಕವನವನ್ನು ಓದಬೇಕು. ಕಾವ್ಯವಾಚನವೆಂದರೆ ಯಾಂತ್ರಿಕವಾಗಿ ಪ್ರತಿಯೊಂದೂ ಸಾಲನ್ನು ಎರಡೆರಡು ಸಲ ಓದುವದಲ್ಲ. ಕಾವ್ಯವಾಚನ ಒಂದು ಕಲೆ. ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಓದಬೇಕು. ಇಂಥ ಓದಿನ ಮೂಲಕ ಈ ಇಬ್ಬರು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೭: ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ?
ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೭: ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ? ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಹಲವು ಮುಸ್ಲಿಂ, ಮಹಿಳಾ ಮತ್ತು ದಲಿತ ಲೇಖಕರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರನ್ನು ಉಳಿದ ಲೇಖಕರಿಂದ ಬೇರ್ಪಡಿಸಿ, ಚರ್ಚಿಸುವ ಒಂದು ಹೊಸ ಒಲವು ಸಹ ಕಾಣಿಸಿಕೊಂಡಿದೆ. ತಮ್ಮ ಧರ್ಮ, ಲಿಂಗ, ವರ್ಗಗಳಿಗೆ ವಿಶಿಷ್ಟವಾದ ಅನುಭವಗಳನ್ನು ಇವರು ಅಭಿವ್ಯಕ್ತಿಸಬೇಕೆಂಬ ಅಪೇಕ್ಷೆ, ನಿರೀಕ್ಷೆ, ಒತ್ತಡ ಕೂಡ ಹುಟ್ಟಿಕೊಂಡಿದೆ. ಲೇಖಕರನ್ನು ಹಣೆಪಟ್ಟಿ ಅಂಟಿಸಿ ಗುರುತಿಸುವದರಿಂದಾಗುವ ಸಾಧಕ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೬: ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ
ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೬: ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ ಪತ್ರಿಕೆಗಳು ಸಾಹಿತ್ಯದ ಬೆಳೆವಣಿಗೆಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಪತ್ರಿಕೆಗಳು ಆರಂಭವಾಗಿ ಕೆಲವೇ ವರ್ಷಗಳಲ್ಲಿ ನಿಂತುಹೋದವು. ಬಹಳಷ್ಟು ಜನರನ್ನು ತಲಪುವ ದಿನಪತ್ರಿಕೆ, ಪಾಕ್ಷಿಕ ಮತ್ತು ಮಾಸಪತ್ರಿಕೆಗಳಿಗಿಂತ ಈ ಸಣ್ಣ ಪತ್ರಿಕೆಗಳು ಹೇಗೆ ಭಿನ್ನ? ಹೊಸ ಲೇಖಕರಿಗೆ ಇವುಗಳ ಅಗತ್ಯವೇನು? ಹಿರಿಯ ಲೇಖಕರಿಗೂ ಇವು ಅಗತ್ಯವೇ? ಇವು ಇಲ್ಲದಿದ್ದರೆ ಏನಾಗುತ್ತಿತ್ತು? ಇವೆಲ್ಲ ಯಾಕೆ ಅಲ್ಪಾಯುಷಿಗಳು? ಇವುಗಳಿಂದ ಆರ್ಥಿಕ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೪: ಕನ್ನಡದಲ್ಲಿ ಅನುವಾದದ ಸಮಸ್ಯೆಗಳು
ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೪: ಕನ್ನಡದಲ್ಲಿ ಅನುವಾದದ ಸಮಸ್ಯೆಗಳು ಇತ್ತೀಚೆಗೆ ಕನ್ನಡದಲ್ಲಿ ಅನುವಾದ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ – ವಿಶೇಷವಾಗಿ ಬೇರೆ ಭಾಷೆಗಳಿಂದ ಕನ್ನಡಕ್ಕೆ. ಅನುವಾದಗಳಿಂದ ನಮ್ಮ ಭಾಷೆ, ಸಾಹಿತ್ಯ, ಜ್ಞಾನ ಬೆಳೆಯುವದರ ಜೊತೆಗೆ ನಮ್ಮ ಸಾಹಿತ್ಯವನ್ನು ನೋಡಲು ಹೊಸ ಒಳನೋಟ, ಹೊಸ ಮಾನದಂಡಗಳು ಸಿಗುತ್ತವೆ. ಇಂದು ಅನುವಾದಗಳ ಜೊತೆಗೆ ಅನುವಾದಗಳ ಸಿದ್ಧಾಂತಗಳೂ ರೂಪಗೊಳ್ಳುತ್ತಿವೆ. ಹಾಗೆಯೇ ಅನುವಾದವೆಂದರೆ ಪಠ್ಯವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬದಲಿಸುವದಷ್ಟೇ ಅಲ್ಲ. ಅದು ಭಾಷೆ, ಅರ್ಥ, ಸಂಸ್ಕೃತಿ, […]