Your Cart

Need help? Call +91 9535015489

📖 Print books shipping available only in India. ✈ Flat rate shipping

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ ‘ಬುದ್ಧಿಯೋಗವನ್ನಾಶ್ರಯಿಸು’ ಎಂದು ನಿರ್ದೇಶಿಸುತ್ತಿದ್ದ ಕೃಷ್ಣನು ಹೀಗೆ ಮುಂದುವರೆಸುತ್ತಾನೆ- ಬುದ್ಧಿಯುಕ್ತೋ ಜಹಾತೀಹ ಉಭೇಸುಕೃತದುಷ್ಕೃತೇI ತಸ್ಮಾದ್ಯೋಗಾಯಯುಜ್ಯ ಸ್ವಯೋಗಃ ಕರ್ಮಸು ಕೌಶಲಮ್ II ಬುದ್ಧಿಯುಕ್ತನಾದವನು ಸುಕೃತ-ದುಷ್ಕೃತಗಳನ್ನು ಇಹದಲ್ಲೇ ತ್ಯಜಿಸುತ್ತಾನೆ. ನೀನು ಯೋಗಕ್ಕಾಗಿ ಪ್ರಯತ್ನಿಸು. ಕರ್ಮಕೌಶಲವೇ ಯೋಗ. ಬುದ್ಧಿಯುಕ್ತನು ಎಂದರೆ ಬುದ್ಧಿಯೋಗವನ್ನರಿತ ಜ್ಞಾನಿ, ಸುಕೃತ ಎಂದರೆ ಸತ್ಕಾರ್ಯಗಳಿಂದ ಬರುವ ಪುಣ್ಯಫಲ, ದುಷ್ಕೃತ ಎಂದರೆ ದುಷ್ಕರ್ಮಗಳಿಂದ ಬರುವ ಪಾಪಫಲ, ಇಹ ಎಂದರೆ ಭೌತಿಕ ಅಥವಾ ವ್ಯಾವಹಾರಿಕದ ನೆಲೆ. ಸುಕೃತ-ದುಷ್ಕೃತಗಳನ್ನು ಇಹದಲ್ಲಿ ತ್ಯಜಿಸುವುದು ಎಂದರೆ […]

ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು

ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು “ನೀನು ಹಾರಲು ಅಸಮರ್ಥ ಎಂದು ಸಂಶಯಪಟ್ಟರೇ ನೀನೆಂದಿಗೂ ಹಾರುವದೇ ಇಲ್ಲ” “ಮಗು, ನೀನು ಹೆಚ್ಚು ಓದಿದಂತೆ ಹೆಚ್ಚು ತಿಳಿದುಕೊಳ್ಳುತ್ತಿ. ಹೆಚ್ಚು ತಿಳಿದುಕೊಂಡಂತೆ ನೀ ಜಗತ್ತನ್ನು ಎದುರಿಸುವ ಶಕ್ತಿ ಪಡೆಯುತ್ತಿ” ಕೆಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಒಂದು ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಿತು. ನಾನು ಹೋಗಿ ನೋಡಿ ಅನುಭವಿಸದಿದ್ದರೂ, ಕಾರ್ಯಕ್ರಮ ಪಟ್ಟಿ, ಅಧ್ಯಕ್ಷರ ಮಾತುಗಳು, ಅತಿಥಿಗಳ ಮಾತುಗಳು ಎಲ್ಲವೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕಾರಣ ಹಾಗೂ ಭಾಗವಹಿಸಿದ ಲೇಖಕರ ಬಗ್ಗೆ ಕೊಂಚ ಕೊಂಚವಾದರೂ ಗೊತ್ತಿದ್ದ […]

ಮಹತ್ವಾಕಾಂಕ್ಷೆಯ ಮೀಮಾಂಸೆ ಬರೆಹ

ಮಹತ್ವಾಕಾಂಕ್ಷೆಯ ಮೀಮಾಂಸೆ ಬರೆಹ ಲೇಖಕ ಗಿರಿ (ಮಹಾಬಲಗಿರಿ ಎನ್. ಹೆಗಡೆ) ಅವರು ನಿಡುಗಾಲ ಕ್ಯಾಲಿಫೋರ್ನಿಯಾದ ‘ಸ್ಟೇಟ್ ಯೂನಿವರ್ಸಿಟಿ’ಯಲ್ಲಿ ಮಕ್ಕಳ ಮತ್ತು ವಯಸ್ಕರ ವಾಕ್ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತ, ತತ್ಸಂಬಂಧದ ರೋಗ ಲಕ್ಷಣಗಳ ಬಗೆಗೆ ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಚಿಸಿದವರು. ಇದರೊಂದಿಗೆ ಗಿರಿ ಅವರು 1970ರ ದಶಕದಲ್ಲಿ ಬರೆದ ‘ಗತಿಸ್ಥಿತಿ’ ಕಾದಂಬರಿಯಿಂದಲೂ ಪ್ರಸಿದ್ಧರಾದವರು. ಈಗಲೂ ಅವರು ವಾಸವಿರುವುದು ಅಮೆರಿಕದ ಕ್ಲೋವಿಸ್‌ನಲ್ಲಿ. ಗಿರಿ ಅವರು ಇದೇ ಮೊದಲ ಬಾರಿಗೆ ವರ್ತನ ವಿಜ್ಞಾನವನ್ನು ಸಾಹಿತ್ಯ ಮೀಮಾಂಸೆಗೆ ಒಗ್ಗಿಸುವ ಪ್ರಯತ್ನದ […]

ಋಗ್ವೇದ ಸ್ಫುರಣ

ಋಗ್ವೇದ ಸ್ಫುರಣ ಲೇಖಕ : ಎಚ್‌ ಎಸ್‌ ವೆಂಕಟೇಶಮೂರ್ತಿ ಪ್ರಕಾಶಕರು : ಅಭಿನವ, ನಂ. 17/18–2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು – 40 ಪ್ರಕಟವಾದ ವರ್ಷ : .2017 ಪುಟ : 160 ರೂ :  200 ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬುದು ವೇದಗಳ ಬಗ್ಗೆಯೂ ಗಾದೆಗಳ ಬಗ್ಗೆಯೂ ಹುಟ್ಟಿಕೊಂಡಿರುವ ಗಾದೆ. ನಿತ್ಯಜೀವನದ ಅನುಭವಗಳ ಮೂಸೆಯಿಂದ ಮೂಡಿಬಂದ ಜೀವನತತ್ವಗಳ ಸರಳ ರೂಪಕಗಳಂತಿರುವ ಗಾದೆಗಳು ಸುಳ್ಳಾಗುವ ಮಾತೇ ಇಲ್ಲ ಎಂಬುದನ್ನು ನಿರೂಪಿಸಲು ಜನಪದರು ಬಳಸಿಕೊಂಡಿರುವ ಉದಾಹರಣೆ ವೇದ. ಅಂದರೆ, ವೇದ ಸುಳ್ಳಾಗುವ […]

ಸಂದಿ – ಪ್ರತಿಮೆ – ಅನುಕೂಲಸಿಂಧು – ರಣವೀಳ್ಯ

ಸಂದಿ – ಪ್ರತಿಮೆ – ಅನುಕೂಲಸಿಂಧು – ರಣವೀಳ್ಯ ಇಳಿಬಿಟ್ಟ ಪರದೆಗಳ ಪದರುಗಳಲ್ಲಿ, ಸಂದಿ ಗೊಂದಿಗಳಲ್ಲಿ, ಚಂದಕ್ಕಿಟ್ಟ ಪ್ರತಿಮೆಗಳ ಹಿಂದುಮುಂದು, ಹಗಲೆಲ್ಲ ಅಡಗಿಕೊಂಡು ಅನುಕೂಲಸಿಂಧು ನೋಡಿ ಹೊರಬಿದ್ದು ಕಂಡಕಂಡ ಹಾಗೆ ಆಕ್ರಮಣ ಮಾಡಿ ಕೈಗೆ ಸಿಗದೇ ಆಟವಾಡಿಸುತ್ತಿರುವ ಸೊಳ್ಳೆ ದಂಡಿನಮೇಲೆ ಯುದ್ಧಸಾರಲು ರಣವೀಳ್ಯಪಡೆದಿದ್ದೇನೆ……… ಏನಕೇನ ಪ್ರಕಾರೇಣ ಗೆಲುವು ನನ್ನದಾಗಲೇಬೇಕು…. ಪೊಡಮಡುವೆ…. ಆಶೀರ್ವದಿಸಿ…..

ಹಕ್ಕಿ ಹಾರುತಿದೆ ನೋಡಿದಿರಾ

ಹಕ್ಕಿ ಹಾರುತಿದೆ ನೋಡಿದಿರಾ ದೇಶದಾದ್ಯಂತ 800 ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದು ಮಾಡುವ ಬಗ್ಗೆ ಪತ್ರಿಕಾ ವರದಿಗಳು ಸಾಕಷ್ಟು ಬಂದಿವೆ. ಕೂಲಂಕುಷವಾಗಿ ಪರಿಶೀಲಿಸಿದರೆ ಕೆಲವು ಪಾಲಿಟೆಕ್ನಿಕ್ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿಯ ಕೆಲವು ಕೋರ್ಸುಗಳು ಮಾತ್ರ ಮುಚ್ಚಲು ಆದೇಶಿಸಲಾಗಿದೆ. ಪೂರ್ತಿಯಾಗಿ ಮುಚ್ಚುವುದು ಅಲ್ಲ, ಯಾವ ಕೋರ್ಸುಗಳಿಗೆ ಪ್ರವೇಶ ಕಡಿಮೆ, ನಿಕೃಷ್ಟವಾಗಿವೆ ಅವುಗಳಿಗೆ ಮಾತ್ರ. ಇದು ಒಂದು ರೀತಿಯಿಂದ ಮ್ಯಾನೇಜ್ಮೆಂಟ್ಗಳಿಗೆ ವರವೇ. ಸರ್ಕಾರಿ ವ್ಯವಸ್ಥೆಯಿದ್ದಲ್ಲಿ ಸಾಧ್ಯವಾದ ಆಂತರಿಕ ವರ್ಗಾವಣೆ ಇಲ್ಲದಿದ್ದರೇ ಅವರವರ ಇಚ್ಛೆಗೆ ಸಂಬಂಧಿಸಿದ ಹಾಗೆ. ಇನ್ನೂ ಈ ವರ್ಷದಿಂದ ಇಂಟರ್ನಶಿಪ್ […]

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ ‘ಜೀವನದ ಆಗು ಹೋಗುಗಳಿಗೆ ನಾವು ಒಗ್ಗಿಕೊಳ್ಳುತ್ತ ಅಲ್ಲಿನ ಸಿದ್ಧ್ಯಸಿದ್ಧಿಗಳ ವಿಷಯದಲ್ಲಿ ಸಮವಾಗಿ ಇರಬೇಕು’ ಎನ್ನುವ ಪಾಠವನ್ನು ಕೃಷ್ಣನು ಕಲಿಸಲಾರಂಭಿಸಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ – ಸಮತ್ವಂ ಯೋಗ ಉಚ್ಯತೆ(ಸಮತ್ವವೇ ’ಯೋಗ’). ‘ಯೋಗ’ವೆಂದರೆ ಯಾವುದೋ ‘ಬೆರಗುಗೊಳಿಸುವ ಸಾಧನಾಕ್ರಮವಾಗಿರಬೇಕು’ ಎಂದೇ ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಎಂತೆಂತಹ ಸಾಧನೆಗಳನ್ನೂ ಒಂದಷ್ಟು ಪರಿಶ್ರಮ ಹಾಗೂ ಛಲಬಲಗಳಿಂದ ಮಾಡಿಬಿಡಬಹುದು, ಆದರೆ ಎಲ್ಲಕ್ಕಿಂತಲೂ ಕಷ್ಟತಮ ಸಾಧನೆ ಯಾವುದು ಗೊತ್ತೆ? ಜೀವನದ ಗತಿಗಳನ್ನೆಲ್ಲ ಸಾಕ್ಷೀಭಾವದಿಂದ ಕಾಣುತ್ತ, ಕಲಿಯುತ್ತ, ಏಳುಬೀಳುಗಳೆಲ್ಲದರಲ್ಲೂ […]

ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ

ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ ಲೇಖಕ : ಸುಮಂಗಲಾ ಎಸ್‌. ಮುಮ್ಮಿಗಟ್ಟಿ ಪ್ರಕಾಶಕರು : ನವಕರ್ನಾಟಕ ಪ್ರಕಾಶನ ರೂ : 135 ಅಂಡಮಾನ್‌ ದ್ವೀಪದ ಕಿರುಪರಿಚಯ ಕೊಡುತ್ತಲೇ ಪ್ರವಾಸಿಗನ ಕಣ್ಣಿನಲ್ಲಿ ದ್ವೀಪದ ಒಟ್ಟಂದವನ್ನು ಹಿಡಿಯುವ ಪ್ರಯತ್ನ ಈ ಪುಸ್ತಕವಾಗಿದೆ. ಕೇವಲ ಭೌಗೋಳಿಕ ವಿವರ, ಇತಿಹಾಸ, ಸಂಸ್ಕೃತಿ ಇಂತಹ ವಿವರಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಪುಸ್ತಕದ ಓದು ಅಂಡಮಾನ್‌ ಪರ್ಯಟನೆಯ ಅನುಭವ ಕಟ್ಟಿಕೊಡುತ್ತದೆ. ಸುಂದರ ವರ್ಣಚಿತ್ರಗಳು, ಮನ ನಡುಗುವಂತೆ ಮಾಡುವ ಕಾಲಾಪಾನಿಯ ಸೆಲ್ಯುಲರ್‌ ಜೈಲು, ಮೈ ನವಿರೇಳಿಸುವಂತಹ ಸಮುದ್ರ ತಡಿಯ […]

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು ‘ಯೋಗದಲ್ಲಿ ಪ್ರಜ್ಞೆಯನ್ನು ಕೇಂದ್ರೀಕರಿಸಿ, ಫಲಗಳಿಗೆ ಸಂಬಂಧಗಳಿಗೆ ಅಂಟಿಕೊಳ್ಳದೆ ಕರ್ಮವನ್ನು ಮಾಡು’ ಎಂದು ಕೃಷ್ಣನು ಕರ್ಮಕೌಶಲದ ರಹಸ್ಯವನ್ನು ಹೇಳುತ್ತಿದ್ದ. ಕರ್ಮದ ಹಾದಿಯಲ್ಲಿ ಬರುವ ವ್ಯಕ್ತಿ-ವಸ್ತು-ಲಾಭಾಲಾಭಗಳ ಬಗ್ಗೆ ಬೆಳೆಯುವ ಮಮಕಾರ-ವ್ಯಾಮೋಹಗಳು ನಮ್ಮನ್ನು ತಪ್ಪು ನಿರ್ಣಯಗಳಿಗೆ ಎಳೆಯುತ್ತವೆ. ಪರಿಣಾಮವನ್ನೂ ನೆಮ್ಮದಿಯನ್ನೂ ಕೆಡಿಸುತ್ತದೆ! ‘ಇವರು ಬೇಕಾದವರು’, ‘ಇವರು ಬೇಡದವರು’, ‘ಎಷ್ಟೇ ತಪ್ಪಾಗಲಿ, ಇವರನ್ನು ಹೇಗೆ ಬಿಟ್ಟುಕೊಡಲಾದೀತು?’, ‘ಅವರನ್ನು ಸರ್ವಥಾ ಸಹಿಸಬಾರದು’ ಎಂಬ ಅಭಿಪ್ರಾಯಗಳನ್ನು ಹುಟ್ಟಿಸಿ, ಸಂಸಾರದಲ್ಲೂ ನೆರೆಕೆರೆಯಲ್ಲೂ ಉದ್ಯೋಗಕ್ಷೇತ್ರದಲ್ಲೂ ಸಂಘಸಂಸ್ಥೆಗಳಲ್ಲೂ ಭೇದಭಾವಗಳ ಬಿರುಕನ್ನು ಮೂಡಿಸುತ್ತವೆ. ನನ್ನ […]