ಪುರೋ(ಅ)ಹಿತ ವರ್ತನೆ – ರಘೋತ್ತಮ ಕೊಪ್ಪರ್ ಮೊನ್ನೆ ಒಂದು ಮಠಕ್ಕೆ ಹೋದಾಗ ನಡೆದ ಪ್ರಸಂಗವಿದು. ಅಲ್ಲಿ ಒಬ್ಬ ಮಧ್ಯ ವಯಸ್ಕ ತನ್ನ ತಾಯಿಯ ಶ್ರಾದ್ಧ ಮಾಡಿಸುತ್ತಿದ್ದ. ಅವನು ಅತಿ ವಿನಯದಿಂದ ಪುರೋಹಿತನ ಮುಂದೆ ಮುಂದೆ ಹೋಗಿ ಕುಳಿತುಕೊಂಡ. ‘ಏನ್ರಿ ಅದನ್ನು ತರಲಿಲ್ಲ ಇದನ್ನು ತರಲಿಲ್ಲ..’ ಹೀಗೆ ಆ ಪುರೋಹಿತ ಅವನ ಅವನ ಮೇಲೆ ರೇಗುತ್ತಿದ್ದ. ಆತ ಮಾತ್ರ ಇಲ್ಲ.. ಇಲ..್ಲ ಎಂದು ತಪ್ಪಿತಸ್ಥ ಭಾವನೆಯಿಂದ ಅವರ ಮುಂದೆ ತಲೆ ತಗ್ಗಿಸಿದ್ದ. ಅದಾದ ನಂತರ ಕರ್ಮವಿಧಿಗಳನ್ನು ಶುರು […]
Month: March 2016
ಶೋಧನೆಗಳು ಮತ್ತು ನಮ್ಮ ಜೀವನ – ೩
ಒಂದು ವರುಷದ ಹಿಂದೆ ನೋಡಿದ ವೀಡಿಯೊ ಕೆಲವು ದಿನದ ಹಿಂದೆ ಮತ್ತೆ ನೋಡಬೇಕೆನಿಸಿ ನೋಡಿದೆ. ಮೊದಲು ನೋಡಿದಾಗ ಬಂದಂತೆ ನೂರಾರು ವಿಚಾರಗಳು ತಲೆಯಲ್ಲಿ ಸುತ್ತ ತೊಡಗಿದವು. ವಿಜ್ಞಾನಿ ರೇಮಂಡ್ ಕುರ್ಜ್ ವೀಲ್ ಹೇಳುತ್ತಾರೆ “ಹಿಂದಿನ ಕಾಲದ ಜನರು ಹುಟ್ಟಿದಾಗ ಯಾವ ಜಗತ್ತನ್ನು ಕಾಣುತ್ತಿದರೊ ಸಾಯುವಾಗ ಹೆಚ್ಚುಕಡಿಮೆ ಅದೇ ಜಗತ್ತಿನ ಸುತ್ತಣದಲ್ಲಿ ಕಣ್ಣು ಮುಚ್ಚುತ್ತಿದ್ದರು, ಬದುಕಿನ ನೂರು ವರುಷದಲ್ಲಿ ಹೆಚ್ಚಿನ ಅಂತರ ಕಾಣುತ್ತಿರಲಿಲ್ಲ. ಆದರೆ ೨೧ನೆಯ ಶತಮಾನದಲ್ಲಿ ಜನರು ಹುಟ್ಟಿದ ಹಾಗು ಸಾಯುವ ಅಂತರದಲ್ಲಿ ಸಾವಿರಾರು ವರುಷದ ಪ್ರಗತಿ […]
