Your Cart

Need help? Call +91 9535015489

📖 Print books shipping available only in India. ✈ Flat rate shipping

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೯: ಲಾವಣಿಯ ಲಾವಣ್ಯ

ಗೋಷ್ಠಿ 9 ವೇಳೆ : 3.30-4.30 ಲಾವಣಿಯ ಲಾವಣ್ಯ ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಇನ್ನೂ ಕ್ರಿಯಾಶೀಲವಾಗಿರುವ ಜಾನಪದ ಹಾಡುಗಾರಿಕೆಯ ಒಂದು ಮುಖ್ಯ ಪ್ರಕಾರ ಲಾವಣಿ. ಒಂದು ಕಾಲಕ್ಕೆ, ಈ ಭಾಗದಲ್ಲಿ ಸಂಸ್ಕøತಿ ಪ್ರಸಾರದಲ್ಲಿ ಲಾವಣಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಕಾಲಕಾಲಕ್ಕೆ ಬದಲಾವಣೆ ಪಡೆದು ತನ್ನ ಸೃಜನಶೀಲತೆಯನ್ನು ಜೀವಂತವಾಗಿ ಇರಿಸಿಕೊಂಡಿತ್ತು. ಇಂಗ್ಲೀಷಿನ ‘ಬ್ಯಾಲಡ್’ಗೆ ಸಂವಾದಿಯಾದದ್ದು, ಕಥೆ ಹೇಳುವ ಒಂದು ಕಾವ್ಯಪ್ರಕಾರ ಎಂದು ತಪ್ಪು ಗ್ರಹಿಕೆಗೆ ಒಳಗಾಗಿರುವ ಲಾವಣಿಗೆ ಅದರದೇ ಆದ ದೇಸೀ ರಾಚನಿಕ ವಿನ್ಯಾಸ, ವಸ್ತು, […]

ಈ-ಹೊತ್ತಿಗೆ – “ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ, Ask Mr.YNK”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಜೂನ್ ತಿಂಗಳ ಚರ್ಚೆ ೧೯ ಜೂನ್ ೨೦೧೬ ಜೋಗಿಯವರು ಬರೆದ ನಾಟಕ, ‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ, Ask Mr.YNK’ ರಂಗಭೂಮಿಯ ಕಲಾವಿದರಿಂದ ನಾಟಕದ ವಾಚನ ಮತ್ತು ಚರ್ಚೆ. ವೈ ಎನ್ ಕೆ ಅವರ “ಪನ್” ಓದಿ ….ನಾಟಕ ಕೇಳಿ…. ನಿಮ್ಮ ಅಭಿಪ್ರಾಯ ತಿಳಿಸಿ (ಕಮೆಂಟ್ ಬರೆಯಿರಿ).. ಇರಾನ್ ಮತ್ತು ಇರಾಕ್ ಯುದ್ಧದ ಸಮಯದಲ್ಲಿ ಅವರು ಹೇಳಿದ್ದು – “ಸುಮ್ನೆ ಇರಾನ ಅಂದ್ರೆ ಇರಾಕ್‌ ಬಿಡಾಕಿಲ್ಲ”. […]

ಬೆಸ್ಟ್ ವೇ ಅಂದರೆ ಹೆಮಿಂಗ್-ವೇ

ನಾನು ಲೇಖಕನಾಗುವುದು ಹೇಗೆ. ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ, ಎಲ್ಲ eನವೂ ಸಂಪತ್ತಿನ ಸಂಪಾದನೆಯ ಮೂಲ ಎಂದು ನಂಬಿರುವ ದಿನಗಳಲ್ಲಿ ಇದು ಮುಖ್ಯ ಅಲ್ಲ ಅಂತ ಬಹಳಷ್ಟು ಮಂದಿಗೆ ಅನ್ನಿಸಬಹುದು. ಆದರೆ ಏಕಾಂತ ಎಂಬುದೊಂದು ಎಲ್ಲರನ್ನೂ ಆವರಿಸುತ್ತದೆ. ಅಂಥ ಹೊತ್ತಲ್ಲಿ ಸಂಪತ್ತಾಗಲೀ, ಅಧಿಕಾರವಾಗಲೀ ಉಪಯೋಗಕ್ಕೆ ಬರುವುದಿಲ್ಲ. ಆ ನೆರವಾಗುವುದು ಕೇವಲ ನಮ್ಮ ಸೃಜನಶೀಲತೆ. ಅದರಲ್ಲೂ ದ್ವೀಪಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅಂಥದ್ದೊಂದು ಅದಮ್ಯ ಆಸೆ ಮೂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಅವರ ಭಾವನೆಗಳಿಗೆ ಅಲ್ಲಿ ಹೊರದಾರಿಗಳೇ ಇರುವುದಿಲ್ಲವಲ್ಲ. ಅಂಥ ಹೊರದಾರಿಗಳಿಲ್ಲದ ಆ ಅಧಿಕಾರಿಯ […]

