Your Cart

Need help? Call +91 9535015489

📖 Print books shipping available only in India. ✈ Flat rate shipping

ದೇವರಿಗೊಂದು ಪತ್ರ (39)

ದೇವರಿಗೊಂದು ಪತ್ರ (39) ಹರಿ “ಮನ” ದ ಮಾತೊಂದು ಹೇಳುವುದಿದೆ ನಿನ್ನಲ್ಲಿ ಹಿಂದೆ ನೊಂದಿರಲಿಲ್ಲ ಈ “ಮನ” ಇಂದು ನೊಂದಿದೆ ನೋವಿನಲಿ ದಿನ ದಿನದ ಮುಖವಾಡ ಅರಿಯುವುದು ಹೇಗೆ ಹೇಳು ನನ್ನಲ್ಲಿ ಯಾರ ಹೇಗೆ ನಂಬುವುದು ಅರಿಯದಾದೆ ನಾ ಈ ಜಗದಲ್ಲಿ ಮುಂದೆ ಹಾಡಿ ಹಿಂದಾಡಿಕೊಳುವರಯ್ಯ ಏನ ಹೇಳಲಿ ಎತ್ತಿ ಹಿಡಿವರು ಒಮ್ಮೆ ಮತ್ತೆ ಎತ್ತಿ ಒಗೆವರು ಕೆಳಗೆ ನೆಲದಲ್ಲಿ ಕಣ್ಣ ಒರೆಸುವರು ಮುಂದೆ, ವ್ಯಂಗ್ಯ ನಗುವರು ಹಿಂದೆ ಏನ ಹೇಳಲಿ ಹೊಗಳುವರು ಹೊಗಳು ಭಟ್ಟರಂತೊಮ್ಮೆ ಮಗದೊಮ್ಮೆ […]

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ-೨ 

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ-೨ ವಿದುರನು ಧೃತರಾಷ್ಟ್ರನಿಗೆ ಹೇಳಿದ ನೀತಿಯಲ್ಲಿ ತಂದೆಯಾದವನೊಬ್ಬ ಮಗನನ್ನು ಬೆಳೆಸಬೇಕಾದ ಕ್ರಮ ಏನು ಎಂಬ ಅಂಶಗಳು ಕೂಡ ಅಡಕವಾಗಿವೆ. ಅದರ ಜೊತೆಗೇ ರಾಜನಾದವನು ಮಗನನ್ನು ಒಳ್ಳೆಯ ಕ್ರಮದಲ್ಲಿ ಬೆಳೆಸುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುತ್ತಾನೆ. ಸರಿಯಾದ ‘ಲಾಲನೆ’ ತಪ್ಪಿದಲ್ಲಿ ಮಕ್ಕಳು ಕೆಡುತ್ತಾರೆ ಎಂಬುದು ವಿದುರನ ವಿಚಾರ. ತನ್ನ ನೀತಿಯಲ್ಲಿ ಯಾರು ಯಾವುದರಿಂದ ಕೆಡುತ್ತಾರೆ ಎಂಬುದನ್ನು ಕುಮಾರವ್ಯಾಸನ ವಿದುರ ಹೇಳುವುದು ಹೀಗೆ- ಯತಿ ಕೆಡುಗು ದುಸ್ಸಂಗದಲಿ ಭೂ ಪತಿ ಕೆಡುಗು ದುರ್ಮಂತ್ರಿಯಲಿ ವರ ಸುತ […]

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ…! ಯ್ಯಾಂಟ್ ಲಯನ್ ಎಂಬ ಇರುವೆಗಳ ಸಿಂಹ ಸ್ವಪ್ನ ಬಳಕೆಯ ಮಾತಿನ ‘ಗುಬ್ಬಚ್ಚಿ ಹುಳ’ ನೆಲದೊಡಲನ್ನು ಮುಳ್ಳಿನಂಥ ತನ್ನ ಕೊಂಬಿನಿಂದ ಸಟಸಟನೆ ಬಗೆಯುವುದನ್ನು ನೋಡಿದರೆ, ಮಾನವ ನಿರ್ಮಿತ ಯಾವುದೋ ಯಂತ್ರಕ್ಕೆ ಸಡ್ಡು ಹೊಡೆಯುವಂತೆ ಭಾಸವಾಗುತ್ತದೆ. ಯರ್ರಾಬಿರ್ರಿಯಾಗಿ ಕುಣಿತೋಡದೇ, ಒಂದು ನಿರ್ದಿಷ್ಟ ಜಾಗದಲ್ಲಿ ಹಲವಾರು ಕುಣಿಗಳನ್ನು ಒಂದು ಹದದಲ್ಲಿ ನಿರ್ಮಿಸುವ ಇವುಗಳ ತಾಂತ್ರಿಕತೆ, ತಲ್ಲೀನತೆಗಳು ವಿಸ್ಮಯಗೊಳಿಸುವುದಂತೂ ನಿಜ. ಈ ಜಗತ್ತು ವಿಸ್ಮಯಗಳ ಗೂಡು. ನಾವು ಯೋಚಿಸಲೂ ಆಗದಂತಹ ಅನೇಕ ಅಚ್ಚರಿಗಳನ್ನು ನಿಸರ್ಗ ಇಲ್ಲಿ ಸೃಷ್ಟಿಸಿದೆ. […]

ಬಂದೇ ಬರತಾವ ಕಾಲಾ

ಬಂದೇ ಬರತಾವ ಕಾಲಾ….. ಅದೊಂದು ಕಾಲವಿತ್ತು. ಅಪರೂಪಕ್ಕೆ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ಹಿಂಬಾಲಿಸಿ ರಸ್ತೆಗಳಗುಂಟ ಓಡುವುದು, ಕಣ್ಣಿನ ಗುