Your Cart

Need help? Call +91 9535015489

📖 Print books shipping available only in India. ✈ Flat rate shipping

ಸುಮ್ಮನಿರುವುದೇ ನೈಷ್ಕರ್ವ್ಯುವೆ?

ಸುಮ್ಮನಿರುವುದೇ ನೈಷ್ಕರ್ವ್ಯುವೆ? ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ: ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ | ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ || (ಭ.ಗೀ.: 3.4) ‘ಕರ್ಮಗಳನ್ನು ‘‘ಪ್ರಾರಂಭ’’ ಮಾಡದೆ ಇದ್ದುಬಿಟ್ಟ ಮಾತ್ರಕ್ಕೆ ಮನುಷ್ಯನಿಗೆ ‘‘ನೈಷ್ಕರ್ವ್ಯು’’ಸ್ಥಿತಿಯು ಸಿದ್ಧಿಸದು. ಅಥವಾ ಕರ್ಮವನ್ನೇ ‘‘ಬಿಟ್ಟುಬಿಟ್ಟ’’ ಮಾತ್ರಕ್ಕೂ (ಜ್ಞಾನದ) ಸಿದ್ಧಿಯು ಲಭಿಸದು.’ ಇಲ್ಲಿ ಕೃಷ್ಣನು ‘ಸುಮ್ಮಸುಮ್ಮನೆ ಸುಮ್ಮನಿರುವುದಕ್ಕೂ’ – ‘ನೈಷ್ಕರ್ವ್ಯು’ಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಿದ್ದಾನೆ. ಕರ್ಮವನ್ನು ಕೇವಲ […]

ಅಪಘಾತವೂ ಒಂದು ಉದ್ದಿಮೆಯೇ

ಅಪಘಾತವೂ ಒಂದು ಉದ್ದಿಮೆಯೇ ಭರ್ಜರಿ ಹೆದ್ದಾರಿಯಲ್ಲಿ ಒಂದು ಅಪಘಾತ. ಅದೂ ರಾತ್ರಿ 9.30ರ ಸುಮಾರು ಜರುಗಿದರೆ ಅನ್ನುವ ವಿಚಾರ, ಅನುಭವ ನೆನಸಿಕೊಂಡಾಗ, ಒಂದು ರೀತಿಯ ತಲ್ಲಣ, ಭಯ, ಹೆದರಿಕೆ ಮಾಮೂಲು. ಚಲನಚಿತ್ರಗಳಲ್ಲಿ ತೋರಿಸುವ ಕೊನೆಯ ಪೊಲೀಸ್ ಪ್ರವೇಶ ಮತ್ತು ಯು ಆರ್ ಅಂಡರ್ ಅರೆಸ್ಟ್! ಅನ್ನುವ ದೃಶ್ಯ ಸಹ ಮಾಮೂಲು. ಆದರೆ ಚಲನಚಿತ್ರದಲ್ಲಿ ಅದು ಅಷ್ಟು ಪರಿಣಾಮ ಬಿರುವುದಿಲ್ಲ. ಆದರೆ ಅಪಘಾತವಾದಾಗ ಹಾಗಿರುವುದಿಲ್ಲ. ಅದರಲ್ಲಿ ಮೊದಲ ಬಾರಿ ಇದ್ದರಂತೂ ಮುಗಿದು ಹೋಯ್ತು. ಎಷ್ಟೊಂದು ವಿಧಿಗಳು, ಎಷ್ಟೊಂದು ವಿಧಾನಗಳು […]

