Your Cart

Need help? Call +91 9535015489

📖 Print books shipping available only in India. ✈ Flat rate shipping

ತೊರೆದು ಜೀವಿಸಬಹುದೇ…!?

ತೊರೆದು ಜೀವಿಸಬಹುದೇ…!? ಪ್ರಿಯ ಹಂದಿಗೋಡು ವೆಂಕಟಗಿರಿ ಭಟ್ಟರಿಗೆ, ನೀವಿಲ್ಲದ ಈ ಹೊತ್ತಿನಲ್ಲೂ ನೋವಿನ ನರಳಿಕೆಯೊಂದು ನನ್ನನ್ನು ಕಾಡುತ್ತಿದೆಯೆಂದಾಗ, ನಿಮ್ಮ ಪ್ರಭಾವಲಯ ನನ್ನೊಳಗನ್ನು ಆಕ್ರಮಿಸಿ ವಿಸ್ತರಿಸಿದ ಪರಿಗೆ ವಿಸ್ಮಯಗೊಂಡಿದ್ದೇನೆ. ಬಿಡದೇ ಕಾಡುವ ನಿಮ್ಮ ಒಡನಾಟದ ನೆನಪುಗಳಿಗೆ ಅಕ್ಷರರೂಪ ನೀಡುತ್ತಿದ್ದೇನೆ. ನಿಮ್ಮ ವ್ಯಕ್ತಿತ್ವಕ್ಕೆ ಅಕ್ಷರಶಃ ತಾಳೆಯಾಗುವ ‘ಮಣಿಯದಿಹ ಮನವೊಂದು, ಸಾಧಿಸುವ ಹಟವೊಂದು ನಿಜದ ನೇರಕೆ ನಡೆವ ನಿಶ್ಚಲತೆಯೊಂದು ಅನ್ಯಾಯಕೆಂದೆಂದು ಬಾಗದೆಚ್ಚರವೊಂದು ಮರುಕಕ್ಕೆ, ಪ್ರೇಮಕ್ಕೆ ಚಿರತೆರೆದ ಎದೆಯೊಂದು’ ಎನ್ನುವ ಕವಿ ವಿ.ಸೀತಾರಾಮಯ್ಯನವರ ‘ಅಭೀಃ’ ಕವಿತೆಯ ಸಾಲು ನಿಮ್ಮ ನೆನಪಿನೊಟ್ಟಿಗೆ ಮನಸ್ಸನ್ನು ತುಂಬಿಕೊಳ್ಳುತ್ತದೆ. […]

ನೀನೊಲಿದರೆ…

ನೀನೊಲಿದರೆ… ರಾತ್ರಿ ಮಲಗುವ ತಯಾರಿಯಲ್ಲಿದ್ದ ಜಗದೀಶನಿಗೆ ಫೋನ್ ಘಂಟೆ ಕೇಳಿ ರಿಸೀವರ್ ಎತ್ತಿದ. ಆರು ತಿಂಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಮುದ್ದಿನ ಮಗಳು ಜ್ಯೋತಿಯ ಫೋನದು. “ಹಲೋ ಪಪ್ಪಾ, ಇವತ್ತು ರಾತ್ರಿ ಬಸ್ಸಿನಿಂದ ನಾನೂ ಮತ್ತು ಸೌರವ ಹುಬ್ಬಳ್ಳಿಗೆ ಬರ್ಲಿಕ್ಕೆ ಹತ್ತೀವಿ. ನಸುಕಿನಾಗ ಬರ್ತೇವಿ. ಗೇಟ್ ಕೀಲಿ ತೆಗೆದಿಟ್ಟಿರು.” ಜಗದೀಶನಿಗೆ ಅಚ್ಚರಿ. ಜ್ಯೋತಿ ನೀನು ಬಂದು ಹೋಗಿ ಎಂಟು ದಿನಾನೂ ಆಗಿಲ್ಲಾ?” “ಹೌದು ಪಪ್ಪಾ, ಕೆಲಸಾ ಅದ, ನಾಳೆ ಬರ್ತೀವಲ್ಲಾ ಆವಾಗ ಮಾತಾಡೋಣ” ಎಂದು ಫೋನ್ […]

ಬಸ್ಸು ಕೆಟ್ಟು ನಿಂತ ಹನ್ನೆರಡು ಗಂಟೆ

ಬಸ್ಸು ಕೆಟ್ಟು ನಿಂತ ಹನ್ನೆರಡು ಗಂಟೆ ಹಬ್ಬಿದಾ ಮಲೆ. ಎಲ್ಲೆಲ್ಲೂ ಹಸಿರು. ಹಸಿರು ಬಯಲಲ್ಲಿ ಉಸಿರುಬಿಗಿಹಿಡಿದು ಓಡುತ್ತಿರುವ ಪುಟ್ಟ ಹುಡುಗ. ಅವನ ಹಿಂದೆ ಏದುಸಿರು ಬಿಟ್ಟುಕೊಂಡು ಓಟ ಕಿತ್ತಿರುವ ತಾಯಿ. ಸಂಜೆಯಾಗುತ್ತಿತ್ತು. ನಾವು ಹೋಗುತ್ತಿದ್ದ ಬಸ್ಸು ಕೆಟ್ಟುನಿಂತು ಮೂರೋ ನಾಲ್ಕೋ ಗಂಟೆಯಾಗಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ಬಸ್ಸೂ ಬರುವುದಿಲ್ಲ ಎಂದು ಕಂಡಕ್ಟರ್ ಆತಂಕದಲ್ಲಿದ್ದ. ಬಸ್ಸಿನಲ್ಲಿದ್ದ ಮೂವತ್ತೋ ಮೂವತ್ತೈದೋ ಪ್ರಯಾಣಿಕರ ಪೈಕಿ ಅನೇಕರು ಕಂಗಾಲಾಗಿದ್ದರು. ಥರಹೇವಾರಿ ಮಂದಿ. ದೂರಪ್ರಯಾಣಕ್ಕೆ ಹೊರಟವರು. ಸಿಗರೇಟು ಸೇದಲು ಹಂಬಲಿಸುವವರು. ಸಂಜೆ ತಿಂಡಿ ತಿಂದು […]

ಎಲ್ಲವೂ ನಾವೇ

ಎಲ್ಲವೂ ನಾವೇ ಗುಬ್ಬಿಗಳು ನಾವು ಮಿಂಚುಳ್ಳಿಗಳು ಹಾರುತಿರುವ ಬೆಳ್ಳಕ್ಕಿಗಳು ಬೆಳ್ಳಕ್ಕಿಗಳು ಹಾರುತಿರುವ ಹಕ್ಕಿಗಳು….. ಕಣ್ಮನ ಸೆಳೆಯುವ ಚಿತ್ತಾರದ ಮೂರ್ತಿಗಳು ಪಾತರಗಿತ್ತಿಯ ಚೆಲುವು ನಮ್ಮದು ಮುಟ್ಟಲು ಸುಯ್ಯನೆ ಹಾರುವೆವು ಚಿಟ್ಟೆಗಳು ನಾವ್ ಚಿಟ್ಟೆಗಳು ಭೇದ ಭಾವದ ಮಾತೇ ಅರಿಯದ ಮನದಲಿ ಕಹಿ ಭಾವವೇ ಇಲ್ಲದ ಮಕರಂದವ ಹೀರುವ ಜೇನುಗಳು ಸಿಹಿ ಜೇನುಗಳು ನಾವ್ ಜೇನುಗಳು ಸ್ವಚ್ಚ ಸರೋವರದಿ ಬಿಳಿ ಕೆಂದಾವರೆ ಅಂದದಿ ಕಣ್ಣಿಗೆ ತಂಪೆರಗುವ ಪುಷ್ಪಗಳು ಹೂವುಗಳು ನಾವ್ ಹೂವುಗಳು ಗಗನಕು ಜಿಗಿದು ಚಂದ್ರನ ಹಿಡಿದು ನಕ್ಷತ್ರದಂತೆ ಮಿನುಗಿ […]

ಮನಸ್ಸೇ

ಓ ಮನಸ್ಸೇ, ಹುಚ್ಚು ಕನಸ್ಸನ್ನ ಕಾಣಬೇಡ, ಜಗತ್ತೇ ಕೆಟ್ಟಿದ್ದು ನಿನ್ನಿಂದ ಇನ್ನೂ ಎಷ್ಟು ಕೆಡುವುದು ಗಟ್ಟಿ ಮನಸ್ಸು ಮಾಡಿ ನೀ ಸಾಕು ಸುಮ್ಮನಿಟ್ಟುಕೋ ಕೆಟ್ಟದ್ದನ್ನು ಅಲ್ಲೆ ಮನಸ್ಸಿನಲ್ಲಿ…..

ಓ ಗೆಲುವೇ….

ಓ ಗೆಲುವೇ ನೀ ಎಷ್ಟು ಸ್ಪೂರ್ತಿ ತರುವೆ. ಗೆಲುವು ಹೇಗೇ ಬರಲಿ ಎಲ್ಲೆ ಬರಲಿ ಸಂತಸ ತಂದೇ ತರುವೆ. ಇವತ್ತ ಒಬ್ಬನ ಸರದಿ ನಾಳೆ ಮತ್ತೋಬ್ಬನ ಸರದಿ ಪ್ರಯತ್ನವಿಲ್ಲದೆ ಸಿಗದಿರುವೆ. ನಾ ಕಾಣೆ ಯಾವಾಗ‌ ಬರುವದೋ ನನ್ನ‌ ಸರದಿ ಆದರೂ ನಾ ನುಗ್ಗುತ್ತಿರುವೆ ಭಾರಿ ಭರದಿ. ಬಾ ಬೇಗನೆ ಓ ಗೆಲುವೇ…. ವಿಜಯ.ಇನಾಮದಾರ ಧಾರವಾಡ

