ಕಾಲಚಕ್ರ ಕಾಲಚಕ್ರವು ತಿರುಗುತ್ತಿರುವುದರಿಂದಲೇ ರಾತ್ರಿ ಹಗಲು, ಹುಣ್ಣಿಮೆ-ಅಮವಾಸ್ಯೆಗಳೆಲ್ಲ ಘಟಿಸುತ್ತಿರುವವು. ಕಾಲವೇ ಸ್ಥಗಿತವಾದರೆ……. ಆಗ ನಾವೆಲ್ಲ ಜೀವಿಸಿಯೂ ಸತ್ತಂತೆ ತಾನೇ. ಇರಲಿ ಯಾವಾಗಲೂ ಕಾಲವೂ ಬದಲಾಯಿಸುತ್ತಲೇ ಇರಬೇಕು, ಹಾಗೇ ಇದೆ. ಅದೇ ಪ್ರಕೃತಿಯ ಪರಿಭಾಷೆ. ನಿಂತ ನೀರಿಗಿಂತ ಹರಿವ ನೀರು ಹೆಚ್ಚು ಉಪಯುಕ್ತ, ಆಹ್ಲಾದಕರ, ಸತ್ವಯುತವಾದುದು, ಅಂತೆಯೇ ನಮ್ಮ ಜೀವನವೂ ಕೂಡ. “ತಾತಸ್ಯ ಕೂಪೋ ಯಮಿತಿ ಭ್ರುವಾಣಾ ಕ್ಷಾರಂ ಜಲಂ ಕಾ ಪುರುಷಾ ಪಿಬಂತಿ!” ಅಜ್ಜ ತೋಡಿಸಿದ ಬಾವಿಯಲ್ಲಿ ಉಪ್ಪು ನೀರಾದರೂ ಒಣ ಅಭಿಮಾನದಿಂದ ಕುಡಿಯುವವನು ಮೂರ್ಖನೇ ಸರಿ […]
