Your Cart

Need help? Call +91 9535015489

📖 Print books shipping available only in India. ✈ Flat rate shipping

ಹಬ್ಬದ ಹುರುಪಿಗೆ ಸೀರೆಯ ಒನಪು

ಹಬ್ಬವೆಂದು ಸಾಂಪ್ರದಾಯಿಕ ಉಡುಗೆಗಳನ್ನೇ ಹಾಕಬೇಕೆಂದಿಲ್ಲ ಈಗ. ಹಬ್ಬಗಳೆಲ್ಲ ಬದಲಾಗುತ್ತಲೇ ಇವೆ ಕಾಲದೊಂದಿಗೆ. ಹಾಗೇ ಹಬ್ಬಕ್ಕೆ ಕೊಳ್ಳುವ ಉಡುಗೆಗಳೂ. ಸದ್ಯದ ಫ್ಯಾಷನ್‌ನ ಯಾವ ಡ್ರೆಸ್ಸಾದರೂ ನಡೆದೀತು. ಹಾಗೆಂದು ರೇಷ್ಮೆ ಸೀರೆಗಳ ಸಡಗರ ಕಡಿಮೆಯಾಯಿತೆ? ಯುಗಾದಿಗೆಂದೇ ಭಾರೀ ರಿಯಾಯಿತಿ ಮಾರಾಟ ಏರ್ಪಡಿಸುವ ಸೀರೆ ಅಂಗಡಿಗಳನ್ನು ನೋಡಿದರೆ ಹಾಗೆನಿಸುವುದಿಲ್ಲ… ಹಬ್ಬವೆಂದರೆ ಹಬ್ಬದೂಟ, ವಿಶೇಷ ಪೂಜೆ, ಹೊಸ ಬಟ್ಟೆ…ಇದರೊಂದಿಗೆ ಉಕ್ಕುವ ಹೊಸ ಹುರುಪು…ಹಬ್ಬವೆಂದರೆ ಒಟ್ಟಾರೆ ಖುಷಿ. ಯುಗಾದಿಯಂದು ಹೊಸ ವರ್ಷವನ್ನು ಸ್ವಾಗತಿಸಲು ಹೊಸ ಬಟ್ಟೆ ಧರಿಸಿ ಚಂದ್ರನ್ನ ನೋಡೋದು ವಾಡಿಕೆ…ಹೊಸ ನಿರೀಕ್ಷೆಯೊಂದಿಗೆ. ಹಬ್ಬವೆಂದು […]

ಬೆಚ್ಚಿಸಿದ ಬೆಂಕಿಯುಂಡೆ….!

ಕಲ್ಲಾರೆ ಏರು….! ಹೀಗೆಂದರೆ ಎಂಥಾ ಧೈರ್ಯಸ್ಥನ ಎದೆಯಲ್ಲೂ ಭತ್ತ ಕುಟ್ಟಿದ ಅನುಭವ. ಪೇಟೆಗೆ ಹೋಗುವ ಏರು ದಾರಿ; ಸುತ್ತ ಕಲ್ಲು ಬಂಡೆಯ ಹಾಸಿನಿಂದ ಕೂಡಿ ಕಲ್ಲಾರೆ ಏರು ಎಂದೇ ಹೆಸರಾಯಿತು. ಇದು ಪ್ರಸಿದ್ಧಿಗೆ ಬಂದದ್ದು ತನ್ನ ವಿಷಿಷ್ಟ ಕಲ್ಲು ಬಂಡೆಯ ಹಾಸಿನಿಂದಲ್ಲ; ಬದಲಿಗೆ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭೂತ-ದೆವ್ವಗಳ ರೋಚಕ ಕಥೆಗಳಿಂದ. ಜೊತೆಗೆ ಒಬೊಬ್ಬರಿಗೆ ಒಂದೊಂದು ತೆರನಾದ ವಿನೋದ ಹಾಗೂ ವಿಚಿತ್ರ ಎನ್ನಿಸುವ ಅನುಭವ ಅಲ್ಲಿ ಉಂಟಾದ್ದರಿಂದ ಎಂದರೆ ಅದು ಸುಳ್ಳಲ್ಲ. ನೆರಳಿಗೆ ಅಂಜುವ ಅಳ್ಳೆದೆಯ ಇಲಿ […]

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ!