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…! ಆತನಲ್ಲಿ ಆಸೆ ಏನೋ ದಂಡಿಯಾಗೇ ಇತ್ತು. ಅದು ತಾನು ಏನೇನೋ ಆಗಬೇಕೆಂಬ ಬಯಕೆ. ಆದರೆ ಕೂತು ಎರಡಕ್ಷರ ಕಲಿಯಲಾರದ ಸೋಮಾರಿ. ಅವನಿಗೋ ಓದು ಹತ್ತದು, ಬಯಕೆ ಬತ್ತದು. ಹೀಗಾಗಿ ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬಂತಾಯಿತು ಆತನ ಸ್ಥಿತಿ. ಗುರುಗಳು ಹೇಳುವಷ್ಟು ಹೇಳಿದರು, ತಿದ್ದುವಷ್ಟು ತಿದ್ದಿದರು. ಆದರೂ ವಿದ್ಯೆ ಮಾತ್ರ ತಲೆಗೆ ಹತ್ತಲೊಲ್ಲದು. ನನ್ನಿಂದ ಇನ್ನು ಸಾಧ್ಯವಿಲ್ಲವೆಂದು ಗುರುಗಳು ಕೈ ಚೆಲ್ಲಿ ಕುಳಿತರೆ, ಸಹಪಾಠಿಗಳೋ ಹೀಯಾಳಿಸುತ್ತಲೇ ನಡೆದರು. ಹೀಗೆ ದಿನಗಳು ಹೊರಳಿದಂತೆ […]

ಕಹಿ ನೆನಪುಗಳು ಬೇಕು ಅರಿಯಲೀ ಬದುಕು

ಕಹಿ ನೆನಪುಗಳು ಬೇಕು ಅರಿಯಲೀ ಬದುಕು “ಸುನೀ ಚಹಾ” ಎಂದು ಕೂಗಿ ಮತ್ತೆ ಮುಸುಕೆಳೆದ ಅರವಿಂದ, ಚಹಾ ಬರುವವರೆಗೂ ಮತ್ತೈದು ನಿಮಿಷ ಮಲಗುವ ಆಸೆಯಿಂದ. ಕಿವಿಗಳು ಗೆಜ್ಜೆಯ ಶಬ್ದದ ನಿರೀಕ್ಷೆಯಲ್ಲಿದ್ದವು. ಯಾವುದೇ ಶಬ್ದವಿಲ್ಲ. ಮತ್ತೆರಡು ನಿಮಿಷಕ್ಕೆ “ಅರೂ ಚಹಾ” ಎಂದ ತಂದೆಯ ಧ್ವನಿ ಕೇಳಿ ಅಚ್ಚರಿಯಿಂದ ಮುಸುಕು ತೆಗೆದ. “ಅಪ್ಪಾಜೀ ನೀವ್ಯಾಕ ತಂದ್ರಿ? ಸುನೀ ಎಲ್ಲಿ?” “ಯಾಕಪ್ಪಾ ನಾ ತಂದ ಚಹಾ ಸಪ್ಪಗನಿಸ್ತದ?” “ಛೇ ಹಂಗಲ್ಲ, ನೀವ್ಯಾಕ ಇಷ್ಟು ಮ್ಯಾಲ ಹತ್ತಿ ಬರ್ಬೇಕಂತ ಅಷ್ಟ.” “ಸುನೀತಾ ನಸುಕಿನ್ಯಾಗ […]

ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು

ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು ಮುಸ್ಸಂಜೆಗಳು ಅಪಾಯಕಾರಿ. ಹಗಲೂ ಅಲ್ಲದ ರಾತ್ರಿಯೂ ಅಲ್ಲ ಮುಸ್ಸಂಜೆಗಳಲ್ಲಿ ಮನಸ್ಸು ಇದ್ದಕ್ಕಿದ್ದಂತೆ ಮುದುಡಿಬಿಡುತ್ತದೆ. ಆಫೀಸು ಬಿಟ್ಟು ಮನೆಗೆ ಹೊರಟಾಗ, ಮನೆಯಲ್ಲೇ ಸುಮ್ಮನೆ ಕೂತಾಗ ಇದ್ದಕ್ಕಿದ್ದಂತೆ ಅದೆಂಥದ್ದೋ ಖಿನ್ನತೆ. ಇಳಿಸಂಜೆಯ ಮೌನದೊಳಗೊಂದು ಸ್ಫೋಟಿಸದ ಆರ್ತನಾದ. ಲೈಫ್ ಈಸ್ ಎಲ್ಸ್ವೇರ್. ನನ್ನ ಬದುಕು ಇನ್ನೆಲ್ಲೋ ಇದೆ. ಬೇರೇನನ್ನೋ ನಾನು ಮಾಡಬೇಕಾಗಿತ್ತು. ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ. ಇದೂ ಒಂದು ಬದುಕಾ? ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ […]