ಆ ಮೊಸಳೆಗೆ ವಯಸ್ಸಾಗಿತ್ತು; ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಕೂಡ ಅದಕ್ಕೆ ಶಕ್ತಿ ಇಲ್ಲವಾಗಿತ್ತು. ಆಗ ಅದಕ್ಕೊಂದು ಯೋಚನೆ ಬಂತು. ನರಿಗೆ ಆಹ್ವಾನ ಕಳುಹಿಸಿತು. ‘ನೀನು ನನಗೆ ಸಹಾಯ ಮಾಡಿದರೆ ಅದರಿಂದ ನಿನಗೂ ಲಾಭವಾಗುತ್ತೆ’ ಎಂದು ಹೇಳಿ ಒಪ್ಪಂದ ಮಾಡಿಕೊಂಡಿತು. ಕಾಡಿನಲ್ಲಿರುವ ಪ್ರಾಣಿಗಳನ್ನು ಜಾಣತನದಿಂದ ಮೊಸಳೆಯ ಸಮೀಪಕ್ಕೆ ನರಿ ಕರೆದು ತರಬೇಕು – ಇದು ಒಪ್ಪಂದ. ಹೀಗೆ ಮೊಸಳೆಯ ಹತ್ತಿರಕ್ಕೆ ಯಾವುದಾದರೊಂದು ಪ್ರಾಣಿ ಬಂದಕೂಡಲೇ ಮೊಸಳೆ ಅದನ್ನು ಕೊಲ್ಲುತ್ತಿತ್ತು. ತಾನು ಆ ಪ್ರಾಣಿಯ ಮಾಂಸವನ್ನು ತಿಂದ ಮೇಲೆ, […]
Month: August 2019

ಬಂಡೆನಕಾ ಬಂಡಿಗಟ್ಟಿ
ನೀನಾಸಮ್ ರಂಗಶಿಕ್ಷಣ ಕೇಂದ್ರ.ಹೆಗ್ಗೋಡು ಅಭ್ಯಾಸಮಾಲಿಕೆಯ ಕೋಲಾಟ ಪ್ರಸ್ತುತಿ ಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ.ಹೆಚ್.ಎಸ್ ೩೦ ಆಗಸ್ಟ೨೦೧೯, ಸಂಜೆ೬೦೩೦ಕ್ಕೆ ನೀನಾಸಮ್ ಸಭಾಭವನದಲ್ಲಿ. ಪ್ರವೇಶ ಉಚಿತ ಬನ್ನಿ

ಅದೇಕೋ ಗೊತ್ತಿಲ್ಲ
ಅದೇಕೋ ಗೊತ್ತಿಲ್ಲ ನನ್ನ ಏಕಾಂಗಿ ತನದಲಿ ನೀ ಜೊತೆಗಿರುವ ಹಾಗೆ! ನಿದಿರೆ ಬಾರದಿರೆ ರಾತ್ರಿ ನಿನ್ನ ನೆನಪಾದ ಹಾಗೆ! ಎದೆಗೊದ್ದು ಬರುವ ಸಂಕಟಕೆ ನಿನ್ನ ಹೆಗಲಿರುವ ಹಾಗೆ! ಬಿಕ್ಕಳಿಸಿ ಬರುವ ಕಂಬನಿಗೆ ಒರೆಸುವ ಹಸ್ತ ನಿನ್ನದಿರುವ ಹಾಗೆ! ನಲುಗುವ ಹೃದಯಕೆ ನಿಟ್ಟುಸಿರು ನಿನಾದ ಹಾಗೆ! ಭಾರವಾದ ಮನಸ್ಸಿಗೆ ನಿನ್ನ ತೊಡೆಯಲ್ಲಿ ಶಿರವಿಟ್ಟ ಹಾಗೆ! ಭವಿಷ್ಯದ ಹಂಬಲಕೆ ಸದಾ ನಿನ್ನ ಬೆಂಬಲವಿರುವ ಹಾಗೆ! ಏಕೋ ಗೊತ್ತಿಲ್ಲ ಬಳಿ ಇಲ್ಲದಿದ್ದರೂ ಸನಿಹ ಇದ್ದ ಹಾಗೆ! ಏಕೋ ಗೊತ್ತಿಲ್ಲ! ಉಮಾ ಭಾತಖಂಡೆ.
