ಅದೋ…ಚುಮು ಚುಮು ಬೆಳಕಲ್ಲಿ ಮಬ್ಬು ಮುಸುಕಿದೆ ಈ ಧರೆಯಲ್ಲಿ ಇಬ್ಬನಿಯ ಹಾಸು ಚೆಂಬೆಳಕಲ್ಲಿ ಕಾಣದ ಮಾಯ ಲೋಕವೆಂಬಂತೆ ಸಾಗುತಿರೆ ಎಲ್ಲವೂ ಹತ್ತಿರವೇ ಇರುವಂತೆ ಹಾದಿ ಗುಂಟ ಪರದೆ ಬಿಟ್ಟಂತೆ ಹಿತವಾದ ಗಾಳಿ ಸೋಕಿ ಮೈಮನಕೆ ನಡುಕವಾದರು ಸೊಗಸು ಆ ಕ್ಷಣಕೆ ಸೂಚನೆಯು ನೀಡಿದೆ ನವ ಮಾಸಕೆ ಇರುಳು ಬೆಳಕಿನ ಆಟವು ಜಗದಲ್ಲಿ ಅವಸರದಿ ಬಾನುಲಿ ಸೇರುವವು ಗೂಡಲ್ಲಿ ಬಯಸುವವು ನಿದ್ರಿಸಲು ಬೆಚ್ಚನೆಯ ಹಾಸಲ್ಲಿ ಎಳೆಯ ಕಿರಣಗಳ ಕುಸ್ತಿ ಮಂಜ ಕರಗಿಸಲು ಮಾಯ ಪರದೆಯ ಮೆಲ್ಲನೆ ಸರಿಸಲು ಹನಿ […]
