Your Cart

Need help? Call +91 9535015489

📖 Print books shipping available only in India. ✈ Flat rate shipping

ಜಲದ ಕಣ್ಣು – ಪುಸ್ತಕ ಓದು, ವಿಮರ್ಶೆ ಮತ್ತು ಸಂವಾದ

ಪ್ರೊ. ಎಂ ಕೃಷ್ಣೇಗೌಡ ಅವರ ಜಲದಕಣ್ಣು – ಪುಸ್ತಕ ಓದು, ವಿಮರ್ಶೆ ಮತ್ತು ಸಂವಾದ ಪುಸ್ತಕ ಓದು: ಡಾ. ಸುಷ್ಮಾ ಕೆ ಏನ್ ಪುಸ್ತಕ ಕುರಿತು : ಡಾ. ಏನ್ ಎಸ್ ತಾರಾನಾಥ ಪ್ರೊ. ಎಂ ಕೃಷ್ಣೇಗೌಡ ಅವರಿಂದ ಹಾಸ್ಯ ರಸಸಂಜೆ ದಿನಾಂಕ: ೦೩- ೦೬- ೨೦೧೭ ಸಂಜೆ ೪ ಗಂಟೆಗೆ ಸ್ಥಳ: ವಿವೇಕಾನಂದ ಸಭಾಂಗಣ, ಮಹಾಜನ ಕಾಲೇಜು, ಜಯಲಕ್ಷ್ಮೀಪುರಂ, ಮೈಸೂರು

ಬದುಕಿಗೆ ಭಗವದ್ಗೀತೆ – ಆಶ್ಚರ್ಯಜನಕವಾದ ಆತ್ಮ !

ಬದುಕಿಗೆ ಭಗವದ್ಗೀತೆ – ಆಶ್ಚರ್ಯಜನಕವಾದ ಆತ್ಮ ! ಅವ್ಯಕ್ತದಿಂದ ವ್ಯಕ್ತವಾಗಿ ಬಂದ ಭೌತಿಕ ಪ್ರಪಂಚವು, ಕೆಲಕಾಲವಿದ್ದು, ಮತ್ತೆ ಅವ್ಯಕ್ತದಲ್ಲೇ ಲಯವಾಗುತ್ತದೆ. ಆತ್ಮಸ್ವರೂಪವಾದರೋ, ವ್ಯಕ್ತಾವ್ಯಕ್ತಗಳ ಲೀಲೆಗೆ ತೊಡಗದೆ ನಿತ್ಯವೂ ನಿರ್ವಿಕಾರವೂ ಆಗಿ ಉಳಿದಿರುತ್ತದೆ. ನಾವು ಆತ್ಮದ ನೆಲೆಯಲ್ಲಿ ನಿಂತು ಆಲೋಚಿಸಿದರೆ ದುಃಖವೇ ಇಲ್ಲ. ಭೌತಿಕದ ನೆಲೆಯಲ್ಲಿ ನಿಂತು ನೋಡಿದರೂ ಅಷ್ಟೇ, ವಿಕಾರ-ನಾಶಗಳು ಅನಿವಾರ್ಯವಾದ್ದರಿಂದ ಶೋಕಿಸುವ ಅಗತ್ಯವಿಲ್ಲ. ಇದಿಷ್ಟನ್ನು ಕೃಷ್ಣನ ಮಾತುಗಳಲ್ಲಿ ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಕೃಷ್ಣನು ಆತ್ಮವಸ್ತುವಿನ ವಿಷಯಕ್ಕೆ ಮರಳಿ ಹೀಗೆ ಹೇಳುತ್ತಾನೆ- ಆಶ್ಚರ್ಯವದ್ಪಶ್ಯತಿಕಶ್ಚಿದೇನಮಾಶ್ಚರ್ಯ ವದ್ವದತಿತಥೈವಚಾನ್ಯಃ I ಆಶ್ಚರ್ಯವಚ್ಚೈನಮನ್ಯಂಶೃಣೋತಿ […]