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ ತೊಡಗು’’ ಎನ್ನುತ್ತಿದ್ದೀಯೆ! ಯಾವುದಾದರೂ ಒಂದನ್ನು ನಿಶ್ಚಯವಾಗಿ ಹೇಳು’ ಎಂದು ಅಳಲುತ್ತಾನೆ. ಶ್ರೀಕೃಷ್ಣನು ಉತ್ತರಿಸುತ್ತಾನೆ: ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ | ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್| (ಭ.ಗೀ.: 3.3) ‘ಹೇ ಅನಘನೆ ! (ಪಾಪರಹಿತನೆ) ಜಗತ್ತಿನಲ್ಲಿ ಎರಡು ಬಗೆಯಲ್ಲಿ ನಿಷ್ಠೆಗಳಿವೆ. ಅವನ್ನು ನಾನೇ ಬಹಳ ಹಿಂದೆ […]

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ ನಮ್ಮನೆಯ ಮುಂದೆಯೇ ಒಂದು ಮೈದಾನ.. ಹೆಸರಿಗೆ ಮಕ್ಕಳ ಆಟಕ್ಕೆ, ನಡೆಯುವದೆಲ್ಲ ದೊಡ್ಡವರ ಬಂಡಾಟ… ಹಾರಾಟ… ಆಗಾಗ ಕಲ್ಲುತೂರಾಟ….. ಹೊತ್ತು ಗೊತ್ತಿನ ಪರಿವೆಯಿಲ್ಲದೇ ಧ್ವನಿವರ್ಧಕಗಳ ಚೀರಾಟ… ಯಾವ ಸಾಮ, ದಾನ, ಭೇದ, ದಂಡೋಪಾಯಗಳಿಂದಲೂ ಇದನ್ನು ಬದಲಿಸಲಾಗಿಲ್ಲ…. ಮೊದಲಿನಿಂದಲೂ ಮೊಳೆ ಹೊಡೆದುಕೊಂಡಂತೆ ಸ್ಥಾಪಿತಗೊಂಡ ಪಟ್ಟಭದ್ರ ಹಿತಾಸಕ್ತಿಗಳ ಬಿಗಿ ಮುಷ್ಟಿಯಲ್ಲಿ ನಲುಗುತ್ತಿರುವ ಜನಸಾಮಾನ್ಯರ ಗತಿಯೇನೆಂಬುದೇ ಯಾವ ಯುಧಿಷ್ಠಿರನೂ ಉತ್ತರಿಸಲಾಗದ ಯಕ್ಷ ಪ್ರಶ್ನೆ…..

ಸುಜ್ಞಾನದ ಬೆಳಕು ನೀಡುವ ಶಿವರಾತ್ರಿ

ಸುಜ್ಞಾನದ ಬೆಳಕು ನೀಡುವ ಶಿವರಾತ್ರಿ ಶಿವರಾತ್ರಿ ಎಂದರೆ ಬರೀ ರಾತ್ರಿ ಅಲ್ಲ. ಅಜ್ಞಾನ ಎಂಬ ಕತ್ತಲನ್ನು ದೂರಮಾಡಿ ಸುಜ್ಞಾನ ಎಂಬ ಬೆಳಕನ್ನು ನೀಡುವ ರಾತ್ರಿ ಅದು. ವಿನಮ್ರ ಭಕ್ತಿಗೆ ಪ್ರಸನ್ನನಾಗುವ ಶಿವ ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುತ್ತಾನೆ ಎಂಬುದು ಭಕ್ತರ ನಂಬಿಕೆ. ಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನನ್ನು ಆರಾಧಿಸುವ ವಿಶೇಷ ದಿನವೇ ‘ಮಹಾಶಿವರಾತ್ರಿ’. ಭಾರತೀಯರು ಅದರಲ್ಲೂ ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಇದಕ್ಕೆ ವಿಶೇಷ ಸ್ಥಾನ. ಪ್ರತಿ ಸಂವತ್ಸರದ ಶಿಶಿರ ಋತುವಿನ ಮಾಘ ಮಾಸ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. […]

ಭಾರತೀಯ ಸಂಪ್ರದಾಯ ಮೆಚ್ಚುವ ಸಂಸ್ಥೆಗಳನ್ನು ಜರಿಯುವುದೇ ಜಾತ್ಯತೀತತೆಯಾಗಿದೆ: ಎಸ್‌.ಎಲ್‌. ಭೈರಪ್ಪ

