ವೊ ದಿನ್ ಭೀ ಕ್ಯಾ ದಿನ್ ಥೆ.. “ ನಾ ಇನ್ನ ಯಾವದೇ ಧಾರ್ಮಿಕ ಕಾರ್ಯ ಕ್ರಮ ಮಾಡಸ್ಲಿಕ್ಕೆ ಹೋಗಬಾರದಂತ ಮಾಡೇನಿ…. ಜನರೊಳಗ ಈಗ ಮೊದಲಿನ ಶೃದ್ಧಾ ಇಲ್ಲ. ಕಾಟಾಚಾರಕ್ಕೆ ಮಾಡಿ ಮುಗಸ್ತಾರ. ಮಾಡಬೇಕು ಅನ್ನೋಕಿಂತ ತೋಸ್ಗೋಬೇಕನ್ನೋದ ಭಾಳ ಇರ್ತದ…. ಧರ್ಮ, ನಂಬಿಕೆ ಜಗದಾಗ, ಬರೇ ಆಡಂಬರ ಇರ್ತದ. ಮಾಡಬೇಕದ್ದನ್ನು ಮೊಟಕ ಮಾಡಿ, ಬಿಡಬಹುದಾದ್ದರ ಮೆರವಣಿಗಿ ನಡೀತದ… ಮನಸ್ಸಿಗೆ ಭಾಳಾ ಬ್ಯಾಸರಾಗ್ತದ…. ಹೌದಪಾ ಸಂಸಾರದ …. ಖರ್ಚದ ಅನ್ನೋ ದರ್ದ ಅಂತೂ ಇಲ್ಲ… ಅದರ ಬದ್ಲು ಶೃದ್ಧಾದ್ಲೆ […]