ಗಂಧ ಬಾಬಾ
ಗಂಧ ಬಾಬಾ ಓಡೋಡಿ ಬಂದು ಹೊರಡುತ್ತಿರುವ ರೈಲು ಹತ್ತಿದೆ. ಸುತ್ತ ನೋಡಿದೆ. ಎಲ್ಲ ಸೀಟುಗಳು ಭರ್ತಿ. ಕೆಲವರು ಬಾಗಿಲ ಬಳಿ ನಿಂತು ತಂಬಾಕು ಚಟ ತೀರಿಸಿಕೊಳ್ಳುತ್ತಿದ್ದರೆ ಅಲ್ಲಿ ನಿಂತು ಏನು ಮಾಡುವುದು ಎಂದೆನಿಸಿ ಮುಂದೆ ನಡೆದೆ. ಅಲ್ಲಿ ಒಂದು ಬಾಕಿನ ಮೇಲೆ ನಾಲ್ಕು ಜನ ಕೂಡ್ರುವಲ್ಲಿ ಐದು ಜನ ಕುಳಿತಿದ್ದರು. ಅವರೆಲ್ಲ ಸಣಕಲಾದ್ದರಿಂದ ಅಲ್ಲಿ ಇನ್ನೂ ಸ್ಥಳ ಉಳಿದಿದೆ ಎಂದೆನಿಸಿ ಸ್ವಲ್ಪ ಸರೀರಿ ಎಂದೆ. ಹಳ್ಳಿಯವನೊಬ್ಬ “ಬರ್ರಿ ಬರ್ರಿ ಅದರಾಗ ಕುಂಡ್ರುಣು, ಮುಂದಿನ ಟೆಶನ್ ದಾಗ ಇಳಿತೀನಿ” […]
ವಿನಮ್ರ ವಿನಂತಿ
ವಿನಮ್ರ ವಿನಂತಿ ಓ ಸೃಷ್ಠಿಯ ಪರಿಸರ ಸ್ನೇಹಿಗಳೆ ಇಂದೆನಗೊಂದು ಅಭಿಲಾಷೆಯು ನಿಮ್ಮಲಿ ನಮ್ರತೆಯಿಂದಲಿ ಬೇಡುವೆನು ಗುರುವಾಗಿರಿ ನೀವಿಂದೆನಗೆ ಓ ಚಿಲಿಪಿಲಿ ಗುಟ್ಟುತ ಹಾರುವ ಹಕ್ಕಿ ಪಕ್ಷಿಗಳಿರಾ ಒಗ್ಗೂಡಿ ಬಾಳುವ ಪಾಠ ಕಲಿಸುವಿರಾ? ಓ ಕಂಠ ಸಿರಿಯ ಕೋಗಿಲೆಯ ಕರ್ಣಕೆ ಇಂಪಾಗುವ ಹಾಡನೀ ಕಲಿಸುವೆಯಾ ? ಓ ಕೆಂಪು ಚುಂಚಿನ ಗಿಳಿಯಣ್ಣಗಳಿರಾ ಸಿಹಿನುಡಿಯ ಕಲಿಸಲು ಬರುವಿರಾ ನಾಲಿಗೆಗೆ? ಓ ಪರಿಪರಿ ಬಣ್ಣದಿ ಕಂಗೊಳಿಸುವ ಹೂವುಗಳೇ ಸದಾ ನಗೆ ಬೀರುವುದನು ಕಲಿಸಿರಿ ಅರ್ತಿಯಿಂದೆನಗೆ. ಓ ಸಾಲಲಿ ಸಾಗುವ ಇರುವೆಳೆ ಶಿಸ್ತಿನ […]
ಇದು ಅಗಲಿಕೆಯ ಸಮಯ!
