Your Cart

Need help? Call +91 9535015489

📖 Print books shipping available only in India. ✈ Flat rate shipping

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು

ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು: ನವೋದಯ ಕಾಲದಲ್ಲಿ ಕನ್ನಡದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಐತಿಹಾಸಿಕ ಕಾದಂಬರಿಗಳು ಬರುತ್ತಿದ್ದವು. ಗಳಗನಾಥರಿಂದ ಮೊದಲುಗೊಂಡು ತ.ರಾ.ಸು ಅವರವರೆಗೆ ಕನ್ನಡ ಐತಿಹಾಸಿಕ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರಲ್ಲಿ ಓದಿನ ರುಚಿ ಹಚ್ಚಲು ಸಹಾಯ ಮಾಡಿದವು. ಭಾರತ ಮತ್ತು ಕರ್ನಾಟಕದ ಐತಿಹಾಸಿಕ ಪರಂಪರೆಗಳನ್ನು ನಮ್ಮ ಅರಿವಿಗೆ ತರಲು ಯತ್ನಿಸಿದವು. ಈಗ ಐತಿಹಾಸಿಕ ಕಾದಂಬರಿಗಳ ಪರಂಪರೆ ಹೆಚ್ಚು-ಕಡಿಮೆ ನಿಂತೇ ಹೋದಂತಾಗಿದೆ. ಈ ಸಾಹಿತ್ಯ ಪ್ರಕಾರಗಳಲ್ಲಿ ಮತ್ತೆ ಆಸಕ್ತಿ ಹುಟ್ಟುವಂತೆ ಮಾಡುವ ಒಂದು ಪ್ರಯತ್ನ […]

ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧ – ಆಸಹಿಷ್ಣುತೆ

ಗೋಷ್ಠಿ ೧ – ಆಸಹಿಷ್ಣುತೆ: ಇವತ್ತು ನಮ್ಮ ರಾಜಕೀಯ. ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತಲ್ಲಣವನ್ನುಂಟುಮಾಡಿರುವುದು ಆಸಹಿಷ್ಣುತೆ. ಇದರಲ್ಲಿ ಎಡ – ಬಲ ಎಂಬ ಭೇದವೇನೂ ಇಲ್ಲ. ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ಬಹುತ್ವಕ್ಕೆ ಇದರಿಂದ ಅಪಾರವಾದ ಹಾನಿಯಾಗಿದೆ. ಮೂಲಭೂತವಾದ ಎಲ್ಲ ಕಡೆಗೂ ಹೆಡೆಯೆತ್ತಿ ಬುಸುಗುಡುತ್ತಿದೆ. ತಮಗೆ ಹಿಡಿಸದ ವಾದಗಳನ್ನು ಔಚಿತ್ಯದ ಎಲ್ಲೇ ಮೀರಿ ಮನಬಂದಂತೆ ಟೀಕಿಸುವ ಒಂದು ಪಂಥವಿದ್ದರೆ ಅಂಥ ವಾದಗಳನ್ನು ಪ್ರಾಣ ತೆಗೆದಾದರು ಹತ್ತಿಕ್ಕಬೇಕೆನುವ ಇನ್ನೊಂದು ಪಂಥ ಇದೆ. ಇದರಿಂದಾಗಿ, ಇವತ್ತು ನಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ […]

ಮಹದಾಸೆಯ ಕನಸುಗಳು

ಮನದಾಳದಿ ಬಿತ್ತು ಮಹದಾಸೆಯ ಕನಸುಗಳ ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ ದೊರಕದೇಕೆ ನಿನಗೆ ಪರಿಶ್ರಮದ ಫಲ ಕನಸುಗಳ ನೀ ಕಟ್ಟು ಪ್ರಯತ್ನವಿರಲಿ ಜಾಸ್ತಿಯೇ ಒಂದಿಷ್ಟು ವ್ಯಕ್ತಿತ್ವ ವಿಕಸನದ ಗುರಿಯಿಟ್ಟು ಅರಳಿಸಿಕೊ ವ್ಯಕ್ತಿತ್ವ ಶಿಸ್ತು ಬಧ್ದತೆಯ ಸತ್ವ ಗುರಿ ಏಕಾಗ್ರತೆ ಪಕ್ವ ಮಹದಾಸೆ ನೆಗೆಯಲು ನಭಕೆ ಧ್ರಡ ನಿಶ್ಚಯವೊಂದೆ ಬಾಕಿ ಕೀಳರಿಮೆಯ ಮೋಡಗಳ ಕೆಳಗೆ ನೂಕಿ ಇರಲಿ ಸ್ರಜನಾತ್ಮಕ ಯೋಚನೆ ಜ್ಞಾನ ಭರಿತ ವಿಶ್ವಾಸದ ನಿವ೯ಹಣೆ ಎಂದಿಗೂ ಅನಿಸದು ನಿನಗೆ ಜೀವನ ಒಂದು […]

ಪದ್ಮಗಂಧಾ (೨೦೧೬)