ಭಾರತೀಯ ಸಂಪ್ರದಾಯ ಮೆಚ್ಚುವ ಸಂಸ್ಥೆಗಳನ್ನು ಜರಿಯುವುದೇ ಜಾತ್ಯತೀತತೆಯಾಗಿದೆ: ಎಸ್‌.ಎಲ್‌. ಭೈರಪ್ಪ ನವದೆಹಲಿ: ಭಾರತೀಯ ಸಂಪ್ರದಾಯವನ್ನು ಮೆಚ್ಚುವ ಜನರು ಹಾಗೂ ಸಂಸ್ಥೆಗಳನ್ನು ಕೋಮುವಾದಿಗಳು ಎಂದು ಜರಿಯುವುದನ್ನೇ ಜಾತ್ಯತೀತತೆ ಎಂದು ಎಡಪಂಥೀಯ ಬರಹಗಾರರು ಬಣ್ಣಿಸುತ್ತಿದ್ದಾರೆ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು. ಕೇಂದ್ರ ಸಾಹಿತ್ಯ ಅಕಾಡೆಮಿಯ 70ನೇ ವರ್ಷಾಚರಣೆ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ‘ವ್ಯಾಸಗುಹೆಯ ಆರೋಹಣ’ ಕುರಿತ ಸಂವತ್ಸರ ಉಪನ್ಯಾಸ ನೀಡಿದರು. ಭಾರತದಲ್ಲಿನ ಬಹುಸಂಖ್ಯಾತರು ಮಾತ್ರ ಕೋಮುವಾದಿಗಳು. ಅಲ್ಪಸಂಖ್ಯಾತರು ಎಂದಿಗೂ ಕೋಮುವಾದಿ ಆಗಿರುವುದಿಲ್ಲ ಎಂದು ನಿರಂತರವಾಗಿ ದೊಡ್ಡದನಿಯಲ್ಲೇ […]

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು! ದಕ್ಷತೆಯಿಂದ ಕರ್ಮ ಮಾಡುತ್ತ ನಿರ್ಲಿಪ್ತಭಾವದಿಂದಿರಬೇಕು. ಫಲತ್ಯಾಗ ಮಾಡಿ ಬ್ರಾಹ್ಮೀಸ್ಥಿತಿಯನ್ನು ಸಾಧಿಸಬೇಕು ಎನ್ನುವ ಕರ್ಮರಹಸ್ಯವನ್ನು ಆಚಾರ್ಯ ಕೃಷ್ಣನು ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯದಲ್ಲಿ ವಿವರಿಸಿದ್ದ. ಈ ಸಂದೇಶವೇ ಗೀತೆಯ ಸಾರವಾಗಿದೆ. ಇದಿಷ್ಟು ಬಾಳಿನಲ್ಲಿ ಅನುಷ್ಠಾನವಾದರೆ ಸಾಕು, ಐಹಿಕ-ಪಾರಮಾರ್ಥಿಕ ಜೀವನಗಳೆರಡೂ ಸಾರ್ಥಕ್ಯದ ಹಾದಿಯನ್ನು ಹಿಡಿಯುತ್ತವೆ. ಮೂರನೆಯ ಅಧ್ಯಾಯದಿಂದೀಚೆಗೆ ಅರ್ಜುನನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ ಕೃಷ್ಣನು ತನ್ನ ಮೂಲಸಂದೇಶವನ್ನು ಪುಷ್ಟಿಗೊಳಿಸುವಂತಹ ಹಲವಾರು ಮನಃಶಾಸ್ತ್ರೀಯ-ಧರ್ಮಶಾಸ್ತ್ರೀಯ ಹಾಗೂ ಯೋಗಶಾಸ್ತ್ರೀಯ ವಿಚಾರಗಳನ್ನು ಹೇಳುತ್ತ ಸಾಗುತ್ತಾನೆ. ನಮಗಿಷ್ಟವಿಲ್ಲದ ಕರ್ಮವನ್ನು […]

