Your Cart

Need help? Call +91 9535015489

📖 Print books shipping available only in India. ✈ Flat rate shipping

ಮುಂಗಾರು

ಶುರುವಾಯ್ತು ಮಾಸಾರಂಭಕೆ ಮುಂಗಾರು ಪೂರ್ತಿಬಿಟ್ಟಿರಲಿಲ್ಲ ಇನ್ನೂ ಹಿಂಗಾರು ಜಡಿಯಾಗಿ ಹಿಡಿದದ್ದು ಜಡ್ಡಾಗುವ ತನಕ ಬಿಡಲಿಲ್ಲ ಛಿ.ಛೀ.ಛೀ …ಸೀನಿಸೀನಿ ನೆಗಡಿ ನಿಲ್ಲಲಿಲ್ಲ ದಿನವಿಡೀ ಕಿವಿಯಲ್ಲಿ ಗುಂಯ್ ಗುಟ್ಟಿತು ಜಿಟಿಜಿಟಿ ಸದ್ದು ಇರಗೊಡದು ನಿಲಗೊಡದು ಹೊರಹೆಜ್ಜೆ ಇಡಗೊಡದು ಸಪ್ತದಿವೂ ಕಾರ್ಮೋಡ ಕವಿದಿರಲು ಬೇಸರವೂ ನೇಸರನ ಕಾಣದಿರಲು ಆಫೀಸು ಕೆಲಸವೆಂಬಂತೆ ಸರಿಸಮಯಕೆ ಶುರುವಾಗಿ ಮನೆಕಾಣುವ ಸಮಯದಿ ಧಬಧಬನೆ ಸುರಿವುದು ಯಾಕಾಗಿ? ಬಟ್ಟೆಬರೆ ಒಣಗದೇ ಹಸಿಹಸಿ ತೊಡಬೇಕು ಭಾಸ್ಕರನೇ ಬಾ ಎಂದು ಕ್ಷಣಕ್ಷಣಕೂ ಪ್ರಾರ್ಥಿಸಬೇಕು ಹೇಗೆ ವರ್ಣಿಸಲಿ ಮಳೆರಾಯನ ಕಸರತ್ತು ರಸ್ತೆಗಳಗುಂಟ ತೆಗ್ಗುದಿಣ್ಣೆಗಳ […]

ಧಾರವಾಡ ಮಳೆ

ಧಾರವಾಡ ಮಳೆ ಹತ್ತೇ ಹತ್ತಿತು ಮಳೆ ಕೊಚ್ಚಿ ಹೋಯಿತು ಧರೆಯ ಕೊಳೆ ಹಚ್ಚ ಹಸಿರಾಗಿ ಥಳ ಥಳಿಸಿದಳು ಇಳೆ ರೈತನ ಮುಖದಲ್ಲಿ ಬಂತಲ್ಲಾ ಕಳೆ ಆದರೇನು ಮಾಡುವುದು ಹತ್ತಿದ ಮಳೆ ಬಿಡಲಿಲ್ಲ ಇಳೆಗೆ ಹತ್ತಿದ ನೆಗಡಿ ನಿಲ್ಲಲಿಲ್ಲ ಬಾಗಿಬಾಗಿ ನೆಲಕಚ್ಚಿದವು ಗಿಡಗಳೆಲ್ಲ ಹಿಡಿದಿಡಲು ನೀರು ಬೇಸರವಾಯ್ತು ಬೇರುಗಳಿಗೆಲ್ಲಾ ರವಿಕಿರಣ ಭುವಿಗೆ ಸ್ಪರ್ಷಿಸುವುದಾಗಿರೆ ವಿರಳ ಭಾಸ್ಕರನದು ವರುಣನೊಡನೆ ಜೋರು ಜಗಳ ತುಂಬಿ ಹರಿದು ಕೋಡಿ ಬಿದ್ದಿರೆ ನದನದಿ,ಕೆರೆ,ಕೊಳ್ಳ ಜಲಪಾತ ಧುಮುಕಿ ಉಕ್ಕಿ ಹರಿದಿರೆ ಕಣ್ಣಿಗೆ ಥಳಥಳ ಜಿಟಿಜಿಟಿ ಬಿಡದೆ […]

ಕಷ್ಟ

ಕಷ್ಟ ಒಂದೊಂದಾಗಿ ಮೆಟ್ಟಿಲು ಏರುವಾಗ ತುಸು ಕಷ್ಟವೆನಿಸಬಹುದು… ಹಾಗೆಂದು ನಿಲ್ಲುವ ತಪ್ಪು ಮಾಡಬೇಡ… ಒಮ್ಮೆ ಹತ್ತಿ ಸುತ್ತಲೂ ನೋಡು… ಆ ಸುಂದರ ವಿಶಾಲ ನೋಟ ತುಂಬಾ ತುಂಬಾ ಇಷ್ಟವೆನಿಸಬಹುದು.

ಸರಬಡಗಿ ಆಟ!

ಸರಬಡಗಿ ಆಟ! ಬಂದೇ ಬಂತು ಮೇ ರಜೆ ಆಟಕೆ ಇರದು ಸಜೆ ಓದಲು ಬರೆಯಲು ಇರದು ಯಾರದೂ ಕಾಟ ದಿನವೆಲ್ಲ ಬರೆ ಭಿನ್ನ ವಿಭಿನ್ನ ಆಟ ಊಟ ಗೀಟ ನೆನಪಾಗದು ಈಗ    ಪಾಟೀಚೀಲ ಮರೆತೆವು ಬೇಗ ಅಪ್ಪ, ಅಮ್ಮ, ಯಾರೇ ಬಂದರು ಜಗ್ಗುವುದಿಲ್ಲ ಏನೇ ಬೈದರು ದಿನವಿಡಿ ಹಿಡಿಯುತ ಬಡಗಿ ಕೈಯಲ್ಲಿ ದೂರದೂರಕೆ ತೂರುತ ಹಾದಿಯಲಿ ದೊಡ್ಡ ಗುಂಪನು ಕಟ್ಟಿಹೆವು ನಿರ್ಜನ ಹಾದಿ ಹಿಡಿಯುವೆವು ಅಕ್ಕ, ಪಕ್ಕದ ಮನೆಯ ಹುಡುಗರು ಪಕ್ಕದ ಬೀದಿಯ ಹಳೆಯ ಗೆಳೆಯರು […]

ನಮ್ಮೊಳಗಿನ ಕಾಮವೇ ವೈರಿ

ನಮ್ಮೊಳಗಿನ ಕಾಮವೇ ವೈರಿ ‘ಗೊತ್ತಿದ್ದರೂ, ಮನಸ್ಸಿಲ್ಲದಿದ್ದರೂ ಮನುಷ್ಯನು ಯಾವುದರ ಬಲವಂತದ ಪ್ರಚೋದನೆಯಿಂದಾಗಿ ಪಾಪವೆಸಗುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ; ‘ರಜೋಗುಣದಿಂದ ಹುಟ್ಟುವ ಕಾಮ ಅಥವಾ ಕ್ರೋಧವೆನ್ನುವ ವೈರಿಯು ಮುಗಿಯದ ಭೋಗೇಚ್ಛೆಯನ್ನು ಹುಟ್ಟಿಸಿ ಮನುಷ್ಯನಿಂದ ಪಾಪವನ್ನು ಮಾಡಿಸುತ್ತದೆ’ ಎಂದು. ಕಾಮವು ಪೂರೈಕೆಯಾದರೂ, ಆಗದಿದ್ದರೂ ಮನುಷ್ಯನನ್ನು ದಾರಿ ತಪ್ಪಿಸುವುದುಂಟು. ಬಯಕೆ ಪೂರ್ತಿಯಾದರೆ ಮತ್ತಷ್ಟು ಬೇಕೆಂಬ ‘ಲೋಭ’ ಹುಟ್ಟುತ್ತದೆ! ಪಡೆದ ಮೇಲೆ ಅದನ್ನೆಲ್ಲ ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲ ಮೂಡುತ್ತದೆ! ಕಾಮವು ನನಸಾಗದಿದ್ದರೆ? ‘ಅವರಿಂದಾಗಿ ಬಯಸಿದ್ದು ಕೈಗೆ ದಕ್ಕಲಿಲ್ಲ’ ಎನ್ನುತ್ತ ಅವರಿವರ […]

ಉಳವಿ ಬಸಪ್ಪನ ಜಾತ್ರಿ

ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ ಮೂರು ಸಂಜಿ ಆತ ಅಂದ್ರ ನಡಿ ಮಾಳಮಡ್ಡಿ ಬಸಪ್ಪನ ಜಾತ್ರಿ ಸಡ್ಲ ಇಲ್ಲದ ಗುಡಿಗೂ ಪಾಳಿ ಮಿರ್ಚಿ ಟೆಂಟಗೂ ಪಾಳಿ….ಬಿಟ್ರ ಹಾರು ಪುಗ್ಗಾದ ಮಜಾ. ತಿರಗೂ ಜೋಕಾಲಿ, ಹೇ ಅಂದಂಗ ಮರತ ಬಿಟ್ಟಿದ್ದೆ ಸಣ್ಣ […]

ನಿನಗಾವ ಬಯಕೆಯೋ?

