Your Cart

Need help? Call +91 9535015489

📖 Print books shipping available only in India. ✈ Flat rate shipping

ಗ್ರಹಣ ಅದನ್ರೀ…

ಗ್ರಹಣ ಅದನ್ರೀ… ಸೂರ್ಯ ಹಾಗೂ ಚಂದ್ರ ಇವರ ನಡುವೆ ಸರಳ ರೇಖೆಯಲ್ಲಿ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರ ಗ್ರಹಣವಾಗುತ್ತದೆ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದು ಸೂರ್ಯನು ಕೆಲ ಕಾಲ ಮರೆಯಾಗುವುದು ಸೂರ್ಯಗ್ರಹಣ ಎಂದೆಲ್ಲ ನಾವು ಪ್ರೈಮರಿ ಶಾಲೆಯಲ್ಲಿದ್ದಾಗಿನಿಂದಲೇ ಓದುತ್ತ ಬಂದಿದ್ದೇವೆ. ಸಾಮಾನ್ಯವಾಗಿ ನಾವು ಗ್ರಹಣಗಳನ್ನು ಭಯಪೂರಿತ ಮನಸ್ಸುಗಳಿಂದಲೇ ಆಹ್ವಾನಿಸುತ್ತೇವೆ. ವಿಜ್ಞಾನಿಗಳು ಹಾಗೂ ಸತ್ಯಾನ್ವೇಷಕರು ಮಾತ್ರ ಇಂಥ ಘಟನೆಗಳನ್ನು ಅತ್ಯಂತ ಆಸಕ್ತಿಯಿಂದಲೇ ಆಹ್ವಾನಿಸುತ್ತಾರೆ. ಸಣ್ಣವರಿದ್ದಾಗಿನಿಂದಲೂ ನಮಗೆ ಈ ಗ್ರಹಣಗಳೆಂದರೆ ಅಚ್ಚರಿಯ […]

ತಿರಿ

ತಿರಿ ರೈತರು ತಾವು ಬೆಳೆದ ದವಸ ಧಾನ್ಯವನ್ನು ಸುರಕ್ಷಿತವಾಗಿ ದಾಸ್ತಾನು ಮಾಡಿಕೊಳ್ಳಲು ತಮ್ಮದೇ ಆದ ಹತ್ತು ಹಲವಾರು ವಿಧಾನಗಳನ್ನು ಕಂಡು ಕೊಂಡಿದ್ದರು. ಅದರಲ್ಲಿ ಅತೀ ಮುಖ್ಯವಾದುದು ಬೈ ಹುಲ್ಲಿನಿಂದ ನಿರ್ಮಿಸುವ ಅತಿ ವಿಶಿಷ್ಟವಾದ ಹಾಗೂ ಅಪರೂಪದ ಧಾನ್ಯ ಸಂಗ್ರಹ ವ್ಯವಸ್ಥೆ. ಇದಕ್ಕೆ ಕನ್ನಡದಲ್ಲಿ ‘ತಿರಿ’ ಎಂತಲೂ, ತುಳುವಿನಲ್ಲಿ ‘ತುಪ್ಪೆ’ ಎಂತಲೂ ಹೆಸರಿಸುತ್ತಾರೆ. ಇದರಲ್ಲಿ ಸಂಗ್ರಹಿಸಿದ ದವಸ ಧಾನ್ಯಗಳು ಹುಳು- ಹುಪ್ಪಟೆಗಳ ಬಾಧೆಗಳಿಂದ ಮುಕ್ತವಾಗಿರುವುದಲ್ಲದೇ, ವಾತಾವರಣದ ಯಾವ ವೈಪರೀತ್ಯೆಗಳಿಂದಲೂ ಹಾಳಾಗುವುದಿಲ್ಲ. ಪರಿಸರ ಸ್ನೇಹಿ ರಚನೆಯಾದ ಈ ಕಣಜ ಪೂರ್ಣ […]

ನಾನು ಧಾರವಾಡೀ..

ನಾನು ಧಾರವಾಡೀ.. ನಾವು ಧಾರವಾಡದವರು… ಬಹಳೇ ಧಾರಾಳಿಗಳು ಎಲ್ಲದರಲ್ಲೂ… ಅಂತೆಯೇ ಮಾತಿನಲ್ಲೂ… ಎತ್ತರದ ಧ್ವನಿಯಲ್ಲಿ, ಅಲ್ಪಪ್ರಾಣ, ಮಹಾ ಪ್ರಣಗಳಿಗೆ ಕಿಂಚಿತ್ತೂ ಲೋಪ ಬರದಂತೆ, ಗಂಡು ಕನ್ನಡದಲ್ಲಿ ಹರಟೆ ಹೊಡೆಯುವದೇ ನಮಗೆ ಹಬ್ಬ.. ನಾನಂತೂ ಶಿಕ್ಷಕಿ ಬೇರೆ. ಬಾಯಿ ತೆಗೆದರೆ ಕನಿಷ್ಠ ಒಂದು ಕೊಠಡಿಯಲ್ಲಿ ಕುಳಿತ ಐವತ್ತು ಹುಡುಗರು ಸದ್ದಿಲ್ಲದೇ ಕುಳಿತು ಕೇಳಬೇಕು, ಅಂಥ ದನಿ. ಅದು ಬೇಕೇಬೇಕು.. ಇಲ್ಲದಿದ್ದರೆ ಐವತ್ತು ಚಿಲ್ಲರೆ ಧ್ವನಿಗಳ ಸದ್ದು ಕೇಳಬೇಕಾಗುತ್ತದೆ… ಒಂದು ರೀತಿಯಲ್ಲಿ ನಮ್ಮ ದನಿಯೇ ನಮ್ಮ ( ಶಿಕ್ಷಕರ)identity..   ಇದು […]