ಚೌಕಟ್ಟಿನ ಚಿತ್ರ

ಚೌಕಟ್ಟಿನ ಚಿತ್ರ ಹರಿದು ಮೀರುತಲಿ ಸಿದ್ಧ ಅಳತೆಯ ಚೌಕಟ್ಟಿ ಬೆಳಸಬೇಕಿದೆ ಕಂದಾ… ಈ ನಿನ್ನ ಘನ ವ್ಯಕ್ತಿತ್ವ ಹಿಂದೆ ಯಾರೋ ಎಂದೋ ಕೊರೆದಿಟ್ಟ ಈ ಕಿರಿಯ ಚೌಕಟ್ಟಿಗೆಂದೇ ಕಿರಿದಾಗಿಸುವಿ ಏಕೆ…? ಈ ನಿನ್ನ ಭವ್ಯ ಭವಿತವ್ಯ ಚೆಂದದೀ ಚೌಕಟ್ಟಿಗೆ ಅಂದ ಚಿತ್ರವೇ ತಾನೆನುತ ಬೋನ್ಸಾಯ್ ತೆರದಿ ಕುಬ್ಜಗೊಳಿಸುವುದು ತರವೇ…? ಬೆಳೆವ ಈ ನಿನ್ನ ಹಿರಿ ವ್ಯಕ್ತಿತ್ವ ಕಣ್ಣು ಮುಚ್ಚುವಾಟ ಸಾಕಿನ್ನು , ಬಿಗಿಗೊಂಡ ಮನವನುತ್ತುತ್ತ ಉತ್ಸಾಹ, ನಂಬಿಕೆ, ಕನಸುಗಳ ಬೀಜ ಬಿತ್ತಿ, ಬೆಳಸಬೇಕಿದೆ ನೀನೆ ನಿನ್ನ ವ್ಯಕ್ತಿತ್ವ; […]

ಆಸೆ

ಆಸೆ ತಳಿರೆಲೆಯ ತೋರಣದ ಚಿಗುರೆಲೆಯ ನಡುವೆ ಕುಡಿಯಾಗುವಾಸೆ ಬರಡು ಭೂಮಿಯಲಿ ಅರಳಿದ ಒಂದೇ ಹೂವಾಗುವಾಸೆ ಅಂಬರದಿ ಹಾರುತಿಹ ಹಕ್ಕಿಗಳ ಜೊತೆಗೂಡಿ ಬಾನಲಿ ಹಾರುವಾಸೆ ಪರ್ವತ ಶಿಖರದ ಮೇಲು ಹೊದಿಕೆಯ ಹಿಮವಾಗುವಾಸೆ ಮೂಡಣದಿ ಉದಯಿಸುತಿಹ ರವಿತೇಜನ ಬಂಗಾರದ ಕಿರೀಟ ನಾನಾಗುವಾಸೆ ಪಡುವಣದಿ ಮೂಡಿಹ ಕೇಸರಿಯ ರಂಗು ನಾನಾಗುವಾಸೆ ಕತ್ತಲಲು ಬೆಳಗುತಿಹ ಹುಣ್ಣಿಮೆ ಚಂದಿರನಾಗುವಾಸೆ ಕಬ್ಬಿನ ದಂಟಿನಲಡಗಿರುವ ಸಿಹಿಬೆಲ್ಲ ನಾನಾಗುವಾಸೆ ನೆರಳನೀವ ಹೆಮ್ಮರದ ಒಂದೇ ಒಂದು ಟೊಂಗೆಯಲಿ ನಾನಿರುವಾಸೆ ಕೆರೆ ಕೊಳಗಳ ಬಿಳಿತಾವರೆ ಆಗುವಾಸೆ ಜೇನ ಗೂಡಿನಲಿ ಕಟ್ಟಿದ ಸಿಹಿ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೮: ಇಂದೂ ಕಾಡುವ ಅಂದಿನ ಕೃತಿ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೮: ಇಂದೂ ಕಾಡುವ ಅಂದಿನ ಕೃತಿ ಅನೇಕ ಕಾರಣಗಳಿಂದ, ಒಮ್ಮೆ ಮಹತ್ವವೆನಿಸಿದ ಅನೇಕ ಕೃತಿಗಳು ಕ್ರಮೇಣ ಮರೆವಿಗೆ ಸರಿಯುತ್ತವೆ. ಇನ್ನು ಕೆಲವು ಮಹತ್ವದ ಕೃತಿಗಳು ಓದುಗರ ಗಮನವನ್ನೇ ಸೆಳೆಯದೆ ಕಣ್ಮರೆಯಾಗಿರುತ್ತವೆ. ಇಂದಿಗೂ ಪ್ರಸ್ತುತವಾಗಿರುವ ಅಂಥ ಕೃತಿಗಳನ್ನು ಮತ್ತೆ ಮತ್ತೆ ಓದುಗರ ಗಮನಕ್ಕೆ ತರುವುದು ನಿರಂತರವಾಗಿ ನಡೆಯಬೇಕಾದ ಕೆಲಸ. ಅಂಥ ಒಂದು ಉದ್ದೇಶದ ಗೋಷ್ಠಿ ಇದು. ರಾ.ಕು. ಅವರ “ಗಾಳಿಪಟ”, ಮಧುರಚೆನ್ನರ ‘ರಮ್ಯಜೀವನ’, ಹ. ಪೀ. ಜೋಶಿಯವರ “ಮಾವಿನ ತೋಪು”, ಕೊಡಗಿನ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು ಹಳಗನ್ನಡ ಕಾವ್ಯದ ಅಭ್ಯಾಸ ಅಲಕ್ಷ್ಯಕ್ಕೆ ಒಳಗಾಗತೊಡಗಿದೆ. ಪದವಿ ಮತ್ತು ಸ್ನಾತಕೋತ್ತರ ಅಭ್ಯಾಸಕ್ರಮದಲ್ಲೂ ಹಳಗನ್ನಡ – ನಡುಗನ್ನಡ ಕಾವ್ಯಗಳ ಓದಿನ ಭಾಗ ಕಡಿಮೆಯಾಗ ತೊಡಗಿದ. ಹಳಗನ್ನಡವನ್ನು ಚೆನ್ನಾಗಿ ಕಲಿಸುವ ಪಾಂಡಿತ್ಯವೂ ವಿರಳವಾಗುತ್ತಿದೆ. ಇಂದಿನ ಬರವಣಿಗೆಗೆ ಹಳೆಗನ್ನಡ ಕಾವ್ಯದ ಓದು ಅಗತ್ಯವಿಲ್ಲ ಎಂಬ ವಾದವೂ ಎದ್ದಿದೆ. ಆದರೆ ಪರಂಪರೆಯ ಅಧ್ಯಯನದಿಂದ ನಮ್ಮ ಇಂದಿನ ಕಾವ್ಯ ಹೆಚ್ಚಿನ ಸತ್ವ, ತೇಜಸ್ಸು ಪಡಯಬಲ್ಲದು. ಕಳೆದ ಮೂರು ವರ್ಷಗಳಲ್ಲಿ ಧಾರವಾಡ […]

ಸುರಲೋಕದ ಪಾರಿಜಾತ…

ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ? ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು ಯಾರ ಉದರದಲವಿತ ಚೆಲುವ ಗುಟ್ಟು ಯಾರು ನಿನ್ನನು ಪಡೆದ ಭಾಗ್ಯವಂತರು ಹೇಳು ಯಾರ ಪ್ರೇಮಗೀತೆಯ ಪಲ್ಲವಿಯು ನೀನು ಚಂದ್ರಮುಖಿ ನೀನಹದು, ಕಣ್ಣಲವಿತಿಹ ತಾರೆ ಅರೆ ಬಿರಿದ ತುಟಿಗಳಿಗೆ ಹವಳ ಬಣ್ಣ ಜಿಂಕೆಮರಿ ಜಿಗಿವಂತೆ, ನವಿಲು ಕುಣಿವಂತೆ ಇತ್ತೆ ಸೊಬಗನು ನಿನ್ನ ಕಾಂಬ ಕಂಗಳಿಗೆ […]

ಜೋಡಿ ಮೈನ

ಜೋಡಿ ಮೈನ ಜೋಡಿ ಜೋಡಿ ಮೈನ ಹಾರಿ ಹಾರಿ ವನ ಬನ ಬಿಟ್ಟು ಬಿಡದ ಜೀವನ ವಸಂತದ ಆಗಮನ ಕೋಗಿಲೆಯ ಮಧುರ ಗಾಯನ ಕೂಡಿತೆರಡು ನಯನ ಪ್ರೇಮದಲಿ ಆಲಿಂಗನ ಜೀವ ಸೃಷ್ಟಿಗೆಂದು ಮಿಲನ. ಪ್ರೀತಿಗಿಂದು ಫಲಿಸಿ ಬಂತು ಗರ್ಭದೊಳೊಂದು ಮರಿ ಮೈನ ಬಂತು ಹಾರಿ ಹಾರಿ ಬಾನ ಮೇಲೇರಿ ಸಂತಸದಿ ಕುಣಿದಾಡಿ ಜೋಡಿ ಮೈನ ಎಳೆ ಎಳೆಯ ನೂಲುದಾರ ಹುಡುಕಿ ತಂದು ಹಸಿರು ಕಡ್ಡಿ ಹುಲ್ಲು ಬಳ್ಳಿ ನಾರ ಕಟ್ಟಿ ಭದ್ರ ಗೂಡನೊಂದು ಅತಿಥಿ ಸ್ವಾಗತಕೆಂದು ದಿನವೂ […]