ನಮ್ಮೂರಲ್ಲಿ ಮೇ ತಿಂಗಳಲ್ಲಿ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ದ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನಾಟಕ: ಪುಂಟಿಲಾ । ನೀನಾಸಮ್ ತಿರುಗಾಟ ೧೯೯೦ । ನಾಟಕಕಾರ: ಬರ್ಟೋಲ್ಟ್ ಬ್ರೆಕ್ಟ್ । ಅನುವಾದ: ಜಸವಂತ ಜಾಧವ್ । ಗೀತಕಾರ: ಕೆ.ವಿ.ಸುಬ್ಬಣ್ಣ । ನಾಟಕ ನಿರ್ದೇಶನ: ಚಿದಂಬರರಾವ್ ಜಂಬೆ । ಸಂಗೀತ ಸಂಯೋಜನೆ: ಬಿ.ವಿ. ಕಾರಂತ
Month: June 2017
ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ
ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ ಶೈಶವ, ಬಾಲ್ಯ, ಹರೆಯ, ವೃದ್ಧಾಪ್ಯ ಬದುಕಿನ ನಾಲ್ಕು ಹಂತಗಳು- ಪಾಳಿಯ ಮೇಲೆ ಎಲ್ಲವನ್ನೂ ಒಂದೊಂದಾಗಿ ಅನುಭವಿಸಲೇಬೇಕು- ನಮ್ಮಿಚ್ಛೆಯಂತಲ್ಲ- ಅವನಿಚ್ಛೆಯಂತೆ— ನಾನೋಬ್ಬನೇ ಅಲ್ಲ – ಪ್ರತಿಯೊಬ್ಬರೂ… ಅವನು “ಸುರೇಶ”ನಿರಲಿ “ಭುವೀಶ”ನಿರಲಿ ಏನೂ ವ್ಯತ್ಯಾಸವಾಗುವದಿಲ್ಲ— ಇಲ್ಲಿ ಯಾವುದೇ ಲಾಬಿ ಕೆಲಸ ಮಾಡುವದಿಲ್ಲ ಹಾ, ಒಂದು ಮಾತು..ನಿನ್ನ ದಾರಿ ಸರಿಯಿದ್ದರೆ ಉದ್ದೇಶ ಪ್ರಾಮಾಣಿಕವಿದ್ದರೆ… ಕಾಣದೊಂದು ದೈವ ನಿನ್ನ ಬ್ಯಾಟರಿ ಆದಾಗಲೆಲ್ಲ ಮಾಡಬಹುದು. ಅದೃಷ್ಟ ಕೈ ಕೊಟ್ಟಾಗಲೆಲ್ಲ ಕೈ ಹಿಡಿದು ಮೇಲೆತ್ತಬಹುದು.. […]
ಜೀವನುತ್ಸಾಹ
ಜೀವನುತ್ಸಾಹ ವಿನಯ ಶೀಲ ಮರವೇ ನಮನವು ನಿನ್ನುತ್ಸಾಹಕೆ ಟೊಂಗೆ ಕತ್ತರಿಸಲು ಚಿಗುರಿ ಹೊಮ್ಮಿಸುವೆ ಸುತ್ತ ಅಗರು ಏನೀ ನಿನ್ನ ನಮ್ರ ಭಾವನಾ ರೆಂಬೆಗಳುರುಳಿಸಲು ಸಣ್ಣ ಚಿಗುರಿ ನಳನಳಿಸುತ ನೀಡುವೆ ಕಂಗಳಿಗೆ ಸುಖಕರವು ರೆಂಬೆ ಕೊಂಬೆಗಳೆರಡು ಉರುಳಿಸಲು ಟಿಸಿಲೊಡೆದು ಬೆಳೆವೆ ಎಂಥ ನಿಷ್ಠ ಕಾಯವು ಕೊಡಲಿ ಇಟ್ಟ ಮನುಜನೊಡೆನೆ ಇಲ್ಲ ನಿನ್ನಲಿ ದ್ವೇಷ ಭಾವನ ಮತ್ತೆ ನೆರಳ ನೀಡಿ ತುಂಬುವ ನೀ ಚೇತನ ಕಾಂಡಕಿಟ್ಟು ಪೆಟ್ಟು ನಿನ್ನ ದೇಹ ಅರ್ಧವಾಗಿಸಲು ಚ್ಯುತಿ ಇಲ್ಲದೆ ಉಸಿರ ನೀವೆ ಮತ್ತೆ ಪುಟಿವೆ […]
ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ
ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಬಣವೆಗಳ ಹಿಂಬದಿಯಲ್ಲಿ ಪ್ರೇಮ ಪಲ್ಲವಿಸಿ ಪೋಷಣೆಯಿಲ್ಲದೇ ಕಮರಿದ ಕಥೆಗಳೆಷ್ಟು ಚರಿತ್ರೆ ಸೇರಿವೆಯೋ ಲೆಕ್ಕ ಇಟ್ಟವರಾರು…..?? ಶಾರೂಖ – ಕಾಜೋಲ ರಣಬೀರ್ – ಐಶ್ವರ್ಯ ಕಥೆಗಳಂತೆ ಕೋಟಿ ಕೋಟಿ ಬಾಚಲಾರದ, ಬಣ್ಣನೆಗೆ ‘ಬರ’ವಿರುವ, ಕಥೆಗಳಿಗೆ ‘ಕರಣ’ (ಜೋಹರ್) ನಂಥವರ ಕರುಣೆ ದಕ್ಕುವದು ಬಣವೆಯಿಂದ ಸೂಜಿ ಹುಡುಕಿ, ಹೆಕ್ಕಿ ತೆಗೆದಂತೆ…..
ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು….
ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು…. “ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ……..” ಹಾಗೊಂದು ಹಾಡು ಲಾಹೋರ್ನ ಜೈಲಿನ ಗೋಡೆ ಗೋಡೆಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಟಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ […]
ಬದುಕಿಗೆ ಭಗವದ್ಗೀತೆ – ಕೃತನಿಶ್ಚಯನಾಗಿ ಕರ್ತವ್ಯ ಮಾಡು
ಬದುಕಿಗೆ ಭಗವದ್ಗೀತೆ – ಕೃತನಿಶ್ಚಯನಾಗಿ ಕರ್ತವ್ಯ ಮಾಡು ಕ್ಷತ್ರಿಯನ ಬಾಳೇ ಧರ್ಮರಕ್ಷಣೆಗೆ. ಹಾಗಿರುವಾಗ ಧರ್ಮಯುದ್ಧಕ್ಕಾಗಿ ಧರ್ಮಪಕ್ಷದಲ್ಲಿ ಹೋರಾಡುವ ಮಹದವಕಾಶ ಒದಗಿಬಂದಾಗ ಕೈಬಿಡುವುದು ಮೂರ್ಖತನವಲ್ಲವೆ? ಒಟ್ಟಿನಲ್ಲಿ ಅರ್ಜುನನಿಗೀಗ ಬೇರೆ ಆಯ್ಕೆ ಇಲ್ಲ. ಸೋತರೂ ಸರಿ, ಗೆದ್ದರೂ ಸರಿ, ಸತ್ತರೂ ಸರಿ ಉಳಿದರೂ ಸರಿ, ಯುದ್ಧವೇ ಮುಂದಿರುವ ನಿಶ್ಚಿತಕರ್ತವ್ಯ ಎನ್ನುವುದನ್ನು ಮನಗಾಣಿಸುತ್ತಿದ್ದಾನೆ ಕೃಷ್ಣ; ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ| ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ|| ‘ಅರ್ಜುನ, ಸತ್ತರೆ ಸ್ವರ್ಗವನ್ನು ಪಡೆಯುವೆ, ಗೆದ್ದರೆ ರಾಜ್ಯಭೋಗಗಳನ್ನು ಪಡೆಯುವೆ. […]
ನಕ್ಕು ನಲಿದು
ನಕ್ಕು ನಲಿದು ಅನ್ಯರ ಚಿಂತೆ ಏತಕೆ ತಮ್ಮ ಮನದಲಿ ಪೊಕ್ಕುವುದು ಗುಮ್ಮ ಪರಚಿಂತೆಯಲಿ ಗೆದ್ದಲ್ಹಿಡಿವುದು ಚಿತ್ತ (ಜಗವಿಹುದು) ಜಗವೊಂದು ವಿಶಾಲ ಸಾಗುವ ಅದರತ್ತ ಸುತ್ತಲ ಕಹಿ ಬೇಲಿಗಳ ಕತ್ತರಿಸಿ ಶೃಂಗಾರದ ತರುಲತೆಗಳಿಂದಲಂಕರಿಸಿ ಚಿಗುರಿಸುವ ಬಗೆಬಗೆಯ ಕುಸುಮ ಚಿಮ್ಮಲಿ ನಿತ್ಯ ಚೈತನ್ಯದ ಸಂಭ್ರಮ ಬಸವಳಿಯದಿರಿ ಗಲ್ಲಗಳ ಬಿಗಿದು ಎಲ್ಲರೊಳಗೊಂದಾಗಿ ಬನ್ನಿ ನಕ್ಕು ನಲಿದು ನಾ ನಕ್ಕು ತಾ ನಕ್ಕು ಮುತ್ತು ಸುರಿದು ಖುಷಿಯ ಔತಣ ಹರುಷದಲಿ ಬರಲಿ ಹರಿದು.
ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ
ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ “ನಾಚಿಗೆ ಆಗೋಲ್ವಾ ನಿನಗೆ?” ಇದು ನಾಚುವದು ಅಂದರೆ ಏನು? ಯಾಕೆ, ಹೇಗೆ? ಎಲ್ಲಿ? ಯಾವಾಗ? ಒಂದೂ ಗೊತ್ತಿಲ್ಲದಾಗಲೇ ದಿನನಿತ್ಯ ನಾನೆದುರಿಸಿದ ಪ್ರಶ್ನೆ….. ಉತ್ತರ ತಪ್ಪಿದಾಗ ಗುರುಗಳು ಕೆಲಸ ಬರದಿದ್ದಾಗ ಅಮ್ಮ, ಅಪ್ಪ ಸಂದರ್ಭ ಸಿಕ್ಕಾಗಲೆಲ್ಲ ಉಳಿದವರು ಕೇಳಿ ಕೇಳಿ ಕೊರಡಾಗಿಸಿದ್ದರು.. ನಾಚಿಕೆಯ ತಳಬುಡ ತಿಳಿಯದಿದ್ದರೂ ಕಣ್ಣಂಚಿನಿಂದ ಇಳಿದ ಕಣ್ಣೀರು ಕಾಡಿಗೆಯೊಂದಿಗೆ ಬೆರೆತು ಇನ್ನಿಷ್ಟು ಮುಖ ಕಪ್ಪಾಗಿಸುತ್ತಿತ್ತು. ಈಗ ಹಾಗೇನಿಲ್ಲ.. ನಾಚುವದು ಅಂದರೆ ಏನು ಎಂಬುದರ ಜೊತೆಜೊತೆಗೆ ಯಾವುದಕ್ಕೂ […]
ಭಗವದ್ಗೀತೆ – ವೀರಪಾರ್ಥ! ರಣಹೇಡಿ ಎನಿಸದಿರು!
ಭಗವದ್ಗೀತೆ – ವೀರಪಾರ್ಥ! ರಣಹೇಡಿ ಎನಿಸದಿರು! ನಮ್ಮ ಮೂಲಸ್ವರೂಪವಾದ ಆತ್ಮವೇ ನಮಗೆ ‘ಅರ್ಥವಾಗದ ಒಗಟಾ’ಗಿರುವುದಕ್ಕೆ ನಮ್ಮ ಮನೋಬುದ್ಧಿಗಳ ‘ಕೂಪಮಂಡೂಕಸ್ಥಿತಿ’ಯೇ ಕಾರಣ ಎಂಬ ವಿಚಾರ ನೋಡಿದ್ದೇವೆ. ತತ್ವವಿಚಾರದ ನೆಲೆಯಿಂದ ಮತ್ತೊಮ್ಮೆ ಕರ್ತವ್ಯವಿಚಾರಕ್ಕೇ ಮರಳಿ ಕೃಷ್ಣನು ಅರ್ಜುನನಿಗೆ ಹೀಗೆ ಬುದ್ಧಿ ಹೇಳುತ್ತಾನೆ: ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ| ಧರ್ಮ್ಯಾದ್ಧಿ ಯುದ್ಧಾಚ್ಛೇಯೋsನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ|| ‘ಸ್ವಧರ್ಮವನ್ನು (ಕರ್ತವ್ಯವನ್ನು) ಪರಿಗಣಿಸಿ ಆಲೋಚಿಸುವುದಾದರೂ ಸರಿ, ನೀನು ಈ ರೀತಿ ಕಂಪಿಸುವುದರಲ್ಲಿ ಅರ್ಥವಿಲ್ಲ. ಕ್ಷತ್ರಿಯನಾದವನಿಗೆ ಧರ್ಮಯುದ್ಧಕ್ಕಿಂತ ಶ್ರೇಯಸ್ಕರವಾದದ್ದು ಬೇರೊಂದಿಲ್ಲ.’ ವ್ಯಕ್ತಿಯು ತನಗೂ ತನ್ನ ವೃತ್ತಿ […]