ದೇವರಿಗೊಂದು ಪತ್ರ(18) ಓ … ಅಚಲಾದೀಶ.. ಇದೆಂಥಾ ದುಸ್ಥಿತಿ ಎಸಗಿಹೆ ತಂದೆ? ಜಗವೇ ತಲ್ಲಣಿಸಿ ಭಯದ ಮುಸುಕಲಿ ಬಂಧಿಯಾಗಿದೆ! ಕಾಣೆಯ? ಯಾರು ಸೌಖ್ಯರಿಲ್ಲವಿಂದು ಭುವಿಯಲಿ ಅದೆಂಥ ವಿಷಜಂತು ಕಳುಹಿಯೇ ಓ ಕಲ್ಕಿ? ಮೃತ್ಯುಕೂಪದಲಿ ಬೇಯುತಿಹನು ಮನುಜನಿಂದು ಸುಮ್ಮನೆ ಹೇಗಿರುವೆ ನೀನು? ಮತ್ತಾವ ಹೊಸ ಸೃಷ್ಟಿಗೆ ಕಾರಣವು ಈ ಬಗೆಯ ನಿನ್ನ ಆಟಕ್ಕೆ?ಹೇಳು ಜನಮೇಜಯ! ಮಾನವ ಜನ್ಮ ಶ್ರೇಷ್ಠವೆಂದು ಬಗೆದು ನೀ ಸೃಷ್ಟಿಸಿದೆ ಯಂತೆ! ಇತರೆ ಖಗ ಮೃಗ ಪಕ್ಷಿ ಸಂಕುಲ ಕೀಟಗಳಿಗೂ ಬಾರದ ಬೇನೆ ತರಲು ಕಾರಣವೇನು? […]
