ದಿನಾಂಕ : ೦೪.೧೧.೨೦೧೮ ರಂದು ಗೋಕಾಕನಲ್ಲಿ ನಡೆದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಬಸವರಾಜ ಕಟ್ಟಿಮನಿ ಕಾದಂಬರಿ , ಕಥೆ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭ ಹಾಗೂ ಯುವ ಸಾಹಿತ್ಯ ಪುರಸ್ಕಾರ ಸಮಾರಂಭ

ದಿನಾಂಕ : ೦೪.೧೧.೨೦೧೮ ರಂದು ಗೋಕಾಕನಲ್ಲಿ ನಡೆದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಬಸವರಾಜ ಕಟ್ಟಿಮನಿ ಕಾದಂಬರಿ , ಕಥೆ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭ ಹಾಗೂ ಯುವ ಸಾಹಿತ್ಯ ಪುರಸ್ಕಾರ ಸಮಾರಂಭ
ಅನುರಾಧಾ ಪಾಲ್ ಎಂಬ ತಬಲಾ ಮಾಯಾವಿ… ಅನುರಾಧಾ ಪಾಲ್ ಅವರು ಮಹಿಳೆ ಮತ್ತು ಸಂಗೀತದ ಕುರಿತು ಇರುವ ಪೂರ್ವಗ್ರಹಗಳನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಅವರ ಬೆರಳುಗಳು ತಬಲಾ ಮೇಲೆ ಆಟವಾಡಿ, ಮಾಯಾಲೋಕ ಸೃಷ್ಟಿಸಿದಂತೆಲ್ಲ ‘ವಾಹ್ ಉಸ್ತಾದ್’ ಎಂಬ ಪ್ರತಿಕ್ರಿಯೆ ಕೇಳುಗರಿಂದ ಬರುತ್ತದೆ. ಅನುರಾಧಾ ಅವರು ಉಸ್ತಾದ್ ಅಲ್ಲದಿರಬಹುದು. ಆದರೆ, ತಬಲಾ ನುಡಿಸುವುದರಲ್ಲಿ ಅವರು ಸಾಧಿಸಿರುವ ಹಿಡಿತ ಆ ಕ್ಷೇತ್ರವು ಪುರುಷರ ಅಧಿಪತ್ಯದ್ದು ಎಂಬ ಗ್ರಹಿಕೆಯನ್ನು ಖಂಡಿತ ಬದಲಿಸಿದೆ. ಅನುರಾಧಾ ಅವರು ಈಗ ವಿಶ್ವಖ್ಯಾತಿಯ ತಬಲಾ ವಾದಕಿ. […]
ವೈಚಾರಿಕ ಪಾರತಂತ್ರ್ಯ ಮತ್ತು ವರ್ಣವ್ಯವಸ್ಥೆಯ ಅಪಾರ್ಥ ‘ಭಾರತೀಯರನ್ನು ಸ್ವಾವಲಂಬನದಿಂದಲೂ ಸ್ವದೇಶಪರಂಪರೆಗಳಿಂದಲೂ ದೂರಗೈದು ಕೈವಶವಾಗಿಸಿಕೊಳ್ಳಲು ಬ್ರಿಟಿಷರು ಹೇಗೆ ಹಲವು ಕಾನೂನು-ಕುತಂತ್ರಗಳನ್ನು ಹೆಣೆದರು; ತಾವು ಕಲ್ಪಿಸುವ ಶಿಕ್ಷಣ, ಉದ್ಯೋಗ, ಶಾಸನಗಳ ವ್ಯವಸ್ಥೆಯೊಳಕ್ಕೇ ಎಲ್ಲರೂ ಬಂದು ಬೀಳುವಂತೆ ಬಲೆ ಬೀಸಿದರು’ ಎನ್ನುವುದನ್ನು