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ! ಜಗತ್ತಿನಲ್ಲಿ ಮನುಷ್ಯರಿಗೆ ಅದರಲ್ಲೂ ನವವಧು-ವರರಿಗೆ ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯುವ ಪದ್ದತಿ ಪುರಾತನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿದೆ. ಇದು ಕೇವಲ ಹಿಂದೂ ಧರ್ಮದಲ್ಲಿ ಇಲ್ಲದೆ ಮುಸ್ಲಿಂ, ಕ್ರಿಸ್ಚಿಯನ, ಹಾಗೂ ಇತರೆ ಧರ್ಮಗಳಲ್ಲಿಯೂ ಇದೆ. ಇದೆ ಸಂಪ್ರದಾಯ ಮುಂದುವರೆದು ಸಾಕು ಪ್ರಾಣಿಗಳಾದ ಎತ್ತು, ಆಕಳು, ಕುರಿ, ಕೋಣ, ಹಾಗೂ ಟಗರುಗಳಿಗೂ  ದೃಷ್ಟಿ ತೆಗೆಯುವ ಪದ್ದತಿ ದಿನನಿತ್ಯ ನಮ್ಮ ಸಮಾಜದಲ್ಲಿ ನೋಡಬಹುದು. ಅದರೆ ನಮ್ಮೂರು ಧಾರವಾಡದ ಹಳ್ಳಿಗಳಲ್ಲಿ ಭತ್ತದ ಬೆಳೆಗಳಿಗೆ ದೃಷ್ಟಿ ತೆಗೆಯುದು ಆಶ್ಚರ್ಯವಾದರೂ […]

ಮಕ್ಕಳ ಕಥೆ – “ಕೆಂಪು ತಿನಿಸೆಲ್ಲ ನನ್ನದೇ”

ಒಂದು ಅಮ್ಮಕೋಳಿ ಇತ್ತು. ಅದಕ್ಕೆ ಎರಡು ಕೋಳಿಮರಿಗಳಿದ್ದವು. ಒಂದು ಕೆಂಪು ಬಣ್ಣದ್ದು ಅದರ ಹೆಸರು ಕೆಂಪಿ. ಇನ್ನೊಂದು ಹಳದಿ ಬಣ್ಣದ್ದು ಅದರ ಹೆಸರು ಹಳದಿ. ಕೆಂಪಿ ಕೆಂಪು ಬಣ್ಣದ ತಿನಿಸೆಲ್ಲ ನನ್ನದೇ ಎನ್ನುತ್ತಿತ್ತು. ಯಾರಿಗೂ ಕೊಡುತ್ತಿರಲಿಲ್ಲ. ಹಳದಿ ಏನಿದ್ದರೂ ಹಂಚಿ ತಿನ್ನುತ್ತಿತ್ತು. ಒಮ್ಮೆ ಎಲ್ಲವೂ ಮಾತನಾಡುತ್ತಾ ನಿಂತಿದ್ದವು. ಕೆಂಪಿಯ ಗಮನ ಮನೆಯ ಮುಂದಿದ್ದ ಗಿಡಗಳ ಕಡೆ ಹೋಯಿತು. ಅದು ತಕ್ಷಣ ಆ ಗಿಡಗಳ ಬಳಿ ಓಡಿತು. ಅಮ್ಮಕೋಳಿ, `ಕೆಂಪಿ, ಎಲ್ಲಿಗೆ ಹೋಗುತ್ತಿರುವೆ? ಒಬ್ಬಳೇ ಹೋಗಬೇಡ’ ಎಂದು ಕರೆಯಿತು. […]

ಈ-ಹೊತ್ತಿಗೆ – “ಮನಸು ಅಭಿಸಾರಿಕೆ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಎಪ್ರಿಲ್ ತಿಂಗಳ ಚರ್ಚೆ ೧೭ ಎಪ್ರಿಲ್ ೨೦೧೬ ಪುಸ್ತಕ: “ಮನಸು ಅಭಿಸಾರಿಕೆ ಕಥಾಸಂಕಲನ” ಬರೆದವರು: ಶಾಂತಿ ಕೆ. ಅಪ್ಪಣ್ಣ ಈ ಹೊತ್ತಿಗೆ -೪೪ರಲ್ಲಿ ನಡೆದ ಮನಸು ಅಭಿಸಾರಿಕೆ ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ತೇಜಸ್ವಿನಿ ಹೆಗಡೆ, ಜಯಶ್ರೀ ದೇಶಪಾಂಡೆ, ವಿಶ್ವಾಸ್ ಚೆನ್ನಪಟ್ಟಣ, ಲಕ್ಷ್ಮೀ ಶಶಿಧರ ಚೈತನ್ಯ, ಉಷಾ ರೈ, ಗೀತಾ ಬಿ.ಯು, ಶಿವು.ಕೆ ಮತ್ತು ಸವಿತಾ ಗುರುಪ್ರಸಾದ್. ಬಿ೦ಬಗಳು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು?

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು? ಈ ಸಲದ ಒಂದು ವಿಶೇಷ ಕಾರ್ಯಕ್ರಮ ವಿಶೇಷ ಉಪನ್ಯಾಸ. ಸಾಹಿತ್ಯದ ಅಭ್ಯಾಸ. ಓದು ತರುಣರಲ್ಲಿ ಕಡಿಮೆಯಾಗುತ್ತಿದೆ ಎಂಬ ಆಪಾದನೆ ಒಂದು ಕಡೆ ಇದ್ದರೆ, ಸಾಹಿತ್ಯ ಸಂಭ್ರಮದ ನಾಲ್ಕು ಆವೃತ್ತಿಗಳಿಗೆ ನಾಡಿನ ಒಳಗಿನಿಂದ ಮತ್ತು ಹೊರಗಿನಿಂದ ಅತ್ಯಂತ ಉತ್ತೇಜನಕಾರಿಯಾದ ಸ್ಪಂದನ ಸಿಗುತ್ತಿರುವದು ಆಶಾದಾಯಕ ಸಂಗತಿಯಾಗಿದೆ. ಸಾಹಿತ್ಯಾಭ್ಯಾಸವನ್ನು ಕುದುರಿಸುವ ಅನೇಕ ಹೊಸ ದಾರಿಗಳನ್ನು ಹುಡುಕುವ ಕೆಲಸದಲ್ಲಿ ಸಂಭ್ರಮ ಗಣನೀಯ ಯಶಸ್ಸು […]

ಬರಿದಾಗದ ಬರಹ

ಏನ ಬರೆಯಲಿ ಎಲ್ಲ ಬರೆದಾಗಿದೆ, ಮುಂದಿನ ಕೋಟಿ ಯುಗಕ್ಕಾಗುವಷ್ಟು, ಬರೆದದ್ದು ಓದದೇ……………….. ಹೋಗಿಬಿಟ್ಟರೆ, ಜೀವಂತ ಹಡೆದರೂ ಹೋದ ಮಗುವಿನಂತೆ, ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ, ಬರೆದವನಿಗೂ ವಾಚಕನಿಗೂ ಹಿಂಸೆ, ಹಾಗೆಂದು ಸುಮ್ಮನಿರಲು ಭಾಷೆ ಬಿಡದಲ್ಲಾ, ವಿಚಾರಗಳ ಸಂತೆಯಲಿ, ಬಡಬಡಿಕೆಯ ವ್ಯಾಪಾರ, ಮೌನವಂತೂ ಬಹು ತುಟ್ಟಿ, ಅದಕೆಂದೇ ಬರೆದು’ಬಿಡು’ವೆ, ನೀ ಓದಿ ‘ಬಿಡು,’ ಇಬ್ಬರೂ ಬಿಟ್ಟು ನೋಡೋಣ ಭಾಷೆ ಹೇಗೆ ಓಡುತ್ತದೆಂದು, ಕೊನೆಗೆ ನೀನೂ ಬರೆದು ’ಬಿಡು’ ನಾನೂ ಓದಿ ’ಬಿಡುವೆ’. ಬಿಟ್ಟು ಹಿಡಿದು ಬಿಟ್ಟು ಹಾರಿಸುವ ಕನ್ನಡದ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಇತ್ತೀಚಿಗೆ, Investigating Journalism ಬೆಳೆಯತೊಡಗಿದ ಮೇಲೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮ ನಮ್ಮ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಅನೇಕ ಅನಿಷ್ಟಗಳನ್ನು ಬೆಳಕಿಗೆ ತಂದು ಒಳ್ಳೆಯ ಕೆಲಸ ಮಾಡಿತೊಡಗಿವೆ. ಮಾಹಿತಿ ಹಕ್ಕು ಕಾಯಿದೆಯ ಲಾಭ ಪಡೆದುಕೊಂಡು ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಗೆ ತಂದಿವೆ. ಆದರೆ ಹಾಗೆ ಮಾಡುವಾಗ ಸುದ್ದಿಗಳಿಗೆ ರೋಚಕತೆ ನೀಡಲು ವಿಷಯಗಳನ್ನು ತಿರುಚುವುದು. ಅತಿರಂಜಿತಗೊಳಿಸುವುದು ಕೂಡ […]

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವರ್ಷ ಬರಗಾಲ ಪರಿಸ್ಥಿತಿ ಇದ್ದ ಕಾರಣ ನೀರಿಗಾಗಿ ಪರದಾಟ ಶುರುವಾಗಿದ್ದು, ಸಮರ್ಪಕವಾಗಿ ನೀರು ಪೂರೈಸುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಕುಡಿಯುವ ನೀರಿಗಾಗಿ ಏಪ್ರಿಲ್-ಮೇ ತಿಂಗಳಲ್ಲಿ ತುಂಬಾ ಭೀಕರ ಪರಿಸ್ಥಿತಿ ಎದುರಿಸುವಂತಾಗಿದೆ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಅಂತರ್ಜಲ ಮಟ್ಟದ ಕುಸಿತದಿಂದ ಎಷ್ಟೋ ಕೊಳವೆಬಾವಿಗಳಲ್ಲಿ ನೀರಿನ ಕಡಿಮೆ ಲಭ್ಯತೆ, ವಿದ್ಯುತ್ ಕೊರತೆಯಿಂದ ಪಂಪಸೆಟ್ ಕೊಳವೆಬಾವಿ ಸುಟ್ಟು ಹೋಗುವುದು. ಹೀಗೆ ದಿನೇ […]