ಕಪಾಟು
ಜನಮನದಲ್ಲಿ ನೆಲೆಯಾಗಿರುವ ರಾಘವೇಂದ್ರ ಗುರುಗಳ ಮಹಿಮೆಗಳನ್ನು ಯು.ಪಿ.ಪುರಾಣಿಕ್ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ 23 ಅಧ್ಯಾಯಗಳಿವೆ ವಿಶ್ವಗುರು ಶ್ರೀ ರಾಘವೇಂದ್ರರ ವಿಚಾರಧಾರೆ, ಅವತಾರ, ಜೀವನ ಚರಿತ್ರೆ, ಅವರ ಪವಾಡಗಳು ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಗುರುರಾಯರ ಸಂಪೂರ್ಣ ಮಾಹಿತಿಯನ್ನು ಈ ಕೃತಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕ ಮಾಡಿದ್ದಾರೆ. ರಾಘವೇಂದ್ರ ಸ್ವಾಮಿಯ ವಂಶವೃಕ್ಷ, ರಾಯರು ಬೃಂದಾವನ ಪ್ರವೇಶಿಸುವ ಮುನ್ನ ಹಾಗೂ ನಂತರ ನಡೆದ ಅದ್ಭುತ ಪವಾಡಗಳ ಕುರಿತ ಬರಹಗಳು ಓದಲು ಕುತೂಹಲಕಾರಿಯಾಗಿವೆ. ಲೇಖಕರು ಹಲವು ವರ್ಷಗಳಿಂದ […]
ಇದು ಕನ್ನಡಿಗರ ಆಟಿಕೆ
ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದ ವಿದ್ಯೆ ಬೇಗ ಅರ್ಥವಾಗುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಟ್ಟ ಕಲಿಕೆ ಸದಾ ನೆನಪಿರುತ್ತದೆ. ಮಕ್ಕಳು ಆಟವಾಡುತ್ತಾ ಕಲಿಯಬೇಕು ಎಂಬುದು ಹೆಚ್ಚಿನ ಪೋಷಕರ ಆಸೆಯಾಗಿರುತ್ತದೆ. ಹಳ್ಳಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಈ ರೀತಿಯ ಅವಕಾಶ ಸಿಕ್ಕಿದರೂ ನಗರದಲ್ಲಿರುವವರಿಗೆ ಈ ರೀತಿಯ ಅವಕಾಶಗಳು ಸಿಗುವುದು ತುಂಬಾ ಕಡಿಮೆ. ಈಗಿನ ಕಾಲದ ಮಕ್ಕಳು ಶಾಲೆಯಲ್ಲಿನ ಕಲಿಕೆಯೊಂದಿಗೆ ಕಂಪ್ಯೂಟರ್, ಮೊಬೈಲ್ನಲ್ಲಿ ಕಲಿಯುವುದೇ ಜಾಸ್ತಿ. ಮಕ್ಕಳ ಆಟ ಪಾಠಗಳೆಲ್ಲವೂ ಬೆರಳ ತುದಿಯಲ್ಲಿ ಲಭ್ಯವಾಗುತ್ತಿರುವ ಕಾಲದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಓದಿ ತಿಳಿ ಆಡಿ […]

ಜಾಹೀರಾತುಗಳು..
