Your Cart

Need help? Call +91 9535015489

📖 Print books shipping available only in India. ✈ Flat rate shipping

ಲಾಕ್‍ಡೌನ್‍ನಿಂದಾದ ಬದಲಾವಣೆಗಳು

ಲಾಕ್‍ಡೌನ್‍ನಿಂದಾದ ಬದಲಾವಣೆಗಳು “ಆಂಟೀ, ನಾಳಿಗೆ ಅದೇನೋ ಲಾಕ್‍ಡೌನ್ ಅಂತಲ್ರೀ.. ರಸ್ತೇನ್ಯಾಗ ಹೊರಬಿದ್ರ ಪೋಲೀಸ್‍ನವ್ರು ತೊಗೊಂಡ ಹೋಗತಾರಂತಲ್ರೀ..” ನಮ್ಮನೀ ಕೆಲಸದಾಕಿ ಹೇಳಿದ್ಲು. “ಹೌದವಾ.. ನಾಳೀಗೊಂದ ದಿನಾ ಅಲ್ಲಾ.. ಇದು ಒಂದನೇ ತಾರೀಖಿನ ತನಾ ಮುಂದುವರೀತದಂತನಸತದ. ಕೆಲಸಕ್ಕ ಬರಬ್ಯಾಡಾ ನೀ ಈ ಲಾಕ್‍ಡೌನ್ ತೆರವಾಗೂ ತನಕಾ. ಇದು ಭಾಳ ಕೆಟ್ಟ ವೈರಸ್ ಅದ.” “ಅದ ಹ್ಯಾಂಗ ಇರತದರಿ? ಸೊಳ್ಳಿ ಇದ್ದಂಗ ಇರತದೇನರಿ?” “ಇಲ್ಲವಾ. ಅದು ಕಣ್ಣಿಗೆ ಕಾಣಂಗಿಲ್ಲಾ… ಉಗುಳಿದರ, ಸೀನಿದರ ಅದರ ಜೋಡೀ ಹಬ್ಬತದ… ಯಾರನೂ ಮುಟ್ಟಿಸಿಕೋಳೋದೂ, ಉಸರ ತಾಕಿಸ್ಕೊಳ್ಳೂದು […]

ಮತ್ತಿ ಅವರೆ

ಮತ್ತಿ ಅವರೆ ಮತ್ತಿ ಅವರೆ,(ವಿಂಗ್ಡ್ ಬೀನ್ಸ್) ನಾಲ್ಕು ಮೂಲೆಗಳೊಂದಿಗೆ ರಕ್ಕೆಯಂತೆ ಕಾಣುವ ಉದ್ದನೆಯ ಅವರೆಕಾಯಿ. ಅತಿ ಹೆಚ್ಚು ಪ್ರೋಟಿನ್ ಇರುವ ತರಕಾರಿ. ಸಮರ್ಪಕವಾಗಿ ಬೆಳೆಸಲಾಗದೇ ಜನರಿಂದ ದೂರವಾಗುತ್ತಿರುವ ಅಪರೂಪದ ತರಕಾರಿ ಈ ಮತ್ತಿ ಅವರೆ. ಬಳ್ಳಿ ಜಾತಿಯ ಈ ಮತ್ತಿ ಅವರೆ, ಬೀಜ ಹಾಕಿದ ಒಂದೆರಡು ತಿಂಗಳಲ್ಲೇ ಗಣ್ಣು, ಗಣ್ಣಿಗೂ ಹೊಸ ಕುಡಿ ಚಿಗುರಿ ಮೂರರಿಂದ ನಾಲ್ಕು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಬಳ್ಳಿ ಹಬ್ಬಲು ಆರಂಭವಾದಾಗ, ಚಪ್ಪರ,ಮರ, ಗಿಡಗಳ ಆಸರೆ ಕೊಡಬೇಕು… ಎಳೆಯ ಕಾಯಿಗಳನ್ನು ಅಡುಗೆಗೆ ಬಳಕೆ […]

