Your Cart

Need help? Call +91 9535015489

📖 Print books shipping available only in India. ✈ Flat rate shipping

ಫುಕುವೊಕ ಎಂಬ ಕೃಷಿ ಸಂತ

ಫುಕುವೊಕ ಎಂಬ ಕೃಷಿ ಸಂತ – ಪ್ರಸನ್ನ ಮಣ್ಣಿನ ಆರೋಗ್ಯವು ಮಣ್ಣಿನ ಮಕ್ಕಳ ಆರೋಗ್ಯವನ್ನು ನಿರ್ಣಯಿಸುತ್ತದೆ ಎಂಬುದು ಅವರ ಬಲವಾದ ನಂಬಿಕೆ.  ನಾವು ಆಧುನಿಕರು, ಆಧುನಿಕತೆ ಹಾಗೂ ಪರಂಪರೆಗಳ ನಡುವಿನ ಸಂಬಂಧವನ್ನು ಜಗಳವಾಗಿ ನೋಡುವುದೇ ಹೆಚ್ಚು. ಅದಿರುವುದೂ ಹಾಗೆಯೇ ಅನ್ನಿ. ಹಿಂದಿನ ಯಾವ ಸಭ್ಯತೆಯಲ್ಲೂ ಇರದಷ್ಟು ತೀವ್ರತರ ಜಗಳ ಹಳತು– ಹೊಸತುಗಳ ನಡುವೆ ಇದೆ ಇಂದು. ‘ಪರಂಪರೆಯಲ್ಲಿ ಎಲ್ಲವೂ ಇತ್ತು, ಪರಂಪರೆ ಭವ್ಯವಾಗಿತ್ತು’ ಎಂದು ಬಲಪಂಥೀಯರು ತಲೆಹರಟೆ ಮಾಡಿದರೆ, ‘ಪರಂಪರೆಯೆಂಬುದು ಮೂಢನಂಬಿಕೆಗಳ ತವರು’ ಎಂದು ವಿಚಾರವಾದಿಗಳು ತರಲೆ […]

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ ಒಂದೆರಡು ದಿನಗಳಿಂದ ಹೊಟ್ಟೆಯಲ್ಲಿ ಚಿಟ್ಟೆಗಳ ಹಾರಾಟ ಇನ್ನಿಲ್ಲದ ಗಲಿಬಿಲಿ.. ಏಕೆಂದು ಕೇಳುವದಿಲ್ಲ ನಾನು ಬಲ್ಲೆ.. “ಇನ್ನು face book ತೆಗೆಯುವದಿಲ್ಲ ಅನವಶ್ಯಕವಾಗಿ ಪ್ರತಿಕ್ರಿಯಿಸುವದಿಲ್ಲ ಎಂದೆಲ್ಲ ವೀರಪ್ರತಿಜ್ಞೆಮಾಡಿ…” ಅರ್ಧದಿನವೂ ಆಗಿಲ್ಲ ಆಗಲೇ ತಟ್ಟೆಯಲ್ಲಿಯ ಅನ್ನ ರುಚಿಸುತ್ತಿಲ್ಲ… ಏನೋ ಅನ್ಯಮನಸ್ಕತೆ.. ನನಗೆ ಗೊತ್ತಾಗಿದೆ “ಬಿಟ್ಟೇಬಿಟ್ಟೆ” ಅಂದುಕೊಂಡಷ್ಟೂ ಬೆನ್ನೇರುವ ಬೇತಾಳವಿದು… ಉತ್ತರವೊಂದಕ್ಕೆ ತೃಪ್ತಿಯಾಗಿ ಇಳಿದು ಹೋಗುವದಿಲ್ಲ… ತಲೆ ಸಹಸ್ರಹೋಳು ಮಾಡಲೇಬೇಕೆಂದು ಕಾದು ಕುಳಿತಿರುವ ಸಂಚು ಇದರದು.. ಕಾದು ನೋಡಬೇಕಾಗಿದೆ ಗೆಲುವು ವಿಕ್ರಮನದೋ? ಬೇತಾಳನದೋ?

