ಜೀವನುತ್ಸಾಹ

ಜೀವನುತ್ಸಾಹ

ವಿನಯ ಶೀಲ ಮರವೇ
ನಮನವು ನಿನ್ನುತ್ಸಾಹಕೆ
ಟೊಂಗೆ ಕತ್ತರಿಸಲು ಚಿಗುರಿ
ಹೊಮ್ಮಿಸುವೆ ಸುತ್ತ ಅಗರು
ಏನೀ ನಿನ್ನ ನಮ್ರ ಭಾವನಾ
ರೆಂಬೆಗಳುರುಳಿಸಲು
ಸಣ್ಣ ಚಿಗುರಿ ನಳನಳಿಸುತ
ನೀಡುವೆ ಕಂಗಳಿಗೆ ಸುಖಕರವು
ರೆಂಬೆ ಕೊಂಬೆಗಳೆರಡು ಉರುಳಿಸಲು
ಟಿಸಿಲೊಡೆದು ಬೆಳೆವೆ
ಎಂಥ ನಿಷ್ಠ ಕಾಯವು
ಕೊಡಲಿ ಇಟ್ಟ ಮನುಜನೊಡೆನೆ
ಇಲ್ಲ ನಿನ್ನಲಿ ದ್ವೇಷ ಭಾವನ
ಮತ್ತೆ ನೆರಳ ನೀಡಿ
ತುಂಬುವ ನೀ ಚೇತನ
ಕಾಂಡಕಿಟ್ಟು ಪೆಟ್ಟು ನಿನ್ನ
ದೇಹ ಅರ್ಧವಾಗಿಸಲು
ಚ್ಯುತಿ ಇಲ್ಲದೆ ಉಸಿರ ನೀವೆ
ಮತ್ತೆ ಪುಟಿವೆ ಸುತ್ತಲು
ಇಲ್ಲ ನಿನಗೆ ನಮ್ಮಲಿ ಮತ್ಸರ
ಬೇರು ಸಹಿತ ಕಿತ್ತರೂನು
ಎಲ್ಲೊ ಅರಳಿ ನಿಲ್ಲುವ ಬದುಕಿನುತ್ಸಾಹವು
ಅತುಲ ನಿನ್ನೀ ಜೀವನೋತ್ಸಾಹವು
ಆಸೆಗಾಗಿ ದುಃಖಿಸುತ
ಕ್ಷಣಿಕ ಕಷ್ಟ ಸಹಿಸದಾತ ಮನುಜ
ಬಗೆವ ಬರಿದೆ ಬಾಳು ನಿರುತ್ಸಾಹವೆನುತ
ಮೋಹ, ಲೋಭ, ಮತ್ಸರದಲಿ
ಸ್ವಾರ್ಥಕಾಗಿ ಉಳಿಯುತ
ಪರರ ಚಿಂತೆ ನಿನಗೆ ಮಾತ್ರ ಮರವೆ
ಜೀವ ಸಂಕುಲವ ಮಡಿಲಲಿ ಪೊರೆಯುವೆ
ತೋರುವೆ ನಿತ್ಯ ಉತ್ಸಾಹವು
ಅನನ್ಯವೀ ಮಾತೃ ಹೃದಯವು.

Leave a Reply