ಸಂ- ಸ್ಕಾರ…

ಸಂ- ಸ್ಕಾರ… ಈಗೊಂದು ವಾರದ ಹಿಂದೆ ಒಂದು ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ದೆ. ಊಟಕ್ಕೆ ಕುಳಿತಾಗ ಎದುರುಗಡೆ ಸಾಲಿನಲ್ಲಿ ಒಂದು ಗುಂಪು ಕುಳಿತಿತ್ತು. ಬಹುಶಃ ಅತಿಥೇಯರ ಕಡೆಯವರಿರಬೇಕು ಅವರೆಲ್ಲರ ವಿಶೇಷ ಕಾಳಜಿಗಾಗಿ ಒಬ್ಬ ಮಹಾಶಯ ಅತ್ತಿಂದಿತ್ತ ಓಡಾಡಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ… ಅತಿಥೇಯನೊಬ್ಬನ ಆದರ್ಶಮಾದರಿಯಾಗಿ ಕಂಡು ನನಗೆ ತುಂಬಾನೇ ಖುಷಿಯಾಗಿಹೋಯಿತು. ಸ್ವಲ್ಪ ಹೊತ್ತಿನಲ್ಲಿಯೇ ಪದಾರ್ಥಗಳನ್ನು ಬಡಿಸತೊಡಗಿದರು… ಕುಳಿತವರು ಹಸಿವೆಗೋ, ಸುಮ್ಮನೇ ಕೂಡಲಾರದ್ದಕ್ಕೋ, ಅಥವಾ ಅವರವರ ಅಭ್ಯಾಸವೋ ಬಡಿಸಿದಂತೆ ತಮಗೆ ಬೇಕಾದುದನ್ನು ತಿನ್ನಲಾರಂಭಿಸಿದರು… ಅತಿಥೇಯ ಮಹಾಶಯನೂ ತನ್ನ ಆಪ್ತ (?) […]

ಹೀಗಿದ್ದರು ನಮ್ಮ ಅಕ್ಕೋರು

ಹೀಗಿದ್ದರು ನಮ್ಮ ಅಕ್ಕೋರು ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಜೀವನದಲ್ಲಿ ಒಂದು ಅಕ್ಷರವನ್ನು ಕಲಿಸಿದವನೂ ಕೂಡ ಗುರುವಾಗುತ್ತಾನೆ. ಹುಟ್ಟಿದಾರಭ್ಯ ಮಾತನಾಡಲು ಕಲಿಸಿದವಳು ತಾಯಿ. ನಂತರ ತಂದೆ, ಮನೆಯ ಪರಿಸರ, ಸಹಪಾಠಿಗಳೂ ಕೂಡ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾರೆ. ಆದರೆ ಶಾಲೆಯಲ್ಲಿಯೇ ಗುರುಗಳು ಯಾವಾಗಲೂ ವಿಶೇಷವಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ನೆನಪಿನಾಳದಿಂದ ಕದಲುವುದೇ ಇಲ್ಲ. ನಮ್ಮ ನಡೆನುಡಿಗಳನ್ನು ತಿದ್ದುವಲ್ಲಿ ಅವರದು ಪ್ರಮುಖ ಪಾತ್ರವೆಂದೇ ಹೇಳಬಹುದು. ಒಂದು ಮಣ್ಣಿನ ಮುದ್ದೆಯಾಕಾರದಲ್ಲಿ […]

ಸದಾ ನಗಿಸುವ ಘಟನೆ:

ಸದಾ ನಗಿಸುವ ಘಟನೆ: ಒಮ್ಮೆ ತಿಮ್ಮ ತನ್ನ ಅಮ್ಮ ತಿಮ್ಮಕ್ಕನ ಕಣ್ಣಿನ ಆಪರೇಷನ್ಗೆ ಅಂತ ದವಾಖಾನಿಗ ಕರಕೊಂಡು ಬಂದಿದ್ದ. ಮುಂಜಾನೆ ನಸಿಕ್ನಾಗ ಆಪರೇಶನ್ ಮಾಡೋದು ಅಂತ ಡಾಕ್ಟರ ಹೇಳಿದ್ರು. ಸರಿ ತಿಮ್ಮಕ್ಕ ಬೆಡ್ ಮ್ಯಾಲ ಹಂಗ ಅಡ್ಡಾದ್ಲು. ಸಂಜೆಯಿಂದ ರಾತ್ರಿ ತನ ಒಂದೇ ಸಮ ಮಲಗಿ ಮಲಗಿ ಬ್ಯಾಸರ ಆಗಿ, ಹಾಂಗ ಎದ್ದು ಅಡ್ಡಡ್ಲಿಕ್ಕ ತಿಮ್ಮಕ್ಕ ಸೆರಗು ಸರಿ ಮಾಡ್ಕೋತಾ ಹೊರಗ ಹೋದ್ಲು. ಇಕ್ಕಾಡೆ ತಿಮ್ಮ ಸಂಜೆಯಿಂದ ಕುಂತು ಕುಂತು ಬ್ಯಾಸರ ಆಗಿ ಸ್ವಲ್ಪ ಅಡ್ಡರ ಆಗೋಣ […]

ಗುರು ದೇವೋಭವ

ಗುರು ದೇವೋಭವ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾರ್ಶನಿಕರು ಹೇಳಿದರು. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಅನೇಕ ಗುರುಗಳೊಂದಿಗೆ ಮುಖಾಮುಖಿ ಆಗುತ್ತಾರೆ. ಮೊದಲ ಗುರು ತಾಯಿ, ತಂದೆ… ನಂತರದ ಸ್ಥಾನವೇ ಶಾಲೆಯ ಗುರುಗಳು. ಶಾಲೆ, ಕಾಲೇಜು, ವಿಶ್ವ ವಿದ್ಯಾಲಯದ, ಒಟ್ಟಿನಲ್ಲಿ ನಾವು ಎಷ್ಟು ವರ್ಷಗಳ ವರೆಗೂ ಕಲಿಯುವೆವೋ […]

ರಂಗೋಲಿ ಮರಿಗೆ

ರಂಗೋಲಿ ಮರಿಗೆ ರಂಗೋಲಿ ಹಾಕುವುದು ಒಂದು ನಾಜೂಕಿನ ಕಲೆ. ಹೆಬ್ಬೆರಳು, ತೋರುಬೆರಳಿನ ನಡುವೆ ರಂಗೋಲಿ ಪುಡಿಯನ್ನು ಉದುರಿಸುತ್ತಾ ಚುಕ್ಕಿ, ಗೆರೆಗಳನ್ನು ಸೇರಿಸುತ್ತಾ ಚಿತ್ತಾರವಾಗಿಸುವ ಕೈ ಚಳಕ. ಹಿಂದಿನ ಕಾಲದಲ್ಲಿ ರಂಗೋಲಿ ಪುಡಿಯನ್ನು ಇಡಲು ವಿಶೇಷ ಆಕಾರ, ವಿನ್ಯಾಸದ ಪರಿಕರಗಳಿದ್ದವು. ಇವನ್ನು ರಂಗೋಲಿ ಮರಿಗೆ (ಬಟ್ಟಲು) ಎನ್ನುತ್ತಿದ್ದರು. ಇಲ್ಲಿರುವುದು ವಿಶೇಷ ವಿನ್ಯಾಸದಲ್ಲಿ ರೂಪಿತವಾದ ಒಂದು ಮರದ ರಂಗೋಲಿ ಮರಿಗೆ. ಇದರಲ್ಲಿ ಮೂರು ವಿಭಾಗಗಳಿದ್ದು, ಚಿತ್ತಾರ ಬಿಡಿಸಲು ಅವಶ್ಯವಾದ ರಂಗೋಲಿ, ಅರಿಶಿನ, ಕುಂಕುಮವನ್ನು ಒಟ್ಟಿಗೆ ಇಡುವಂತಹ ವ್ಯವಸ್ಥೆಯ ಜೊತೆಗೆ ಅತ್ತ […]

ಇಂದಿನ ಯುವಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳ ಏಕೆ?

ಇಂದಿನ ಯುವಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳ ಏಕೆ? ಇಂದಿನ ಯುವಪೀಳಿಗೆಯ ಜನರಲ್ಲಿ ಆತ್ಮಹತ್ಯೆ ಹೆಚ್ಚಲು ಅತಿಯಾದ ಭೀತಿ, ಆಸೆ, ಅಪೇಕ್ಷೆ, ಒತ್ತಡ , ಮಾನಸಿಕ ಅಪರಿಪಕ್ವತೆಗಳೇ ಕಾರಣ, ರೈತ, ಬಿಲ್ಡರ್, ಸಾಫ್ಟವೇರ್ ಇಂಜನಿಯರ್, ವಿದ್ಯಾರ್ಥಿಗಳು ಮುಂತಾದವರನ್ನು ಸೂಚಿಸಬಹುದು. ರೈತನು ಬೆಳೆಯಲ್ಲಿ ನಷ್ಟವಾದರೆ ಅದಕ್ಕೆ ಕಾರಣವನ್ನು ಹುಡುಕಿ ಮತ್ತೆ ಹೀಗಾಗದಂತೆ ಮುಂಜಾಗರೂಕತೆ ವಹಿಸದೆ ಆತ್ಮಹತ್ಯೆ ಮಾಡಿಕೊಂಡರೆ ಆತನನ್ನು ಅವಲಂಬಿಸಿದವರ ಪಾಡೇನು? ಎಂದು ವಿವೇಚಿಸುವುದಿಲ್ಲ. ಬಿಲ್ಡರ್ ಗಳು ಲಾಭಕ್ಕಾಗಿ ಸಿಕ್ಕಾಪಟ್ಟೆ ಸಾಲಮಾಡಿ ತೀರಿಸಲಾಗದೇ ಹೀಗೆ ಆತ್ಮಹತ್ಯೆಗೆ ಶರಣಾಗುತ್ತಾರೆ. ತಮಗೊಪ್ಪಿಸಿದ ಪ್ರೊಜೆಕ್ಟ್ […]

ಕಣ್ಣು ಬಿಟ್ಟ ಮೇಲೆ ಗೊತ್ತಾಯಿತು,

ಕಣ್ಣು ಬಿಟ್ಟ ಮೇಲೆ ಗೊತ್ತಾಯಿತು, ಮನ ಹಗುರಾಗಿ ಹಾಯಾಗಿ ತೇಲುತ್ತಿತ್ತು ಕಣ್ಣು ಹಾಯಿಸಿದಲೆಲ್ಲ ಹಸಿರ ಹಾಸು ಕಾಣುತ್ತಿತ್ತು ನಡೆದಷ್ಟೂ ದೂರ ಕೆಂಪು ಗುಲ್ಮೋಹೊರ ಗಿಡದ ಸಾಲಿತ್ತು ನೆಲದ ತುಂಬೆಲ್ಲ ಹೂವಿನ ಮೆತ್ತನೆಯ ಹಾಸಿಗೆಯಿತ್ತು ಹೆಜ್ಜೆ ಮೇಲಿಂದ ಪುಷ್ಪಗಳ ಮಳೆಗರೆಯುತ್ತಿತ್ತು ಕೋಗಿಲೆ ಗಿಳಿಗಳ ಕುಜನ ರಿಂಘಾಣಿಸುತ್ತಿತ್ತು ರೆಂಬೆ ಕೊಂಬೆಗಳಿಗೆ ತೂಗು ಉಯ್ಯಾಲೆ ಕಾಣುತ್ತಿತ್ತು ಕಣ್ಮುಚ್ಚಿ ಜೀಕುವಾಗ ಪ್ರೇಮದ ಗಾನ ಕೇಳಿ ಬರುತ್ತಿತ್ತು ಮೆಲ್ಲನೆ ಕಣ್ಣು ಬಿಟ್ಟು ನೋಡಿದಾಗ ಅದು ಕನಸಾಗಿತ್ತು.