Your Cart

Need help? Call +91 9535015489

📖 Print books shipping available only in India. ✈ Flat rate shipping

ಜೀವನದ ಉದ್ದೇಶ ಏನು?

ಜೀವನದ ಉದ್ದೇಶ ಏನು? ಹೀಗೆ ಪರ್ಪಸ್ ಹುಡುಕುತ್ತಾ ಹೊರಟವರೆಲ್ಲ ಕೊನೆಗೆ ಹೋಗಿ ಮುಟ್ಟಿದ ಜಾಗದ ಹೆಸರು ಸುಡುಗಾಡು. ಹಾಗಿದ್ದರೆ ಬದುಕು ಅಷ್ಟೊಂದು ಪರ್ಪಸ್‌ಲೆಸ್ಸಾ? ಯಾವ ಉದ್ದೇಶವೂ ಇಲ್ಲದೇ ನಾವಿಲ್ಲಿ ಇದೀವಾ? ಕಾಡಿನಲ್ಲಿ ದಂಡಿಯಾಗಿ ಬೆಳೆದ ಹುಲ್ಲನ್ನು ಜಿಂಕೆ ತಿನ್ನುತ್ತಾ, ಹೆಚ್ಚಿದ ಜಿಂಕೆಗಳನ್ನು ಹುಲಿ ಕಬಳಿಸುತ್ತಾ, ಹುಲಿಯನ್ನು ಮನುಷ್ಯ ಕೊಲ್ಲುತ್ತಾ, ಮನುಷ್ಯನನ್ನು ಕಾಲ ದಂಡಿಸುತ್ತಾ ಚಕ್ರ ಪೂರ್ಣ. ಇಲ್ಲಿ ಉದ್ದೇಶ ಯಾರದ್ದು? ಪ್ರಕೃತಿಯದೇ? ಹಾಗಿದ್ದರೆ ನಮ್ಮೆಲ್ಲರಿಗಿಂತ ದೊಡ್ಡ ಉದ್ದೇಶ ಪ್ರಕೃತಿಗಿದೆಯೇ? ಅದು ಈ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿಯೇ […]

ವಿವೇಕಾನಂದರ ಸೋದರ, ಕ್ರಾಂತಿಕಿಡಿ ಭೂಪೇಂದ್ರನಾಥ ದತ್ತ

ವಿವೇಕಾನಂದರ ಸೋದರ, ಕ್ರಾಂತಿಕಿಡಿ ಭೂಪೇಂದ್ರನಾಥ ದತ್ತ ಭೂಪೇಂದ್ರನಾಥ ದತ್ತ : ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಒಂದೇ ಕುಟುಂಬದ ತಾಯಿ ಮಗ ಸೊಸೆ ಸೆರೆವಾಸ ಅನುಭವಿಸಿದ ಕಥೆಯನ್ನು ನಿನ್ನೆಯ ಮೈಲಾರ ಮಹಾದೇವರ ಸ್ಮರಣೆಯಲ್ಲಿ ಓದಿದ್ದೇವೆ. ದೇಶಾದ್ಯಂತ ಹಾಗೆ ಅನೇಕ ಕುಟುಂಬಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ತಮ್ಮನ್ನು ಸಂಪೂರ್ಣ ದಾಸ್ಯ ವಿಮೋಚನೆಯ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದು ಅಂತಹದೇ ಮತ್ತೊಂದು ದೇಶಭಕ್ತ ಕುಟುಂಬದ ಸ್ಮರಣೆ. ಇದು ಕಲಕತ್ತೆಯ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ದಂಪತಿಗಳ ಇಬ್ಬರು ಪುತ್ರರತ್ನಗಳು ದೇಶದ […]

ಬದುಕಿಗೆ ಭಗವದ್ಗೀತೆ – ’ಸದ್ವಸ್ತುವನ್ನು ನೆನೆ, ಕರ್ತವ್ಯವನ್ನು ಮಾಡು!

ಬದುಕಿಗೆ ಭಗವದ್ಗೀತೆ – ’ಸದ್ವಸ್ತುವನ್ನು ನೆನೆ, ಕರ್ತವ್ಯವನ್ನು ಮಾಡು! ‘ಸತ್-ಅಸತ್ ಬಗ್ಗೆ ಸ್ಪಷ್ಟ ಅರಿವಿರುವ ತತ್ವದರ್ಶಿಯು ವ್ಯಥೆಪಡುವುದಿಲ್ಲ’ ಎಂದು ತಿಳಿ ಹೇಳಿದ ಕೃಷ್ಣನು ‘ಸತ್’  ವಸ್ತುವಿನ ಸ್ವರೂಪವನ್ನು ವಿವರಿಸುತ್ತಾನೆ- ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್I ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ II ಈ ಸಮಸ್ತವೂ (ಸೃಷ್ಟಿಯೂ) ಯಾವುದರಿಂದ ವ್ಯಾಪಿಸಸಲ್ಪಟ್ಟಿದೆಯೋ ‘ಅವಿನಾಶಿ’ (ನಾಶವಿಲ್ಲದ್ದು) ಎಂದು ತಿಳಿ. ಇದರ (ಸತ್ವಸ್ತುವಿನ) ನಾಶವನ್ನು ಯಾರೂ ಗೈಯಲಾರರು.” (ಭ-೨-೧೭) ಯಾವುದು ‘ತ್ರಿಕಾಲಾಬಾಧಿತ’ವೋ (ಹಿಂದೆಯೂ ಇತ್ತು, ಇಂದೂ ಇದೆ, ಮುಂದೆಯೂ ಇದ್ದೇ ಇರುತ್ತದೆ) ಅದೇ […]

ವಿಕಲಚೇತನರು

ವಿಕಲಚೇತನರು ಅಂಧರಿವರೆಂದು ಹೆಸರಿಟ್ಟೆವು ಹೊರಗಣ್ಣ ನೋಡಿ ಇವರ ಅಂಧರಿವರಲ್ಲ ಅಂತರಾಳದ ಒಳಗಣ್ಣ ತೆರೆದ ಮಹಾನುಭಾವರು ಇವರು ಕಣ್ಮುಚ್ಚಿ ಎರಡೇ ಹೆಜ್ಜೆಗೆ ಎಡವುವ ದುರ್ಬಲರಿವರಲ್ಲ ಒಳಗಣ್ಣ ತೆರೆದು ಹೊರ ಜಗತ್ತನ್ನೇ ತಿಳಿದ ಸತ್ ಚಿತ್ತರು ಇವರು ವಾದ್ಯ ಪ್ರವೀಣರು ಸಂಗೀತದ ಸುರಪಾನ ಕುಡಿಸುವರು ಬ್ರೈಲ್ ಲಿಪಿಯ ಬುದ್ಧಿವಂತರು ನಿಷ್ಠೆ ಪ್ರಾಮಾಣಿಕತೆಯ ಪ್ರಚಂಡರು ನಿರಂತರ ಸಾಧನೆಯ ಹಾದಿಯಲಿ ಬೆಳೆಯುತಿಹರು ನೂರ್ಮಡಿ ಇವರು ಹೊರಗಣ್ಣ ತೆರೆದು ಸದೃಢರಲಿ ಚೇತನವ ತುಂಬಿ ಮೈಮನಗಳ ರೋಮಾಂಚನಗೊಳಿಸುವ ವಿರಾಟರು ಇವರು ವಿಕಲಚೇತನರು ಸದಾ ಚೇತೋಹಾರಿಗಳು.

ಕಣ್ಣಾರೆ ಕಂಡೆ ನಾ

ಕಣ್ಣಾರೆ ಕಂಡೆ ನಾ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೇಕರಣದ ಇನ್ನೊಂದು ಪ್ರಸ್ತುತಿ ನಾಟಕ: ಸ್ವಪ್ನ ನಾಟಕ । ನೀನಾಸಮ್ ತಿರುಗಾಟ ೧೯೯೩ । ನಾಟಕಕಾರ: ಭಾಸ । ಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿ । ನಾಟಕ ನಿರ್ದೇಶನ: ಅಕ್ಷರ ಕೆ.ವಿ । ಸಂಗೀತ ಸಂಯೋಜನೆ: ಯೋಗಾನರಸಿಂಹ ಕಣ್ಣಾರೆ ಕಂಡೆನಾ, ಕನಸಿನಲಿ, ಕಣ್ಣಾರೆ ಕಂಡೆನಾ ವಾಸ್ತವದಲ್ಲಿಯೆ ವಾಸವದತ್ತೆಯ, ಕಂಡೆನು ನಾ ಎನ್ನ ಕನಸಿನ ರಾಣಿಯ ಕನಸೋ ನನಸೋ, ತಿಳಿಯುವ ಮೊದಲೇ ಸರಿವ […]

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ!

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ! ಗುಡ್ಡ ಕಡಿದು ರಸ್ತೆ ಮಾಡಿದ ರಸ್ತೆಯಂತಿರುವ ಈ ಮಾತುಗಳ ಮೂಲಕ ಹಾದು ಹೋಗುವುದೆಂದರೆ ನನಗೆ ಅಂತಹ ಉತ್ಸಾಹವೇನೂ ಇಲ್ಲ. ದಾರಿಯಿಲ್ಲದ ದಟ್ಟ ಕಾಡಿನಲ್ಲಿ ಹಕ್ಕಿ ಕೂಗಿನಂತಿರುವ ಕವಿತೆಯ ಹಾದಿ ನನಗೆ ಯಾವತ್ತೂ ತುಂಬ ಕುತೂಹಲಕರ. *** ಸ್ನಾನದಲ್ಲಿ ಕದ್ದು ಕಿವಿಯೊಳಗೆ ಹೊಕ್ಕಿದ ನೀರಿನ ಬಿಂದು ಜೀವಗೊಂಡು. ದುಂಬಿಗಾನದ ಹಾಗೆ ಗುಂಗುಂ ಎಂಬ ನಾದ ಈಗ ನನಗೆ ಬೇರೇನೂ ಕೇಳಿಸುವುದಿಲ್ಲ ಕಿವುಡಿ ಎನ್ನುತ್ತಿದ್ದಾರೆ ಎಲ್ಲರೂ ನಾದದ ಕಡಲಿನಲ್ಲಿ ತೇಲುವ ನಾನು ಒಂದು […]