Your Cart

Need help? Call +91 9535015489

📖 Print books shipping available only in India. ✈ Flat rate shipping

ನಿಮಗೂ ವಯಸ್ಸಾಯಿತು…!

ನಿಮಗೂ ವಯಸ್ಸಾಯಿತು…! ಯಾರಾದರು ಅಂದರೆ ನಖಶಿಖಾಂತ ಉರಿ ಹೊತ್ತಿಕೊಳ್ಳುತ್ತದೆ. ವಯಸ್ಸಾಗುವುದೆಂದರೆ ನಾವು ಮುದುಕರಾಗುತ್ತಿದ್ದೇವೆ ಎಂದೇ ಅರ್ಥ. ಹಾಳಾದ್ದು ಪ್ರತಿ ನಿತ್ಯ ಕನ್ನಡಿ ನೋಡಿಕೊಳ್ಳುತ್ತೇವೆ, ಪ್ರತಿದಿನ ಶೇವ್ ಮಾಡಿಕೊಳ್ಳುತ್ತೇವೆ, ಕೂದಲಿಗೆ ಬಣ್ಣ ಹಚ್ಚಿಕೊಂಡರೂ ಎರಡು ದಿನ ಬಿಟ್ಟು ಕನ್ನಡಿ ನೋಡಿದಾಗ ಅದರ ಬುಡ ಬಿಳಿಯ ಬಣ್ಣದ್ದಾಗಿರುತ್ತದೆ! ನಮ್ಮ ಮುಖದ ಮೇಲೆ ನಾವು ಗುರುತಿಸಿರುವ, ನಾವೊಪ್ಪದ ಮುದಿತನದ ರೇಖೆಗಳನ್ನು ಮರೆಮಾಚುವುದಕ್ಕೆ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಆದರೂ ನಿಮಗೂ ‘ವಯಸ್ಸಾಯಿತು…! ಹೀಗೊಂದು coment ಬಂದಾಗ ಗಂಭೀರವಾಗಿಯೇ ಯೋಚನೆಯಲ್ಲಿ ಬಿದ್ದೆ. ಹೌದಲ್ಲ, ನನಗಿದು […]

ಸುಖಾಂತ್ಯ – ಹೆಚ್ಚು ಕಡಿಮೆ – ಹಿತ್ತಲು – powder ಡಬ್ಬಿ

ಸುಖಾಂತ್ಯ – ಹೆಚ್ಚು ಕಡಿಮೆ – ಹಿತ್ತಲು – powder ಡಬ್ಬಿ ಹೆಚ್ಚು ಕಡಿಮೆ ಎಲ್ಲ ನಾಟಕ ಸಿನೇಮಾಗಳು ಸುಖಾಂತ್ಯಗೊಳ್ಳುವದು ಅಲಿಖಿತ ಒಪ್ಪಂದವಿದ್ದಂತೆ… ಕೊನೆಯಲ್ಲಿ ಒಂದು Group photo ಇಲ್ಲದೇ The End ಇಲ್ಲ… ಇದು ನಾವು ಚಿಕ್ಕವರಿದ್ದಾಗಿನ ಸಿನೇಮಾಗಳು… ಮನೆಮಂದಿಗೆ ಹೇಳಿ ಒಂದುಸಲ… ಹೇಳದೇ ಹಲವಾರುಸಲ ಹೋದದ್ದೆಷ್ಟೋ ನೆನಪಿಲ್ಲ… ಬಂದಮೇಲೆ ಹಿತ್ತಲಲ್ಲಿ ಅಡಗಿ ಮುಖಕ್ಕೆ ಡಬ್ಬದಲ್ಲಿಯ Powder ಮೆತ್ತಿಕೊಂಡು ಕದ್ದು ಕದ್ದು ಕನ್ನಡಿ ನೋಡಿ ನಾವೇ ಲೀಲಾವತಿ, ಮೈನಾವತಿ ಎಂಬಂತೆ ಭ್ರಮಿಸಿ ಸಂಭ್ರಮಿಸಿದ್ದು… ಅದೆಷ್ಟು ಸಲವೋ […]

ವಿಶ್ವಚೇತನ ಮಾತನಾಡಿದೆ

ನಾನಿದ್ದ ದೇಹದಾ ಹುಟ್ಟು ಹಬ್ಬವು ಇಂದು ನಡೆದಿಹುದು ಅವನಿಯಲಿ ಬಹು ಹಿಂದಿನಿಂದು ನವಮಿಯಲಿ ನೆನೆಯುವರು ಶ್ರೀ ರಾಮನೆಂದು ಅಷ್ಟಮಿಗೆ ನೆನೆಯುವರು ಶ್ರೀ ಕೃಷ್ಣನೆಂದು ಧರಿಸಿದ್ದ ಪಾತ್ರಗಳ ಉತ್ಸವದ ಮೂರುತಿಗೆ ವಿಧ ವಿಧದಲಂಕಾರ ಮಾಡಿ ಸಂಭ್ರಮಿಸಿಹರು ಎಲ್ಲ ಪಾತ್ರಗಳಲ್ಲು ಸಮನಾಗೆ ಇದ್ದೆ ದ್ವಂದ್ವದಾ ಕಂಗಳಲಿ ಕಂಡು ಕನಲಿದರು ಅಂದು ಇಂದೆಂದೆಂದು ನಾ ಎಲ್ಲರೊಳಗೊಂದೇ ಸರ್ವರಾಂತರ್ಯದಲು ಸಂಚರಿಸುತಿರುವೆ ರಾಮನನು ನೆನೆದರೂ ರಾವಣನ ನೆರಳು ಕೃಷ್ಣನೆಂದುಸುರಿದರೆ ಕಂಸನಾ ಕರಿನೆರಳು ಇಂತುನಡೆದಿಹುದೆನ್ನ ಮಾಯೆ ಮರೆದಾಟವು ಅರಿತವನ ಮನದಿಹುದು ಸರ್ವ ಸಮ ಭಾವವು

