ನಮ್ಮವರು ಅಳೆದು, ತೂಗಿ ಮೀನ – ಮೇಷದಿಂದ, ಹಿಂದೆ – ಮುಂದೆ ನೋಡುತ್ತಾ ಆಡಲೋ ಬೇಡವೋ ಎಂದು ತಡೆತಡೆದು ಒಂದೊಂದೇ ಪದ ಪೋಣಿಸಿ ಮಾತಾಡುವುದು ನನಗೆ ಸೇರುವುದಿಲ್ಲ… ಏಕೆಂದರೆ … ಹಾಗೆ ಮಾಡಬೇಕಾಗಿ ಬಂದಾಗ ಎದುರಿಗೆ “ನಮ್ಮವರೆನಿಸಿ- ಕೊಂಡವರು ಇರುವದಿಲ್ಲ… ಹಾಗೂ ನಮ್ಮ ಮಾತು ನಮ್ಮವಾಗಿರುವದಿಲ್ಲ! ಮನದ ಚಡಪಡಿಕೆಯ ಮುಕ್ತ ದಾರಿಯಾಗಿರಬಹುದು… ಹಾಗೆಯೇ ಬರೆದ ಸಾಲುಗಳೆಲ್ಲ ಕವನವಾಗಬೇಕಿಲ್ಲ… ಮನದ ತೆವಲಿಗೆ ಕಂಡುಕೊಂಡ ಪರ್ಯಾಯ ರೂಪವಾಗಿರಲೂ- ಬಹುದು…
Month: July 2018
ನಿನ್ನೊಳಗಿನ ವಿಕೃತಿಯೇ ದೋಷಿ
ನಿನ್ನೊಳಗಿನ ವಿಕೃತಿಯೇ ದೋಷಿ ‘ಯಾರು ನನ್ನ ಈ ಅಭಿಮತವನ್ನು (ಶರಣಾಗತಿಯ ಮೂಲಕ ಪಾರಮ್ಯಕ್ಕೇರುವ ವಿಧಾನವನ್ನು) ಅನುಸರಿಸುತ್ತಾರೋ, ಅಂತಹ ಶ್ರದ್ಧಾಸಂಪನ್ನರೂ ಅಸೂಯಾದಿ ದುರ್ಗುಣಗಳಿಂದ ಮುಕ್ತರೂ ಆಗಿರುವವರು ಕರ್ಮ(ಜಾಲ)ದಿಂದ ಬಿಡುಗಡೆ ಹೊಂದುತ್ತಾರೆ’ ಎನ್ನುವ ಮಾತನ್ನು ಕೃಷ್ಣನು ಹೇಳುತ್ತಿದ್ದ. ‘ಶರಣಾಗತಿಯೆನ್ನುವುದು ಹೇಗೆ ಮನುಷ್ಯನ ಅಹಂಕಾರದ ಕಟ್ಟೆಯನ್ನೊಡೆದು, ಆತನ ಮತಿಮನಗಳ ಸಾಂತಸೀಮೆಗಳನ್ನು ಮುರಿದು, ತತ್ವದ ಆನಂತ್ಯದಲ್ಲಿ ವಿಸ್ತರಿಸಲು ಅನುವಾಗುತ್ತದೆ’ ಎನ್ನುವುದನ್ನೂ ಚರ್ಚಿಸಿದ್ದೆವು. ಮುಂದೆ ಶ್ರೀಕೃಷ್ಣನು ಹೇಳುತ್ತಾನೆ: ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಂ | ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ || 3.32 ‘ಯಾರು […]
ಪ್ರೀತಿ – ಪ್ರೇಮ
ಪ್ರೀತಿ – ಪ್ರೇಮ ಪ್ರೀತಿ-ಪ್ರೇಮ ಏನೇ ಇದ್ರೂ ‘ಮುಚ್ಚಿದ ಮೊಗ್ಗಿದ್ಧ್ಹಾಗೆ’ ತಾನೆ ತಾನು ಅರ್ಳ್ಕೊಬೇಕು ಆಗಿನ್ ಕಾಲ್ದಾಗ ಹಾಗೇ… ಅಂಥಾದ್ದೆಲ್ಲಾ ಈಗೇನಿಲ್ಲ ಎಲ್ಲಾ ಬಟಾ ಬೈಲೂ… ಪ್ರೇಮಾ ತೋರ್ಸೋಕೂ ಒಂದಿನ ಬೇಕು – ಇಡೀ ದಿನಾ ಹುಯಿಲು… ಯಾರದೂ ತಪ್ಪು ಅನ್ನೊಂಗಿಲ್ಲ ಒಬ್ಬೊಬ್ರುದು ಒಂದೊಂದ್ ರೀತಿ… ಬದಲಾದ್ ಕಾಲದ್ ಜೊತೆ-ಜೊತೆಗೇನೆ ಬದಲಾಗ್ಬಾರ್ದು ಪ್ರೀತಿ… ಪ್ರೀತಿ ಅಂದ್ರೆ ಎದೆಗೂಡಲ್ಲಿ ಬೆಚ್ಚ್ಗಿಂದೊಂದು ಭಾವ…. ತೋರ್ಕೆ ಇದ್ರೂ ಮಿತವಾಗಿರ್ಲಿ ಹಿತವಾಗಿರ್ಲಿ ಜೀವಾ…
‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’
‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’ ‘ಜ್ಞಾನಿಯು ತಾನು ನಿರ್ಲಿಪ್ತಕರ್ಮವನ್ನು ಸಡಗರವಿಲ್ಲದೆ ಮಾಡುತ್ತಾ ಹೋಗುತ್ತಾನೆ. ಆದರೆ ಪ್ರಕೃತಿಯ ಗುಣ-ಕರ್ಮಗಳ ಮರ್ಮವನ್ನೂ, ಜೀವರ ವಿಕಾಸಪ್ರಕ್ರಿಯೆಯ ಸೂಕ್ಷ್ಮಗಳನ್ನೂ ಅರಿತಂತಹ ಆ ‘‘ಕೃತ್ಸ್ನವಿದನು’’ (ಸಮಗ್ರದರ್ಶನವುಳ್ಳವನು) ಪಕ್ವಮತಿಯಾಗಿರುತ್ತಾನೆ. ತನ್ನ ಜ್ಞಾನದಿಂದ ಮತ್ತೊಬ್ಬರನ್ನು ಪ್ರಭಾವಗೊಳಿಸಿ ವಿಚಲಿತಗೊಳಿಸಲು ಯತ್ನಿಸುವುದಿಲ್ಲ’ ಎನ್ನುವ ಕೃಷ್ಣನ ಮಾತನ್ನು ಚರ್ಚಿಸಿದ್ದೆವು. ಭೋಗಾಸಕ್ತಿ ಹಾಗೂ ಏಕಪಕ್ಷೀಯ ಆಲೋಚನೆಗಳಿಗೆ ಸಿಲುಕಿ ಅದರಂತೆ ಕರ್ಮವೆಸಗುವ ಅಕೃತ್ಸ್ನವಿದರನ್ನು (ಮುಗ್ಧರನ್ನು) ಒಮ್ಮೆಲೇ ಬದಲಿಸುವುದು ಸಾಧುವಲ್ಲ, ಸಾಧ್ಯವೂ ಇಲ್ಲ. ಹಾಗೆ ಮಾಡುವವನೂ ಅಕೃತ್ಸ್ನವಿದನೇ! ಅರೆಬರೆ ಜ್ಞಾನಾನುಭವಗಳನ್ನು ಹೊಂದುತ್ತಲೇ ಮನುಷ್ಯನು ಜಗಜನರನ್ನು ‘ಬದಲಾಯಿಸಲು’ ಹೊರಟುಬಿಡುತ್ತಾನೆ! […]
ಪರ್ಯಾಯ
ಪರ್ಯಾಯ ಒತ್ತಿ ಒತ್ತಿ ಕೂಗಿ ಹೇಳಿದ್ದೇ ಸತ್ಯವಾಗಬೇಕಿಲ್ಲ… ಗದ್ದಲವೂ ಅದಕ್ಕೆ ಕಾರಣವಿರಬಹುದು… ಕಂಡ ಕಣ್ಣೀರೆಲ್ಲ ಕರುಣೆಯದೇ ಆಗಬೇಕಿಲ್ಲ… ಧೂಳಿಗೂ ಇರಬಹುದು … ಮುಂಚಾಚಿದ ಹಸ್ತ ಸಹಾಯಹಸ್ತವೇ ಆಗಬೇಕಿಲ್ಲ… ಯಾಚನಾಹಸ್ತ- ವಾಗಿರಲೂ ಬಹುದು… ಆಡಿದ ಶಬ್ದಗಳೆಲ್ಲ ಮಾತುಗಳಾಗ- ಬೇಕಿಲ್ಲ… ಮನದ ಚಡಪಡಿಕೆಯ ಮುಕ್ತ ದಾರಿಯಾಗಿರಬಹುದು… ಹಾಗೆಯೇ ಬರೆದ ಸಾಲುಗಳೆಲ್ಲ ಕವನವಾಗಬೇಕಿಲ್ಲ… ಮನದ ತೆವಲಿಗೆ ಕಂಡುಕೊಂಡ ಪರ್ಯಾಯ ರೂಪವಾಗಿರಲೂ- ಬಹುದು…
ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು
ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು ‘ಗುಣ-ಕರ್ಮ-ವಿಭಾಗಗಳನ್ನು ತಿಳಿದಂತಹ ತತ್ವಜ್ಞನು, ಅದರಲ್ಲಿ ಮೋಹಾಸಕ್ತನಾಗುವುದಿಲ್ಲ. ಶಾಂತನೂ ನಿರ್ಲಿಪ್ತನೂ ಆಗಿ ಲೋಕಸಂಗ್ರಹಕ್ಕಾಗಿಯಷ್ಟೇ ಕರ್ಮವನ್ನಾಚರಿಸುತ್ತಾನೆ’ ಎನ್ನುವ ಕೃಷ್ಣನ ಮಾತನ್ನು ಚರ್ಚಿಸಿದ್ದೇವೆ. ಪ್ರಕೃತೇರ್ಗಣಸಂಮೂಢಾಃ ಸಜ್ಜಂತೇ ಗುಣಕರ್ಮಸು | ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ || 3.29 ‘ಪ್ರಕೃತಿಯ ಗುಣಗಳಲ್ಲಿ ಮೋಹ ಬೆಳೆಸಿಕೊಂಡವರು ಅದರಲ್ಲಿ ತುಂಬ (ಮಮಕಾರದಿಂದ) ತೊಡಗಿಕೊಳ್ಳುತ್ತಾರೆ. ಇಂತಹ ‘‘ಅಕೃತ್ಸ್ನವಿದ ’’ರನ್ನು ಕೃತ್ಸ್ನವಿದರು ವಿಚಲಿತಗೊಳಿಸಬಾರದು.’ ಕೃಷ್ಣನು ‘ಕೃತ್ಸ್ನವಿತ್’ (ಸಮಗ್ರಜ್ಞಾನವಿರುವವ) ಮತ್ತು ‘ಅಕೃತ್ಸ್ನವಿತ್’ (ಸಮಗ್ರಜ್ಞಾನವಿಲ್ಲದವ) ಎನ್ನುವ ಎರಡು ಬಗೆಯ ಜನರತ್ತ ಸೂಚಿಸುತ್ತಿದ್ದಾನೆ. ‘ಕೃತ್ಸ್ನ’ ಎಂದರೆ ‘ಸಮಗ್ರ’ ಎಂದರ್ಥ. ಎಲ್ಲವನ್ನೂ ಸಮಗ್ರಭಾವದಿಂದ […]
ಮದಗದ ಕೆರಿ
ಮದಗದ ಕೆರಿ ಕಣ್ಣ ತುಂಬೈತಿ ಮದಗದ ಕೆರಿ. ಹರಿವುದೆಲ್ಲಾ ಹಾಲಿನ ಹೊಳೆಯ ಸಿರಿ. ಸುತ್ತ ಹಸಿರು ಹೊಚಕೊಂಡು ಗುಪ್ತ ಕೂತಾಳು ಆರ್ಭಟ ಮಾಡಿಕೊಂಡು. ಬಾಳ ಮುನಿಸಿನಾಗ ಇರತಾಳ ಈಕಿ. ಹೋದವ್ರು ನೋಡಿ ಬರಬೇಕು ಬಾಳ ಜೋಕಿ. ಝುಳು ಝುಳು ಹರಿವಲ್ಲಿ ಹಾಡ್ತಾಳ ಹಾಡ ಧುಮು ಧುಮುಕಿ ಕೊಡ್ತಾಳ ತಾಳ ಮೇಳ ಮುತ್ತು ಹರಡ್ಯಾವ ಎತ್ತಿರೋ ಬೇಗ ಅಲ್ಲ! ನೊರೆ ಕಾಣ್ತಾದ ಮುತ್ತಿನ ಹಾಂಗ ಹೋಗ ಹಾದ್ಯಾಗ ಕೇಳ್ತಾದ ಗದ್ದಲ ಆಜುಬಾಜು ತುಂಬ್ಯಾಡ್ಯಾವ ನೀರಾವರಿಹೊಲ ಹುಣಸೆ, ಭತ್ತ, ಬೇವು […]
