Your Cart

Need help? Call +91 9535015489

📖 Print books shipping available only in India. ✈ Flat rate shipping

ಪಂಜರದ ಗಿಳಿ

ಪಂಜರದ ಗಿಳಿ ಪಂಜರದೊಳೊಂದು ಗಿಳಿ ಮೂಕ ವೇದನೆಯಿಂದಲಿ ಬಾನ ತುದಿಯನೆ ನೋಡುತಲಿರೆ ಬಳಗಗಳೆದರ ಕೂಡಿ ಬಾನಲಿ ಹಾರುತಿರೆ ಒಂಟಿ ತಾನೆನ್ನುವ ಭಾವದಲಿ ಮುಗಿಲ ತಾಯಿಯ ಸ್ಮರಿಸಿ ದುಃಖದಲಿ ಗಿಡ, ಮರ, ಪೊಟರೆ ಗೂಡು ಆಹಾ! ಎಂಥ ಸುಖಕರ ಆ ಜೀವನವು. ಪಂಜರದೊಳು ನಾನಿಂದು ಕಾನನದ ಸೊಬಗು ಕಾಣೆ ವನದ ಹಣ್ಣು, ಪುಷ್ಪ ಕಾಣೆ ಹಸಿರು ಆನಂದದ ಸಿರಿ ಕಾಣೆ ಬೇಡದ ಭಕ್ಷ್ಯ ನಿತ್ಯ ಶಬ್ದಕೆ ರೋಸಿದೆ ಮನ ಕಲ್ಮಷ ಗಾಳಿ, ನೀರು ಬಂದಿಹೆ ನಾನಾವ ನರಕಕ್ಕಿಂದು ನೆನಪಾಗಿದೆ ಹುಳ, […]

ದಾರುಣ – ಬಡಗಿ – ಲಾಯ – ಪಾಳೆಯ

ದಾರುಣ – ಬಡಗಿ – ಲಾಯ – ಪಾಳೆಯ ಯುದ್ಧದಲ್ಲಿ ದಾರುಣವಾಗಿ ಗಾಯಗೊಂಡು ಲಾಯವನ್ನು ಕಾಯಂ ಆಗಿ ಸೇರಿದ ಕುದುರೆಯಂತಾಗಿದೆ ಈ ಮನಸ್ಸು… ಯಾವದಾದರೂ ಪಾಳೆಯಗಾರ ಕರುಣೆತೋರಿ ಆರೈಕೆಮಾಡಿ ಎದ್ದುನಿಲ್ಲುವಂತೆ ಮಾಡುತ್ತಾನೋ .. ಇಲ್ಲ……… ಕಟುಕ ಬಡಗಿಯೊಬ್ಬ ಪುನಃ ಏಳದಂತೆ ಉತ್ಸಾಹ , ಶಕ್ತಿಗಳಿಗೆ ‘ಕೊನೆಯಮೊಳೆ’ ಹೊಡೆಯುತ್ತಾನೋ ಆತಂಕ ನನಗೆ..

