Your Cart

Need help? Call +91 9535015489

📖 Print books shipping available only in India. ✈ Flat rate shipping

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ ಅವಿವೇಕ, ಅಸಹನೆ ಅವಸರಗಳಂಥ ಅಪಸವ್ಯಗಳಿಂದ ಚಿಂದಿ ಚಿಂದಿಯಾಗುತ್ತಿರುವ ಇಂದಿನ ಯುವ ಜನಾಂಗದ ಬದುಕನ್ನು ಮರುಜ್ಜೀವನಗೊಳಿಸಿ ಚಂದವಾಗಿಸುವ ಒಂದು “ಕಾರಖಾನೆ” ತೆಗೆಯಬಹುದಾಗಿದ್ದರೆ…….. ಇಂಥದೊಂದು ಹಂಬಲಿಕೆ, ಗ್ರಹಿಕೆ ನನ್ನನ್ನು ಸದಾ ಕಾಡುತ್ತಿರುತ್ತದೆ… ಮರುಕ್ಷಣವೇ ಬದುಕೆಂದರೆ ಬಣ್ಣಗೆಟ್ಟ ಕಾರಲ್ಲ.. ಅದನ್ನು ಯಾರೋ ಬದಲಿಸಿ ತಮಟೆ ಹೊಡೆದು ಜಗಜ್ಜಾಹೀರು ಮಾಡಿ ನಮ್ಮ ಅಂಗಳದಲ್ಲಿ ನಿಲ್ಲಿಸಲಾಗುವದಿಲ್ಲ… ನಾವೇ ನಮ್ಮನ್ನೇ ನಮಗಾಗಿಯೇ ತೊಡಗಿಸಿಕೊಂಡು ತರಬೇಕಾದ ತುರ್ತು ಬದಲಾವಣೆಯಂದು ಒಳಮನಸ್ಸು ನೆನಪಿಸಿದಾಗ ……..ನಿರುತ್ತರಳಾಗುತ್ತೇನೆ……..

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು ಮೋಹದ ನೆಲೆಯಲ್ಲೇ ಆಲೋಚಿಸುವ ಸಾಮಾನ್ಯರ ಪಾಲಿಗೆ ಉನ್ನತಸತ್ಯಗಳು ‘ರಾತ್ರಿ’(ರಹಸ್ಯ) ಎನಿಸಿದರೆ, ನಿರ್ಮೋಹರಾದ ಮುನಿಗಳ ಪಾಲಿಗೆ ಅದು ಸ್ಪಷ್ಟವಾಗಿ ಅರ್ಥವಾಗುವ ‘ಹಗಲು’. ಅನಿತ್ಯದ ಕುರಿತಾದ ಸಾಮಾನ್ಯರ ವ್ಯಾಮೋಹವು ಮುನಿಗಳಿಗೆ ಕತ್ತಲೆಯಂತೆ ಕಾಣಬರುತ್ತದೆ- ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ- ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ I ತದ್ವತ್ ಕಾಮಾಃ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ II (ನದಿ-ತೊರೆಗಳ) ನೀರು ತನ್ನೊಳಗೆ ಬಂದು ತುಂಬಿಕೊಳ್ಳುತ್ತಲೇ ಇದ್ದರೂ, ಸಮುದ್ರವು ವಿಚಲಿತವಾಗದು. ಅಂತೆಯೇ […]

ಯಾಕ ಹಿಂಗ?

ಯಾಕ ಹಿಂಗ? ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. ಈ ಸಣ್ಣ ಅನಸೋ ಪ್ರಶ್ನಿ, ರಾಷ್ಟ್ರಪತಿಗಳಿಂದ ಹಿಡಿದು ಜನಸಾಮಾನ್ಯನವರೆಗೂ ಎಲ್ಲರ ಕಾಡುವುದೇ. ಹೆಂಡತಿಗೆ “ನನ್ನ ಗಂಡ ಯಾಕ ಹಿಂಗ?” ಗಂಡನಿಗೆ “ನನ್ನ ಹೆಂಡತಿ ಯಾಕ ಹಿಂಗ?” ಸಾಲಿ ಹೆಡ್ ಮಾಸ್ಟರ್ಗೆ “ನಮ್ಮ ಸಾಲಿ ಮಕ್ಕಳು […]

ರಾತ್ರಿ ರಾಗಗಳ ಮಧುರ ನಾದ ನದಿ

ರಾತ್ರಿ ರಾಗಗಳ ಮಧುರ ನಾದ ನದಿ ನಗರದ ಕೆ.ಆರ್‌.ರಸ್ತೆಯಲ್ಲಿರುವ ಗಾಯನ ಸಮಾಜದ ಸಭಾಂಗಣ ಅಂದು ಸಂಜೆ ನಿರೀಕ್ಷೆಯಂತೆ ಸಂಗೀತ ಕಛೇರಿಗಿಂತ ಸಾಕಷ್ಟು ಸಮಯ ಮೊದಲೇ ಭರ್ತಿಯಾಗಿತ್ತು! ಹಿಂದೂಸ್ತಾನಿ ಗಾಯನದ ಸವಿ ಜೇನು ಅಂದು ಸಂಗೀತ ರಸಿಕರ ಮನದಾಳಕ್ಕೆ ಇಳಿದು ಹೃದಯ ತಟ್ಟಿತ್ತು. ‘ಸಂಗೀತವೇ ನಮಗೆ ಪೂಜೆ’ ಎನ್ನುತ್ತಲೇ ಹಿಂದೂಸ್ತಾನಿ ಸಂಗೀತದ ಬನಾರಸ್‌ ಘರಾಣೆಯ ವಿಶ್ವವಿಖ್ಯಾತ ಕಲಾವಿದರಾದ ಪಂ.ರಾಜನ್‌ ಮಿಶ್ರಾ ತಂಬೂರಿಯ ನಾದಕ್ಕೆ ತಮ್ಮ ಶಾರೀರವನ್ನು ಸೇರಿಸಲಾರಂಭಿಸಿದರು. ಅವರ ಸಹೋದರ ಪಂ.ಸಾಜನ್‌ ಮಿಶ್ರಾ ಇದೇ ಸ್ವರವನ್ನು ಅನುಸರಿಸಿದರು. ಗೋಧೂಳಿ […]

ಬಂದರು – ನನ್ನಾಸೆ – ಕಣ್ಣು – ನೌಕೆ

ಬಂದರು – ನನ್ನಾಸೆ – ಕಣ್ಣು – ನೌಕೆ ಬಂದರಿಗೆ ನೌಕೆಗಳ ನಿರೀಕ್ಷೆ… ನೌಕೆಗಳಿಗೆ ಬಂದರಿನ ಪ್ರತೀಕ್ಷೆ… ನನ್ನಾಸೆಯ ಕಂಗಳಲ್ಲಿ ಹೊನ್ನ ನೌಕೆಯನೇರಿ ಕನಸಿನೂರಿಗೆ ಪಯಣಿಸುವ ಅಪೇಕ್ಷೆ……..