ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಸೆಪ್ಟೆಂಬರ್ ತಿಂಗಳ ಚರ್ಚೆ ೧೮ ಸೆಪ್ಟಂಬರ್ ೨೦೧೬ ಪುಸ್ತಕ: “ಸಂಹಿತಾ – ಕಥಾ ಸಂಕಲನ” ಬರೆದವರು: ತೇಜಸ್ವಿನಿ ಹೆಗಡೆ ಈ ಹೊತ್ತಿಗೆ ಯಲ್ಲಿ ನಡೆದ “ಸಂಹಿತಾ” ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಹಿರಿಯ ಬರಹಗಾರ್ತಿ ಉಷಾ ರೈ, ಸವಿತಾ ಗುರುಪ್ರಸಾದ್, ತೇಜಸ್ವಿನಿ ಹೆಗಡೆ ಮತ್ತು ಜಯಲಕ್ಷ್ಮೀ ಪಾಟೀಲ್. ತೇಜಸ್ವಿನಿಯವರ ಎಲ್ಲಾ ಕತೆಗಳು ಸ್ತ್ರೀ ಲೋಕದವು. ಇಲ್ಲೇನಿದ್ದರೂ ಪುರುಷ ಪಾತ್ರಗಳು ಸಪೋರ್ಟಿಂಗ್ ಕ್ಯಾರಕ್ಟರ್ಸ್! ಇಲ್ಲಿನ ಬಹುತೇಕ […]
Month: October 2016
ಹಾವೇರಿಯ ಹುಲಿ, ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು
ಹಾವೇರಿಯ ಹುಲಿ, ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು ಮೆಣಸಿನಹಾಳ ತಿಮ್ಮನಗೌಡ: ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬ್ರಿಟಿಷರ ವಿರುದ್ಧ ಕ್ರಾಂತಿ ಕಹಳೆ ಮೊಳಗಿಸಿ ಹುತಾತ್ಮನಾದ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು. ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬದಲ್ಲಿ ಜನಿಸಿದ ತಿಮ್ಮನಗೌಡ ಬ್ಯಾಡಗಿಗೆ ಸುಭಾಷಚಂದ್ರ ಬೋಸರು ಬಂದಾಗ ಸ್ವಾತಂತ್ರ್ಯಹೋರಾಟದ ಕುರಿತ ಅವರ ಭಾಷಣ ಕೇಳಿ ರೋಮಾಂಚಿತರಾಗಿ ತ್ಯಾಗ ಮತ್ತು ಬಲಿದಾನದ ದೀಕ್ಷೆತೊಟ್ಟು ತನ್ನ 21ರ ವಯಸ್ಸಿನಲ್ಲೇ ಕಾನೂನು ಭಂಗ ಚಳುವಳಿಗೆ ಧುಮುಕಿದರು. ಆ […]
ಹನಿ ಹನಿ-೨
ಹನಿ ಹನಿ ತಾಕತ್ತು ದೊಡ್ಡ ದುಃಖದೆದುರು ಸಣ್ಣ ಸಂತೋಷದ ಕಿಮ್ಮತ್ತು ಸೂರ್ಯನೆದುರು ಉರಿವ ಮುಂಬತ್ತಿಯ ತಾಕತ್ತು! ಮುಪ್ಪು ಬಾಲ್ಯ, ಯೌವನದಲ್ಲಿ ಕೂಡಿಟ್ಟ ಒಂದೊಂದೇ ಅನುಭವವನ್ನು ಎಣಿಸಿ ತೂಗಿ ನೋಡುವ ಕಾಲ! ಆಯಸ್ಸು ಆಯಸ್ಸು ಹೀಗೇ ಫ್ಯಾನ್ ನ ರೆಕ್ಕೆಯಂತೆ ಸರಿಯತ್ತೆ ಒಂದರ ಹಿಂದೊಂದರಂತೆ, ಎಣಿಕೆಗೆ ಸಿಗದಂತೆ!