ಇದು ಅಗಲಿಕೆಯ ಸಮಯ! – ಹೊಸ್ಮನೆ ಮುತ್ತು ಭವ್ಯ ಭವಿತವ್ಯಕ್ಕಾಗಿ, ಮೇರು ಬದುಕಿಗಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲೆಂದೇ ಉನ್ನತ ಶಿಕ್ಷಣದ ಕನಸಿನ ಬೆನ್ನೇರಿ ನಗರ, ಪಟ್ಟಣ, ಮೆಟ್ರೊ ಸಿಟಿಗಳಿಗೆ ಹೊರಟು ನಿಂತಿದ್ದಾರೆ. ಅವರ ಹೆಗಲಿನ ಮೇಲೆ ಹೆತ್ತವರ ಹಾಗೂ ತನ್ನದೇ ಕನಸುಗಳನ್ನು, ನಿರೀಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳುವ ದೊಡ್ಡ ಜವಾಬ್ದಾರಿಯಿದೆ. ವಿದ್ಯಾಭ್ಯಾಸದ ಗುಣಮಟ್ಟದ ದೃಷ್ಟಿಯಿಂದ ಆ ಕಾಲೇಜೇ ಸರಿ, ಈ ಕ್ಯಾಂಪಸ್ಸೇ ಸರಿ ಎಂದು ಪೋಷಕರೇನೋ ನಿರ್ಧರಿಸಿ ಕಳುಹಿಸಲು ತಿರ್ಮಾನಿಸಿಬಿಟ್ಟಿದ್ದಾರೆ. ಮನೆಯಿಂದ ಹೊರಡುವುದು ಖಾತ್ರಿಯೆಂದು ನಿರ್ಧರಿಸಿಕೊಂಡ […]
“ಸಮಾಹಿತ” – ಇ-ಪತ್ರಿಕೆ
ಸಾಹಿತ್ಯದ ರಸದೌತಣ ನೀಡುವ ಪತ್ರಿಕೆಗಳು ಬೆರಳೆಣಿಕೆ ಇರುವ ಸಮಯದಲ್ಲಿ ಹೊಸದೊಂದು ಕಿರಣದಂತೆ “ಸಮಾಹಿತ” ಸಾಹಿತ್ಯಕ ಪತ್ರಿಕೆ ಇದೇ ವರುಷ ಪ್ರಾರಂಭವಾಯಿತು. ಸಮಾಹಿತ ಮೊದಲನೆಯ ಪತ್ರಿಕೆಯ ಆಯ್ದ ಭಾಗವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇದರೊಂದಿಗೆ “ಸಮಾಹಿತ” ಪತ್ರಿಕೆ ಪ್ರಾರಂಭದಂದು, ಧಾರವಾಡ ಸಾಹಿತ್ಯ ಹಾಗು ಅಲ್ಲಿ ಪ್ರಾರಂಭವಾದ ಪತ್ರಿಕೆಗಳ ಪರಿಚಯದೊಂದಿಗೆ ರಾಘವೇಂದ್ರ ಪಾಟೀಲರು ‘ಸಮಾಹಿತ’ ಪತ್ರಿಕೆ ಪ್ರಾರಂಭದ ಬಗ್ಗೆ ಮಾತನಾಡಿದರು. ನೀವು ಅದನ್ನು ಇಲ್ಲಿ ಕೇಳಬಹುದು ಇದು ೨೦೧೬ ಜನವರಿ ತಿಂಗಳ ೧೫ ರಂದು ಮುದ್ರಿತ ಮಾಡಿದ್ದು ಸಮಾಹಿತ ಇ- ಪತ್ರಿಕೆ […]
ಪ್ರೀತಿಯ ಕಂಪನದಲ್ಲಿ
