ವಿದೇಶಿ ನೆಲದ ಮೊದಲ ಬಲಿದಾನಿ ಮದನ್ ಲಾಲ್ ಧಿಂಗ್ರಾ ಮದನ್ ಲಾಲ್ ಧಿಂಗ್ರಾ: ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿ ಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್ ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನ […]
Month: November 2016
ಸತ್ಯವೇ ದೇವರು
ಸತ್ಯವೇ ದೇವರು ಬಹಳ ಹಿಂದೆ ಜಪಾನ್ ದೇಶದಲ್ಲಿ ಸೂಬೇ ಅನ್ನೋ ಹೆಸರಿನ ಹುಡುಗಿ ಇದ್ದಳು. ಬಹಳ ಚೆಂದದ ಹುಡುಗಿ, ತುಂಬಾ ಬುದ್ಧಿವಂತೆ, ಒಳ್ಳೇ ಗುಣವಂತೆ. ಇಷ್ಟಿದ್ರೂ ಅವಳಿಗೆ ಮದುವೇನೆ ಆಗಿರಲಿಲ್ಲ. ಯಾಕೆ ಗೊತ್ತಾ? ಅವಳ ಬಲಹುಬ್ಬಿನ ಮೇಲೆ ಆಳವಾದ ಗಾಯದ ಕಲೆ ಇತ್ತು. ಅದರಿಂದ ಅವಳು ತನ್ನ ಕೂದಲನ್ನ ಹುಬ್ಬಿನ ಮೇಲೆ ಬರೋ ಹಾಗೆ ಬಾಚಿಕೊಳ್ತಾ ಇದ್ದಳು. ನೋಡುವವರಿಗೆ ಕಲೆ ಕಾಣ್ತಾ ಇರಲಿಲ್ಲ. ಆದ್ರೆ ಅವಳು ತನ್ನ ಮದುವೆಯಾಗೋಕೆ ಕೇಳಿದವರಿಗೆ, ಮುಖದ ಕಲೆಯನ್ನ ತೋರಿಸಿ, ಇರೋ ವಿಷಯ […]
ಕನ್ನಡ ನೆಲದ ಕ್ರಾಂತಿಯ ಕಿಡಿಗಳು : ವಿದುರಾಶ್ವತ್ಥದ ಬಲಿದಾನಿಗಳು
ಕನ್ನಡ ನೆಲದ ಕ್ರಾಂತಿಯ ಕಿಡಿಗಳು : ವಿದುರಾಶ್ವತ್ಥದ ಬಲಿದಾನಿಗಳು ವಿದುರಾಶ್ವತ್ಥದ ಬಲಿದಾನಿಗಳು : ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದಲ್ಲಿ ನಡೆದ ಅತೀ ಭೀಕರ ಹತ್ಯಾಕಾಂಡಗಳಲ್ಲಿ ಒಂದಾದ ವಿದುರಾಶ್ವತ್ಥದ ಬಲಿದಾನ ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೂ ಹೆಸರಾಗಿದೆ. ಒಬ್ಬ ಗರ್ಭಿಣಿಯೂ ಸೇರಿದಂತೆ 32 ಜನ ದೇಶಭಕ್ತರು ಬ್ರಿಟಿಷರ ಗುಂಡಿಗೆ ಬಲಿಯಾಗಿ ಪ್ರಾಣಾರ್ಪಣೆ ಮಾಡಿದ್ದು ಈ ನೆಲದ ಜನರ ಅಪ್ರತಿಮ ದೇಶಭಕ್ತಿಗೆ ಹಾಗೂ ಬ್ರಿಟಿಷ್ ಆಡಳಿತದ ಬರ್ಬರತೆಗೆ ಸಾಕ್ಷಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರ ವಿದುರಾಶ್ವತ್ಥ ದೇಶದ […]
ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ..
ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ.. ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ, ಹಗಲಿಡೀ ಅದೇ ಸುಡುವ ಸೂರ್ಯ ಮತ್ತು ಆ ಬೆಳಕಲ್ಲಿ ಮತ್ತಷ್ಟು ಚಪ್ಪಟೆಯಾಗಿ ಕಾಣುವ ಚಿತ್ರಗಳು. ಆದರೆ ಬೆಂಗಳೂರಲ್ಲಿ ಹಾಗಲ್ಲ. ಅಲ್ಲಿ ಋತುಗಳು ಬದಲಾದದ್ದೇ ಗೊತ್ತಾಗುವುದಿಲ್ಲ. ಇದೀಗ ವಸಂತ ಋತು ಅನ್ನುವುದಾಗಲೀ, ಇದು ಶಿಶಿರ ಅನ್ನುವುದಾಗಲೇ ಪ್ರಕೃತಿಯಿಂದ ಗೊತ್ತಾಗಬೇಕೇ ಹೊರತು ಕ್ಯಾಲೆಂಡರಿನಿಂದಲ್ಲ. […]
ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ – ಸಂವಾದದ ಮುದ್ರಿತ ಭಾಗ
ಬುಧುವಾರ, 23 ನವೆಂಬರ್ 2016 ರಂದು ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭದ ಮುದ್ರಿತ ಭಾಗ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ ಪಂಡಿತಾರಾಧ್ಯರು ವೇದಿಕೆಯಲ್ಲಿದ್ದು ಗ್ರಂಥ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಸಂವಾದವೊಂದನ್ನು ನಡೆಸಿಕೊಟ್ಟಿದ್ದಾರೆ. ಕೃತಿಯ ಲೇಖಕರಾದ ಡಾ. ‘ಗಿರಿ’ಯವರು (ಡಾ. ಮಹಾಬಲಗಿರಿ ಎನ್. ಹೆಗಡೆ) ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬುಧುವಾರ, […]
ಅನುಭವ-ಅನುಭಾವ (ನಾನರಿತ ದಿನ)
ಅನುಭವ-ಅನುಭಾವ (ನಾನರಿತ ದಿನ) ಆಸೆಗಳ ಹಿರಿದು ಬೆಟ್ಟವೇರಿ ಕಡಲಗಲದ ಮೋಹ ಲೋಭವೆಂಬ ಭೂತ ಬಡಿದು ಸ್ವಾರ್ಥವೆಂಬ ಹಡಗನೇರಲು ಸತ್ಯವೆಂಬ ಚಂಡ ಮಾರುತ ಬೀಸಿ ಹಡಗು ಮುಳುಗಿ ದುಃಖವೆಂಬ ಪರ್ವತ ಏರಿ ಕುಳಿತಂತೆ ಅನ್ಯರ ಅಂತರಾಳದ ದುಃಖ ತಾಪವ ಕೇಳಿ ಒಡನೆ ಹುಸಿ ಪ್ರೀತಿ ತೋರಿ ಬೆನ್ನಹಿಂದೆ ಆಡಿಕೊಂಡು ಮುಗುಳು ನಕ್ಕು ಮೆರೆಯಲು ಒಡನೆ ಕಾಯ್ದಿತ್ತು ತಾಪ ನಿಂತಿತೊಂದು ಎದೆಯ ಮೇಲೆ ತೋರಿಕೆಯ ಮುಖವಾಡಗಳ ಸರಿಸುವ ಮಾಯದ ಬೆಟ್ಟ. ಬೇಯದ ಬೇಳೆ ತಿನ್ನಲು ಬಾರದು ಅರೆ ಬೇಯಲು ಏನೆಂದರಿಯಲು […]

ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
ಬುಧುವಾರ, 23 ನವೆಂಬರ್ 2016 ರಂದು ‘ಬೆಳಿಗ್ಗೆ’ 10.30ಕ್ಕೆ ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭ ಧಾರವಾಡದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ ಪಂಡಿತಾರಾಧ್ಯರು ವೇದಿಕೆಯಲ್ಲಿದ್ದು ಗ್ರಂಥ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಸಂವಾದವೊಂದನ್ನು ನಡೆಸಿಕೊಡಲಿದ್ದಾರೆ. ಕೃತಿಯ ಲೇಖಕರಾದ ಡಾ. ‘ಗಿರಿ’ಯವರು (ಡಾ. ಮಹಾಬಲಗಿರಿ ಎನ್. ಹೆಗಡೆ) ಸಮಾರಂಭದಲ್ಲಿ […]
ಮೊದಲು ಕೆಲಸ ಮಾಡುವೆ
ಮೊದಲು ಕೆಲಸ ಮಾಡುವೆ ಒಂದು ಸಲ ನಮ್ಮ ಗುಂಡಣ್ಣನಿಗೆ ಒಬ್ಬನೇ ಆಟ ಆಡಲು ಬೇಸರವಾಯಿತು. ಅವನು ನಿಧಾನವಾಗಿ ನಡೆಯುತ್ತ ಬಂದು, ಒಂದು ಮರದ ಕೆಳಗೆ ಕುಳಿತನು. ಅಲ್ಲಿ ಕರಿಯ ಇರುವೆಗಳ ಸಾಲನ್ನು ನೋಡಿದನು. ಆಹಾ.. ನನಗೆ ಆಟವಾಡಲು ಜೊತೆಗಾರರು ಸಿಕ್ಕರು ಎಂದು ಹರುಷದಿಂದ ಇರುವೆಗಳ ಬಳಿಗೆ ಹೋದನು. ಆದರೆ, ಇರುವೆಗಳು ಇವನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆಗ ಗುಂಡಣ್ಣ ಒಂದು ಉಪಾಯ ಮಾಡಿದನು. “ಇರುವೆ ಇರುವೆ, ನನ್ನ ಜೊತೆ ಆಟ ಆಡುವುದಕ್ಕೆ ಯಾರೂ ಇಲ್ಲ, ನೀನು ನನ್ನ ಜೊತೆ […]
‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಪುಸ್ತಕ ಲೋಕಾರ್ಪಣೆ – ನೇರ ಪ್ರಸಾರ
ಬುಧುವಾರ, 23 ನವೆಂಬರ್ 2016 ರಂದು ‘ಬೆಳಿಗ್ಗೆ’ 10.30ಕ್ಕೆ ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭ ಧಾರವಾಡದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ ಪಂಡಿತಾರಾಧ್ಯರು ವೇದಿಕೆಯಲ್ಲಿದ್ದು ಗ್ರಂಥ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಸಂವಾದವೊಂದನ್ನು ನಡೆಸಿಕೊಡಲಿದ್ದಾರೆ. ಕೃತಿಯ ಲೇಖಕರಾದ ಡಾ. ‘ಗಿರಿ’ಯವರು (ಡಾ. ಮಹಾಬಲಗಿರಿ ಎನ್. ಹೆಗಡೆ) ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. […]