Your Cart

Need help? Call +91 9535015489

📖 Print books shipping available only in India. ✈ Flat rate shipping

ದೇವರಿಗೊಂದು ಪತ್ರ (32)

ದೇವರಿಗೊಂದು ಪತ್ರ (32) ನೀ.. ಮುನಿದರೆಂತ ಚೆನ್ನ ಹೇಳು ಎನ್ನ ಓ.. ವಾಸುದೇವ ನೀ.. ಮೌನವಾದರೆಂಥ ಚೆಂದ? ಹೇಳು ಓ..ಮಾಧವ ತಾಯಿ, ಕರುಳ ಕುಡಿಯ ದೂರ ಸರಿಸಿ ಮುನಿಸಿದ್ದು ಇದೆಯಾ?ಗೋವಿಂದ ಗೋಮಾತೆ ಕರುವ ಹಸಿವ ಅರಿಯದೆ ಮೊಳೆಯುಣಿಸದ್ದು ಕಂಡೆಯಾ? ಶ್ಯಾಮ ಪಕ್ಷಿ ತಾನು ಮರಿಗೆ ಗುಟುಕು ಕೊಡದೆ ಮೂನಿಸಿದ್ದು ಕಂಡೆಯಾ? ನಂದಾಗೋಪಾಲ ಈ…ಭೂಲೋಕದಲ್ಲಿ ಕ್ಷುಲ್ಲಕ ಮನುಜಳು ಮಾತ್ರ ನಾನು…ಅಚ್ಯುತ ನಿನ್ನಾಧಾರವಿರದೇ ಇನ್ನಾರು ಗತಿ ಎನ್ನ ಜೀವನ ನೌಕೆಗೆ.. ಓ ಪಾರ್ಥಸಾರಥಿ ನೀ ನಡೆಸಿದಂತೆ ನಡೆವುದೊಂದೆ ಇಚ್ಛೆ ಎನಗೆ […]

ನ್ಯಾಯ

ನ್ಯಾಯ: ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯದರ್ಶನ ಎಂದು ಹೇಳುತ್ತಾರೆ. ನ್ಯಾಯದ ಅರ್ಥವು ಸಾಮಾನ್ಯ ಜೀವನದಲ್ಲಿ ಕಾನೂನು, ಯೋಗ್ಯ, ಉಚಿತ ಎಂದಾಗುತ್ತದೆ. ನ್ಯಾಯಶಾಸ್ತ್ರವು ಕಾನೂನಿನ ತತ್ವ ಹಾಗೂ ಸಿದ್ಧಾಂತ. ಕಾನೂನು ತಜ್ಞರು ಹೇಳುವಂತೆ ಇದು justice ಇಂಗ್ಲಿಷ್‍ನಲ್ಲಿ ಜ್ಯೂರಿಸ್ಪ್ರುಡೆನ್ಶಿಯಾ ಎಂಬ ಲ್ಯಾಟಿನ್ ಪದದ ವ್ಯುತ್ಪತ್ತಿ. ಜ್ಯೂರಿಸ್ ಎಂದರೆ ಕಾನೂನು ಅಥವಾ ನಿಯಮ. ಪ್ರುಡೆನ್ಶಿಯಾ ಎಂದರೆ ಜ್ಞಾನ. ಆದರೆ ಇಲ್ಲಿ ನಮ್ಮ ನ್ಯಾಯಶಾಸ್ತ್ರವು ಕವಲೊಡೆಯುತ್ತದೆ. ನ್ಯಾಯದರ್ಶನವು ಸಂಸ್ಕೃತ ಶಬ್ದ. ಇದರ ಅರ್ಥ ವ್ಯುತ್ಪತ್ತಿಯ ಆಧಾರದ ಮೇಲೆ ಮಾರ್ಗದರ್ಶನ ಮಾಡುವ ಎಂದಾಗುತ್ತದೆ. ಇಲ್ಲಿ […]

ಭಂಟ

‘ಭಂಟ’ ಹಾಗಂದ್ರೆ! ಕನ್ನಡ ಶಬ್ದಕೋಶದಲ್ಲಿ ವಿವರಿಸುವ ವೀರನೂ ಅಲ್ಲ, ದಾಸನೂ ಅಲ್ಲ. ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಕೇಳಿ ನೋಡಿ, ‘ಹೋಯ್…! ಓ… ಅದಾ ‘ಸ್ವಾಂಗೆ’ ಕಡಿಯದಾ..! (ಅಡಿಕೆ ಸೋಗೆಯಿಂದ ಹಾಳೆ ಬೇರೆ ಮಾಡೋ ಸಾಧನ) ಎನ್ನುವ ಉತ್ತರ ಬರುತ್ತದೆ. ಹೌದು, ‘ಟ್ರೈಪಾಡ್’ನಂತೆ ಕಾಣುವ ಈ ವಸ್ತುವಿನ ಹೆಸರು ‘ಭಂಟ’ ಅಡಿಕೆ ಮರದಿಂದ ಒಣಗಿ ಬೀಳುವ ಸೋಗೆಯಿಂದ ಹಾಳೆಗಳನ್ನು ಬೇರ್ಪಡಿಸಲು ಈ ಭಂಟ ಬೇಕೆ,ಬೇಕು. ಹಿಂದಿನ ಕಾಲದಲ್ಲಿ ಮಲೆನಾಡು ಪ್ರದೇಶಗಳಲ್ಲಿ ಮನೆಯ ಮೇಲ್ಚಾವಣಿಗೆ ಹೊದಿಸಲು ಅಡಿಕೆ ಸೋಗೆ ಅತ್ಯಂತ […]

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು ನಮ್ಮ ತಂದೆ ಪುಸ್ತಕಪ್ರಿಯರು. ದಿನನಿತ್ಯದ ಕೆಲಸ ಮುಗಿಸಿ ಎಷ್ಟೇ ಸಮಯ ಸಿಗಲಿ ಕೈಯಲ್ಲಿ ಪುಸ್ತಕವಿರಲೇ ಬೇಕು. ಮನೆಗೆ ಯಾರೇ ಬರಲಿ ಉಭಯ ಕುಶಲೋಪರಿಗೂ ಮುನ್ನವೇ ಪುಸ್ತಕ ಪ್ರಸ್ತಾಪ… ಯಾವ ಹೊಸ ಪುಸ್ತಕ ಬಂದಿದೆ? ಯಾವುದಾದರೂ ಖರೀದಿಸಿದೆಯಾ? ಯಾವುದು ಇತ್ತೀಚೆಗೆ ಮುದ್ರನ ಕಂಡಿದೆಯಾ? ಮುಂತಾಗಿ ಪ್ರಶ್ನೆಗಳ ಸುರಿಮಳೆ… ಅಂದ ಮಾತ್ರಕ್ಕೆ ನಾವೆಲ್ಲ ಖರೀದಿಸಿಯೇ ಓದುತ್ತಿದ್ದೆವು ಎಂದಲ್ಲ… ನಮಗೆ ಆ ಯೋಗ್ಯತೆ ಎಳ್ಳಷ್ಟೂ ಇರಲಿಲ್ಲ. ನಮ್ಮ ತಂದೆಯ ಪ್ರಾಮಾಣಿಕ ಹುಚ್ಚಿಗೆ ಮನಸೋತು ಆಪ್ತರು, […]

ಶ್ರೀ ವಿಷ್ಣು ಸಹಸ್ರ ನಾಮ-ಭಾಗ-1

ಶ್ರೀ ವಿಷ್ಣು ಸಹಸ್ರ ನಾಮ ಶ್ರೀ ಗುರುಭ್ಯೋ ನಮಃ ಹರಿಃ ಓಂ ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರುˌ ಹಿರಿಯರುˌ ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ನಂತರ ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಭೀಷ್ಮಾಚಾರ್ಯರ ಬಳಿಗೆ ಕರೆತಂದು ಆತನಿಗೆ ಧರ್ಮ ಪಾಠವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಧರ್ಮದ ಪರ […]

