ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ | ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ || ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ | ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 || ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ | ಚಂಚಲ ಬುದ್ಧಿ ಆಡಿದ ಆಟಕೆ ಎಡವಿ ಬಿದ್ದೆನಲ್ಲಾ || 2 || ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ | ಕೋಪವು ಮತಿಯ […]
Month: February 2016
ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು- ಡಾ. ನಾರಾಯಣ ಬಿಲ್ಲವ
ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು 21ನೇ ಶತಮಾನದಲ್ಲಿ ಲಿಂಗ ಸಮಾನತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ರಾಜಕೀಯ ಅಸಮಾನತೆ ಮತ್ತು ಬಡತನ ನಿರ್ಮೂಲನೆ ಮಾಡಲು ಮಹಿಳಾ ಸಬಲೀಕರಣ ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 68 ವರ್ಷಗಳು ಕಳೆದಿವೆ. ಆದರೂ ಸಹ ಪುರುಷ ಮತ್ತು ಮಹಿಳಾ ನಡುವಿನ ಲಿಂಗ ತಾರತಮ್ಯ ಇನ್ನೂ ಮುಂದುವರೆದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಮಹಿಳೆಯರಿಗೆ ವಿಶೇಷ […]
ಹಿಂಗ್ಯಾಕೆ ನಾವೆಲ್ಲ…! ಭಾಗ-2
ಮಾಧ್ಯಮಗಳು —– ರಘೋತ್ತಮ ಕೊಪ್ಪರ್ ಇಂದು ಟಿವಿ ಚಾನೆಲ್ಗಳ ಸಂಖ್ಯೆ ಅಧಿಕವಾಗಿದೆ. ಎಲ್ಲ ಚಾನೆಲ್ಗಳೂ ಜನಮನ ಸೆಳೆಯೋಕೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನೊ ಅಥವಾ ದುರ್ಘಟನೆ, ಅಪರಾಧಗಳ ವೈಭವೀಕರಣವನ್ನು ಮಾಡುತ್ತಲೇ ಇದ್ದಾರೆ. ಟಿವಿ ಚಾನೆಲ್ಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಕೇವಲ ಟಿ.ಆರ್.ಪಿ (ಟೆಲಿವಿಷನ್ ರೇಟಿಂಗ್ […]
ಹಿಂಗ್ಯಾಕೆ ನಾವೆಲ್ಲ….! ಭಾಗ -1
ಹಿಂಗ್ಯಾಕೆ ನಾವೆಲ್ಲ….! — ರಘೋತ್ತಮ ಕೊಪ್ಪರ್ ಇಂದಿನ ದಿನಗಳಲ್ಲಿ ನಾವೆಲ್ಲ ಎಷ್ಟೇ ಸುಶಿಕ್ಷಿತರಾಗಿದ್ದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ಗೊತ್ತಿದ್ದೂ ಗೊತ್ತಿಲ್ಲದಂತೆ, ತಿಳಿದರೂ ತಿಳಿಯದವರಂತೆ ಯಾಕೆ ಮಾಡುತ್ತಿದ್ದೇವೆ ಅಥವಾ ಮಾತನಾಡುತ್ತಿದ್ದೇವೆ ಎಂಬುದು ಒಂದು ವಿಪರ್ಯಾಸವೇ ಸರಿ. ಅವುಗಳಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. (ಇಲ್ಲಿ ನಾವು ಎಂದರೆ ಸಾಮಾನ್ಯ ಜನರು.) ಅವುಗಳನ್ನು ಭಾಗಗಳನ್ನಾಗಿ ವಿಂಗಡಿಸಿದ್ದೇನೆ. ಹಿಂಗ್ಯಾಕೆ ನಾವೆಲ್ಲ….! ಭಾಗ – ೧ ಇದೆಂಥ ಸರ್ಕಾರ! ಎಷ್ಟೋ ಸಲ ನಾವು ನಮ್ಮ ಕೈಯಾರೆ ಮತ ಹಾಕಿದ ಸರ್ಕಾರವನ್ನು ಬಯ್ಯುತ್ತೇವೆ. ಮತದಾನದ ಸಮಯದಲ್ಲಿ ಇರಬೇಕಾದ […]
ರಂಗವಲ್ಲಿ
ಇದು ಶ್ರೀಮತಿ ಅಂಜಲಿ ಮೆಹೆಂದಳೆ ರಚಿಸಿದ ರಂಗೋಲಿ
ವಿದಾಯ…..
ಶಿಶಿರನಪ್ಪುಗೆಯಲ್ಲಿ ನಲುಗಿ ನಭದೆಡೆಗೆ ಕೈಚಾಚಿದ್ದೆ ದ್ರುಪದೆಯಂತೆ.
ಶಿಕ್ಷಣ
ಶಿಕ್ಷಣ ಮೊಗ್ಗನರಳಿಸುವಿರೇಕೆ? ನರಳಿಸುವಿರೇಕೆ? ಅರಳಿಸುವಿರೇಕೆ? ಅರಳಲಿಬಿಡಿ ತಂತಾನೆ ಅರುಣನುದಯಕೆ ಮುದದಿ ಅರಳದೇ ತಂತಾನೆ? ಅರಳಿ ಹೊರಳುವುದು ಅರುಣನೆಡೆಗೆ
ಆಹಾ!! ಇಬ್ಬನಿ
ಆಹಾ!! ಇಬ್ಬನಿ ನಡುನಡುಗುತ ಗ್ರೀಷ್ಮನು ಮೈ ಛಳಿ ತಂದಿಹ. ಬಾನು ಭುವಿಯು ಒಂದೇ ಮಾಡಿಹ. ಎಲ್ಲೆಡೆ ಇಬ್ಬನಿ ಹಾಸನು ಹಾಸಿಹ ಕಣ್ಣೆ ಹಬ್ಬದ ಸೊಗಸನು ತಂದಿಹ ಹಕ್ಕಿಗಳೆಲ್ಲಕೂ ಇರುಳು ಬೆಳಕಿನ ಗೊಂದಲ ಸ್ಥಬ್ಧವಾಗಿಯೆ ಹಾರಾಡಿವೆ ಪಕ್ಷಿಸಂಕುಲ ಚಿಗುರೆಲೆ ಮೇಲೆ ಮುತ್ತಿನ ಮಾಲೆ ಹನಿಗಳುರುಳಿ ತಂಪಾಗಿದೆ ಇಳೆ. ಬೆಟ್ಟ ಗುಡ್ಡಗಳಲಿ ದಟ್ಟ ಹೊಗೆಯಂತೆ ಕಂಡಿರೆ ಮುಸುಕನೆ ಹಾಕಿರುವಂತೆ. ದಿನಕರನಿಗಿದು ನೆರಳು ಬೆಳಕಿನ ಆಟ ಗ್ರೀಷ್ಮನ ಮಾಯಾ ಜಾಲದ ಮಾಟ. ಧರೆಯ ಕಾಣಲು ಕಿರಣಗಳ ಓಟ. ಪರಿಸರವೆಲ್ಲ ಕಣ್ಮರೆಯಾದ ಭಾಸಕೆ […]