ಬದುಕಿಗೆ ಭಗವದ್ಗೀತೆ – ವೇದಾದಿಗಳು ಅನುಭವದ ಬಾಗಿಲಿನವರೆಗೆ ಮಾತ್ರ

ಬದುಕಿಗೆ ಭಗವದ್ಗೀತೆ – ವೇದಾದಿಗಳು ಅನುಭವದ ಬಾಗಿಲಿನವರೆಗೆ ಮಾತ್ರ ‘ವೇದಕರ್ಮಗಳನ್ನು ಭೋಗಪ್ರಾಪ್ತಿಗಾಗಿಯಷ್ಟೇ ಬಳಸುತ್ತ, ಸತ್ವರಜಸ್ತಮೋಗುಣಗಳಿಗೆ ಅಧೀನರಾಗಿರುತ್ತ ಹುಟ್ಟುಸಾವುಗಳ ಚಕ್ರಕ್ಕೆ ಸಿಲುಕಿ ಅಶಾಂತರಾಗುವ ಜನರಂತೆ ನೀನೂ ಆಗಬೇಡ. ತ್ರಿಗುಣಗಳನ್ನು ಮೀರಿದವನಾಗು. ಸಮತ್ವವನ್ನು ಸಿದ್ಧಿಸಿಕೋ’ ಎಂದು ಅರ್ಜುನನಿಗೆ ಕೃಷ್ಣನು ಕಿವಿಮಾತುಗಳನ್ನು ಹೇಳುತ್ತಿದ್ದನಷ್ಟೆ? ತ್ರಿಗುಣಗಳು ನಮ್ಮ ವಿಚಾರ-ವ್ಯಾಪರದ ಮೂಲದ್ರವ್ಯಗಳು. ಅವುಗಳ ಪಾಶದಲ್ಲಿರುವ ತನಕ ನಾವು ‘ಸರ್ವತಂತ್ರಸ್ವತಂತ್ರ’ವಾಗಿ ಆಲೋಚಿಸಲಾರೆವು. ಗುಣಗಳಿಂದ ಮೇಲೇಳದೆ ಸತ್ಯ ಗೋಚರಿಸದು. ಸಮತ್ವವು ಸಿದ್ಧಿಸದು. ಈ ವಾಸ್ತವವನ್ನು ಅರ್ಥಮಾಡಿಸುತ್ತಿದ್ದಾನೆ ಕೃಷ್ಣ. ಒಟ್ಟಿನಲ್ಲಿ ಗುಣಗಳ ವಶರಾಗಿರುವುದರಿಂದಾಗಿಯೂ ಬುದ್ಧಿಯೋಗದ ಅಭಾವದಿಂದಾಗಿಯೂ ಕರ್ಮವು ಬಂಧನಕಾರಿಯಾಗುತ್ತದೆ. […]

ಜ್ಞಾನಕ್ಕೆ ಮಿತಿಯಿಲ್ಲ

ಜ್ಞಾನಕ್ಕೆ ಮಿತಿಯಿಲ್ಲ ಸ್ವಾಮಿ ಶಂಕರಾಚಾರ್ಯರು ಒಮ್ಮೆ ತಮ್ಮ ಶಿಷ್ಯರೊಂದಿಗೆ ಸಮುದ್ರದ ದಂಡೆಯ ಮೇಲೆ ಬಹಳ ದೂರ ನಡೆದಿದ್ದರು. ಮರಳ ದಂಡೆ ಮೇಲೆ ಸ್ವಲ್ಪ ಹೊತ್ತು ಕುಳಿತರು. ಶಿಷ್ಯರು ತಮ್ಮ ಸಂದೇಹಗಳಿಗೆ ಅವರಿಂದ ಉತ್ತರ ಪಡೆದು ತಮ್ಮ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳುತ್ತಿದ್ದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಶಿಷ್ಯನೊಬ್ಬನಿಗೆ ಗುರುಗಳನ್ನು ಹೊಗಳುವ ಆಸೆಯಾಯಿತು. “ತಾವು ಬಹುದೊಡ್ಡ ಜ್ಞಾನಿಗಳು. ಜ್ಞಾನದ ಭಂಡಾರವೇ ನೀವು. ನಿಮ್ಮಂಥ ಜ್ಞಾನಿಗಳು ತುಂಬ ವಿರಳ. ಇದರಿಂದ ನಮಗೆ ತುಂಬ ಹೆಮ್ಮೆಯಾಗಿದೆ. ತಮ್ಮಂಥ ಪ್ರಕಾಂಡ ವಿದ್ವಾಂಸರನ್ನು ಗುರುಗಳಾಗಿ ಪಡೆದಿರುವ ನಾವು […]