ಜಾಹೀರಾತುಗಳು.. ಇಡೀ ವಿಶ್ವದಲ್ಲಿಯೇ ಮೋಹಕ ಹಾಗೂ ಮಾಯಾಜಾಲದ ಪ್ರಪಂಚವೆಂದರೆ ಜಾಹೀರಾತು ಪ್ರಪಂಚ. ಉತ್ಪಾದಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಉದ್ದೇಶ ಪೂರ್ವಕವಾಗಿ ಮಾರಾಟ ಮಾಡಲು ಪ್ರಯತ್ನ ಮಾಡುತ್ತಾರೆ. ಗ್ರಾಹಕರಿಗೆ ವಸ್ತುಗಳ ಬಗ್ಗೆ ಮಾಹಿತಿಯನ್ನು ಹಲವು ತಂತ್ರಗಳ ಮೂಲಕ ತಿಳಿಸಿದರೆ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಹೀಗೆ ಅವರ ಮನ ಒಲಿಸಿಕೊಂಡು ವಸ್ತುಗಳನ್ನು ಖರೀದಿಸುವಂತೆ ಮಾಡುವ ಸಮೂಹಮಾಧ್ಯಮಗಳೇ ಈ ಜಾಹೀರಾತುಗಳು. ಇಂಥ ಜಾಹೀರಾತುಗಳಲ್ಲಿ ಮಾರುಕಟ್ಟೆ ಹೆಚ್ಚಿಸುವ ದೃಷ್ಟಿಕೋನವಿರುವುದರಿಂದ ಮಾರುಕಟ್ಟೆ ಕೇಂದ್ರಿತವಾಗಿ ಯಾವ ಯಾವ ತಂತ್ರಗಳನ್ನು ಉಪಯೋಗಿಸಿದರೆ ಸಮಾಜವು ತನ್ನನ್ನು ಸ್ವೀಕರಿಸಬಹುದೋ […]
ಇನ್ನೂ ಬೇಕಿತ್ತು ಕನ್ನಡ ನುಡಿಗಟ್ಟಿಗೆ ಒಗ್ಗಿಸುವ ಯತ್ನ
ಬದುಕಿನ ಕೆಲವು ಕಟು ವಾಸ್ತವಗಳು ದೇಶಾತೀತ ಮತ್ತು ಕಾಲಾತೀತ. ಯಾವುದೇ ಸಮಾಜವಾಗಲಿ, ಎಂತಹುದೇ ಸಂಸ್ಕೃತಿಯಾಗಲಿ ಮನುಷ್ಯರ ನಡುವಿನ ಸಂಬಂಧ, ಅದು ಗಟ್ಟಿಗೊಳ್ಳುವ ಪರಿ ಅಥವಾ ವಿಷಮಿಸುವ ಬಗೆಯ ಮೇಲೇ ವ್ಯಕ್ತಿಯೊಬ್ಬನ ಬದುಕಿನ ‘ಸೊಬಗು’ ಅಥವಾ ‘ವಿಮುಖತೆ’ ನಿಂತಿರುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಹೀಗಾಗಿಯೇ, 1948ರಲ್ಲಿ ಅಮೆರಿಕದ ಆರ್ಥರ್ ಮಿಲ್ಲರ್ ಅವರು ರಚಿಸಿದ ‘ಡೆತ್ ಆಫ್ ಎ ಸೇಲ್ಸ್ಮನ್’ ನಾಟಕ, ಪರದೆಯ ಮೇಲಾಗಲಿ, ಅಕ್ಷರ ರೂಪದಲ್ಲಾಗಲಿ ಇಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. 1920ರ ದಶಕದಲ್ಲಿ ಅಮೆರಿಕದ ರಂಗಭೂಮಿಯನ್ನಾಳಿದ ದಿಗ್ಗಜತ್ರಯರಲ್ಲಿ […]

ತೊಡೆದೇವು..!
ತೊಡೆದೇವು..! ಪಾತ್ರೆಯ ಒಳಭಾಗದಲ್ಲಿ ಅಡುಗೆ ತಯಾರಿಸುವುದು ನಮಗೆಲ್ಲಾ ತಿಳಿದೇ ಇದೆ. ಆದರೆ ಪಾತ್ರೆಯ ಹೊರಭಾಗದಿಂದ ಅಟ್ಟುವ ವಿಧಾನ ಗೊತ್ತೆ ? ಒಂದು ಬಗೆಯ ತಿನಿಸು ತಯಾರಿಸಲು ಪಾತ್ರೆಯ ಹೊರಭಾಗವೇ ಮುಖ್ಯವಾಗುತ್ತದೆ..! ಅದು ಮಲೆನಾಡು ಭಾಗದಲ್ಲಿ ತಯಾರಿಸುವ ತೊಡೆದೇವು. ಮಂದಿಗೆ, ಆವುಗೆ ಎಂದೆಲ್ಲಾ ಹೆಸರಿಸುವ ಈ ಸಿಹಿ ತಿಂಡಿಗೆ ಕಬ್ಬಿಣ ಹಾಲು ಮತ್ತು ಅಕ್ಕಿ ಬಳಕೆಯಾಗುತ್ತದೆ. ವಿಶಿಷ್ಟ ರುಚಿಯಲ್ಲದೇ, ಅತ್ಯಂತ ತೆಳುವಾಗಿಯೂ ಗರಿಗರಿಯಾಗಿಯೂ ಇರುವುದು ಇದರ ವಿಶೇಷ. ತೊಡೆದೇವು ಮಾಡುವ ಗಡಿಗೆ ಬಾಣಲೆಯ ಆಕಾರದಲ್ಲಿದ್ದು, ಕಂಠ ಭಾಗದಲ್ಲಿ ಚೌಕಾಕಾರದಲ್ಲಿ […]
ಕನ್ನಡದ ಸೊಲ್ಲಿನ ಏಳುಬೀಳಿನ ಕಥನ
ರಾ.ನಂ. ಚಂದ್ರಶೇಖರ ಅವರ ‘ಕನ್ನಡ ಡಿಂಡಿಮ’ ಕನ್ನಡ ಚಳವಳಿಯ ಏಳುಬೀಳುಗಳ ಕಥನ. ‘ಏಕೀಕರಣೋತ್ತರ ಕನ್ನಡ ಹೋರಾಟಗಳ ಇತಿಹಾಸ’ ಎಂದು ಲೇಖಕರು ತಮ್ಮ ಕೃತಿಯ ವಿಷಯವ್ಯಾಪ್ತಿಯನ್ನು ಸ್ಪಷ್ಟಪಡಿಸಿದ್ದಾರೆ. ಬಹುಶಃ, ಕನ್ನಡಕ್ಕಷ್ಟೇ ಸೀಮಿತವಾಗಿರಬಹುದಾದ ಇಂಥ ಭಾಷಾ ಚಳವಳಿಯ ಕಥನವನ್ನು ಭಾವುಕ ನೆಲೆಗಟ್ಟಿನಲ್ಲಿಯೂ ಚರಿತ್ರೆಯನ್ನು ಅರಿಯುವ ಕುತೂಹಲದ ರೂಪದಲ್ಲೂ ಓದಲಿಕ್ಕೆ ಸಾಧ್ಯವಿದೆ. ‘ಕನ್ನಡ ಚಳವಳಿ’ ಎನ್ನುವುದೇ ಭಾವುಕತೆಯನ್ನು ಉದ್ದೀಪಿಸುವಂತಹದ್ದಾದರೂ, ಪ್ರಸಕ್ತ ಕೃತಿಯನ್ನು ಸಂಯಮದಿಂದ ಓದಲಿಕ್ಕೆ ಸಾಧ್ಯವಿರುವುದಕ್ಕೆ ಕೃತಿಯನ್ನು ನಿರೂಪಿಸಿರುವ ಲೇಖಕರ ಸಂಯಮವೂ ಕಾರಣವಾಗಿದೆ. ಕನ್ನಡ ಚಳವಳಿಗಳ ಕುರಿತ ಈಗಾಗಲೇ ಪ್ರಕಟವಾಗಿರುವ […]