ಕೋತಿ, ಕನ್ನಡಿ ಸಂಗಮ

ಕೋತಿ, ಕನ್ನಡಿ ಸಂಗಮ ಕೋತಿ ಕಂಡಿತೊಂದು ಕನ್ನಡಿ ಬಿಗಿದ್ಹಿಡಿದಿದ್ದ ಪರಿಯನೊಮ್ಮೆ ನೋಡಿ ಹಿಡಿದು ಆಚೆ-ಈಚೆ ಮಾಡಿ ಏರಿತು ಮರವ ಛಂಗನೆ ಓಡಿ ಓಡಿ ತಿರುವು ಮುರುವು ಮಾಡಿತೊಮ್ಮೆ ದೂರ ಚಾಚಿ ನೋಡಿತೊಮ್ಮೆ ಕಣ್ಪಿಳಿಕಿಸದೆ ದೃಷ್ಟಿ ಅಲ್ಲೆ ಬೀರಿ ಕೈಲಿ ಹಿಡಿದು ಕಂಡು ತನ್ನ ಮಾರಿ ಆಹಾ! ಸಿಕ್ಕ ಹೊಸ ಗೆಳೆಯ ಮುದ್ದಿಸಿತು ಮತ್ತೆ ಮತ್ತೆ ಕನ್ನಡಿಯ ಘಳಿಗೆ ಬಿಡದೆ ಬಿಗಿದು ಬಗಲನ್ನೆ ಬಂಧಿಸಿತು ತೋಳಲಿ ಬಹಳ ಚೆನ್ನೆ ನನ್ನಂತೆ ಇರುವ ಮಿತ್ರನಿವನು ಮಾಡಿದಂತೆ ಮಾಡುವವನು ಮುದ್ದಿಸಲು ಮುದ್ದಿಸುವವ […]

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ “ಬೇಂದ್ರೆ ಪುಣ್ಯತಿಥಿಯಂದು ಬೇಂದ್ರೆ ಸ್ಮಾರಕ ಕಾವ್ಯ ಗಾಯನ ಕಾರ್ಯಕ್ರಮದ ಆಯೋಜನವಾಗಬೇಕು.. ನಿಮ್ಮದೇ ಜವಾಬ್ದಾರಿ ನಿಮ್ಮದೇ ಇಷ್ಟ.. ಆದರೆ ಕಾರ್ಯಕ್ರಮ ಸ್ಮರಣೀಯವಾಗಬೇಕು.” ಬಿಸಿಬಿಸಿ ಉಪ್ಪಿಟ್ಟು ಆರಿಸಲು plateನಲ್ಲಿ ಚಮಚ ಆಡಿಸುತ್ತ ಕುಳಿತ ನನಗೆ bossನ phone.. ಆ…ಊ.. ಅನ್ನುವ ಮೊದಲೇ cutಊ ಆಯ್ತು… ತಲೆತುಂಬಾ ಗಜಿಬಿಜಿ.. ಧಿಡೀರ್ ಹೇಳಿದರೆ… ನನ್ನ ಕಡೆ ಮಾಯಾದಂಡವಿಲ್ಲ… ಆದರೆ Bossಗೆ NO ಕೇಳಿ ಗೊತ್ತಿಲ್ಲ.. ನಾನೂ ಬೇಂದ್ರೆಯವರಂತೆ ಪ್ರಾರ್ಥಿಸಬೇಕಷ್ಟೇ.. ಸ್ಫೂರ್ತಿ ಗಂಗೆ ಯನ್ನ… […]

ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ

ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ ಯಡ್ರಾಮನಹಳ್ಳಿ ದೊಡ್ಡಭರಮಪ್ಪ ತೊಗಲುಗೊಂಬೆಯಾಟ ತಂಡದವರಿಂದ ತೊಗಲುಗೊಂಬೆಯಾಟ ಶೂರ್ಪಣಕಿ ವಧೆ । ಕಲಾವಿದರು: ನಿಂಗಪ್ಪ ಕಿಳ್ಳೆಕ್ಯಾತರ, ದೇವೇಂದ್ರಪ್ಪ, ಅಶೋಕ, ರತ್ನಮ್ಮ ಕೆ., ಜಯಕುಮಾರ, ನಾಗರತ್ನಮ್ಮ

ಬದುಕಿಗೆ ಭಗವದ್ಗೀತೆ – ಕ್ಷಣಿಕ ಅಭಿವ್ಯಕ್ತಿಯನ್ನು ನೆಚ್ಚಿ ಶೋಕಿಸುವುದೇಕೆ?

