Your Cart

Need help? Call +91 9535015489

📖 Print books shipping available only in India. ✈ Flat rate shipping

ಆಯ್ಕೆ – ಪರೇಡ – ಪಾದ – ಪಂದ್ಯ

ಆಯ್ಕೆ – ಪರೇಡ – ಪಾದ – ಪಂದ್ಯ LIFE RACE ಬದುಕಿನ ಪಂದ್ಯಕ್ಕೆ ಆಯ್ಕೆಯಾಗಿ ಎಪ್ಪತ್ತು ವರ್ಷಗಳೇ ಸಂದಿವೆ… ಆದಷ್ಟು ಬೇಗನೇ ಗಟ್ಟಿಯಾಗಿ ಪಾದ ಊರಿ ನಿಲ್ಲುವ… ಪಂದ್ಯ ಮುಗಿಸಿ ಸಾಧ್ಯವಾದರೆ ಗೆಲ್ಲುವ… ಕನಸಿನಲ್ಲಿ ಇದ್ದ ನನ್ನನ್ನು ದೈವ ಇನ್ನೂ ಪಂದ್ಯ ಪೂರ್ವ ಪರೇಡನಲ್ಲೇ ಓಡಿಸುತ್ತಿದೆ…

‘ಫಲಹೇತುವಾಗಿ ಕರ್ಮವೆಸಗದಿರು’

‘ಫಲಹೇತುವಾಗಿ ಕರ್ಮವೆಸಗದಿರು’ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು’ ಎನ್ನುವ ತಥ್ಯವನ್ನು ಮನಗಾಣಿಸುತ್ತಿದ್ದ ಶ್ರೀಕೃಷ್ಣನು ಹೀಗೆ ಮುಂದುವರೆಸುತ್ತಾನೆ: ಮಾ ಕರ್ಮಫಲಹೇತುರ್ಭೂಃ – ( ಫಲವನ್ನೇ ಹೇತುವನ್ನಾಗಿಸಿಕೊಂಡು ಕರ್ಮ ಮಾಡಬೇಡ) ‘ಅಲ್ಲ! ಫಲಹೇತುವಿಲ್ಲದೆ ಕರ್ಮ ಮಾಡುವುದು ಹೇಗೆ ಸಾಧ್ಯ ?’ ಅನಿಸಬಹುದು. ಕೃಷ್ಣನು ತಿಳಿಸಹೊರಟಿರುವುದು, ‘ಮಾಡಿದ ಕರ್ಮವು “ಬಂಧನ” ಕ್ಕೆ ಕಾರಣವಾಗಿದೆ, ಹೇಗೆ ಬಂಧನದಿಂದ “ಬಿಡುಗಡೆ” ಯ ಸಾಧನವಾಗಬಹುದು?’ ಎನ್ನುವುದನ್ನು. ಫಲಗಳನ್ನೇ ಆಶಿಸುತ್ತ ಕರ್ಮ ಮಾಡುವುದರಿಂದ ತೃಪ್ತಿಯೂ ಬಾರದು, ನೈಪುಣ್ಯವೂ ವರ್ಧಿಸದು. ಫಲಾಭಿಲಾಷೆಯಿಂದಾಗಿ ತತ್ಸಂಬಂಧಿಯಾದ ಸುಖದುಃಖಗಳು ಜಾಲದಂತೆ ಅವರಿಸಿ ಕಟ್ಟಿಹಾಕುತ್ತವೆ. ಕರ್ಮಚಾಪಲ್ಯವು […]

ಹಿಂದೆ ಮುಂದೆ ನೋಡುವುದು ಹೇಗೆ

ಹಿಂದೆ ಮುಂದೆ ನೋಡುವುದು ಹೇಗೆ ಹಿಂದುಳಿದ ಅನ್ನುವ ಶಬ್ದ ಇತ್ತೀಚಿನ ದಿನಗಳಲ್ಲಿ ಬಹಳ ಕ್ಲಿಷ್ಟ ಮತ್ತು ಹಲವಾರು ಅರ್ಥಗಳನ್ನು. ಮಜಲುಗಳನ್ನು ಪಡೆಯುತ್ತಿರುವ ಜತೆಗೆಯೆ ಸನ್ನಿವೇಶ ಕೇಂದ್ರೀಕೃತವಾಗಿದೆ. ಇತ್ತೀಚಿಗೆ ನಾನು ರಾಯಚೂರಿನಲ್ಲಿ ಮೂರು ನಾಲ್ಕು ದಿನ ಕಳೆಯುವ ಸಂದರ್ಭ ಬಂದಾಗ ಹಿಂದುಳಿದ ಶಬ್ದದ ಹತ್ತು ಹಲವು ಮುಖಗಳು ಗೋಚರಿಸಿದವು. ಹಿಂದೆ ಉಳಿದ ಅಂದರೆ ಯಾವುದರಲ್ಲಿ ಹಿಂದೆ ಉಳಿದ ಅನ್ನುವದು ಮುಖ್ಯವಾಗುತ್ತದೆ. ಎಲ್ಲರೂ ನಡೆಯುತ್ತಲೋ, ಓಡುತ್ತಲೋ ಹೊರಟಾಗ ಎಲ್ಲರೂ ಒಂದೇ ಲೈನಿನಲ್ಲಿ, ಒಂದೇ ವೇಗದಲ್ಲಿ, ಒಂದೇ ಸನ್ನಿವೇಶ, ಒಂದೇ ನಿಯಮಾವಳಿಗಳ […]

ಕಟ್ಯಾರ್‌ ಕಾಳಜತ್‌ ಘುಸಲಿ

ಕಟ್ಯಾರ್‌ ಕಾಳಜತ್‌ ಘುಸಲಿ ಭಾರತದಲ್ಲಿ ಸಂಗೀತ ಪ್ರಧಾನ ನಾಟಕಗಳ ದೊಡ್ಡ ಪರಂಪರೆಯೇ ಇದೆ. ಅದರಲ್ಲಿಯೂ ಕಂಪೆನಿ ನಾಟಕಗಳಲ್ಲಂತೂ ಪ್ರಮುಖ ಪಾತ್ರಧಾರಿಗಳಿಗೆ ಅಭಿನಯಕ್ಕಿಂತ ಗಾಯನಕಲೆಯೇ ಹೆಚ್ಚು ಮುಖ್ಯವಾಗಿತ್ತು. ಹಾಗೆಯೇ ರಂಗಭೂಮಿಯಲ್ಲಿ ಯಶಸ್ಸು ಗಳಿಸಿದ ನಾಟಕಗಳನ್ನು ಸಿನಿಮಾ ಮಾಧ್ಯಮಗಳಿಗೆ ಅಳವಡಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ. ಆದರೆ ಹೀಗೆ ರಂಗಭೂಮಿ ಮತ್ತು ಸಿನಿಮಾ ಎರಡೂ ಮಾಧ್ಯಮಗಳಲ್ಲಿ ಯಶಸ್ಸು ಗಳಿಸಿದ ಪ್ರಯೋಗಗಳು ಮಾತ್ರ ವಿರಳ. ಮರಾಠಿಯ ‘ಕಟ್ಯಾರ್‌ ಕಾಳಜತ್‌ ಘುಸಲಿ’ ಹೀಗೆ ನಾಟಕ ಮತ್ತು ಸಿನಿಮಾ ಎರಡೂ ಮಾಧ್ಯಮಗಳಲ್ಲಿ ಅದ್ಭುತ ಯಶಸ್ಸನ್ನು ಗಳಿಸಿರುವ […]

ಕಾಯ ಹರಿಯಿತು, ಸೂತಕ ಹರಿಯಲಿಲ್ಲ

ಕಾಯ ಹರಿಯಿತು, ಸೂತಕ ಹರಿಯಲಿಲ್ಲ ಈ ಜಗತ್ತು ಹುಟ್ಟಿದಾಗಿನಿಂದ ಇಂದಿನವರೆಗೆ ಅನೇಕ ಅವತಾರ ಪುರುಷರು, ಋಷಿಗಳು, ಸಂತರು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಹೋರಾಡಿದವರನ್ನು ನಾವು ಮೇಲಿಂದ ಮೇಲೆ ಸ್ಮರಣೆ ಮಾಡುತ್ತೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ಅವರ ಜೀವನ ಮತ್ತು ಸಂದೇಶಗಳು ಸಮಾಜದ ಮೇಲೆ ನಿರಂತರ ಪ್ರಭಾವ ಬೀರುತಿರುತ್ತವೆ. ಅಂತಹ ಪ್ರಭಾವಿ ಪುರುಷರಲ್ಲಿ ಕೆಲವು ತಿಂಗಳುಗಳ (ಜುಲೈ 27-2017) ಹಿಂದೆ ನಮ್ಮನ್ನಗಲಿದ ಮಹಾತ್ಮ ಎಪಿಜೆ ಅಬ್ದುಲ್ ಕಲಾಂ ಒಬ್ಬರು. ಅವರು ಭಾರತದ ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಕೆಲಸಗಾರರಿಗೆ ಸ್ಫೂರ್ತಿ […]

ಕರ್ಮಣ್ಯೇವಾಧಿಕಾರಸ್ತೇ

ಕರ್ಮಣ್ಯೇವಾಧಿಕಾರಸ್ತೇ ವೇದಜ್ಞಾನವೂ ಕರ್ಮಗಳೂ ಅನುಭವದಲ್ಲೇ ಪರ್ಯವಸಾನವಾಗಬೇಕೇ ಹೊರತು “ಕರ್ಮಠತ್ವ”ಕ್ಕೆ ಜಾರಬಾರದು’ ಎನ್ನುವ ನೀತಿಯನ್ನು ಕೃಷ್ಣನು ಮನವರಿಕೆ ಮಾಡುಕೊಡುತ್ತಿದ್ದಷ್ಟೆ? ಹಾಗಾದರೆ, ಕರ್ಮಗಳನ್ನು ಸುತರಾಂ ಮಾಡಲೇಬೇಕಿಲ್ಲ? ಎನ್ನುವುದು ಕೃಷ್ಣನ ಮಾತಿನ ಅರ್ಥವೇ? ಕೃಷ್ಣನ ಮುಂದಿನ ಮಾತೇ ಇದಕ್ಕೆ ಸ್ಪಷ್ಟತೆ ಕೊಡುತ್ತದೆ. ಕರ್ಮಣ್ಯೇವಾಧಿಕರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋsಸ್ತ್ಯ ಕರ್ಮಣಿ ||(ಭ.ಗೀ.:2.47) ನಿನಗೆ ಕರ್ಮದ ಮೇಲೆ ಮಾತ್ರವೇ ಅಧಿಕಾರ, ಫಲಗಳ ಮೇಲಲ್ಲ. ಹಾಗಾಗಿ ಫಲಕಾಗಿ ಕರ್ಮ ಮಾಡಬೇಡ. ಕರ್ಮವನ್ನೇ ಬಿಟ್ಟುಬಿಡಲೂ ಬೇಡ. ಕರ್ಮಣಿ ಏವ […]

ಬಾಲ್ಯದ ನೆನಪಿನಂಗಳದಲ್ಲಿ.

ಬಾಲ್ಯದ ನೆನಪಿನಂಗಳದಲ್ಲಿ. ಬಾಲ್ಯ ಅನ್ನೊದೇ ಹಾಗೆ! ಆಗಾಗ ಮರುಕಳಿಸುತ್ತಲೇ ಇರುತ್ತದೆ. ಎಷ್ಟೇ ವಯಸ್ಸಾದವರಾದರೂ ಯುವಕ, ಯುವತಿಯರೂ ಬಾಲ್ಯದ ನೆನಪಿನಂಗಳದಲ್ಲಿ ಈಜದೇ ಇರಲು ಸಾಧ್ಯವಿಲ್ಲ. ಒಂದು ಅತ್ಯಂತ ಸಿಹಿ ಘಟನೆ ಅಥವಾ ಅತ್ಯಂತ ಸಿಹಿ ಘಟನೆಗಳು ಅಚ್ಚಳಿಯದೆ ಉಳಿಯುವಂತಹದು. ಹೌದು, ನಾವು ಆಗಾಗ ಚೈತನ್ಯ ವೃದ್ಧಿಸಿಕೊಳ್ಳಲು ಈ ಬಾಲ್ಯದ ನೆನಪು ಅತ್ಯಂತ ಮೌಲ್ಯಯುತವಾದದ್ದು. ನಮ್ಮ ಮಕ್ಕಳ ಬಾಲ್ಯದ ಆಟ, ಒಡನಾಟ, ವರ್ತನೆಗಳನ್ನು ನೋಡಿದಾಗ, ಒಬ್ಬಂಟಿಯಾಗಿ ಕುಳಿತಾಗ ನಮ್ಮ ಮನಸ್ಸು ಬಾಲ್ಯದ ನೆನಪಿನೆಡೆ ವಾಲುತ್ತದೆ. ಬಾಲ್ಯದ ಶಾಲಾದಿನ, ಗೆಳತಿಯರೊಂದಿಗೆ ಕಳೆದ […]

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ ವಿದ್ಯಾರ್ಥಿಗಳ ಪ್ಲೇಸ್‍ಮೆಂಟ್‍ನವರೆಗೆ ಆದಾಯ ತರುವ ಪ್ರವೇಶ ಫೀಯಿಂದ ಕೊಡುವ ವೇತನ ವೆಚ್ಚದವರೆಗೂ ಎಲ್ಲವೂ ಅದ್ವಾನವಾಗಿರುವಾಗ, ಈಗ ಒಮ್ಮಿಂದೊಮ್ಮೆಲೆ ಸುಧಾರಣೆಯ ಪರ್ವವಾಗಿ ಎಲ್ಲವೂ ಸಮರೋಪಾದಿಯಲ್ಲಿ ನಡೆಯುತ್ತಿರುವುದು ಚುನಾವಣೆ ಸಮೀಪಿಸುತ್ತಿತುವಾಗ ಅನ್ನುವದು ಕಾಕತಾಳೀಯವಾದರೂ ಸತ್ಯವೇ ಸರಿ. ರಾಜ್ಯದಲ್ಲಿ ಹೊಸದಾಗಿ ವಿಶ್ವವಿದ್ಯಾಲಯಗಳ ಕಾನೂನು ಯಾವುದೇ ಜ್ಞಾನಪೂರಕ ಚರ್ಚೆಯಿಲ್ಲದೆ ಎರಡೂ ಜವಾಬ್ದಾರಿಯುತವಾದ ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿ ಹೊರನಡೆದಾಗ ಇಂತಹ ಕಾನೂನು ಬೇರೆ ರಾಜ್ಯದಲ್ಲಿ ಇರದೇ ಇರುವಾಗ ಮುಂಚಿತವಾದ ಯಾವುದೇ ಚರ್ಚೆಗಳಲ್ಲದೇ ಧ್ವನಿಮತದಿಂದ ಸ್ವೀಕೃತವಾಯಿತು. ಹಿಡಿದ ಹಠ ಸಾಧಿಸಿದೆ […]

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ ಅಕ್ಟೋಬರ್ 14 ಬೇಂದ್ರೆಯವರಿಗೆ ಸಾಮಾಜಿಕ ಕಳಕಳಿ ಭಾಳ ಇತ್ತು. ಪ್ರತಿ ನಿತ್ಯದ ಆಗು ಹೋಗುವ ಬಗ್ಗೆ ಕೇಳುತ್ತಿದ್ದರು, ನೋಡುತ್ತಿದ್ದರು, ಮನೆಗೆ ಬಂದ ಅತಿಥಿಗಳೊಬ್ಬರು ‘ಇವತ್ತಿನ ಪೇಪರ ಸುದ್ದಿ ಓದಿರಿಲ್ಲೋ? ಕಲಬೆರಿಕಿ ಆಹಾರ ಸೇವನೆಯಿಂದ ಎಷ್ಟ ಮಂದಿ ಸತ್ತಾರ’ ಅಂದ. ತತ್‍ಕ್ಷಣ-ಬೇಂದ್ರೆಯವರು ಹೇಳತೇನಿ ಕೇಳು ಅದು ಒಂದು ಕಥೀ- ಒಂದು ದವಾಖಾನೆಯೊಳಗ 12 ಮಂದಿ ರೋಗಿ ಇದ್ದರು. ಡಾಕ್ಟರ ಅವರನ್ನು ನೋಡಿದರು. ಔಷಧ ಬರದು, ಆ ಪ್ರಕಾರ ಔಷಧ ಕೊಡಲಿಕ್ಕೆ […]