ಮುತ್ಸದ್ಧಿ ಯಾರು

ಮುತ್ಸದ್ಧಿ ಯಾರು ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವಿವರಗಳನ್ನು ಓದುತ್ತಿರುವಾಗ, ಚಾನೆಲ್ಲುಗಳ ಚರ್ಚೆ ಹೆಸರಿನಲ್ಲಿ ಹುಚ್ಚುಚ್ಚಾದ ವರ್ತನೆ, ಮಾತು ನೋಡಿದಾಗ ನಮ್ಮ ದೇಶದಲ್ಲಿ ಏನು ನಡೀತಾ ಇದೆ, ಏನಾದರೂ ಪ್ರಬುದ್ಧತೆ ಇದೆಯಾ ಅನ್ನುವ ಸನ್ನಿವೇಶ ಬಂದೊದಗಿದೆ. ಅಂದರೆ ಹೆಚ್ಚಿನ ನಾಯಕರು, ಮಂತ್ರಿಗಳು, ಪುಢಾರಿಗಳು, ಮಾಧ್ಯಮ ನೇತಾರರು ಒಂದು ಮ್ಯಾಚುರಿಟಿ, ಪಕ್ವತೆ ಪ್ರದರ್ಶನ ಮಾಡತಾ ಇಲ್ಲ ಅನಿಸುತ್ತಿದೆ. ಮಾತನಾಡುವ ಸ್ಯಾಂಪಲ್ ನೋಡ್ರಿ “ಅವರ ಯಾರಿಗೆ ಹುಟ್ಟ್ಯಾರೋ ಗೊತ್ತಿಲ್ಲ”, “ನಿಚಾ” ‘ಇನ್ನೊಬ್ಬ ಭೂಪ 5000ರೂಪಾಯಿಗೆ […]

ಬೆಳಗುವ ಹಣತೆಗಳು

ಬೆಳಗುವ ಹಣತೆಗಳು ಹಣತೆ ಸೂರ್ಯನಷ್ಟು ಚಂದ್ರನಷ್ಟು ಗಾತ್ರ ಇಲ್ಲದಿದ್ದರೂ ತನ್ನ ಸುತ್ತಲೂ ಬೆಳಕನಿತ್ತು, ಇನ್ನೊಬ್ಬರಿಗೆ ಸಹಾಯಮಾಡುವುದು. ಹೀಗೆ ಪ್ರತಿಯೊಬ್ಬ ಮನುಷ್ಯರು ತನ್ನ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಸೇವೆಯನ್ನು ಸಲ್ಲಿಸಬಹುದು. ಮನುಷ್ಯನ ಬದುಕಿನಲ್ಲಿ ಸುಖ-ದುಃಖಗಳು ನಾಣ್ಯದ ಎರಡು ಬದಿಗಳು ಇದ್ದಂತೆ. ಇವು ಒಂದಾದ ಮೇಲೆ ಒಂದರಂತೆ ಮರುಕಳಿಸುತ್ತಿರುತ್ತವೆ. ಇವುಗಳನ್ನು ನಿಭಾಯಿಸಿಕೊಂಡು ಮುನ್ನುಗ್ಗುವುದೇ ದೊಡ್ಡ ಸಾಧನೆ. ಆದರೆ ಸಮಸ್ಯೆಗಳಿಗೆ ಹೆದರಿ ಇಟ್ಟ ಹೆಜ್ಜೆಗಳನ್ನು ಒಮ್ಮೆ ಹಿಂದಕ್ಕೆ ಮತ್ತೆ ಮುಂದುವರಿಯುವುದು ಬಹಳ ಕಷ್ಟ. ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟ […]