Your Cart

Need help? Call +91 9535015489

📖 Print books shipping available only in India. ✈ Flat rate shipping

ನನಗೆ ಸಮಯವೇ ಇಲ್ಲ

ನನಗೆ ಸಮಯವೇ ಇಲ್ಲ ನನ್ನ ಸ್ನೇಹಿತರೊಬ್ಬರಿಗೆ ಧಾರವಾಡದಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿತ್ತು. ಅವರಿಗೆ ಒಂದು ಬೀಳ್ಕೊ ಡುಗೆ ಇಟ್ಟುಕೊಳ್ಳುವುದಕ್ಕೆ ನಾವೆಲ್ಲ ಸ್ನೇಹಿತರು ನಿಶ್ಚಯಿಸಿದ್ದೆವು. ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಸಂಪರ್ಕಿಸಿದಾಗ ಕಪ್ಪೀ ತೂಕ ಮಾಡಿದ ಅನುಭವವಾಗಿತ್ತು. ಎಲ್ಲರಿಗೂ ಒಂದೊಂದು ಸಮಸ್ಯೆ. ಯಾರಿಗೂ ಸಮಯವೇ ಇಲ್ಲ! ಇವತ್ತಿನ ಗಡಿಬಿಡಿ ಜೀವನದಲ್ಲಿ ಯಾರಿಗೂ ಯಾವುದಕ್ಕೂ ಸಮಯವೇ ಇಲ್ಲ. ಪ್ರತಿಯೊಂದು ಕಾರ್ಯವೂ ಒತ್ತಡದಿಂದಲೇ ಆರಂಭ. ಬೆಳಗಿನ ಚಹಾ, ಸ್ನಾನ, ತಿಂಡಿ, ತಿನಸು, ಆಫೀಸು… ಅಲ್ಲಿಯ ಕೆಲಸ. ಮಾನಸಿಕ ಒತ್ತಡ, ದೈಹಿಕ ಒತ್ತಡ.. ಈ ಒತ್ತಡಗಳನ್ನು […]

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ…

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ… ಅದೊಂದು ಕಾಲವಿತ್ತು. ಆಸಕ್ತಿ, ಅರ್ಹತೆ, ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದರು. ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ. ನಮ್ಮ ಮನೆಯಲ್ಲಿ ಬಹಳಷ್ಟು ಆಸಕ್ತಿ, ಒಂದಿಷ್ಟು ಅರ್ಹತೆ ಬಿಟ್ಟರೆ ಅನುಕೂಲಗಳು ಶುನ್ಯ. “ಒಂದೂರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ. ಅವನಿಗೆ ಮನೆತುಂಬ ಮಕ್ಕಳು” ಎಂದು ಕಥೆ ಸುರುವಾದರೆ “ನಮ್ಮವಲ್ಲ ತಾನೇ” ಅನಿಸಿಬಿಡುವಷ್ಟು ಸಾಮ್ಯತೆ. ನಮ್ಮ ಅಣ್ಣನಿಗೋ ಹೇಗಾದರೂ ಕಲಿಯಲೇ ಬೇಕು ಎಂಬ ಹಟ. ಊರಲ್ಲಿ ಹೈಸ್ಕೂಲ್ ಇರಲಿಲ್ಲವಾದ್ದರಿಂದ […]

ಬಹುತ್ವದ ನೆಲೆಗಳ ಮಹಾಯಾತ್ರಿಕ

ಕಳೆದ ಶತಮಾನದ ಮೂರನೆಯ ದಶಕ –ಕರ್ನಾಟಕ, ಕರ್ನಾಟಕತ್ವ, ಇವುಗಳ ಬಗೆಗೂ ಕರ್ನಾಟಕ ಏಕೀಕರಣದ ಬಗೆಗೂ ಚಿಂತಿಸುತ್ತ, ನಾಡಿನಲ್ಲಿ ಎಚ್ಚರ ಹುಟ್ಟಿಸುತ್ತಿದ್ದ ಕಾಲ. ದ.ರಾ.ಬೇಂದ್ರೆ, ಶಂಬಾ ಜೋಶಿ, ಬೆಟಗೇರಿ ಕೃಷ್ಣಶರ್ಮಾ ಮುಂತಾದ ಗೆಳೆಯರ ಬಳಗದ ಧಾರವಾಡದ ಸಾಹಿತಿಗಳೂ, ಸಂಶೋಧಕರೂ ಒಂದಾಗಿ ಕನ್ನಡವನ್ನು ಧ್ಯಾನಿಸುತ್ತಿದ್ದರು. ಇವರೆಲ್ಲರಿಗೂ ಹಿರಿಯರಾಗಿದ್ದ ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ದೇಶಪಾಂಡೆ ಗಂಗಾಧರರಾಯರು ಕನ್ನಡವನ್ನು ಬಳಸಿಕೊಳ್ಳುವಲ್ಲಿ ಬೆಳೆಸುವಲ್ಲಿ ನಡೆಸುತ್ತಿದ್ದ ಹೋರಾಟ ಅನನ್ಯವಾಗಿತ್ತು. ಇಂಥ ಸಂದರ್ಭದಲ್ಲೇ ಶಂ.ಬಾ.ಜೋಶಿ ಅವರ ‘ಕಣ್ಮರೆಯಾದ ಕನ್ನಡ’ 1933ರಲ್ಲಿ ಪ್ರಕಟವಾಯಿತು. ದ.ರಾ.ಬೇಂದ್ರೆ ಅವರ ಮೊದಲ […]

ಪರ್ವ: ಭಾವ- ಸ್ವಭಾವಗಳ ಶೋಧ

ಕಾದಂಬರಿ ರಚನೆಯಾಗಿ ನಾಲ್ಕು ದಶಕದ ನಂತರವೂ ಅದರ ಕುರಿತು ಚರ್ಚೆಯಾಗುತ್ತಿರುವುದು ಎಸ್‌.ಎಲ್‌. ಭೈರಪ್ಪನವರ ‘ಪರ್ವ’ದ ಹೆಚ್ಚುಗಾರಿಕೆ. ಮಾನವ ಇತಿಹಾಸದಲ್ಲಿ ಮಹಾಭಾರತದಂತಹ ಘಟನಾವಳಿಗಳು ನಡೆದಿದ್ದರೆ ಹೇಗೆಲ್ಲ ನಡೆದಿರಲು ಸಾಧ್ಯ ಎನ್ನುವ ಕಲ್ಪನೆಯನ್ನು ಈ ಕಾದಂಬರಿ ಓದುಗರ ಕಲ್ಪನೆಗೆ ತರುತ್ತದೆ. ವರ್ತಮಾನ ಕಾಲದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುತ್ತಿರುವ ಲೇಖಕರ ಪೈಕಿ ಬಹುಶಃ ‘ಪ್ಯಾನ್ ಇಂಡಿಯನ್’ ಎನ್ನಬಹುದಾದ ಏಕೈಕ ಕಾದಂಬರಿಕಾರರೆಂದರೆ ಎಸ್. ಎಲ್. ಭೈರಪ್ಪ. ಅವರಿಗೆ ಹಿಂದಿ, ಮರಾಠಿ ಸೇರಿದಂತೆ ಕನ್ನಡೇತರ ಭಾರತೀಯ ಭಾಷೆಗಳಲ್ಲಿ ದೊಡ್ಡ ಸಂಖ್ಯೆಯ ಓದುಗರಿರಲು ಕಾರಣ […]

ಭೇದವೆಣಿಸದ ಸಮದರ್ಶಿ

ಭೇದವೆಣಿಸದ ಸಮದರ್ಶಿ ‘ಜ್ಞಾನ-ನಿರ್ಧತ-ಕಲ್ಮಶರು’ (ಜ್ಞಾನದಿಂದ ಶುದ್ಧರಾದವರು) ಮೋಹಬಂಧಗಳಿಂದ ಮೇಲೆದ್ದು ತತ್ವದೆತ್ತರಕ್ಕೆ ಏರುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಅಂತಹ ಜ್ಞಾನಿಗಳು ಲೋಕವನ್ನು ಹೇಗೆ ಕಾಣುತ್ತಾರೆ ಎನ್ನುವುದನ್ನು ವಿವರಿಸುತ್ತಾನೆ; ಪಂಡಿತನಾದವನು ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನಲ್ಲಿಯೂ, ಸಿಂಹದಲ್ಲೂ, ಆನೆಯಲ್ಲೂ, ನಾಯಿಯಲ್ಲೂ, ನಾಯಿಮಾಂಸವನ್ನು ಸೇವಿಸುವಂತಹವನಲ್ಲೂ ಸಮದರ್ಶಿಯಾಗಿರುತ್ತಾನೆ. (ಭ.ಗೀ.: 5.17) ಕಣ್ಣಿಗೆ ಮೇಲೆ ಮೇಲೆ ಕಾಣುವ ತಾರತಮ್ಯಗಳನ್ನು ನೋಡಿ ತಾನೆ ಮನುಷ್ಯನು ಭೇದವೆಣಿಸುವುದು! ಈ ಬಾಹ್ಯದ ತಾರತಮ್ಯಗಳನ್ನು ಅತಿಕ್ರಮಿಸಿ, ಒಳಗಿರುವ ಭಗವತ್ತತ್ವವನ್ನು ನೋಡಿದರೆ, ಭೇದಭಾವದ ಭ್ರಾಂತಿ ಉಳಿಯದು. ಸಮಸ್ತ ಚರಾಚರದಲ್ಲೆಲ್ಲ ತುಂಬಿರುವುದು ಏಕೈಕ ಭಗವಚ್ಚೈತನ್ಯವೇ ಎಂದು […]

ಸಿಖ್ಖರ ಕೊನೆಯ ಗುರು ಗುರುಗೋವಿಂದ ಸಿಂಹ

ಕಾಶ್ಮೀರದ ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡುವ ಮೊದಲು ತನ್ನನ್ನು ಮತಾಂತರ ಮಾಡು – ಎಂದು ಮೊಘಲ್ ದೊರೆ ಔರಂಗಜೇಬನಿಗೆ ಸವಾಲೆಸೆದವರು ಸಿಖ್ಖರ ಒಂಬತ್ತನೆಯ ಗುರು ತೇಗ್ ಬಹಾದ್ದೂರ್ ಅವರು. ಅವರನ್ನು ಮತಾಂತರಕ್ಕೆ ಒಪ್ಪಿಸಲು ಸಾಧ್ಯವಾಗದಿದ್ದಾಗ ಅವರ ತಲೆಯನ್ನು ಕತ್ತರಿಸಿದ ಔರಂಗಜೇಬ್. ಧರ್ಮರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಅಂತಹ ಗುರು ತೇಗ್ ಬಹಾದ್ದೂರ್ ಅವರ ಮಗನೇ ಗುರು ಗೋವಿಂದ ಸಿಂಹ. 1666ರ ಜನವರಿ 5ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಗೋವಿಂದ ರಾಯ್ ಮನಸ್ಸಿನಲ್ಲಿ ತಂದೆಯ ಬಲಿದಾನವನ್ನು ನೆನಪು ಹಚ್ಚಹಸಿರಾಗಿತ್ತು. ಹಿಂದುಗಳು […]

ಸಂಗಾತ ೨ನೇ ವರ್ಷಾಚರಣೆ : ೫ ಪುಸ್ತಕಗಳ ಲೋಕಾರ್ಪಣೆ

ಸಂಗಾತ (ತ್ರೈಮಾಸಿಕ ಪತ್ರಿಕೆ) ೨ನೇ ವರ್ಷಾಚರಣೆ ಹಾಗೂ ೫ಪುಸ್ತಕಗಳ ಲೋಕಾರ್ಪಣೆ ಸಮಯ:ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ,ಪುಸ್ತಕಗಳ ಲೋಕಾರ್ಪಣೆ:ಎಚ್.ಎಸ್.ರಾಘವೇಂದ್ರರಾವ ಸಂಗಾತ ಅವಲೋಕನ:ಮೇಟಿ ಮಲ್ಲಿಕಾರ್ಜುನ; ಉಪಸ್ಥಿತಿ:ಟಿ.ಎಸ್.ಗೊರವರ, ಸಂಪಾದಕರು, ಸಂಗಾತ ತ್ರೈಮಾಸಿಕ ಸಾಹಿತ್ಯಪತ್ರಿಕೆ; ಸಂಗಾತ ಕಥಾ ಬಹುಮಾನ ಪ್ರಧಾನ ಕಾರ್ಯಕ್ರಮ, ಉಪಸ್ಥಿತಿ:ಜಿ.ಪಿ.ಬಸವರಾಜು, ವಿನಯಾ ವಕ್ಕುಂದ.ದಿನಾಂಕ:೦೮/೦೧//೨೦೨೦,ಭಾನುವಾರ ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನ , ಧಾರವಾಡ. ಕಥಾ ಬಹುಮಾನ ವಿತರಣೆ: ಮಧ್ಯಾನ್ಹ:೧೨.೩೦ ರಿಂದ ೨ ಘಂಟೆ. ಬಹುಮಾನಿತ ಕತೆ:ಜಾಲಗಾರ-ದಾದಾಪೀರ್ ಜೈಮನ್ ಒಪ್ಪಿತ ಕತೆಗಳು:ಹಿಂಡೆಕುಳ್ಳು,ಅಮರೇಶ ಗಿಣಿವಾರ,ಗಾಯದ ಬೆನ್ನು-ಸಂಗನಗೌಡ ಹಿರೇಗೌಡ ೫ ಪುಸ್ತಕಗಳ ಲೋಕಾರ್ಪಣೆ:೧.ಅಕಥ ಕಥಾ(ಕಥಾ ಸಂಕಲನ):ಕೇಶವ ಮಳಗಿ,೨.ಕಥಾಗತ(ಕಥಾ ಸಂಕಲನ):ಮಂಜುನಾಥ ಲತಾ ೩.ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು(ಕಥಾ ಸಂಕಲನ):ಶಾಂತಿ ಕೆ. ಅಪ್ಪಣ್ಣ,೪.ಬ್ರಾಹ್ಮಣ ಕುರುಬ(ಪ್ರಬಂಧಗಳು), ನರಸಿಂಹಮೂರ್ತಿಪ್ಯಾಟಿ.೫.ಒಂದು ಖಾಲಿ ಕುರ್ಚಿ(ಕಥಾ ಸಂಕಲನ): ವಿಜಯ ಹೂಗಾರ್. ಪುಸ್ತಕಗಳ ಕುರಿತು ಮಾತು:ರಂಗನಾಥ ಕಂಟನ ಕುಂಟೆ,ನರಸಿಂಹನೂರ್ತಿ ಹಳೇಹಟ್ಟಿ,ಜಹಾನಂ ಆರಾ ಕೋಳೂರು ಎಲ್ಲರಿಗೂ ಪ್ರೀತಿಯ ಆಹ್ವಾನ

ಮನದಾಗಿನ-ಗದ್ದಲ

ಮನದಾಗಿನ ಗದ್ದಲ ಎದಿಯೊಳಗ ಇದೇನ ಗದ್ದಲ ಎಬ್ಬಿಸಿ ಕದ್ದು ನೋಡತೀ ಕದ್ದು ಮಾತಾಡತೀ ಹೇಳಾಕ ಕೇಳಾಕ ಆಗದ ಅಂಜತಿ ಇದೇನ ನನ್ನೊಳಗ ಗದ್ದಲ ಎಬ್ಬಿಸಿ! ಒಬ್ಬವ ಕೂತು ಚಿತ್ರಪಟ ನೋಡತಿ ನೆನಪ ಮಾಡಕೊಂಡು ಹಳೇ ಸಿನೆಮಾ ಹಾಡ ಹೇಳತಿ ನಕ್ಕರೆ ಸಾಕು ಜಗತ್ತು ಗೆಲ್ಲತೀನನ್ನತಿ ಇದೇನ ಗದ್ದಲ ಎಬ್ಬಿಸಿ ಮನಸ್ಸಿನ ಎಲ್ಲಾ ಭಾಷಾ ತಿಳಕೋತಿ ಕಣ್ಣಾಗ ಆಂಜಬ್ಯಾಡ ನಾ ಇದ್ದೀನಿ ಅನ್ನತಿ ಮಾರಿ ಇಳಿತಂದ್ರ ತ್ರಾಸ ನೀ ಪಡತಿ ಇದೇನ ಗದ್ದಲ ಎಬ್ಬಿಸಿ ಮನದಾಗ ಪ್ರೀತಿ ಚಿಗರಸತಿ […]

ಮಕ್ಕಳಿವರೇನಮ್ಮ…. ನಮ್ಮ?

ಮಕ್ಕಳಿವರೇನಮ್ಮ…. ನಮ್ಮ? ನಾವು ಚಿಕ್ಕವರಿದ್ದಾಗ ಕೂಡು ಕುಟುಂಬಗಳೇ ಹೆಚ್ಚು. ಮನೆಯಲ್ಲಿ ಅಜ್ಜ, ಅಜ್ಜಿ, ಕಾಕಾ, ಕಾಕು, ಅತ್ತೆ… ಅಮ್ಮ ಅಪ್ಪನಂತೂ ಸೈಯೇ ಸೈ. ನಮ್ಮ ಬಾಲ್ಯದಲ್ಲಿ ನಮಗೆ ನಮ್ಮ ಪಾಲಕರು ಕೊಡುತ್ತಿದ್ದ ಮೊದಲ ಪಾಠ ಹಿರಿಯರನ್ನು ಗೌರವಿಸಿ ಎಂಬುದು. ಅಜ್ಜನಂತೆ ನಟನೆ ಮಾಡುತ್ತ ಕೆಮ್ಮಿದರೆ, ಅಜ್ಜಿಯಂತೆ ಸೀನಿದರೆ, ದೊಡ್ಡರಿಂದ ಬೈಸಿಕೊಳ್ಳುತ್ತಿದ್ದೆವು. ಅವರು ಒಳಗಿನಿಂದ ಕೂಗಿದರೆ ಇದ್ದಲ್ಲಿಂದ ಓಡಿ ಹೋಗಬೇಕು. ಇಲ್ಲವಾದರೆ ದೊಡ್ಡವರು ಬೈಯುತ್ತಿದ್ದರು. ಮನೆಯ ಎಲ್ಲ ನಿರ್ಣಯಗಳೂ ಅವರ ನೇತೃತ್ವದಲ್ಲಿಯೇ ನಡೆಯಬೇಕು. ಅವರ ಮಾತೇ ಅಂತಿಮ. ಅವರಿಗೆ […]