ನಾಟಕದ ಬಗ್ಗೆ ಪದ್ಮಗಂಧಾ ನಾಟಕದ ಕಥಾವಸ್ತು ಮಹಾಭಾರತವನ್ನು ಆಧರಿಸಿದ್ದು. ಇದರಲ್ಲಿ ವ್ಯಕ್ತವಾಗುವ ತ್ಯಾಗ, ಪ್ರೀತಿ, ವಾತ್ಸಲ್ಯಭಾವ ಇಂದಿನ ಸಮಾಜಕ್ಕೆ ತೀರ ಸನಿಹವಾಗುತ್ತದೆ. ಶ್ರೀಮಂತಿಕೆ ಇರುವಲ್ಲಿ ಪ್ರೀತಿಯ ಕೊರತೆ ಒಂದುಕಡೆ ಆದರೆ ನಿಸರ್ಗದತ್ತ ಸಹಜ ಪ್ರೀತಿ ಇರುವಡೆ ಮಾನವ ನಿರ್ಮಿತಿಯ ಸಂಪತ್ತಿನ ಆಕರ್ಷಣೆ ಇನ್ನೊಂದೆಡೆ. ಇಂತಹ ಮಾನವನ ಸ್ವಾಭಾವಿಕ ಸೆಳೆತಗಳು ಹಸ್ತಿನಾಪುರ ಹಾಗೂ ದಾಸಪುರದಲ್ಲಿ ಕಂಡುಬರುತ್ತದೆ. ಕೊನೆಯಲ್ಲಿ ಈ ಬಯಕೆಗಳು ದೇವವ್ರತನ ತ್ಯಾಗದ ಫಲವಾಗಿ ಈಡೇರುವಂತಾಗುತ್ತದೆ. ಉಪರಿಚರನ ಧಾತುವಿನಿಂದ ಮತ್ಸ್ಯದಲ್ಲಿ ಹುಟ್ಟಿದ ಮಗು ದಾಶರಾಜನಿಗೆ ಸಿಕ್ಕು ಮತ್ಸ್ಯಗಂಧಿಯಾಗಿ ಬೆಳೆಯುತ್ತಾಳೆ. […]

ಪದ್ಮಗಂಧಾ

ರಚನೆ ಯುಮ್‍ನಾಮ್ ರಾಜೇಂದ್ರ ಸಿಂಗ್ ಇಂಗ್ಲೀಷ್ ಅನುವಾದ ಹೈಸ್ನಾಮ್ ನೋರೆನ್ ಸಿಂಗ್ ಕನ್ನಡ ಅನುವಾದ ಬಿ.ಆರ್. ವೆಂಕಟರಮಣ ಐತಾಳ ಮತ್ತು ನೇಹಾ ಶಿಶಿರ

ಗಾರ್ದಭ ಪುರಾಣ

  ಮಾನವ ‘ದ್ವಿಪದಿ’. ದನ, ಎತ್ತು,ಎಮ್ಮೆ, ಕೋಣ, ಕುದುರೆ, ಕತ್ತೆ ಹೀಗೆ    ತನ್ನ    ಬದುಕಿಗಾಗಿ ಚತುಷ್ಪದಿಗಳನ್ನು ಸಾಕಿದ್ದಾನೆ. ಪ್ರಾಣವುಳ್ಳ  ಎಲ್ಲರನ್ನು ಪ್ರೀತಿಸು.  ಭಗವಂತ  ಅವರಲ್ಲಿಯೂ ನೆಲೆಸಿದ್ದಾನೆ ಎಂದು  ಪ್ರವಚನಕಾರರು ಹೇಳಿದಾಗ  ನಾನು ಕುದುರೆಯಷ್ಟೇ  ಕತ್ತೆಯನ್ನು  ಪ್ರೀತಿಸಲಾರಂಭಿಸಿದೆ. ಈ ಪ್ರೀತಿ  ಪರಾಕಾಷ್ಟೆಗೆ ಹೋಗಿ  ಬಾಲ್ಯದಲ್ಲೊಮ್ಮೆ ಅಪ್ಪನೊಡನೆ, ನಮ್ಮ ಹಟ್ಟಿಯಲ್ಲಿರುವ  ದನಕರುಗಳ  ಜತೆಗೆ ನಾವೇಕೆ ಒಂದು ಕತ್ತೆಯನ್ನು ಸಾಕಬಾರದು ಎಂದು  ಕೇಳಿದಕ್ಕೆ ‘ಸದ್ಯಕ್ಕೆ ನೀನಿದ್ದೀಯಲ್ಲ, ಮುಂದೆ ನೋಡೋಣ ಅಂದಿದ್ದರು. ನಮ್ಮ ಬ್ರಾಹ್ಮಣ ಸಂಪ್ರದಾಯ, ರೀತಿ ರಿವಾಜುಗಳೆಲ್ಲ ಕತ್ತೆಯನ್ನು ಸಾಕುವುದಕ್ಕೆ […]

e ಸಾಹಿತ್ಯ

ಲೇಖನಿ ಮತ್ತು ಕಾಗದಗಳ ಬಳಕೆಯಿಲ್ಲದೆ, ಆನ್ ಲೈನ್ ನಲ್ಲಿ ಯೂನಿಕೋಡ್ ತಂತ್ರಾಂಶವನ್ನು ಬಳಸಿ ಈ ಲೇಖನವನ್ನು ಬರೆಯುವ ನನ್ನಲ್ಲಿ ಒಂದಿಷ್ಟು ಸಂಭ್ರಮ, ಒಂದಿಷ್ಟು ಆತಂಕ ಮತ್ತು ಗೊಂದಲಗಳಿವೆ. ಅದು e ಸಾಹಿತ್ಯದ ಬಗೆಗೆ. ಸಂಭ್ರಮ, ನನ್ನ ಮಾತೃಭಾಷೆಯನ್ನು, ಕಸ್ತೂರಿ ಕನ್ನಡವನ್ನು ಇಂಗ್ಲೀಷಲ್ಲಿ ಬೆರಳಚ್ಚಿಸಿ ಕಂಪ್ಯೂಟರ್ ಪರದೆಯ ಮೇಲೆ ಮುದ್ದಾದ ಕನ್ನಡದ ಅಕ್ಷರಗಳಲ್ಲಿ ಅದು ಮೂಡುವುದನ್ನು ಕಂಡಾಗ. ಸಂವಹನ, ಸಂಪರ್ಕವನ್ನು ನಮ್ಮ ಮಾತೃಭಾಷೆಯಲ್ಲೇ ಗೈದಾಗ ಆಗುವ ಪರಿಣಾತ್ಮಕ ಫಲಿತಾಂಶವನ್ನು ಅನುಭವಿಸಿದಾಗ. ಫೇಸ್ ಬುಕ್ ನಲ್ಲೋ, ನಮ್ಮದೇ ಆದ ಬ್ಲಾಗ್ […]

ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆ

    ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆ     ಮರಾಠಿ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 15,000ಕ್ಕೂ ಹೆಚ್ಚು ಪುಟಗಳ ಸಾಹಿತ್ಯವನ್ನು ಪ್ರಕಟಿಸಿದ  ಕೀರ್ತಿ ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆಯವರದು. ತನ್ನ ಇಪ್ಪತ್ತನೆಯ            ವಯಸ್ಸಿಗೆ ‘ಬಾಣ’ ಕವಿಯ ಕಾದಂಬರಿಯನ್ನು ಸಂಪಾದಿಸಿದ ಅವರು ವಿಶ್ವನಾಥನ ‘ಸಾಹಿತ್ಯ ದರ್ಪಣ’,  ‘ಭವಭೂತಿಯ ‘ಉತ್ತರರಾಮ ಚರಿತೆ’, ಬಾಣನ ‘ಹರ್ಷ ಚರಿತೆ’, ಭಟ್ಟ ನೀಲಕಂಠನ ‘ವ್ಯವಹಾರ  ಮಯೂಖ’ಮುಂತಾದ ಗ್ರಂಥಗಳ ಸಂಪಾದಿತ […]

ಮಿದುಳು ಎಂಬ ಕೌತುಕ

ಅವರಿಗೆ ತಲೆಯಲ್ಲಿ ಮಿದುಳಿಲ್ಲ ಮಾರಾಯ್ರೆ..! ಹಲವೊಂದು ಸಲ ನಾವು ಮಾನವನ ತಲೆಯಲ್ಲಿರುವ ಮಿದುಳನ್ನು ಅದು ಅವನನ್ನು ಬುದ್ಧಿವಂತನನ್ನಾಗಿಸುವ ಅಂಗವೆಂದು ಮಾತ್ರ ತಿಳಿದಿದ್ದೇವೆ. ಅದು ತಪ್ಪು..ತಪ್ಪು..ತಪ್ಪು. ಜಗತ್ತಿನಲ್ಲಿ ಅದ್ಭುತವೆಂದು ಬಣ್ಣಿಸುವ ಯಾವದೇ ವಸ್ತುಗಳೊಡನೆ ತುಲನೆ ಮಾಡಿದಾಗ ನಮ್ಮ ಶರೀರದಲ್ಲಿರುವ ಮಿದುಳೆಂಬ ಅಂಗ ಅತ್ಯದ್ಭುತ, ಅದೊಂದು ಕೌತುಕ!. ಇವತ್ತು ನಾವು ಏನನ್ನು ಸೂಪರ್ ಕಂಪ್ಯೂಟರ್ ಎಂದು ಕರೆಯುತ್ತೇವೆಯೊ ಅದರ ರಚನೆಯನ್ನು ಮಾನವ ಮಿದುಳು ತಾನೇ ಮಾಡಿದ್ದು? ಮನುಷ್ಯನ ತೂಕದ 2% ಮಾತ್ರವಿರುವ ಬೂದು ಮಿಶ್ರಿತ ಬಿಳಿ ಬಣ್ಣದ ಅಣಬೆಯಂತೆ ಕಾಣುವ […]