ಚಿತ್ರ – ಹಂಪಿ – ಯಾಕಂದ್ರೆ – ಅಂಥದಿಂಥದು

ಚಿತ್ರ – ಹಂಪಿ – ಯಾಕಂದ್ರೆ – ಅಂಥದಿಂಥದು ಮುತ್ತು ರತ್ನಗಳನು ಬಳ್ಳದಿಂದ ಅಳೆದು ಮಾರಿದ ದತ್ತಿ ದಾನ ಧರ್ಮಗಳಿಗೆ ತಮ್ಮ ಧನವ ತೂರಿದ ಆಳರಸರ ವೈಭವದ ಚಿತ್ರ ನೆನೆದಾಗಲೆಲ್ಲ ನೆನಪಾಗುವದು ವಿಜಯನಗರ ವೈಭವ.. ಅದು ಅಂಥದಿಂಥದಲ್ಲ… ತನ್ನದೇ ಆದ ಇತಿಹಾಸ ನಿರ್ಮಿಸಿದ ಕಾಲ.. ಇದೀಗ ಅದು ಹಾಳು ಹಂಪಿ.. ಇವೆರಡನ್ನೂ ನೆನೆದಾಗಲೊಮ್ಮೆ ಯೌವನ, ಮುಪ್ಪುಗಳು ಬೆನ್ನಲ್ಲೇ ನೆನಪಾಗುತ್ತವೆ.. ಯಾಕಂದ್ರೆ ಇಡೀ ಜಗವನ್ನೇ ಕಾಲಬುಡದಲ್ಲಿ ಹಾಕಿಕೊಂಡು ಆಕಾಶದಲ್ಲಿಯೇ ಸದಾ ತೇಲಾಡುವ ಹರಯಕ್ಕೇ ಮುಪ್ಪನ್ನೇ ಮರೆಸಬಲ್ಲ ಯಾವ ಮಾಯೆ […]

ಬದುಕಿಗೆ ಭಗವದ್ಗೀತೆ – ತ್ರಿಗುಣಗಳನ್ನೂ ಮೆಟ್ಟಿ ಮೇಲೇಳು ಪಾರ್ಥ

ಬದುಕಿಗೆ ಭಗವದ್ಗೀತೆ – ತ್ರಿಗುಣಗಳನ್ನೂ ಮೆಟ್ಟಿ ಮೇಲೇಳು ಪಾರ್ಥ ವೇದವು ಭೋಗ-ಯೋಗಗಳೆರಡಕ್ಕೂ ಧರ್ಮದ ಹಾದಿಯನ್ನು ತೋರಿಕೊಡುತ್ತದೆ. ಆದರೆ, ಯೋಗದ ನೆಲೆಗೇರದೆ, ವೇದಕರ್ಮವನ್ನು ಕೇವಲ ಭೋಗಪ್ರಾಪ್ತಿಗಾಗಿ ಬಳಸಿಕೊಳ್ಳುತ್ತ, ಅಷ್ಟಕ್ಕೇ ಪಂಡಿತಂ-ಮನ್ಯರಾಗಿ ಮೆರೆಯುವ ’ವೇದವಾದರತ’ರನ್ನು ಕೃಷ್ಣನು ಖಂಡಿಸಿದ್ದನ್ನು ನೋಡಿದ್ದೇವೆ. ಮಾತನ್ನು ಮುಂದುವರೆಸುತ್ತಾನೆ ಕೃಷ್ಣ- ತ್ರೈಗುಣ್ಯ ವಿಷಯಾವೇದಾ ನಿಸ್ತ್ರೈಗುಣ್ಯೋ ಭವಾರ್ಜುನ – ವೇದ(ಕರ್ಮ)ಗಳು ತ್ರಿಗುಣದ ವಿಷಗಳು. ಹಾಗಾಗಿ ನೀನು ನಿಸ್ತ್ರೈಗುಣ್ಯನಾಗು ಅರ್ಜುನ. ಅರ್ಥಾತ್, ಕರ್ಮಕಾಂಡದಲ್ಲಿ ತ್ರಿಗುಣಗಳದೇ ದರ್ಬಾರು! ಆ (‘ಸತ್ವ-ರಜಸ್-ತಮಸ್’ ಎಂಬ ಮೂರು ಗುಣಗಳ ಪ್ರಧಾನವಾದ) ಕರ್ಮಗಳ ಜಾಲದಿಂದ ಮೇಲೆದ್ದು, ‘ನಿಸ್ತ್ರೈಗುಣ್ಯ’ನಾಗಬೇಕು […]

ಆಸ್ತಿಕ – ನಾಸ್ತಿಕ

ಆಸ್ತಿಕ – ನಾಸ್ತಿಕ ದೇವರಿದ್ದಾನೆ ಎಂಬ ನಂಬಿಕೆ, ವಿಶ್ವಾಸ, ಭಕ್ತಿ ಇರುವವರನ್ನು ಆಸ್ತಿಕರು ಎಂದು, ದೇವರು ಇಲ್ಲ, ಅದು ಬರೀ ಮನುಷ್ಯನ ಕಲ್ಪನೆ, ಎಲ್ಲವೂ ಯಾವುದೋ ಒಂದು ಪ್ರಕೃತಿ ನಿಯಮದಂತೆ ನಡೆಯುತ್ತದೆ, ವಿಧಿ-ದೇವರ ಇಚ್ಛೆ-ಎಂದು ತಿಳಿಯುವುದು ಪುರುಷ ಪ್ರಯತ್ನಕ್ಕೆ – ಪುರುಷ ಸಂಕಲ್ಪಕ್ಕೆ ಅಪಚಾರ ಎನ್ನುವವರನ್ನು ನಾಸ್ತಿಕರು ಎನ್ನುತ್ತೇವೆ. ಆ ಧರ್ಮದವರು ಈ ಧರ್ಮದವರು, ಬಡವರು, ಸಿರಿವಂತರು, ಪುರುಷರು, ಮಹಿಳೆಯರು ಎಂಬ ಯಾವ ಭೇದವಿಲ್ಲದೆ ಮನುಷ್ಯರನ್ನು ಆಸ್ತಿಕರು, ನಾಸ್ತಿಕರು ಎಂದು ವಿಂಗಡಿಸಬಹುದು. ಆಸ್ತಿಕರ ಮನೋಧರ್ಮ, ಆಲೋಚನೆ ರೀತಿಯೇ […]

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ ಕನಸಿನ ರಾಜಕುಮಾರ ಖಂಡಿತ ಬರುತ್ತಾನೆ… ಮಾಯಾ ಕುದುರೆಯಮೇಲೆ ಕೂಡಿಸಿಕೊಂಡು ಯಕ್ಷಿಣಿಯರ ಲೋಕಕ್ಕೆ ಕರೆದೊಯ್ಯುತ್ತಾನೆ ಎಂದೆಲ್ಲ ಕನಸು ಕಂಡವಳದು ಈಗ ಚಿಂತಾಜನಕ ಸ್ಥಿತಿ… ಅತ್ತೂ. ಅತ್ತೂ ಗಂಟಲು ಕಟ್ಟಿದೆ… ಸದಾ ಯಾರದೋ ಬೆದರಿಕೆ ಭಯದಲ್ಲಿ ಮುದುರಿ ಹಿಡಿಮುಷ್ಟಿಯಾಗಿ ಮೂಲೆ ಸೇರಿ ಶೂನ್ಯ ನಿಟ್ಟಿಸುತ್ತ ಏನೋ ತನ್ನಷ್ಟಕ್ಕೇ ತಾನೇ ಗೊಣಗುತ್ತಾಳೆ…

ಬದುಕಿಗೆ ಭಗವದ್ಗೀತೆ – ವೇದಜ್ಞತ್ವದ ಹಾದಿ

ಬದುಕಿಗೆ ಭಗವದ್ಗೀತೆ – ವೇದಜ್ಞತ್ವದ ಹಾದಿ ವೇದವನ್ನು ಸುಮ್ಮನೆ ಭಾಗಶಃ ಪಠಣ, ಮನನ ಸಂಶೋಧನ ಮಾಡುವವರೆಲ್ಲ, ಪರಿಪೂರ್ಣಾರ್ಥದಲ್ಲಿ ’ವೇದಜ್ಞ’ರೆನಿಸಲಾರರು. ವೇದಸಾಹಿತ್ಯದ ಅರ್ಥವನ್ನು ಗ್ರಹಿಸಲು ಸಂಸ್ಕೃತ ಹಾಗೂ ವೇದಾಂಗಗಳ ಕ್ರಮಯುತ ಅಧ್ಯಯನದಿಂದ ಸಿದ್ಧಿಸುವ ವೇದಭಾಷೆ-ಪರಿಭಾಷೆಗಳ ಪರಿಣತಿ ಅತ್ಯವಶ್ಯಕ. ಆದರೆ ಅಷ್ಟರಿಂದಲೇ ಅದರ ಅಧ್ಯಾತ್ಮ ರಹಸ್ಯಭಾಗಗಳು ಗ್ರಾಹ್ಯವಾಗುವುದಿಲ್ಲ ಎನ್ನುವುದೂ ಸತ್ಯ. ವೇದದ ದೇವತಾಸ್ತುತಿ, ಉಪಾಖ್ಯಾನ, ಧರ್ಮಮೀಮಾಂಸೆ, ನೀತಿ, ಕಾವ್ಯಾಂಶಗಳು ಮುಂತಾದ ಭಾಗಗಳು ಅಷ್ಟಷ್ಟು ಅರ್ಥವಾಗುವಂತೆ, ನಿಗೂಢಾರ್ಥವನ್ನು ಧ್ವನಿಸುವ ಆಧ್ಯಾತ್ಮಿಕ ವಿಚಾರಗಳು ಸಾಮಾನ್ಯ ತರ್ಕಕ್ಕೆ ನಿಲುಕಲಾರವು. ಋಷಿತ್ವಕ್ಕೇರಿದ ಮತಿಗೆ ಮಾತ್ರ ನಿಲುಕುವ […]