ಜಗದೀ ಮಾಯೆಯ

ಜಗದೀ ಮಾಯೆಯ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಭಾಗವಾಗಿ ಇನ್ನೊಂದು ಪ್ರಸ್ತುತಿ. ನಾಟಕ: ಗೋಕುಲ ನಿರ್ಗಮನ । ನೀನಾಸಮ್ ತಿರುಗಾಟ । ನಾಟಕಕಾರ, ಗೀತಕಾರ: ಪು.ತಿ. ನರಸಿಂಹಾಚಾರ್ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ ಜಗದೀ ಮಾಯೆಯ ಹೊಳಲಿಡುತಿರುವ ಮರೆದೈವದ ಕೊಳಲ ನಮ್ಮೆದೆ ಅರೆಚಣವಾದರು ಲಾಲಿಸಿ ಕೊಳಲ, ನೀಗಲಿ ಭವದಳಲ

ಹಿಂದೂ ಮುಸ್ಲಿಂ ಭ್ರಾತೃತ್ವದ ಮಾದರಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್

ಹಿಂದೂ ಮುಸ್ಲಿಂ ಭ್ರಾತೃತ್ವದ ಮಾದರಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು […]

ಶಬರಿದತ್ತ ಫಲಾಶನ ರಾಮಾ…

ಎಲೆಮನೆಯನ್ನು, ಮನೆಯ ಮುಂದಿನ ಅಂಗಳವನ್ನೂ ಸಾರಿಸಿದ್ದೆಷ್ಟೋ ಸಲ. ಅವನು ಬರುತ್ತಾನೆಂದು ನಡುಗುವ ಕೈಗಳಿಂದ ರಂಗವಲ್ಲಿಯಿಟ್ಟು ಕಾದದ್ದು ಎಷ್ಟು ಸಲವೋ, ಕಾಡಿನಿಂದ ಅವನ ಪೂಜೆಗೆಂದು ಆಯ್ದು ತಂದ ಹೂಗಳು ನಿರ್ಮಾಲ್ಯವಾದದ್ದು, ಅವನಿಗಾಗಿ ತಂದ ತನಿವಣ್ಣುಗಳು ಬಾಡಿಹೋದದ್ದು ಎಷ್ಟು ಸಲವೋ, ಲೆಕ್ಕವಿಟ್ಟವರಾರು? ಹಣ್ಣು ಹಣ್ಣು ಮುದುಕಿ, ಅವನ ಕೋಮಲ ಪಾದಗಳಿಗೆ ನೋವಾಗಬಾರದೆಂದು ಅಗಸ್ತ್ಯರ ಆಶ್ರಮಕ್ಕೆ ಸಾಗುವ ದಾರಿಯ ಗುಂಟ ಕಲ್ಲು ಮುಳ್ಳುಗಳನ್ನು ಕಿತ್ತೆಸೆದದ್ದೆಷ್ಟು ಸಲವೊ? ಅವನು ಬರುವ ದಾರಿಗೆ ನೆರಳಾಗಬೇಕೆಂದು ಹಲ ವರುಷಗಳಿಂದ ನೆಟ್ಟ ಗಿಡಗಳು ಮರಗಳಾಗಿ ಹೂಹಣ್ಣುಗಳನ್ನು ತುಂಬಿಕೊಂಡು […]

ಬಾ…..ಯುಗಾದಿ

ಈ ದಿನದಿ ಹರುಷವಿದೆ ನೀನು ಬಂದಿಹೆಯೆಂದು ಸುಖದ ಐಸಿರಿಯ ಬಾಗಿನವ ತಂದು ನಮಗೆ ಬೇಕದುವೆಂಬ ಸ್ವಾರ್ಥ ಎಮ್ಮೊಳು ಇಲ್ಲ ಹಂಚಿ ಬಿಡು ಜಗಕೆಲ್ಲ ಒಳಿತಾಗಲೆಂದು ||೧|| ಇರಲಿ ಹೂಬನದಲ್ಲಿ ನಿರತ ಕೋಗಿಲೆ ಹಾಡು ಮಾವು ಚಿಗುರುವ ಸಮಯ ಒಲುಮೆ ಹಾಡು ಬಿಸಿಲ ಧಗೆಯೊಳಗೆಲ್ಲ ಬೆಂದಿರುವ ಜನ ಮನಕೆ ತಂಪನೀಯಲಿ ಮಂದಾನಿಲದ ಹಾಡು ||೨|| ನೆಲದಾಳದೊಳಗಿಳಿದ ಜೀವಜಲ ಚಿಲುಮೆಯದು ನೆಲ ಬಿರಿದು ಚಿಮ್ಮಿ ಬರೆ ಕಾರಂಜಿಯಾಗಿ ಮೂಡು ಕಾಮನಬಿಲ್ಲೆ ಪಡುವಣದ ಅಂಚಿನಲಿ ಆಗಸದಿ ಮಳೆ ಬೆಳಕ ಮಿಲನ ಸಂಭ್ರಮಕೆ […]

ಬದುಕಿಗೆ ಭಗವದ್ಗೀತೆ – ಇರುವುದು ಇಲ್ಲವಾಗದು, ಇಲ್ಲದಿರುವುದು ಇರಲಾರದು – ಇದೇ ತತ್ವದರ್ಶಿಯ ಬೋಧೆ

ಬದುಕಿಗೆ ಭಗವದ್ಗೀತೆ – ಇರುವುದು ಇಲ್ಲವಾಗದು, ಇಲ್ಲದಿರುವುದು ಇರಲಾರದು – ಇದೇ ತತ್ವದರ್ಶಿಯ ಬೋಧೆ ‘ವ್ಯಥೆಪಡದೆ ಇರಬಲ್ಲವನೇ ಧೀರ’ ಎನ್ನುವುದನ್ನು ಕೃಷ್ಣನು ವಿವರಿಸಿದ್ದನ್ನು ನೋಡಿದೆವಷ್ಟೆ? ವ್ಯಥೆ ಆಗುವುದಾದರೂ ಏಕೆ? ನೆಚ್ಚಬಾರದ್ದನ್ನು ನೆಚ್ಚಿನೊಂದಾಗ, ನೆಚ್ಚಬೇಕಾದ್ದನ್ನು ನೆಚ್ಚದೆ ಅದು ಕೈತಪ್ಪಿ ಹೋದಾಗ! ಸ್ಥಿರವಾದ ನೆಲದ ಮೇಲೆ ನಿಂತರೆ ಸ್ಥಿರವಾಗಿ ನಿಲ್ಲುತ್ತೇವೆ. ಆದರೆ ಸುತ್ತುತ್ತಿರುವ ಯಂತ್ರದ ಮೇಲೆ ನಿಂತರೆ, ತೂರಾಡುವುದೂ ಬೀಳುವುದು ತಪ್ಪುವುದೇ? ಅಂತೆಯೇ ನಮ್ಮ ಜೀವನದಲ್ಲೂ ಶಾಶ್ವತವು ಯಾವುದೋ ಅದು ‘ನಮ್ಮ ನೆಲೆ’ಯಾದಲ್ಲಿ ನಮ್ಮ ಅಂತರಂಗವೂ ಶಾಂತಿ-ಸ್ಥೈರ್ಯಗಳನ್ನು ಹೊಂದುತ್ತದೆ. ಅದರ […]

ನನಸಲ್ಲ ಇದು ಕನಸು

ನನಸಲ್ಲ ಇದು ಕನಸು ನಿನ್ನೆ ಮನೆಯಂಗಳದಲಿ ತೇನ್ ಸಿಂಗ್ ಕರೆದಂತಾಯ್ತು ಬಾಗಿಲು ತೆರೆಯಲು ಹಿಮಾಲಯವೇ ಮುಂದೆ ನಿಂತತಾಯ್ತು ಸರಸರ ಏರಿದೆ ಹಿಮಾಲಯವ ಮುಷ್ಠಿಲಿ ಹಿಡಿದೆ ಹಿಮವನು ಮೈಮೇಲೆಲ್ಲಾ ಸುರಿವಿಕೊಂಡು ಹಿಮಸ್ನಾನವ ಮಾಡಿದೆ ನಾನು ನೋಡು ನೋಡುತಿರೆ ಶಿಖರದ ತುದಿಯನ್ನೇ ಕಂಡಿದ್ದೆ ಕೈಯಲಿ ಭಾರತ ಧ್ವಜವನು ಹಿಡಿದಿದ್ದೆ ಮರುಕ್ಷಣದಲೆ ಗಂಗೆ, ತುಂಗೆ, ಯಮುನೆಯರೆಲ್ಲ ನೀರಿಗೆ ಬಾರೆ ಎಂದಂತಾಯ್ತು ಕೊಡವನು ಹಿಡಿದು ಹೊರಹೋಗುವುದಲಿ ಗಂಗಾ ನದಿಯೇ ಭೋರ್ಗರೆಯುತ್ತಿತ್ತು ಆದಿಯಿಂದ ಅಂತ್ಯದವರೆಗೂ ಈಜಿ ಈಜಿ ದಡವನು ಸೇರಿದೆ ನಾನು ಹಿತ ಅನುಭವದಲಿ […]