ಪ್ರೀತಿ – ಪ್ರೇಮ
ಪ್ರೀತಿ – ಪ್ರೇಮ ಪ್ರೀತಿ-ಪ್ರೇಮ ಏನೇ ಇದ್ರೂ ‘ಮುಚ್ಚಿದ ಮೊಗ್ಗಿದ್ಧ್ಹಾಗೆ’ ತಾನೆ ತಾನು ಅಳ್ರ್ಕೋಬೇಕು ಆಗಿನ್ ಕಾಲ್ದಾಗ್ ಹಾಗೇ… ಅಂಥಾದ್ದೆಲ್ಲಾ ಈಗೇನಿಲ್ಲ ಎಲ್ಲಾ ಬಟಾ ಬೈಲೂ… ಪ್ರೇಮಾ ತೋರ್ಸೋಕೂ ಒಂದಿನ ಬೇಕು-ಇಡೀ ದಿನಾ ಹುಯಿಲು… ಯಾರದೂ ತಪ್ಪು ಅನ್ನೊಂಗಿಲ್ಲ ಒಬ್ಬೋಬ್ರುದು ಒಂದೊಂದ್ ರೀತಿ… ಬದಲಾದ್ ಕಾಲದ್ ಜೊತೆ-ಜೊತೆಗೇನೆ ಬದಲಾಗ್ಬಾರ್ದು ಪ್ರೀತಿ… ಪ್ರೀತಿ ಅಂದ್ರೆ ಎದೆಗೂಡಲ್ಲಿ ಬೆಂಚ್ಚ್ಗಿಂದೊಂದು ಭಾವ… ತೋರ್ಕೆ ಇದ್ರೂ ಮಿತವಾಗಿರ್ಲಿ ಹಿತವಾಗಿರ್ಲಿ ಜೀವಾ…
ಗುಣಗಳೇ ಕರ್ಮಬೀಜಗಳು
ಗುಣಗಳೇ ಕರ್ಮಬೀಜಗಳು ‘‘ನೀನು ನಿರ್ಲಿಪ್ತಿಯಿಂದಿರುತ್ತ ಕರ್ಮವೆಸಗು. ಆದರೆ ಅದರ ಬಗ್ಗೆ ಲೌಕಿಕರಿಗೆ (ಭೋಗಫಲಾಸಕ್ತರಿಗೆ) ‘ಬುದ್ಧಿಭೇದ’ವನ್ನುಂಟು ಮಾಡಬೇಡ’’ ಎಂದು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ನಿರ್ಲಿಪ್ತಿಯನ್ನೂ ನೀತಿಯನ್ನೂ ಆದರ್ಶಗಳನ್ನೂ ‘ಆಚಾರ’ಕ್ಕೆ ಬಳಸುವುದಕ್ಕಿಂತ ಹೆಚ್ಚಾಗಿ ‘ಪ್ರಚಾರ’ಕ್ಕೇ ಬಳಸುವವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ‘ನಿರ್ಲಿಪ್ತಿಯಿರುವುದು ಉಪದೇಶಕ್ಕಾಗಿ ಅಲ್ಲ, ಅನುಷ್ಠಾನಕ್ಕಾಗಿ’ ಎನ್ನುವ ಕೃಷ್ಣನ ಈ ಮಾತು ಅತ್ಯಂತ ಪ್ರಸ್ತುತವಾಗಿದೆ. ‘ಹಾಗಾದರೆ, ಸತ್ಯಧರ್ಮಗಳ ವ್ಯವಸ್ಥೆಯನ್ನು ಮುಕ್ತಕಂಠದಿಂದ ಬೆಂಬಲಿಸುತ್ತ, ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವುದು ತಪ್ಪೇ?’, ‘ದಾರಿ ತಪ್ಪುತ್ತಿರುವವರು ಸನ್ಮಾರ್ಗಕ್ಕೆ ಬರಲಿ ಎಂಬ ಸದುದ್ದೇಶದಿಂದ ನಾಲ್ಕು ಮಾತುಗಳನ್ನು […]