ಅಂಟಿಕೊಳ್ಳದೆ ಕರ್ಮ ಮಾಡು

ಅಂಟಿಕೊಳ್ಳದೆ ಕರ್ಮ ಮಾಡು ‘ಕರ್ಮದ ಮೇಲೆ ಮಾತ್ರವೇ ನಿನಗೆ ಹಿಡಿತ, ಫಲದ ಮೇಲಲ್ಲ, ಫಲವನ್ನೇ ಬಯಸುತ್ತ ಕರ್ಮ ಮಾಡಬೇಡ, ಹಾಗೆಂದು, ಕರ್ಮವನ್ನೇ ಮಾಡದೇ ಇರಬೇಡ’ ಎಂದು ‘ಕರ್ಮಣ್ಯೇವಾಧಿಕಾರಸ್ತೇ’ – ಶ್ಲೋಕದ ಮೂಲಕ ಗೀತಾಚಾರ್ಯನು ವಿವರಿಸಿದ್ದ. ಹಾಗಾದರೆ ಕರ್ಮವನ್ನು ಇನ್ನಾವ ಭಾವದಿಂದ ಮಾಡಬೇಕು? ಧ್ಯೇಯವಿಲ್ಲದೆ ಕರ್ಮವನ್ನು ಮಾಡುವ ಉತ್ಸಾಹ-ಪ್ರೇರಣೆಗಳಾದರೂ ಹೇಗೆ ಸಿಕ್ಕಾವು? ಎಂದೆನಿಸುವುದು ಸಹಜವೇ. ನಿಜ ಧ್ಯೇಯವೊಂದಿರಲೇಬೇಕು. ಆದರೆ ಆ ಧ್ಯೇಯವು ಯಾವುದಾಗಿದ್ದರೆ ಶ್ರೇಯಸ್ಸು? ಕೃಷ್ಣನು ಹೇಳುತ್ತಾನೆ: ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ| ಸಿದ್ಧ್ಯಸಿದ್ಧ್ಯೋಃ ಸಮೋ […]

ನನ್ನದೂ ಒಂದು ಜೀವ

ನನ್ನದೂ ಒಂದು ಜೀವ “ಎಷ್ಟು ದಿನ ಆಯ್ತು ನನ್ನ ಬಟ್ಟೆ ತೊಳೆಯದೆ ಹಾಗೇ ಉಳಿದಿದೆ. ನನಗೆ ಬೇಕಾದ ಬಟ್ಟೆನೆ ಇಲ್ಲ ಇವತ್ತು” ಗಂಡನ ಗೊಣಗಾಟ. “ಅಮ್ಮ ನನ್ನ ಶೂ ಎಲ್ಲಿಟ್ಟೀ?” ಸಿಗತಾನೇ ಇಲ್ಲ. ಸಾಕ್ಸೂ ತೊಳೆದಿಲ್ಲ ವಾಸನೆ ಬರ್ತಾ ಇದೆ. ತೊಳೆದ ಸಾಕ್ಸು ಎಲ್ಲವ್ವ? ಮಗನ ತೊಳಲಾಟ. “ಅಮ್ಮಾ ನಂಗೆ ಕಾಫಿನೇ ಬೇಕು.. ಮಗನ ಚೀರಾಟ. ‘ನನಗೆ ಚಹಾ ಬೇಕು’ ಅವ್ನಿಗಾದ್ರೆ ಹೇಳಿದ್ದು ಮಾಡಿಕೊಡ್ತಿಯಲ್ಲ. “ಅವ್ವಾ ನಂಗೆ ಸ್ವಲ್ಪ ಗುಳಿಗೆ ಕೊಡ್ತೀ ಏನೆ? ಈ ಹುಡುಗರು ಮಾತೇ […]

ಜೋಗದ ಸಿರಿಜ್ಞಾನ ಜಲಪಾತ

ಜೋಗದ ಸಿರಿಜ್ಞಾನ ಜಲಪಾತ “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದರಾಗ ನೋಡು ಒಮ್ಮೆ ಜೋಗದ್ಗುಂಡಿ” ರಾಜ್‍ಕುಮಾರ್ ಅಣ್ಣಾವ್ರು ಹಾಡಿದ ಹಾಡು ಇತ್ತೀಚೆಗೆ kle ಟೆಕ್ನಾಲಜಿಕಲ್ ವಿಶ್ವವಿದ್ಯಾಲಯದಲ್ಲಿ ನಡೆದ ಎರಡು ದಿನದ ಆಂತರಿಕ ಸಮಾವೇಶದಲ್ಲಿ ಪ್ರಾಧ್ಯಾಪಕರ ಹೊಸ ಜ್ಞಾನ ವಿಚಾರ ಚಿಂತನ ಮಂಥನ ನೋಡಿದಾಗ ನೆನಪಾಯಿತು. ಹೀಗೆ ನಮ್ಮ ಉಳಿದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಆಕಸ್ಮಿಕವಾಗಿ ಒಳ್ಳೆಯದನ್ನು ಮಾಡಿದರೆ ನಮ್ಮ ಭಾರತೀಯ ಶಿಕ್ಷಣ ಸಂಸ್ಥೆಗಳು ಖಂಡಿತವಾಗಿ ವಿಶ್ವಮಾನ್ಯ ಪಟ್ಟಿಯಲ್ಲಿ ಬರುತ್ತವೆ. ಪ್ರಾಚೀನ ಭಾರತದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಾದ ನಳಂದಾ, ತಕ್ಷ ಶೀಲಾ […]

ಗೆಲವು ಸಾಧಿಸಲು ಬದ್ಧತೆ ಅವಶ್ಯಕ

ಗೆಲುವು ಸಾಧಿಸಲು ಬದ್ಧತೆ ಅವಶ್ಯಕ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕೆಲವು ವ್ಯಕ್ತಿಗಳ ಜೀವನ ಪರಿಚಯವಾಗುತ್ತದೆ. ಸಮಾಜ ಅವರನ್ನು ಸ್ಮರಿಸುತ್ತದೆ. ಅವರು ಕೆಲವು ತತ್ವಗಳಿಗೆ ಬದ್ಧರಾಗಿದ್ದರು ಎಂಬುದು ತಿಳಿಯುತ್ತದೆ. ಅವರ ಜೀವನ ಕ್ರಮ ಹೇಗಿರುತ್ತದೆ ಎಂದರೆ ಪ್ರತಿಯೊಂದು ಮಾತು ಒಂದೊಂದು ಅನುಭವ, “ನಡೆದಂತೆ ನುಡಿ, ನುಡಿದಂತೆ ನಡೆ” ಇದೇ ಅವರ ಸಿದ್ಧಾಂತ, ಅದ್ದರಿಂದಲೆ ಅವರು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿದ್ದಾರೆ. ಬದ್ಧತೆ (Commitment) ಒಂದು ರಕ್ಷಾ ಕವಚವಿದ್ದಂತೆ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ, ಆತ್ಮಗೌರವ, ಅಪಾರವಾದ ತಾಳ್ಮೆಯನ್ನು ಕಲಿಸುತ್ತದೆ, ಎಲ್ಲಿ […]

ಸಮರಸ – ಕುದುರೆ – ವರ್ತಕ – ಬಿಸಿಲು

ಸಮರಸ – ಕುದುರೆ – ವರ್ತಕ – ಬಿಸಿಲು ಕುದುರೆ ಏರಿ ವರ್ತಕನೊಬ್ಬ ಪಯಣ ಹೊರಟಿದ್ದಾನೆ… ನಡುಹಗಲಿನ ರಣಬಿಸಿಲು.. ನಿಂತರೆ ಉಳಿದವರಿಗಿಂತ ಹಿಂದುಳಿದುಬಿಡುವ ಭಯ… ಹೊರಟರೆ ನೆತ್ತಿಬಿರಿಯುವ ಅಪಾಯ… ಒಟ್ಟಿನಲ್ಲಿ ಹುಲಿಮೇಲಿನ ಸವಾರಿ.. ಈಗೀಗ ಎಲ್ಲರ ಬದುಕು ಹೀಗೇ.. ಸಮರಸ ಎಂದೋ ಎಲ್ಲೋ ಕಳೆದುಹೋಗಿದೆ.. ಎಲ್ಲರೂ ಓಡುತ್ತಿದ್ದೇವೆ… ಓಡಲೇಬೇಕೆಂಬ ಕಾರಣಕ್ಕೆ…… ಏಕೆ? ಹೇಗೆ? ಎಲ್ಲಿಗೆ? ಎಂಬುದೇ ಗೊತ್ತಿಲ್ಲದೆಯೇ……..

ಕರ್ಮವನ್ನು ಬಿಡಬೇಡ

ಕರ್ಮವನ್ನು ಬಿಡಬೇಡ ಫಲಹೇತುವಾಗಿ ಕರ್ಮವೆಸಗಿದಲ್ಲಿ ಅಶಾಂತಿ ಹಾಗೂ ನೈಪುಣ್ಯಹ್ರಾಸವಾಗುತ್ತದೆ ಎನ್ನುವ ವಿಚಾರವನ್ನು ನೋಡಿದ್ದೇವೆ. ‘ಫಲವನ್ನೇ ಬಯಸಬಾರದೆಂದಮೇಲೆ ಕರ್ಮವನ್ನೇಕೆ ಮಾಡಬೇಕು? ಏನೂ ಮಾಡುವುದೇ ಬೇಡ ಬಿಡಿ!’ ಎಂದು ನಮ್ಮ ಮನಸ್ಸು ದಂಗೆಯೇಳಬಹುದು! ಎಷ್ಟಾದರೂ ಈ ರೀತಿ, ಭಾವಕಲ್ಲೋಲವನ್ನು ಏಳಿಸುವುದೇ ಭಾವುಕ ಮನಸ್ಸಿನ ಜಾಯಮಾನವಲ್ಲವೆ! ಆದರೆ ಹಾಗೆ ಕರ್ಮವನ್ನೇ ಬಿಟ್ಟುಬಿಡುವಂತಿಲ್ಲ ಎಂದು ತಕ್ಷಣವೇ ಎಚ್ಚರಿಸುತ್ತಾನೆ ಕೃಷ್ಣ- ಮಾ ತೇ ಸಂಗೋsಸ್ತ್ವ ಕರ್ಮಣಿ- ಭ.ಗೀ:2.47 (ಕರ್ಮದ ವಿಷಯದಲ್ಲಿ ಅಸಂಗತ್ವ ಬೇಡ.) ಕರ್ಮ ಮಾಡಬೇಕು. ಆದರೆ ಫಲದ ಮೇಲೆ ನಿಯಂತ್ರಣವಿಲ್ಲ ಎನ್ನುವ ಸತ್ಯವನ್ನರಿತಿರಬೇಕು. […]

ಶಿಷ್ಟಾಚಾರ – ಸಂಪ್ರದಾಯ – ಸಂಸ್ಕೃತಿ

ಶಿಷ್ಟಾಚಾರ – ಸಂಪ್ರದಾಯ – ಸಂಸ್ಕೃತಿ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವದು, ಅದು ದೊಡ್ಡವರ ಎದುರು ಶಿಷ್ಟವೇ? ಅಶಿಷ್ಟವೆ? ಎಂಬುದು ಇತ್ತಿಚೇಗೆ ಮಾಧ್ಯಮಗಳಲ್ಲಿ ದೃಶ್ಯಗಳ ಮೂಲಕ, ಬರಹಗಳ ಮೂಲಕ ಅತಿ ಪ್ರಚಾರ ಪಡೆದಿದ್ದು ಹಲವು ಪ್ರಶ್ನೆಗಳನ್ನು ಕೆದಕುವಂತೆ ಮಾಡಿತು. ಸಂಪ್ರದಾಯಗಳ ಮೂಲಕ ಕೆಲವು ಕ್ರಿಯೆಗಳು ವಿಶಿಷ್ಟ ಸ್ವರೂಪ ಪಡೆಯುತ್ತ ಸಂಸ್ಕೃತಿಯ ಭಾಗವಾಗಿ ಕ್ರಮೇಣ ಲೀನವಾಗುತ್ತ ಶಿಷ್ಟ ಸಂಸ್ಕೃತಿಯೇ ಆಗಿ ನಾಗರಿಕ ಸ್ವರೂಪದಿಂದ ಸಮಾಜ, ದೇಶ, ಜನಾಂಗಗಳ ಸಂಸ್ಕೃತಿ ಲಕ್ಷಣಗಳಾಗಿ, ಗುಣಧರ್ಮಗಳಾಗಿ ಹೊರ ಹೊಮ್ಮುವವು. ಕೆಲವು ದೇಶಗಳಲ್ಲಿ […]