Your Cart

Need help? Call +91 9535015489

📖 Print books shipping available only in India. ✈ Flat rate shipping

ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು

ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು ಇಡೀ ಜಗವನ್ನೇ ಸ್ತಬ್ಧವಾಗಿಸಿ ತಾನೂ ಮೌನವಾಗಿಹಳು ಜನಸಂದಣಿಯ ಗದ್ದಲಕ್ಕೆ ತಲೇಶೂಲೆ ಅನುಭವಿಸಿದಳು ಅದೆಷ್ಟು ಆಕೆ ವಾಹನಗಳ ಶಬ್ಧಕ್ಕೆ ನಲುಗಿದ್ದಳು ನಿಮಿಷ ನಿಮಿಷಕ್ಕೂ ಅದೆಷ್ಟು ಹೋಗೆ ತುಂಬಿಕೊಂಡಿದ್ದಳು ಅದೆಷ್ಟು ಬಾರಿ ಕೊಡಲಿ ಪೆಟ್ಟಿಗೆ ಹಸಿರು ರವಿಕೆ ಕುಪ್ಪಸ ಕಳಚಿದಳು ಸಹನಮೂರ್ತಿ ಧರೆ ಮತ್ತೂ ಮಳೆ ಬೆಲೆ ಸಕಾಲಕ್ಕೆ ಕೊಟ್ಟವಳು ಎಷ್ಟಾದರೂ ಕೆರೆ ಬಾವಿ ಕಾನನ ನದಿ ಒಂದೂ ಬಿಡದೆ ಮುಚ್ಚಿ ಮರೆದೆವು ನಾವು ಆದರೂ ಬರಡಾಗಿಸದೆ ಬಿಡಲಿಲ್ಲ ಉಳಿಸಲಿಲ್ಲ ನಿರ್ದಯಿ ಮನುಜ ಭಾರ […]

ಸ್ಥಿತಪ್ರಜ್ಞತೆ

ಸ್ಥಿತಪ್ರಜ್ಞತೆ ಸ್ಥಿತಪ್ರಜ್ಞ ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗದ್ವೇಷರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವ ಎಂಬುದು ಸಾಮಾನ್ಯ ಅರ್ಥ. ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ಕಾಲದಲ್ಲಿ ಕೂಡ ಅತ್ಯಂತ ಪ್ರಸ್ತುತವಾಗಿವೆ. ಸ್ಥಿತಪ್ರಜ್ಞ […]

ದೀಪದ ಮಲ್ಲಿ

ದೀಪದ ಮಲ್ಲಿ ಕಂಚಿನಿಂದ ತಯಾರಾದ ಈ ‘ದೀಪದ ಮಲ್ಲಿ’ ಗೆ ಈಗ ಶತಮಾನದ ಸಂಭ್ರಮ. ನಾಲ್ಕೂವರೆ ಇಂಚು ಎತ್ತರವಿರುವ ಈ ದೀಪದ ಕಂಬ ಚಿಕ್ಕದಾದರೂ ಶಿಲ್ಪಿಯ ಕೌಶಲ್ಯ, ಸೃಜನಶೀಲತೆಯಿಂದಾಗಿ ಗಮನ ಸೆಳೆಯುತ್ತದೆ. ದೇವರ ಮುಂದೆ ದೀಪ ಬೆಳಗಲು ಬಳಕೆಯಾಗುತ್ತಿದ್ದ ಈ ಮೂರ್ತಿಯ ಕುಸುರಿ ಕೆಲಸದ ನಾಜೂಕು ಗಮನಿಸುವಂತಹದ್ದು. ಇದರ ವಿಶೇಷತೆಯೆಂದರೆ- ಚಿಕ್ಕ ಮೂರ್ತಿಯಲ್ಲೂ ನೀಳ ಹೆರಳು, ಹೆರಳಿಗೆ ಸಿಕ್ಕಿಸಿದ ಜಡೆ ಬಿಲ್ಲೆಗಳು, ಕೈ ಬಳೆ, ಕಂಠಾಭರಣ, ತೋಳುಬಂದಿ, ಕರ್ಣಾಭರಣವಲ್ಲದೇ ಸೊಂಟಪಟ್ಟಿ, ಕಾಲಂದುಗೆ, ನೀಟಾಗಿ ಕೊರೆದ ಸೀರೆಯ ನೆರಿಗೆ, […]

ಬದುಕು ಜಟಕಾ ಬಂಡಿ… ವಿಧಿಯದರ ಸಾಹೇಬ

ಬದುಕು ಜಟಕಾ ಬಂಡಿ… ವಿಧಿಯದರ ಸಾಹೇಬ….” “ನಾನೊಬ್ಬ ವಿಫಲ ಉದ್ಯಮಿ…. ಯೌವುದೂ ನನ್ನ plan ನಂತೆ ನಡೆಯಲಿಲ್ಲ. ಇದಕ್ಕೆ ಕೇವಲ ನಾನೇ ಹೊಣೆ ನನ್ನಾಸ್ತಿ ವಿವರ ಕೊಟ್ಟಿದ್ದೇನೆ. ಅದನ್ನು ಮಾರಿ ತಲುಪಿಸಬೇಕಾದವರಿಗೆ ಹಣ ತಲುಪಿಸಿ” ಇದು ಸಾಯುವ ಮುನ್ನ ಉದ್ಯಮಿ ಸಿದ್ಧಾರ್ಥ ಬರೆದರು ಎನ್ನಲಾದ ಪತ್ರ… ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಉದ್ಯಮಿಯೊಬ್ಬರ ಈ ದುರಂತ ಬದುಕು ದೈವದ ಮುಂದೆ ಮನುಷ್ಯ ಎಷ್ಟೊಂದು ದುರ್ಬಲ ಎನ್ನುವದನ್ನು ನೆನಪಿಸುತ್ತದೆ. ಯಕ್ಷ ಯಮನಿಗೆ ಕೇಳಿದ “ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಯಾವುದು” […]

ಮದುವೆಯಾದ ಹೊಸತರಲ್ಲಿ

ಮದುವೆಯಾದ ಹೊಸತರಲ್ಲಿ ಮದುವೆಯಾದ ಹೊಸತರಲ್ಲಿ ಒಗಟಿನಲ್ಲಿ ಪತಿಯ ಹೆಸರು ಹೇಳಲು ಎಲ್ಲರೂ ದುಂಬಾಲು ಬೀಳುತ್ತಿದ್ದರು. ನಗಾದರೋ ಒಂದೂ ಒಗಟು ಬರುತ್ತಿರಲಿಲ್ಲ. ಸಿಂಪಲ್ಲಾಗಿ ಗಂಡನ ಹೆಸರನ್ನು ಹೇಳುತ್ತಿದ್ದೆ. ಒಂದಿನ ಸಂಬಂಧಿಕರ ಮನೆಗೆ ಅರಿಷಿಣ ಕುಂಕುಮಕ್ಕೆಂದು ಕರೆದಾಗ ಅಲ್ಲಿಯ ಹಿರಿಯರೊಬ್ಬರು, ‘ಏನವಾ ಇಷ್ಟ ಉದ್ದಕ ಕಲ್ತರನೂ ಒಂದ ಒಗಟಾ ಹೇಳ್ಳಿಕ್ಕೆ ಬರೋದಿಲ್ಲೇನು?” ಎಂದು ಕೇಳಿದಾಗ ನಾಚಿಕೆಯಿಂದ ತಲೆಕೆಳಗಾಗುವ ಹಾಗಾಯಿತು. ಮುಂದೆ ತವರು ಮನೆಗೆ ಬಂದಾಗ ನಮ್ಮ ತಾಯಿಯಿಂದ ಒಂದು ಒಗಟನ್ನು ಕಲಿತುಕೊಂಡೆ. ಆಕೆಯೋ ಪುಂಖಾನುಪುಂಖಲೇ ಒಗಟುಗಳನ್ನು ಹೇಳುತ್ತಿದ್ದಳು. ದಶಾವತಾರದ ಒಗಟುಗಳನ್ನು […]

ನನ್ನೊಳಗಿನ ಅವಳು

ನನ್ನೊಳಗಿನ ಅವಳು!? ಹೇಳಲಾಗದು ನನ್ನೊಳಗಿನ ಅವಳ ಮೋಡಿ ಮೌನವಾದರೆ ಸಾಕು ಮಾತಿನ ಮಳೆಗರೆವಳು ಏಕಾಂಗಿಯಾಗಿರಲು ಥಟ್ಟನೆ ಪ್ರತ್ಯಕ್ಷ ಆಗುವಳು ಒಳ್ಳೆ ಜೊತೆಗಾತಿ ನನ್ನೊಳಗಿನ ಅವಳು ನಗುವಾಗ ನಾನು, ಸಂತಸ ಪಡುವಳು ಅವಳು ದುಃಖ ಆವರಿಸಿದಾಗ ಸಂತೈಸುವ ಹೃದಯದವಳು ಆಗದೆಂದು ಕೈಕಟ್ಟಿ ಕುಳಿತರೆ ವ್ಯಂಗ್ಯ ಮಾಡುವಳು ಒಳ್ಳೆಯ ಸ್ಫೂರ್ತಿಯ ಚಿಲುಮೆ ನನ್ನೊಳಗಿನ ಅವಳು ಸೋತಾಗ ಗೆಲುವಿನ ಹಾದಿಗಳ ತೋರುವ ಗುರು ಗೆದ್ದಾಗ ಅಹಂಕಾರ ಬಾರದಂತೆ ಎಚ್ಚರಿಸುವ ಧ್ಯಾನಿ ಸಲ್ಲದ ಮೋಹ ಪಾಶದಲಿ ಸಿಲುಕದಂತೆ ಹಿಡಿವ ಯೋಗಿ ಅಜ್ಞಾನದ ಕೊಳೆಯಿಂದ […]

ನೀತಿ ಮತ್ತು ನೈತಿಕತೆ

ನೀತಿ ಮತ್ತು ನೈತಿಕತೆ ನಾನು ಆಯ್ಕೆ ಮಾಡಿಕೊಂಡ ವಿಷಯ ನೀತಿ ಮತ್ತು ನೈತಿಕತೆ. ಪುರಾತನ ಕಾಲದಿಂದ ಇಂದಿನವರೆಗೂ ನಾವು ಮಾನವನ ಜೀವನದ ರೀತಿಯತ್ತ ದೃಷ್ಟಿ ಹರಿಸಿದರೆ ಕಂಡುಬರುವ ಒಂದು ಮುಖ್ಯ ಅಂಶವೆಂದರೆ ಒಬ್ಬಂಟಿ ಮಾನವನಿರಲಿ, ಕುಟುಂಬವಿರಲಿ, ಸಮಾಜವಿರಲಿ ಅಥವಾ ದೇಶವೇ ಇರಲಿ, ಅದರ ಸರಳ ನಿರ್ವಹಣೆಗೆ ಒಂದು ನೀತಿ ಸಂಹಿತೆ ಇರಲೇಬೇಕೆಂಬುದು. ನೀತಿ ಸಂಹಿತೆ ಇರದೇ ಹೋದಲ್ಲಿ ಮಾನವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೇ ಸರಿ. ನೀತಿಗಳಲ್ಲಿ ಸಾವಿರಾರು ವರ್ಷಗಳ ನಂತರ ಕೂಡ ಪ್ರಸಿದ್ಧವಿರುವ ನೀತಿಗಳೆಂದರೆ ವಿದುರನೀತಿ […]

ಯಾರು ಬರುವರೋ

ಯಾರು ಬರುವರೋ….! ಎದೆಯ ಕದವನು ಸರಿಸಿ ಸ್ವಲ್ಪವೇ ಮೆಲ್ಲ ನೀ ಅಡಿ ಇಟ್ಟಿಯೇ ಅಮರಿಕೊಂಡಿಹ ಕತ್ತಲೆಲ್ಲವು ಚದುರಿ ಹೋಯಿತು ನೀ ಸುರಿಸಿಹ ಬೆಳಕಿಗೆ ॥ ಪ್ರಖರವಾಗಿಹ ನಿನ್ನ ಬೆಳಕಲಿ ಬದುಕು ಮುಂದಡಿ ಇಟ್ಟಿದೆ, ಕವಲು-ತಿರುವನು ದಾಟಿ ಮುಂದಕೆ ಬದುಕು ಸಾಗಿದೆ ಮನ ಮರೆಸುತಾ ಜೀವದಾ ಮಧು ಹೀರುತಾ ॥ ಮನದ ನೆಮ್ಮದಿ ಸ್ಥಿರಗೊಳುವ ಮುನ್ನವೆ ಮರುಕ ತೋರದೆ ಹೊರಟಿಹೆ ಕದವ ಮುಚ್ಚಿ ಇಳಿದು ಹೋದೆ ತೊರೆದು ಎನ್ನಯ ಪ್ರೀತಿಯ ಹೇಳದೇ ಇನಿತೂ ಕಾರಣ..! ॥ ಹೊರಗೆ ಬೆಳಕು […]

ಗಾಡ್ ಇಸ್ ಇನ್ ದ ಹೇವನ್ ಆ್ಯಂಡ್ ಆಲ್ ಇಸ್ ರೈಟ್ ವಿಥ್ ದ ವಲ್ಡ್

God is in the heaven and all is right with the world ಅವಳ ಹೆಸರು ಕವಿತಾ… ಬೀದರ ಜಿಲ್ಲೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ. ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿದ್ದಾಳೆ.  But she is a university by herself. ‘ಸುಶಿಕ್ಷಿತರೆಲ್ಲ ಸುಸಂಸ್ಕೃತರಲ್ಲ” ಎಂಬುದಾಗಿ ಮಾತೊಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲೂ ಹೇಳಬಹುದು. “ಅಶಿಕ್ಷಿತರೆಲ್ಲ ಅನಾಗರಿಕರಲ್ಲ” ಇದು ಈ ಐದು ವರ್ಷಗಳ ಲ್ಲಿ ನಾನು ಕವಿತಾಳಿಂದ ಕಲಿತ ಪಾಠ. […]