ದಿಮ್ಮಿ ಮತ್ತು ಕಪ್ಪೆಗಳು
ದಿಮ್ಮಿ ಮತ್ತು ಕಪ್ಪೆಗಳು ಒಂದು ದೊಡ್ಡ ಕಾಡು. ಅಲ್ಲೊಂದು ಸಣ್ಣ ಕೊಳ (ಕೆರೆ). ಅದರ ಹತ್ತಿರ ಕಪ್ಪು, ತಿಪ್ಪು, ಬೆಪ್ಪು, ಸೊಪ್ಪು………. ಎಂಬ ನಾಲ್ಕು ಕಪ್ಪೆಗಳಿದ್ದವು. ಅವೆಲ್ಲವೂ ಜೀವದ ಗೆಳೆಯರು. ಒಂದು ದಿನ ಅವೆಲ್ಲವೂ ವಾಯುವಿಹಾರಕ್ಕೆ (ವಾಕಿಂಗ್) ಅಂತ ಕೆರೆ (ಕೊಳೆ) ದಂಡೆ ಕಡೆಗೆ ಹೊರಟವು. ಕೆರೆಯಲ್ಲಿ ಒಂದು ಮರದ ದಿಮ್ಮಿ ತೇಲಾಡುತ್ತಿತ್ತು. ಅದನ್ನು ನೋಡಿ ತಿಪ್ಪು, “ಬನ್ರೊ ನಾವೆಲ್ರೂ ಆ ಮರದ ದಿಮ್ಮಿ ಮೇಲೆ ಕುಳಿತು ಹರಟೆ ಹೊಡೆಯೋಣ” ಎಂದಿತು. ಎಲ್ಲ ಕಪ್ಪೆಗಳು ಆ ಮಾತಿಗೆ […]
ಕರ್ಣನ ನೆನೆನೆನೆದು..
ಕರ್ಣನ ನೆನೆನೆನೆದು.. ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ. ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ […]
ತಮಿಳುನಾಡಿನ ಕ್ರಾಂತಿಸಿಂಹ ವಾಂಚಿನಾಥನ್ ಅಯ್ಯರ್
ತಮಿಳುನಾಡಿನ ಕ್ರಾಂತಿಸಿಂಹ ವಾಂಚಿನಾಥನ್ ಅಯ್ಯರ್ ವಾಂಚಿನಾಥನ್ ಅಯ್ಯರ್ : ತಮಿಳುನಾಡಿನ ರಾಷ್ಟ್ರಭಕ್ತ ಕ್ರಾಂತಿಕಾರಿ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡುಹೊಡೆದು ಪ್ರಾಣಾರ್ಪಣೆ ಮಾಡಿದ ಹುತಾತ್ಮ ವಾಂಚಿನಾಥನ್ ಅಯ್ಯರ್. ಜನರಿಂದ ‘ವಂಚಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಈ 25 ರ ದೇಶಭಕ್ತ ತರುಣ ತಿರುನಲ್ವೇಲಿಯ ಕಲೆಕ್ಟರ್ ರಾಬರ್ಟ್ಆಶ್ ನನ್ನು ಹಾಡಹಗಲೇ ಗುಂಡಿಕ್ಕಿ ತಾನೂ ಆತ್ಮಾರ್ಪಣೆ ಮಾಡಿದ. ತಿರುನಲ್ವೇಲಿ ಜಿಲ್ಲೆಯ ಸೆಂಗೊತ್ತೈ ಎಂಬ ಊರಿನಲ್ಲಿ ಜನಿಸಿದ ವಾಂಚಿನಾಥನ್ ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ. ಕಾಲೇಜಿನಲ್ಲಿ ಓದುವಾಗಲೇ […]
ಹನಿ ಹನಿ-೧
