ಹಕ್ಕೆಮನೆ ಮಲೆನಾಡಿನಲ್ಲಿ ಗದ್ದೆ ತೋಟ ಇರುತ್ತಿದ್ದುದೇ ಕಾಡಿನ ನಡುವೆ, ಹೀಗಾಗಿ ಕಾಡುಪ್ರಾಣಿಗಳ ಉಪಟಳ ಸರ್ವೇ ಸಾಮಾನ್ಯ. ಅದರಲ್ಲೂ ಫಸಲು ಕೈಗೆ ಬರುವ ಹೊತ್ತಿನಲ್ಲಿ ಬೆಳೆಗೆ ಕಾವಲು ಅನಿವಾರ್ಯ, ಮೃಗಗಳು ಹಕ್ಕುಗಳು ರೈತನ ಶ್ರಮವನ್ನು ವ್ಯರ್ಥವಾಗಿಸುತ್ತದೆ. ಬಹುಕಾಲ ಅಲ್ಲೇ ಇರಬೇಕಾದ ಪರಿಸ್ಥಿತಿಯಿರುತ್ತದೆ. ಹೀಗಾಗಿ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಕೃಷಿಕರು ತಮ್ಮ ಜಮೀನಿನಲ್ಲಿ ತಾತ್ಕಾಲಿಕವಾಗಿ ಕಟ್ಟಿಕೊಳ್ಳುವ ಪುಟ್ಟ ಹುಲ್ಲಿನ ಮನೆಯೇ “ಹಕ್ಕೆ ಮನೆ” ಜಮೀನಿನ ತುಸು ಎತ್ತರದ ಪ್ರದೇಶದಲ್ಲಿ ನಾಲ್ಕು ಕಂಬಗಳನ್ನು ಹುಗಿದು ಏಳೆಂಟು ಅಡಿಯಷ್ಟು ಉದ್ದ ಅಗಲದ […]
