ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ! ನಾನು ಮತ್ತು ಗೋಪಾಲಕೃಷ್ಣ ಗಾಂಧೀಪಾರ್ಕಿನ ಕಟ್ಟೆಯ ಮೇಲೆ ಕೂತು, ಸುಮಾರು ಇಪ್ಪತ್ತು ವರುಷಗಳ ಹಿಂದಿನ ಸಂಜೆಗಳನ್ನು ಮೆಲುಕುಹಾಕುತ್ತಿರುವ ಹೊತ್ತಿಗೇ, ಸೋಮಣ್ಣ ಏದುಸಿರುಬಿಡುತ್ತಾ ಓಡಿ ಬರುವುದು ಕಾಣಿಸಿತು. ಇಲ್ಲಿಂದ ಪಾರಾಗೋಣ, ಬಾ. ಸೋಮಣ್ಣನ ಕೈಗೆ ಸಿಕ್ಕಿಹಾಕ್ಕೊಂಡರೆ ಜೀವ ತಿಂತಾನೆ ಎಂದು ಎದ್ದುಹೋಗುವ ವ್ಯರ್ಥ ಪ್ರಯತ್ನ ಮಾಡಿದ ಗೋಪಾಲಕೃಷ್ಣ. ಆದರೆ, ಸೋಮಣ್ಣನ ಗುರಿ ಅವನೇ ಆಗಿದ್ದರಿಂದ ತನ್ನ ಕುಂಟುಕಾಲನ್ನು ಬೀಸ ಬೀಸ ಹಾಕುತ್ತಾ ಸೋಮಣ್ಣ ಸಮೀಪಿಸಿಯೇ ಬಿಟ್ಟ. ಸೋಮಣ್ಣನಿಗೆ ನನ್ನ ಗುರುತು ಹತ್ತಲಿಲ್ಲ. ಅವನು […]
Month: September 2016
ಕನಸು
ಕನಸು ನಿನ್ನೆಯೊಂದು ಕನಸು ಕಂಡೆ ಮಾಧವಾ ನೀ ಕಂಡೆ ಕೊಳಲನೂದಿ ನನ್ನ ಅಜ್ಞಾನವ ಓಡಿಸಲೆಂದೇ ಬಂದೆ. ಕ್ಷಣ ಕ್ಷಣದಿ ಸಿಲುಕಿದ ಸಂಕಟಕೆ ಹೆದರಿ ಹೇಡಿಯಾದ ಮನವು ತೊರೆಯ ಬೇಕೆಲ್ಲವನು ಎನುವಾಗ ಶಿರದ ಮೇಲೆ ಕೈಗೂಡಿಸಿದೆ ನೀ ಕಂದನ ರೂಪದಲಿ ಕೊಳಲನೂದಿ ಆಸೆ ಆಮಿಷಗಳಿಗೆ ಮನವೊಲಿದು ಸಾಗರದಗಲದ ಸುಖ ಬಯಸಿ ದುರಹಂಕಾರಿಯಾಗಿ ಮೆರೆವಾಗ ಸಂಹಾರಕೆ ನಿಂತೆ, ಸಮರಕೂ ನಿಂತೆ ಪತಿಯ ರೂಪದಲಿ ಕೊಳಲ ಮಾಡುತ್ತಾ ಎಚ್ಚರಿಸಿದೆ ಎನ್ನ ಕೈಂಕರ್ಯಕೆ ಬೇಡ ಅನ್ಯ ಎಳೆಯ ಹುಡುಕುವ ಪರಿ ಎಂದು ಜ್ಞಾನವನು […]
ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..!
ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..! ಹಿಂದೊಮ್ಮೆ ಒಬ್ಬ ರಾಜ ಆಗಾಗ ಮಂತ್ರಿಯನ್ನು ಕರೆದು ಆತನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಒಮ್ಮೊಮ್ಮೆ ಸಿಟ್ಟಿನಿಂದ ಒರಟಾಗಿಯೂ ವರ್ತಿಸುತ್ತಿದ್ದ. ಎಲ್ಲರೂ ಶಭಾಷ್ ಅಂದ ಕಾರ್ಯದಲ್ಲಿ ಕೂಡಾ ರಾಜ ಏನೋ ಕೊಂಕು ಕಾಣುತ್ತಿದ್ದ. ಯಾರ ಕಣ್ಣಿಗೂ ಕಾಣಿಸದ ಕೊರತೆ, ಮಹಾರಾಜರಿಗೇಕೆ ಹೀಗೆ ಗೋಚರಿಸುತ್ತೆ…? ಮಂತ್ರಿಯ ವ್ಯಾಕುಲತೆಗೆ ಕಾರಣವಾದದ್ದೇ ಇದು. ರಾಜ್ಯಾಡಳಿತ ಎಲ್ಲಾ ಸರಿಯಾಗಿ ನಡೆಯುತ್ತಿದ್ದರೂ ರಾಜನಿಗೆ ತನ್ನ ಮೇಲೇಕೆ ಕೋಪ…? ಮಂತ್ರಿ ಯೋಚಿಸಿಯೇ ಯೋಚಿಸಿದ. ಬಹಳ ದಿನಗಳ ತೊಳಲಾಟದ ನಂತರ ಸತ್ಯವೊಂದು […]
ಡರನಾ ಕ್ಯಾ?
ಡರನಾ ಕ್ಯಾ? ಸುಮಾರು ಎರಡು – ಮೂರು ದಿನಗಳಿಂದ ಇಬ್ಬರೂ ಸೊಸೆಯರು ಗುಸುಗುಸು ಮಾತಿನಲ್ಲಿ ಏನೋ ಚರ್ಚೆ ಮಾಡುತ್ತಿರುವುದು ಸುಶೀಲಮ್ಮನ ಗಮನಕ್ಕೆ ಬಂದಿತ್ತು. ಅವರು ಕೇಳಲು ಹೋಗಿರಲಿಲ್ಲ. ಸೊಸೆಯರೊಡನೆ ಅವರ ಸಂಬಂಧ ಅತ್ತೆಯಂತಿರದೇ ಒಬ್ಬ ತಾಯಿಯಂತೆಯೇ ಇತ್ತು. ಹೀಗಾಗಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೇಳುವಂಥ ವಿಷಯವಾದರೆ ಅವರಾಗಿಯೇ ಹೇಳುತ್ತಾರೆನ್ನುವುದು ಅವರ ಮತ. ಆದರೆ ಇಂದು ಮತ್ತೆ ಬಟ್ಟೆ ಒಣ ಹಾಕುತ್ತ ಅದೇ ರೀತಿ ಮಾತನಾಡುತ್ತಿದ್ದರು. ಸುಶೀಲಮ್ಮನ ಕುತೂಹಲ ಕೆರಳಿತು. ಒಂದು ನಿಮಿಷ ಸರಿದು ನಿಂತರು. ಲಕ್ಷ್ಮೀ […]
ಮುಸ್ಸಂಜೆಯ ಮೂರು ಗಳಿಗೆ
ಮುಸ್ಸಂಜೆಯ ಮೂರು ಗಳಿಗೆ ಸಂಜೆ ಮುಗಿದಿರಲಿಲ್ಲ. ಇರುಳು ಶುರುವಾಗಿರಲಿಲ್ಲ. ಬಿಸಿಲು ಕಣ್ಮರೆಯಾಗಿದ್ದರೂ, ಸೂರ್ಯನ ನೆರಳು ಚಾಚಿಕೊಂಡಿತ್ತು. ಮನೆಯೊಳಗೆ ಯಾರೋ ಅರೆಮನಸ್ಸಿನಿಂದ ಎಸೆದ ನಸುಬೆಳಕು, ಪುಟ್ಟ ಮಗು ಚೌಕಕ್ಕೆ ತುಂಬಿದ ಕಪ್ಪುಬಣ್ಣದ ನಡುವೆ ಖಾಲಿ ಉಳಿದ ಜಾಗದಂತೆ ಕಾಣಿಸುತ್ತಿತ್ತು. ಹಳೇ ಕಾಲದ ಮೇಜಿನಡಿ ಜೋಡಿನೆರಳುಗಳು ತೆಕ್ಕೆಬಿದ್ದು ಹೆಣೆಯಾಡುತ್ತಿದ್ದವು. ಅಷ್ಟು ಹೊತ್ತಿಗೆ ಬೆಳಕಾಯಿತು. ದೂರದಲ್ಲೆಲ್ಲೋ ಟ್ರೇನು ಬಂದು ನಿಂತ ಸದ್ದು. ಆ ಸದ್ದಿಗೂ ಕತ್ತಲೆಯ ಸುದ್ದಿ ತಿಳಿದಿತ್ತೋ ಎಂಬಂತೆ ಎಂದಿಗಿಂತ ವೇಗವಾಗಿಯೇ ಅದು ಆ ಕತ್ತಲನ್ನು ಆಗಷ್ಟೇ ಹೊರಹಾಕಿದ್ದ ಮನೆಯ […]
ನಿಜ ಗೆಳತಿ
ನಿಜ ಗೆಳತಿ ಇರುವರು ಹಲವು ಗೆಳತಿಯರೆನಗೆ ಕೈಕೈ ಹಿಡಿದು ನಡೆದವರು ಮಿಂಚಿ ಮಾಯವಾಗುವವರು ಈಗಲೂ ಇರುವಳು ಒಬ್ಬಳೇ ಗೆಳತಿ ಭಿನ್ನವಾದವಳು ಮಾಯಾಂಗನೆಯಂಥವಳು ಕಂಡೊಡನೆ ಹೃದಯ ಮಿಡಿದವಳು ಮೌನದಲ್ಲಿ ಭಾವದಲ್ಲಿ ಎಲ್ಲ ಅರಿತವಳು ತೆರೆಯ ಹಿಂದೆ ಪರದೆ ಸರಿಸಿ ಸಂತೈಸುವ ಕರುಣಾಳು ಇವಳು ಕವಿದ ಕತ್ತಲೆಗೆ ಕಂಗೆಟ್ಟು ಕುಳಿತಾಗ ಹಚ್ಚುವಳಿವಳು ಹಣತೆಯ ಕಣ್ಣಂಚ ಕಂಬನಿ ಇಳಿದು ಬಿಸಿಯುಸಿರು ಬಿಡುವಾಗ ಹೊಸಗಾಳಿಯ ತಂಪು ಸೂಸುವ ಹೃದಯವಂತಳು ಸದಾ ಪ್ರೇರಣೆಯ ಮಾತನಾಡಿ ಲೇಸ ಬಯಸುವ ಮಾರ್ಗ ಸೂಚಿಯು ಸಣ್ಣದೊಂದು ಗೆಲುವ ಕಂಡು […]
ತಿಮ್ಮಜ್ಜನ ನೆರಳು
ತಿಮ್ಮಜ್ಜನ ನೆರಳು ಪೋಕು….! ಪೋಕು…! ಹೀಗೆನ್ನುತ್ತಾ ಗದ್ದೆಯಿಂದ ಮನೆಗೆ ಬರುವಾಗಲೆಲ್ಲಾ ನಮಗೆ ಎದುರಾಗುತ್ತಿದ್ದವ ನಮ್ಮೂರ ತಿಮ್ಮಜ್ಜ. ಆ ಹೊತ್ತಿಗೆ ತಿಮ್ಮಜ್ಜನಿಗೆ ಸುಮಾರು ಎಂಬತ್ತರ ಪ್ರಾಯ. ಆದರೂ ಗಟ್ಟಿ ಆಸಾಮಿ. ಬಹಳ ಸರಳ ವ್ಯಕ್ತಿಯಾದ ತಿಮ್ಮಜ್ಜ ಯಾವುದೇ ಕಾಲದಲ್ಲಾದರೂ ಉಡುವುದು ಮುಂಡು ಸಾಟಿ ಪಂಚೆ, ಹೊದ್ದುಕೊಳ್ಳಲು ಅಂತಹದೇ ಮತ್ತೊಂದು ದಟ್ಟಿ. ಗಾಂಧಿಯನ್ನು ಹೋಲುವ ತಿಮ್ಮಜ್ಜ ಅಷ್ಟೇ ಸರಳ ಸಜ್ಜನ. ಬಿಸಿಲಲ್ಲಿ ಹುಡುಗರಾದ ನಾವು ಗದ್ದೆಯಿಂದ ಮನೆಗೆ ಬರುವಾಗ ಎಲ್ಲಾದರೂ ತಿಮ್ಮಜ್ಜ ಜೊತೆಯಾದನೆಂದರೆ ಸಾಕು. ಮಾಣಿ.. ಪೋಕು.. ಪೋಕು..! ಈ […]
ವೈರಸ್
ವೈರಸ್ “ಸಂಧ್ಯಾ….” ಅತ್ಯಂತ ಸಾವಕಾಶವಾಗಿ ಕರೆದ ಅತ್ತೆಯ ದನಿ ಕೇಳಿಸಿತು ಅವಳಿಗೆ. ಆದರೆ ಸಂಧ್ಯಾಳಿಗೇಕೋ ಎದ್ದು ಮಾತನಾಡಬೇಕೆನ್ನಿಸಲಿಲ್ಲ. ಮತ್ತೊಂದು ಬಾರಿ ಕರೆದು ಅವರು ಹಿಂತಿರುಗಿ ಹೋದರು. ಹೊರಬಾಗಿಲಿನ ಕೀಲಿ ಹಾಕಿ ಅವರು ಹೊರಟುಹೋಗಿದ್ದು ತಿಳಿಯಿತು. ವಿವರಣೆ ಇರುವ ಚೀಟಿ ಹೊರಗೆ ಟೇಬಲ್ ಮೇಲೆ ಇರುತ್ತದೆ. ಬೇಕೆಂದಾಗ ತಾನು ತನ್ನಲ್ಲಿರುವ ಕೀಲಿಯಿಂದ ತೆಗೆದು ಹೋಗಬಹುದು. ಮತ್ತೆ ನಿದ್ರಿಸಲು ಪ್ರಯತ್ನಿಸಿದಳು ಸಂಧ್ಯಾ. ಊಹೂಂ, ರಾತ್ರಿಯೇ ಬಾರದ ನಿದ್ದೆ ಈಗಲೂ ಹತ್ತಿರ ಸುಳಿಯಲಿಲ್ಲ. ಮನಸ್ಸು ಹಿಂದೆ ಜಾರಿತು. ಎರಡು ವರ್ಷದ ಹಿಂದೆ […]
ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ
ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ ಅವನು ರಾಕ್ಷಸ.ಒಂದು ಕಾಲದಲ್ಲಿ ಅವನು ಗಂಧರ್ವ. ಯಾವುದೋ ತಪ್ಪಿಗಾಗಿ ಶಾಪಗ್ರಸ್ತ. ಅವನನ್ನು ರಾಕ್ಷಸನಾಗು ಎಂದು ಶಪಿಸಿದ್ದು ಒಬ್ಬಳು ಗಂಧರ್ವ ಕನ್ನಿಕೆ. ಅವಳನ್ನು ಆತ ಮೋಹಿಸಿದ್ದ. ಅವಳನ್ನು ಮುಟ್ಟಲು ಹೋಗಿದ್ದ. ನನ್ನೊಡನೆ ರಾಕ್ಷಸನಂತೆ ವರ್ತಿಸಿದ್ದಕ್ಕಾಗಿ ನಿನಗಿದು ಶಾಪ ಎಂದು ಸಿಟ್ಟಿನಿಂದ ಹೇಳಿ, ನೀನು ರಾಕ್ಷಸನಾಗಿ ಭೂಮಿಯಲ್ಲಿ ಹುಟ್ಟು ಎಂದಾಕೆ ಶಾಪ ಕೊಟ್ಟಿದ್ದಳು. ತಪ್ಪಾಯಿತು ಬಿಟ್ಟು ಬಿಡು ಅಂತ ಅವನೇನೂ ಬೇಡಿಕೊಳ್ಳಲಿಲ್ಲ. ಗಂಧರ್ವನಾಗಿದ್ದು ಅವನಿಗೂ ಸಾಕಾಗಿತ್ತು. ತುಂಬ ಒಳ್ಳೆಯತನ ಸಹಜವಲ್ಲ ಅನ್ನುವುದು ಅವನಿಗೂ […]