ಪುಷ್ಪನಾನಾಗ ಬೇಕು

ಪುಷ್ಪನಾನಾಗ ಬೇಕು

ಪುಷ್ಪನಾನಾಗ ಬೇಕು ದೇವ ನಿನ್ನ
ಚರಣದಿ ಹೊಯ್ಯ್ದಾಡಲು
ಒಮ್ಮೆ ಬಾಗಿಲಿನ ತೋರಣವಾಗಿ
ಇನ್ನೊಮ್ಮೆ ಹೊಸಿಲ ಭಾಗ್ಯಕಾಗಿ
ಮುತ್ತ್ಯದೆಯರ ಸೌಭಾಗ್ಯವಾಗಿ
ಬದುಕ ಬೇಕು ಘಳಿಗೆಯಾದರು
ಶ್ರೇಷ್ಟತನದಿ ಹೂವು ನಾನಾಗಿ

ಅರ್ಚನೆಯ ದಳವಾಗಿ
ಸುಖನಾಸಿಯ ಶೃಂಗಾರವಾಗಿ
ಪ್ರಭಾವಳಿಯ ಪ್ರಭೆಯು ನಾನಾಗಿ
ಶ್ರೇಷ್ಟ ಮೂರುತಿ ನಿನ್ನ ಕುಳ್ಳಿರಿಸಿಹ
ಕಟ್ಟೆಯ ಸಿಂಗಾರವಾಗಿರಲು ಮನಸ್ಸು
ಹಾತೊರೆಯಿತಿಂದು ಹೃದಯ ಮೃದುವಾಗಿ
ಅಲ್ಪ ನನಗೆ ಕೊಡು ನೀ ವರವನಿಂದು

ನಿನ್ನ ಪಾದ ಕಮಲದಲ್ಲಿ
ನಿನ್ನ ಹೃದಯ ಮಧ್ಯದಲ್ಲಿ
ನಿನ್ನ ಕೊರಳ ಹಾರದಲ್ಲಿ
ನಿನ್ನ ಮುಕುಟ ಶಿಖರದಲ್ಲಿ
ರಾರಾಜಿಸಿ ಸುಘಂಧ ಬೀರ್ವ
ಅಲ್ಪ ಆಯು ಕುಸುಮವಾಗಿ ಇರಲು
ಆನುಮತಿ ನೀಡೆನಗೆ ಪುಷ್ಪವಾಗಲು!

                        -ಉಮಾ ಭಾತಖಂಡೆ.

1 Comment

Leave a Reply