ಎಂಥ magic ಸಂಖ್ಯೆ!!! ಕೆಲವರು ಹೆಚ್ಚು ಹಣ ತೆತ್ತು ತಮ್ಮ ವಾಹನಗಳಿಗೆ ಖರೀದಿಸುವದಿಲ್ಲವೇ, ಅಂಥ ಮೋಡಿ ಮಾಡುವ ಸಂಖ್ಯೆ! ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ವರ್ಷ. ಆಗ ಇದ್ದ ಅಂದಾಜೇ ಬೇರೆ. ವರ್ಷ 20-20 match ನಂತೆ ತ್ವರಿತವಾಗಿ, ಮೋಜಿನಲ್ಲಿ, ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಕಳೆದುಹೋಗುತ್ತದೆ ಎಂಬ ಎಣಿಕೆ ನಮ್ಮದಾಗಿತ್ತು. ದೀರ್ಘಕಾಲದ ಆಟವಲ್ಲ. Stumps ಗಳಿಗೆ ಅಂಟಿಕೊಂಡು ‘ ಕುಟುಕುಟು’ ಆಡಬೇಕಿಲ್ಲ. ಸೋಲುವ ಭಯದಿಂದ ಆಟ ಎಳೆದಾಡುವ ಕಾರಣವೇ ಇಲ್ಲ ಎಂಬಂಥ ಅನಿಸಿಕೆ. ಆದರೆ ಆದದ್ದೇ ಬೇರೆ. […]
