Your Cart

Need help? Call +91 9535015489

📖 Print books shipping available only in India. ✈ Flat rate shipping

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು “ರಾಗದ್ವೇಷಗಳ ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ, ಪ್ರಜ್ಞೆಯನ್ನು ಇಂದ್ರಿಯ ವಿಷಯಗಳಿಂದ ತೆಗೆದು ಆತ್ಮದಲ್ಲಿ ನೆಲೆಗೊಳಿಸಿಕೊಂಡ ‘ಸ್ಥಿತಪ್ರಜ್ಞ’ನಿಗೆ ಮಾತ್ರವೇ ಶಾಂತಿ ಲಭ್ಯ”- ಎಂದು ಶ್ರೀಕೃಷ್ಣನು ವಿವರಿಸಿದ್ದನಷ್ಟೆ? ಅಂತರ್ಮುಖಿಯಾದ ಸ್ಥಿತಪ್ರಜ್ಞನಿಗೂ ಬಹಿರ್ಮುಖಿಗಳಾದ ಸಾಮಾನ್ಯರಿಗೂ ಇರುವ ವ್ಯತ್ಯಾಸವನ್ನು ಹೀಗೆ ಸೂಚಿಸುತ್ತಾನೆ ಕೃಷ್ಣ- ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ I ಯಸ್ಯಾಂ ಜಾಗತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ II ಯಾವುದು ಎಲ್ಲರ ಪಾಲಿಗೆ ‘ರಾತ್ರಿ’ಯಾಗಿರುತ್ತದೋ, ಸಂಯಮಿಯು ಅಲ್ಲಿ ‘ಜಾಗೃತ’ನಾಗಿರುತ್ತಾನೆ. […]

ತಾಕಲಾಟ – ತಲ್ಲಣ – ಮೈನೋವು – ಬ್ರೆಡ್

ತಾಕಲಾಟ – ತಲ್ಲಣ – ಮೈನೋವು – ಬ್ರೆಡ್ ಈಗೆರಡು ದಿನಗಳಿಂದ ಮೈಕೈನೋವು, ವಿಪರೀತ ಕಣ್ಣುರಿ… ಬಾಯ್ಬಿಟ್ಟರೆ ಮನೆಯಲ್ಲಿ ಬಾಂಬ್ ಸ್ಫೋಟ…. ನನ್ನ ಬ್ಯಾಂಕಿನ ಬಿಡುವಿಲ್ಲದ ದಿನಚರಿಯಿಂದ ಈಗಾಗಲೇ ತಲ್ಲಣಗೊಂಡಿರುವ ನಮ್ಮಮ್ಮ ನೆವಕ್ಕಾಗಿ ತುದಿಗಾಲಮೇಲೆಯೇ ನಿಂತಿದ್ದಾಳೆ ನನ್ನನ್ನು ಗ್ರಹಬಂಧನದಲ್ಲಿಡಲು… ಬರಿ ಅಷ್ಟಾದರೆ ಪರವಾಗಿಲ್ಲ…. ನನ್ನ ತಾಕಲಾಟಕ್ಕೆ ಕಾರಣವೇ ಬೇರೆ… ಮೆಣಸಿನ ಕಾಡೆ, ಗೊಡ್ಡುಸಾರು, ಒಣ ಒಣ ಬ್ರೆಡ್, ಅಕ್ಕಿಗಂಜಿ ಅಂತೆಲ್ಲ ನೆನಪಾದರೆ ಬ್ಯಾಂಕಿನ ಉದ್ದುದ್ದದ ಸಾಲುಗಳಲ್ಲೂ ಕಾಣುವದು ನನ್ನನ್ನು ಪಾರುಮಾಡಲು ಬಂದ ಆಪ್ತರಕ್ಷಕರೇ………

ಚಂಪಾ ಕಲಿ ಸಾಹಿತ್ಯ ಸಂಭ್ರಮ

ಚಂಪಾ ಕಲಿ ಸಾಹಿತ್ಯ ಸಂಭ್ರಮ ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. ಸಿಹಿ ತಿಂಡಿಗೆ ಚಂಪಾಕಲಿ ಅಂತ ಹೆಸರು ಯಾಕೆ ಇಟ್ಟರೋ ಗೊತ್ತಿಲ್ಲ ಬಹುಶಃ ಹಿಂದಿಯಲ್ಲಿ ಕಲಿ ಅಂದರೆ ಹೂ ಮತ್ತು ಈ ಸಿಹಿತಿಂಡಿ ಹೂವಿನ ಹಾಗೆ ಬಿಳಿ, ಮೃದು ನಡುವೆ ಕೆಂಪು ಮತ್ತು ಸಿಹಿ ಪದಾರ್ಥಗಳಲ್ಲಿ […]

ಧಾರವಾಡ ಸಾಹಿತ್ಯ ಸಂಭ್ರಮ – 2018 (ಸಂಸ್ಕೃತಿ ಸಂವಾದ)

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಧಾರವಾಡ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಪ್ರಜಾವಾಣಿ, ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ ಧಾರವಾಡ ಸಾಹಿತ್ಯ ಸಂಭ್ರಮ – 2018 (ಸಂಸ್ಕೃತಿ ಸಂವಾದ) ದಿನಾಂಕ : 19, 20 ಮತ್ತು 21, ಜನೇವರಿ -2018 ಸ್ಥಳ : ಸುವರ್ಣ ಮಹೋತ್ಸವ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕಾರ್ಯಕ್ರಮ ವಿವರ ದಿನಾಂಕ : 19-01-2018 9.30 – 9.45 ಪುಸ್ತಕ ಮಳಿಗೆಗಳ […]

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು ಸ್ಥಿತಪ್ರಜ್ಞನೆನಿಸಿದವನು ಇಂದ್ರಿಯ ಜಯ ಹಾಗೂ ರಾಗದ್ವೇಷಗಳ ನಿಗ್ರಹದ ಮೂಲಕ ಪ್ರಸಾದ ಗುಣವನ್ನು ಸಿದ್ಧಿಸಿಕೊಂಡಿರುತ್ತಾನೆ; ಅಂತಹವನ ಬುದ್ಧಿ (ಯೋಗದಲ್ಲಿ) ನೆಲೆನಿಲ್ಲುತ್ತದೆ – ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ- ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ I ನ ಚಾಭಾವಯತಃ ಶಾಂತಿರಶಾಂತಸ್ಯ ಕುತಸ್ಸುಖಮ್ II ಅಯುಕ್ತನಾದವನ ಬುದ್ಧಿಯು ಧ್ಯಾನಸ್ಥವಾಗಲಾರದು (ಭಾವನಾ ಎಂದರೆ ಧ್ಯಾನವೆಂದರ್ಥ) ಧ್ಯಾನಿಸಲಾಗದವನಿಗೆ ಶಾಂತಿಯಿರದು, ಶಾಂತಿಯಿರದವನಿಗೆ ಸುಖವೆಲ್ಲಿಯದು? ಬಾಹ್ಯ ಪ್ರಪಂಚದಲ್ಲಾಗುವ ಸಹಜ ವಿಕಾರಗಳಿಗೆಲ್ಲ ಅತಿಯಾಗಿ ಹಿಗ್ಗುತ್ತ-ಕುಗ್ಗುತ್ತ ವಿಚ್ಛಿದ್ರವಾಗುವ ನಮ್ಮ […]

ಗೈರು – ಮಳೆ – ದಾಂಡು – ಕ್ಷಮಿಸಿ

ಗೈರು – ಮಳೆ – ದಾಂಡು – ಕ್ಷಮಿಸಿ “ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಗೈರು ಉಳಿಯಬೇಕಾಯಿತು… ದಯವಿಟ್ಟು ಕ್ಷಮಿಸಿ…” ದಾಂಡುವಿನಿಂದ ಗಿಲ್ಲಿಯನ್ನು ಚಿಮ್ಮಿಸಿದಂತೆ ಹೊತ್ತಿಗೆ ಹೊಳೆದ ಸುಳ್ಳೊಂದು ಹಾರಿಸಿದೆ ತಲೆಮೇಲೆ ತೂಗುತ್ತಿದ್ದ ಕತ್ತಿಯ ಯಾಮಾರಿಸಿದೆ…

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ! ಜೀವನದ ಗತಿಯಲ್ಲಿ ಸಾಗುವ ಮನುಷ್ಯನು, ತನ್ನ ನಿಜದ ನೆಲೆಯಿಂದ ’ಎಲ್ಲಿ’, ’ಹೇಗೆ’ ಜಾರಲಾರಂಭಿಸುತ್ತಾನೆ ಎನ್ನುವುದನ್ನು ಮಾರ್ಮಿಕವಾಗಿ ಕೃಷ್ಣನು ಮನಗಾಣಿಸುತ್ತಿದ್ದ. ನಿರ್ಲಿಪ್ತಿಯ ಅಂತರವಿಲ್ಲದೇ ಬಾಹ್ಯ ಪ್ರಪಂಚದೊಂದಿಗೆ ’ಸಂಗ’ ಬೆಳೆಸಿಕೊಂಡಾಗ, ಹೇಗೆ ಆಸಂಗದಿಂದಾಗಿ ಕಾಮವೂ, ಅದರ ಹಿಂದೆ-ಹಿಂದೆಯೇ ಕ್ರೋಧ-ಸಮ್ಮೋಹ-ಸ್ಮೃತಿ ನಾಶ ಹಾಗೂ ಬುದ್ಧಿನಾಶಗಳೂ ಉಂಟಾಗಿ ಮನುಷ್ಯನನ್ನು ಅಧೋಗಾಮಿಯಾಗಿಸುತ್ತವೆ ಎನ್ನುವುದನ್ನೂ ಬಿಡಿಸಿ ಹೇಳಿದ. ಹಾಗಾದರೆ ಈ ಪತನದ ಪ್ರಾರಂಭವಿರುವುದೇ ’ಸಂಗ’ದಲ್ಲಿ ಎಂದಾಯಿತು! ಈ ’ಸಂಗ’ವೊಂದಿಲ್ಲದಿದ್ದರೇ ಸಾಕು, ಮನುಷ್ಯನು ಗೆದ್ದುಕೊಳ್ಳಬಲ್ಲ ಎನ್ನುವುದನ್ನು ಹೀಗೆ ಸ್ಪಷ್ಟಪಡಿಸುತ್ತಾನೆ- ರಾಗ […]

ಊರಿಗೆ ಒಬ್ಬಳೇನಾ ಪದ್ಮಾವತಿ ?

ಊರಿಗೆ ಒಬ್ಬಳೇನಾ ಪದ್ಮಾವತಿ ? ಪದ್ಮಪ್ರಿಯಾ ಕನ್ನಡಚಿತ್ರರಂಗದಲ್ಲಿ ಛಾಪು ಮೂಡಿಸಿ ಮರೆಯಾದ ನಾಯಕಿ ನಟಿ. ಪದ್ಮಾ ಖನ್ನಾ ಪಂಚಭಾಷೆಗಳ ಪಂಚ್ ಐಟೆಂ ಹಾಡು ಕುಣಿತಗಳಲ್ಲಿ ಕಚಗುಳಿ ಇಟ್ಟು ಗಲ್ಲಾ ಪೆಟ್ಟಿಗೆ ತುಂಬಿಸಲು ನೆರವಾದ ನಟಿ. ಸದ್ಯ ಮತ್ತೆ ಪದ್ಮಾ ಸುದ್ದಿಯಲ್ಲಿದ್ದಾಳೆ. “ಜಾನಿ ಮೇರಾ ನಾಮ” ಹಿಂದಿ ಮತ್ತು ಕನ್ನಡ ಸಿನಿಮಾದ ಪದ್ಮಾ ನೆನಪಿಗೆ ಬಂತು. “ದಿವಾ ದಿವಾ ತನಾಧಿರಣಾ, ಡೊಂಚು ಯು ನೋ , ಐ ಎಮ್ ವೆರಿ ಸೆಕ್ಸಿ, ಕೈ ಇದೆ, ಕಾಲಿದೆ ಸುಮ್ಮನೆ ಡ್ಯಾನ್ಸ್ […]

ನಾಗರಿಕ ಪ್ರಜ್ಞೆ

ನಾಗರಿಕ ಪ್ರಜ್ಞೆ 1970 ರಲ್ಲಿ ಜಪಾನಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತದ ಪ್ರಖ್ಯಾತ ವಕೀಲರಾದ ಶ್ರೀ ನಾನಿ ಪಾಲ್ಕಿವಾಲರವರು ಕಾರ್ಯಕ್ರಮದ ನಂತರ ಜಪಾನಿನ ಪ್ರಧಾನಿಯನ್ನು ಒಂದು ಪ್ರಶ್ನೆ ಕೇಳಿದರು. 1940ರ ಎರಡನೆ ಮಹಾಯುದ್ಧದಿಂದ ಧ್ವಂಸಗೊಂಡ ನಿಮ್ಮ ದೇಶದಲ್ಲಿ 7 ಕೋಟಿ ಜನಸಂಖ್ಯೆ ಮಾತ್ರ ಇದೆ. ಹಿರೋಶಿಮಾ-ನಾಗಸಾಕಿ ನಗರಗಳ ಮೇಲೆ ನಡೆದ ಬಾಂಬ್ ದಾಳಿಯಿಂದ ಇವತ್ತಿಗೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ. ಆದರೂ ಕೇವಲ 30 ವರ್ಷಗಳಲ್ಲಿ ಜಗತ್ತು ಆಶ್ಚರ್ಯಪಡುವ […]