ಹನಿ ಹನಿ ಗಣಿತವೇ ಅಷ್ಟು ಸಂಕಲನ, ವ್ಯವಕಲನ ಮತ್ತೆ ಸಂಕಲನ ಬದುಕಿನ ಸಂಬಂಧಗಳೂ ಕೂಡುತ್ತಾ, ಕಳೆಯುತ್ತಾ ಮತ್ತೆ ಕೂಡುತ್ತಾ ಹೋಗುವ ಸರಳ ಗಣಿತ… ನಿತ್ಯ ಹಸಿರಾಗುವ ಪ್ರಕೃತಿಯಂತೆ. ∗ ∗ ∗ ಬೋಳಾದ ಮರಕೆ ಮತ್ತೆ ಚಿಗುರ ಲೇಪಿಸಿ ಹಸಿರಾಗಿಸಿದ ಕಾಲ ನೋವ ಉಣಿಸಿದ ಮನಕೆ ಮತ್ತೆ ತರಲಾರದೇಕೆ ಹರುಷ? ∗ ∗ ∗ ಎಡೆ ಬಿಡದೇ ಸುರಿವ ಮಂಜು ಆಳಕ್ಕಿಳಿವ ಚಳಿ ಸ್ವೆಟರಿಗೂ ಬಿಸಿಯಾಗದ ಮೈ-ಮನಕೆ ನಿನ್ನ ನೆನಪು ಮಾಡಿತೀಗ ಬೆಚ್ಚಗೆ! ∗ ∗ ∗ […]
ಸಾಪೇಕ್ಷ
ಸಾಪೇಕ್ಷ ಬಹಳ ದಿನಗಳ ನಂತರ ಆ ಆಫೀಸಿನಲ್ಲೊಂದು ನಿವೃತ್ತಿಯ ಸಮಾರಂಭ ಏರ್ಪಟ್ಟಿತ್ತು. ಸುಮಾರು ಹನ್ನೊಂದು ವರ್ಷಗಳಿಂದಲೂ ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತ ತಮ್ಮ ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದ ಶ್ರೀನಿವಾಸಮೂರ್ತಿಯವರದು. ‘ಅಜಾತ ಶತ್ರು’ ಎಂದೇ ಆಫೀಸಿನಲ್ಲಿ ಹೆಸರುವಾಸಿಯಾಗಿದ್ದ ಅವರ ಬಗೆಗೆ ಎಲ್ಲರೂ ಹೇಳುವವರೇ, ರೀತಿ ಬೇರೆ, ಅನುಭವ ಬೇರೆ, ಆದರೆ ಎಲ್ಲರದೂ ಭಾವ ಮಾತ್ರ ಒಂದೇ- “ಅವರಂತಹ ಒಳ್ಳೆಯ ವ್ಯಕ್ತಿಯನ್ನು ತಾವು ಕಂಡಿಲ್ಲ..” ಎನ್ನುವುದು. ಅದನ್ನು ಕೇಳಿ ಮೂರ್ತಿಯವರ ಮುಖದಲ್ಲಿ ಧನ್ಯತೆ ಸಂತಸಗಳಿಲ್ಲ. ಏನೋ ಉದ್ವಿಗ್ನತೆ, […]
ಅಜ್ಜಂಪುರದ ಅಪರಾತ್ರಿ
ಅಜ್ಜಂಪುರದ ಅಪರಾತ್ರಿ ಅಜ್ಜಂಪುರದ ಅಕ್ಕಪಕ್ಕದ ಊರುಗಳಾದ ಕಗ್ಗಿ, ಮುಗಿಲಹಳ್ಳಿ,ಶಿವಾನಿ, ರಾಮಗಿರಿ, ಸೊಕ್ಕೆ, ಬಳೆಮಾರನಹಳ್ಳಿ ಇವೆಲ್ಲ ಈ ಕತೆ ನಡೆಯುವ ಕಾಲಕ್ಕೆ ದೊಡ್ಡ ಊರುಗಳೇನೂ ಆಗಿರಲಿಲ್ಲ. ಒಂದೂರಿಂದ ಇನ್ನೊಂದೂರಿಗೆ ಸಂಪರ್ಕವೂ ಇರಲಿಲ್ಲ. ಕಗ್ಗಿಯವರು ಬಳೆಮಾರನಹಳ್ಳಿಗೋ ರಾಮಗಿರಿಗೋ ಹೋಗಿ ಬರುವ ಪರಿಪಾಠವೂ ಇರಲಿಲ್ಲ. ಹೋಗಬೇಕಾದ ಸಂದರ್ಭಗಳೂ ಕಡಿಮೆ ಇರುತ್ತಿದ್ದವು. ಈ ಹಳ್ಳಿಗಳಿಗೆ ಸೇರಿದ ಮಂದಿ ಒಟ್ಟು ಸೇರುತ್ತಿದ್ದದ್ದು ಬೀರೂರು ದೇವರ ಜಾತ್ರೆಯಲ್ಲೋ ಭದ್ರಾವತಿಯ ಸಂತೆಯಲ್ಲೋ ಅಷ್ಟೇ. ಸಂತೆಯೋ ಜಾತ್ರೆಯೋ ನಡೆದಾಗ ಪ್ರತಿಯೊಂದು ಹಳ್ಳಿಯ ಮಂದಿಯೂ ಗಾಡಿಕಟ್ಟಿಕೊಂಡು ಬರುತ್ತಿದ್ದರು. ಒಂದೊಂದು ಹಳ್ಳಿಯಿಂದ […]