ಬದುಕಿಗೆ ಭಗವದ್ಗೀತೆ – ಕ್ಷಣಿಕ ಅಭಿವ್ಯಕ್ತಿಯನ್ನು ನೆಚ್ಚಿ ಶೋಕಿಸುವುದೇಕೆ? ಆತ್ಮಕ್ಕಂತೂ ಹುಟ್ಟಿಲ್ಲ ಸಾವಿಲ್ಲ. ಮೂರ್ತಪ್ರಪಂಚದಲ್ಲಿ ಹುಟ್ಟು-ಸಾವುಗಳು ಅನಿವಾರ್ಯ. ಹಾಗಾಗಿ ಎರಡು ದೃಷ್ಟಿಗಳಿಂದ ಪರಿಗಣಿಸಿದರೂ, ‘ಶೋಕವು ಅನಗತ್ಯ’ ಎಂದು ಕೃಷ್ಣನು ಪಾರ್ಥನಿಗೆ ಮನಗಾಣಿಸುತ್ತಿದ್ದುದನ್ನು ನೋಡಿದ್ದೇವೆ. ಕೃಷ್ಣನು ಮುಂದುವರೆಸುತ್ತಾನೆ- ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ I ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿವೇದನ II (ಭ, ೨, ೨೮) -(ಜೀವಿಗಳು) ಹಿಂದೆ ಅವ್ಯಕ್ತವಾಗಿಯೇ ಇದ್ದವು, ಮುಂದೆ ನಿಧನದೊಂದಿಗೆ ಅವ್ಯಕ್ತವೇ ಆಗುತ್ತವೆ, ಮಧ್ಯದಲ್ಲಿ ಮಾತ್ರ ವ್ಯಕ್ತವಾಗಿವೆ, ಈ ವಿಷಯವಾಗಿ ವೇದನಯೇಕೆ? ಸತ್ಯ-ಜ್ಞಾನ-ಆನಂದಮಯವಾದ ಆತ್ಮವಸ್ತುವೊಂದೇ […]

ಸಹನೆ

ಸಹನೆ ಸಹನೆಯು ಬಾಳಿಗೆ ಹಸನಾದ ಹಾದಿ ಇದುವೇ ಜೀವನಕೆ ಆಗುವುದು ಬುನಾದಿ ದುಃಖಿಸಿದವನೊಮ್ಮೆ ನಗುವುದುಂಟು ನಕ್ಕವನೊಮ್ಮೆ ದುಃಖಿಸುವುದುಂಟು ಜೀವನ ನೌಕೆಯಲಿ ಎಲ್ಲವೂ ಜಹಜ ಆತುರವಿರದೆ ಅರಿಯಬೇಕು ಮನುಜ ಕಷ್ಟವನರಿತು ಯೋಚಿಸಬೇಕು ದುರಂತಗಳ ತಾಳ್ಮೆಯಲಿ ಎದುರಿಸಬೇಕು. ದುಡುಕಲು ಅರ್ಥವು ಅನರ್ಥವಾಗುವುದು ಕೋಪದ ಕೈಯಿಗೆ ಬುದ್ಧಿಯು ಸಲ್ಲ ಮನುಜನದು ಕ್ರೂರ ಪ್ರಾಣಿಯಾಗಬಲ್ಲ ತಾಳ್ಮೆಯ ನಂಟನು ಬಯಸಿರಿ ಎಲ್ಲ ಪ್ರೀತಿ, ಕರುಣೆ ಭರಿಸುವುದು ಸೌಹಾರ್ದತೆಯ ಬೆಲ್ಲ.

ಆಶ್ಚರ್ಯ ಚೂಡಾಮಣಿ

ಆಶ್ಚರ್ಯ ಚೂಡಾಮಣಿ ನಾಟಕ: ಆಶ್ಚರ್ಯ ಚೂಡಾಮಣಿ | ನಾಟಕಕಾರ: ಶಕ್ತಿಭದ್ರ | ಕನ್ನಡ ಅನುವಾದ: ಕೆ. ಕೃಷ್ಣಮೂರ್ತಿ | ವಿನ್ಯಾಸ ಮತ್ತು ನಿರ್ದೇಶನ: ಜೋಸೆಫ್ ಜಾನ್

ಸಲಿಗೆ – ಜೀವ – ಕಡಲು – ಚಿನಕುರುಳಿ

ಸಲಿಗೆ – ಜೀವ – ಕಡಲು – ಚಿನಕುರುಳಿ ಜೀವಕ್ಕೆ ಜೀವಕೊಡುವ ಸಲಿಗೆಯಿದ್ದರೂ ಸಂಬಂಧಗಳಿಗೆ ಒಂದು L.O.C. ಇರಲೇಬೇಕು… ಸ್ನೇಹದ ಹಾಲುಗಡಲಲ್ಲಿ ಹುಳಿಹಿಂಡಿ ಬದುಕು ಭಂಗವಾಗಿಸುವದಕ್ಕೆ ಮಹಾ-ಕಲಹವೇನೂ ಬೇಕಾಗಿಲ್ಲ.. ಒಂದು ಚಿನಕುರುಳಿಯಂಥ ಅಸಭ್ಯ, ಅನುಚಿತ, ಅಗೌರವದ Joku ಊ ಸಾಕಾದೀತು