ಪ್ರೀತಿಯ ಕಂಪನದಲ್ಲಿ — ಹೊಸ್ಮನೆ ಮುತ್ತು ಅವರು ವಾಸವಿದ್ದದ್ದು ‘ಪಾಶ್’ ಲೊಕಾಲಿಟಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ. ದೊಡ್ಡ ಹುದ್ದೆ ನಿರ್ವಹಿಸಿದ ಅನುಭವ ಅವರ ಬೆನ್ನಿಗಿತ್ತು. ಮಕ್ಕಳು, ಮೊಮ್ಮಕ್ಕಳ ತುಂಬು ಕುಟುಂಬದೊಂದಿಗೆ ನಿವೃತ್ತಿಯ ಜೀವನ. ಈಗ ಅಜಮಾಸು ಎಪ್ಪತ್ತರ ಗಡಿ ಮೀರಿದ ವಯಸ್ಸು ಅವರದ್ದು. ಇಂತಿಪ್ಪ ಅವರಿಗೆ ಮನೆಯಲ್ಲಿ ಕೈಗೊಬ್ಬ, ಕಾಲಿಗೊಬ್ಬ ಸೇವಕರಿದ್ದರೂ ತಮಗೆ ಬೇಕಾದ ಸಣ್ಣಪುಟ್ಟ ಸಾಮಾನುಗಳನ್ನು ತಾವೇ ಆಯ್ದು ತಂದುಕೊಳ್ಳುವ ರೂಢಿ. ಶ್ರೀಮಂತ ಬಡಾವಣೆಯಲ್ಲಿನ ಮನೆ ಎಂದಾಗ ಕೈಹಾಸಿನಲ್ಲೇ ದಕ್ಕುವಂತಿರುವ ಹವಾನಿಯಂತ್ರಿತ ವೈಭವೋಪೇತ ಮಾಲುಗಳಿಗೆ, […]
ಈ-ಹೊತ್ತಿಗೆ – “ಸೂರ್ಯನ ಕೊಡೆ – ಕಥಾ ಸಂಕಲನ”
ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ೨೧ – ೦೨ – ೨೦೧೬ ಈ-ಹೊತ್ತಿಗೆ ಮೂರನೇ ವರುಷದಿಂದ ನಾಲ್ಕನೆಯ ವರುಷಕ್ಕೆ ಹೆಜ್ಜೆ ಇಟ್ಟಿದೆ, ನಾಲ್ಕನೆಯ ವರುಷದ ಹುಟ್ಟುಹಬ್ಬದ ಸಂಭ್ರಮ. ಈ ತಿಂಗಳ ಚರ್ಚಿಸಿದ ಪುಸ್ತಕ – ಕುಂ. ವೀರಭದ್ರಪ್ಪ ಅವರ “ಸೂರ್ಯನ ಕೊಡೆ – ಕಥಾ ಸಂಕಲನ” ಕಥಾ ಸಂಕಲನದ ಕಥೆಗಳು: ವಿಲೋಮ, ಸೂರ್ಯನ ಕೊಡೆ, ಅಪಸ್ಮಾರ, ಸೊಳ್ಳೆ, ಶಾನವಾಸಪುರ, ಪುನರಪಿ, ಕರೆ, ಮರ್ಕಟೋಪಖ್ಯಾನ, ಒಂದು ಪ್ರಶ್ನೆಯ ಕಥೆ, ಎಂಜಲೆಲೆ ಯಲ್ಲಮ್ತಾಯಿಯ ಜಳಕ ವೃತ್ತಾಂತವು, ಆಸರೆ, ಹೇನುಗಳು […]
ರದ್ದಿಯಲ್ಲಿ ಸಿಕ್ಕ ಪತ್ರಗಳು
ರದ್ದಿಯಲ್ಲಿ ಸಿಕ್ಕ ಪತ್ರಗಳು ಪತ್ರ-1 ನಾಟಕ ನುಚ್ಚೇಶ್ವರ, ನೀಲಪ್ಪ ದ್ವಿತೀಯ ದರ್ಜೆ ಗುಮಾಸ್ತ. ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಿಭಾಗ ಕಚೇರಿ, ಗುಡಿಕೋಟೆ -ಇವರಿ0ದ ದಿ. 11-11-2001 ಮಾನ್ಯ ಮುಖ್ಯ (ಅತೀ ಮುಖ್ಯ) ಅಭಿಯ0ತ್ರರು ಪಾಳು ಕಟ್ಟಡ ಮತ್ತು ಹಾಳು ಗು0ಡಿ ರಸ್ತೆ ವಲಯ ಕಚೇರಿ, ಬೆ0ಗಳೂರು ಇವರಿಗೆ, ಮಾನ್ಯರೆ, ವಿಷಯ : ನಾಟಕ ಮಾಡಲು ಪರವಾನಿಗೆ ನೀಡುವ ಬಗ್ಗೆ ಮನವಿ: ಈ ಮೂಲಕ ತಮ್ಮಲ್ಲಿ ವಿನ0ತಿಸುವುದೇನೆ0ದರೆ, ಸ್ವಾಮಿ ನಾವು ತಲತಲಾ0ತರದಿ0ದ ನಾಟಕ -ಗೀಟಕ ಅ0ತ […]