ರ್ಚಚಿಸುತ್ತಿದ್ದೆವು. ಕುಲವೃತ್ತಿಗಳನ್ನು ಹಿಡಿದವರಿಗೆ ಬ್ರಿಟಿಷರ ಅನ್ಯಾಯವನ್ನು ಎದುರಿಸುವುದೂ ಕಷ್ಟವಾಗುತ್ತಿತ್ತು- ನ್ಯಾಯವಿಚಾರಣೆಯು ಅರ್ಥವೇ ಆಗದ ಆಂಗ್ಲಭಾಷೆಯಲ್ಲೂ, ಆಂಗ್ಲ ಶಿಷ್ಟಾಚಾರಗಳಲ್ಲೂ ನಡೆಯುತ್ತಿದ್ದರಿಂದ, ಭಾರತೀಯರು ಆಂಗ್ಲವಕೀಲರನ್ನೇ ಆಶ್ರಯಿಸಬೇಕಿತ್ತು. ಬ್ರಿಟಿಷರ ನವನವೀನ ಕಾನೂನುಗಳೂ, ದಾರಿ ತಪ್ಪಿಸುವ ಸಮಜಾಯಿಷಿಗಳೂ ಹಾಗೂ ಪಕ್ಷಪಾತಿ ಆಂಗ್ಲನ್ಯಾಯಾಧೀಶರೂ ಇವರ ಬಾಯಿಮುಚ್ಚಿಸಿಬಿಡುತ್ತಿದ್ದರು. […]
ಮುಖವಾಡ ಬದುಕಿನ ಈ ಅನಂತ ಯಾತ್ರೆಯಲಿ ಗುರುತು ವಿಳಾಸಗಳ ಲಗ್ತಿಸಬೇಕೆಂದರೂ ಲಗ್ತಿಸುವುದಾದರೂ ಹೇಗೆ? ದಿನವೂ ಬದಲಾಯಿಸಲೇ ಬೇಕಾದ ಮುಖವಾಡಗಳಲಿ ಅಸಲಿ ಮುಖದರ್ಶನವ ಗುರುತಿಸಲಿ ಹೇಗೆ? ಕಾಲಿಗೆ ಚಕ್ರ ಕಟ್ಟಿದಂತೆ ತಿರುಗಲೇಬೇಕಾದ ಈ ಇಳೆಯೊಳಗೆ ಒಂದೆಡೆ ನಿಂತೆನಾದರೂ ಹೇಗೆ? ಸುತ್ತ ಗಿರಕಿ ಹೊಡೆಯುತ ನಿತ್ಯ ಬದಲಾಗುವೀ ನೂರೆಂಟು ಇಸಂಗಳ ಮಧ್ಯದಲಿ, ಒಂದನೇ ಅಪ್ಪಿಕೂರುವುದಾದರೂ ಹೇಗೆ ಹೊಸ್ಮನೆ ಮುತ್ತು
ಪ್ರೇಕ್ಷಕರ ಮನಗೆದ್ದ ಸುರಕ್ಷಾ ವಿಜಯ ಯಕ್ಷಗಾನ ಪ್ರಸಂಗ ಪಣಂಬೂರಿನ ಕೆಐಓಸಿಎಲ್ ಸಂಸ್ಥೆಯ ಬ್ಲಾಸ್ಟ್ ಫರ್ನೆಸ್ ಯೂನಿಟ್ ಸಭಾಂಗಣದಲ್ಲಿ ವಿಶ್ವಉಕ್ಕು ಸುರಕ್ಷತಾ ದಿನಾಚರಣೆ ಅಂಗವಾಗಿ, ಕಾರ್ಖಾನೆಗಳಲ್ಲಿ ಸುರಕ್ಷತೆ ಸಂದೇಶ ಸಾರುವ ‘ಸುರಕ್ಷಾ ವಿಜಯ’ ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಲಾಗಿತ್ತು. ಜಂಟಿ ಪ್ರಧಾನ ವ್ಯವಸ್ಥಾಪಕ ಟಿ. ಗಜಾನನ ಪೈ ಅವರ ಪ್ರೇರಣೆಯಿಂದ, ಸಂಸ್ಥೆಯ ಉದ್ಯೋಗಿ ಜಯಪ್ರಕಾಶ್ ಹೆಬ್ಬಾರ್ ರಚಿಸಿ ನಿರ್ದೇಶಿಸಿದ ಒಂದು ಗಂಟೆ ಕಾಲ ಪ್ರಸಂಗ ಹೀಗೆ ಸಾಗುತ್ತದೆ. ಸುರಕ್ಷಿತ ಮಹಾರಾಜ ಬಿಳಿ ಕುದುರೆಯನ್ನೇರಿ ತನ್ನ ಆಳ್ವಿಕೆಯಲ್ಲಿರುವ ‘ಅಶ್ವಪುರ’ ಕ್ಕೆ ಬರುತ್ತಾನೆ. […]
“ಪುಸ್ತಕ ವಿಮರ್ಶೆ” “ಮೀಸೆ ಮಾವ ಮತ್ತು ಮಾಮರವೇ… ಮಾಮರವೇ’ ಪುಸ್ತಕಗಳು” ಏಳು ಕಥೆಗಳ ಈ ಸಂಕಲನದಲ್ಲಿ ಲೇಖಕರು, ಸುದ್ದಿಮನೆಯಲ್ಲಿ ಸಾಮಾನ್ಯವಾಗಿ ವರದಿಯಾಗುವಂತಹ ಕೆಲವು ಸಾಮಾಜಿಕ ವಿಷಯಗಳು, ನಿತ್ಯದ ತವಕ ತಲ್ಲಣಗಳನ್ನು ಕಥಾಲೋಕಕ್ಕೆ ಸುರಳೀತವಾಗಿ ತಂದಿದ್ದಾರೆ. ಸ್ವಂತದ್ದೊಂದು ವಿಳಾಸವಿಲ್ಲದೆ ಪಡಿತರ ಚೀಟಿ ಪಡೆಯಲಾಗದ ಹಾಗೂ ಪಡಿತರ ಚೀಟಿ ಇಲ್ಲದೆ ಅಸ್ತಿತ್ವದ ದ್ವಂದ್ವಕ್ಕೊಳಗಾಗುವ ಕುಟುಂಬವೊಂದರ ತೊಳಲಾಟವಿರುವ ‘ಎಡ್ರೆಸ್’, ಮ್ಯಾನ್ಹೋಲ್ ಸ್ವಚ್ಛಗೊಳಿಸುವ ಪೌರಕಾರ್ಮಿಕರು ತಮ್ಮ ದೇಹಕ್ಕೆ ಅಂಟಿಕೊಳ್ಳುವ ವಾಸನೆಯಿಂದ ಕೌಟುಂಬಿಕವಾಗಿ ಹೇಗೆಲ್ಲಾ ಯಾತನೆ ಎದುರಿಸುತ್ತಾರೆ, ಮಾನವೀಯತೆಯುಳ್ಳ ಕೆಲಸ ಗಿಟ್ಟಿಸಿಕೊಳ್ಳಲು ಪರದಾಡುತ್ತಾರೆ ಎನ್ನುವುದನ್ನು […]
ಕುಲವೃತ್ತಿಗಳ ವ್ಯವಸ್ಥಿತ ನಾಶನ ತನ್ನ ಆಂತರಿಕ ವಿಕಾರಗಳನ್ನು ತನ್ನದೇ ಸ್ವೋಪಜ್ಞ ಯುಕ್ತಿಗಳಿಂದ ತಿದ್ದಿಕೊಳ್ಳುತ್ತ, ಬಾಹ್ಯಾಂಶಗಳನ್ನು ಬೇಕೆಂಬಷ್ಟು ಮಾತ್ರ ಮೈಗೂಡಿಸಿಕೊಳ್ಳುತ್ತ, ಭಾರತವು ಸಹಸ್ರಮಾನಗಳ ತನಕವೂ ಸ್ವತಂತ್ರವಾಗಿ ಮುಂದುವರಿದಿತ್ತು. ಆದರೆ ಎರಡು ಸಾವಿರ ವರ್ಷಗಳಿಂದೀಚೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ವಿುಕರಂಗಗಳಲ್ಲಿನ ನಿರಂತರ ಪರಕೀಯ ಹಸ್ತಕ್ಷೇಪಗಳು ಹೆಚ್ಚಿದ್ದು, ಹೇಗೆ ವರ್ಣ, ಭಾಷೆ, ರೀತಿನೀತಿಗಳೆಲ್ಲದರ ವಿಷಯದಲ್ಲೂ ವೈಚಾರಿಕ ಬಗ್ಗಡವೆಬ್ಬಿಸಲಾಗಿದೆ ಎನ್ನುವುದನ್ನು ನೋಡುತ್ತ ಬಂದಿದ್ದೇವೆ. ಕುಲವೃತ್ತಿಯನ್ನು ಬಿಡದೆ, ಆಸಕ್ತಿಯ ವ್ಯಾಪಾರೋದ್ಯಮಗಳನ್ನೋ,ಸಾಹಿತ್ಯ, ಕಲೆ, ಉಪಾಸನಾವಿಧಾನಗಳನ್ನೋ ಹಿಡಿಯುವ ಸ್ವಾತಂತ್ರ್ಯೂ ಇದ್ದೇ ಇತ್ತು. ಹೀಗಾಗಿ ತಮ್ಮ ವೃತ್ತಿಯ ಬಗ್ಗೆ […]