ನಿನಗಾವ ಬಯಕೆಯೋ? ಬಯಸಿದ ಬದುಕು ಬರುವುದಿಲ್ಲ ಬೇಡಿದ ಇಚ್ಛೆ ಈಡೇರುವುದಿಲ್ಲ ಇರುವುದನ್ನು ಅನುಭವಿಸುವ ಮನಸ್ಸಿಲ್ಲ ಇರದಿರುವುದ ನೆನೆದು ಪರಿತಪಿಸುವುದ ಬಿಡುವುದಿಲ್ಲ ಭಗವಂತನಿಚ್ಛೆ ಆಸೆ ಬಿಡದಿರೆ ಕೊಡುವುದಿಲ್ಲ ಆಸೆಗಳ ಬಿಟ್ಟೊಡೆ ಕೊಡುವುದ ಮರೆವುದಿಲ್ಲ ಸೃಷ್ಟಿಕರ್ತನ ಜನನ ಮರಣ ಚಕ್ರದಲ್ಲಿ ಸಾಗಬೇಕು ಏರಿಳಿತಗಳ ಜೀವನ ನೌಕೆಯಲ್ಲಿ ಶ್ರದ್ಧೆ ,ಭಕ್ತಿ, ಧರ್ಮದಿಂದ ಉತ್ಸಾಹದಿ ಸಾಗುತಿರೆ ಚೈತನ್ಯ, ಶಾಂತಿ, ಅರಿವಿಲ್ಲದೆ ಮೈದುಂಬುತಿರೆ ದೋಣಿ ದಡವ ಸೇರುವುದು ಅಲೆಗಳ ಆರ್ಭಟಕೆ ಸಿಲುಕದಂತೆ ದೈವ ಮೆಚ್ಚಿ ಸಲಹುವನು ಎಲ್ಲಿಯೂ ಬಿರುಕು ಬಾರದಂತೆ    –  ಉಮಾ […]

ನನ್ನವರು

ನನ್ನವರು ಗೆಳತಿ ಕೇಳಿದಳು, “ನಿನ್ನವನನ್ನವ ಅಂದುಕೊಂಡವರು ನಿನ್ನ ಬಿಟ್ಟು ಹೋದರೆ ನಿನಗೆ ಏನನಿಸುತ್ತದೆ?” ನಾನೆಂದೆ… “ನನ್ನವರಾರೂ ನನ್ನನ್ನು ಬಿಟ್ಟು ಎಲ್ಲೂ ಹೋಗುವದಿಲ್ಲ… ಹಾಗೆ ಹೋದವರು ನನ್ನವರಲ್ಲ!”

ಕುಗ್ಗಿದ ಭಾವುಕತೆ ಹಿಗ್ಗಿದ ಜಿಜ್ಞಾಸೆ

ಕುಗ್ಗಿದ ಭಾವುಕತೆ ಹಿಗ್ಗಿದ ಜಿಜ್ಞಾಸೆ ‘ಕ್ಷಣಿಕ ಆಕರ್ಷಣೆಗೊಳಪಟ್ಟು ಸ್ವಧರ್ಮ ಬಿಟ್ಟು, ಬೇರೆಯವರದನ್ನು ಅನುಕರಿಸುವ ಚಾಪಲ್ಯವು ಸರ್ವಥಾ ಶ್ರೇಯಸ್ಕರವಲ್ಲ’ ಎಂಬ ವಿಚಾರವನ್ನು ಕೃಷ್ಣ ಹೇಳುತ್ತಿದ್ದನು. ಇದೀಗ ಸ್ವಧರ್ಮ ಎಂಬ ಮೂಲಚರ್ಚೆಗೇ ಹಿಂದಿರುಗಿ ತನ್ನ ಅಭಿಮತವನ್ನು ನಿಶ್ಚಿತವಾಗಿ ತಿಳಿಸುತ್ತಿದ್ದಾನೆ; ‘ಸ್ವಧರ್ಮವನ್ನು (ಕರ್ತವ್ಯ) ನಿಭಾಯಿಸುವುದೇ ಸರ್ವಥಾ ಶ್ರೇಯಸ್ಕರ’ ಎಂದು. ಇಷ್ಟು ಹೊತ್ತು ಆಲಿಸಿದ ಅರ್ಜುನನ ಕ್ಲೇಶ ಕರಗಿ, ಸಹಜಸ್ಥಿತಿಗೆ ಬಂದಿದ್ದಾನೆ. ಸ್ವಜನರ ಮಮಕಾರದಿಂದೆದ್ದ ಅಸ್ಥಾನ-ಕಾರುಣ್ಯ, ದುಃಖಗಳು ಕುಗ್ಗಿವೆ. ಕಾರ್ಯಾಕಾರ್ಯಗಳ ಬಗೆಗಿನ ದ್ವಂದ್ವ ಕರಗಿದೆ, ಭಾವುಕತೆಯ ಮೋಡ ಚದರಿ ಸ್ಪಷ್ಟತೆ-ದೃಢತೆಗಳು ಮೂಡುತ್ತಿವೆ. ಆತ್ಮನಿರೀಕ್ಷಣೆ […]