ವೈದ್ಯೋ ನಾರಾಯಣೋ ಹರಿಃ

ವೈದ್ಯೋ ನಾರಾಯಣೋ ಹರಿಃ ಡಾಕ್ಟರ ಎಂದಾಕ್ಷಣವೇ ಕಣ್ಣ ಮುಂದೆ ಸೂಟುಬೂಟು ಹಾಕಿದ, ಮೂಗಿನ ಮೇಲೆ ಕನ್ನಡಕವೇರಿಸಿದ, ಶುಭ್ರಬಟ್ಟೆ ತೊಟ್ಟು, ಕೊರಳಲ್ಲಿ ಮಾಲೆಯ ಹಾಗೆ ಸ್ಟತೋಸ್ಕೋಪ ಹಾಕಿಕೊಂಡ ಮನುಷ್ಯನ ಆಕೃತಿ ಅಲೆಅಲೆಯಾಗಿ ತೇಲಿ ಬರುತ್ತಿದ್ದಿರಬೇಕಲ್ಲವೇ. ಆದರೆ ನಾನು ಹೇಳಹೊರಟ ಡಾಕ್ಟರ ಎಂಥದೂ ಮುಚ್ಚಟೆ, ಹಮ್ಮುಬಿಮ್ಮು ಇರದ ಸೀದಾಸಾದಾ ಬಿಳಿಯ ಪಾಯಜಾಮ ಹಾಗೂ ಜುಬ್ಬಾ ತೊಟ್ಟ ಡಾಕ್ಟರ ಕೆರೆಮನೆ. ಆತನ ಮನೆಇರುವುದು ಒಂದು ವಿಶಾಲವಾದ ಕೆರೆಯ ದಂಡೆಯ ಪಕ್ಕದಲ್ಲಿ. ಎದುರಿಗೆ ಹನುಮಪ್ಪ ದೇವರ ಗುಡಿ. ಹೀಗಾಗಿ ಆತನಿಗೆ ಅಡ್ಡಹೆಸರು ಹನುಮಪ್ಪನ […]

ಮಧ್ಯರಾತ್ರಿ ಸೂರ್ಯನ ಕಂಡೆ

ಮಧ್ಯರಾತ್ರಿ ಸೂರ್ಯನ ಕಂಡೆ! ಗೋಧೂಳಿ ಮುಸ್ಸಂಜೆಯ ಮಂದಕಾಂತಿಯ ಪ್ರಭೆಯನ್ನು ದಿನವಿಡೀ ದಣಿದ ನಮ್ಮ ದೇಹ ಮನಸ್ಸುಗಳಿಗಿತ್ತು ನಕ್ಕು ಒಂದು ಬೈ ಹೇಳಿ, ದಿಗಂತದ ಅಂಚಿನಲ್ಲಿ ಮರೆಯಾಗುವ ಸೂರ್ಯ ನಮಗೆ ಮರಳಿ ಮುಖದೋರುವ ಸಮಯ ಬಹುಶ: ಮಾರನೆಯ ಬೆಳಗಿನ ಆರು ಅಥವಾ ಅದರ ಹಿಂಚೆ ಮುಂಚೆ. ಅದುವರೆಗೆ ನಿಶೆ, ರಾತ್ರಿ ಮತ್ತು ನಿದ್ದೆ ಇವು ನಮ್ಮ ಸಂಗಾತಿಗಳು. ಆದರೆ ಜಗತ್ತಿನಲ್ಲಿ ಸಂಜೆಯಾದೊಡನೆ ಮುಳುಗಿ ಹೋಗಲು ‘ಒಲ್ಲೆ’ನೆನ್ನುವ ಸೂರ್ಯನಿರುವ ಜಾಗಗಳೂ ಉಂಟು. ರಾತ್ರಿಯ ಹನ್ನೆರಡು ಗಂಟೆ ಮೀರಿ ಹೋದರೂ, ತನ್ನ […]

ಚುಟುಕುಗಳು

ಚುಟುಕುಗಳು 1.ಪ್ರೇಮಿಗಳಿಬ್ಬರು ಒಲುಮೆಯಲಿ ವಿಶಾಲ ಸಾಗರ ನಡೆದಿದೆ ಮೌನ ಸಂಭಾಷಣೆಗಳ ಮಹಾಪೂರ ಅಗಲಿ ಇರಲಾರದ ಸಿಹಿ ಸಂಕಟಗಳ ಅಬ್ಬರ ಆತ್ಮಗಳ ಮಧುರ ಮಿಲನದ ಶೃಂಗಾರ 2.ಅಂಬರದಲಿ ರಥವೇರಿದ ಹೊಂಗಿರಣದ ಸೂರ್ಯ ಇದುವೇ ಋತುಮಾನದ ಪಲ್ಲಟದ ಕಾರ್ಯ ಕಳೆದು ಮೈಚಳಿ ತಂಡಿಹ ಬಿಸಿ ಝಳದ ಸಾರ ಹೊಂದಾಣಿಕೆಯೇ ಮನುಜನ ನೈಜ ಕಾಯ 3. ಸಿರಿತನವೆನಿತು ಕರುಣಿಸುವುದು ಹೃದಯನಂದ ಬಡತನದಲ್ಲೂ ಒಲವ ಉಂಡವನೆ ಆತ್ಮಾನಂದ. ಬೇಕಿಲ್ಲ ಹಣದ ದರ್ಪ ಹಸಿವ ನೀಗಿಸಲು ನೈಜ ನಡೆ ನುಡಿ ಒಂದೇ ಸಾಕು ಬದುಕಲು […]

‘ವಾಕಿಂಗ್ ಸ್ಟಿಕ್’

‘ವಾಕಿಂಗ್ ಸ್ಟಿಕ್’ ಮೇಲು ನೋಟಕ್ಕೆ ಹುಲ್ಲು ಕಡ್ಡಿಯಂತೆ ಕಾಣುವ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗಷ್ಟೇ ಗೊತ್ತಾಗುವುದು ಇದು ಬರೀ ಒಣಹುಲ್ಲು ಕಡ್ಡಿಯಲ್ಲವೆಂದು. ‘ವಾಕಿಂಗ್ ಸ್ಟಿಕ್’ ಎನ್ನುವ ಈ ಕೀಟ ಚಲಿಸಿದಾಗಷ್ಟೇ ಜೀವವಿದೆಯೆಂದು ಗೊತ್ತಾಗುತ್ತದೆ. ಕದಲದೇ ನಿಂತಾಗ ಇದು ಒಣಹುಲ್ಲೇ ಸರಿ. ಮೂರು ಜೋಡಿ ಕಾಲುಗಳು, ಸಂಯುಕ್ತ ಕಣ್ಣುಗಳು ಮತ್ತು ಒಂದು ಜೋಡಿ ಆಂಟೆನಾ ಹೊಂದಿರುವ ಈ ಕಡ್ಡಿಕೀಟ ಹಸಿರಿನೊಂದಿಗೆ ಹಸಿರಾಗಿ, ಒಣಹುಲ್ಲಿನೊಂದಿಗೆ ಒಣಹುಲ್ಲಾಗಿ ಬಿಡುವ ರಕ್ಷಣಾ ತಂತ್ರ ಅನುಸರಿಸುವುದು ನಿಜಕ್ಕೂ ಅಚ್ಚರಿ. ಹಲವು ಜೀವ ಸಂಕುಲದ ನೆಲೆಬೀಡಾಗಿರುವ ಪಶ್ಚಿಮಘಟ್ಟದಲ್ಲಿ […]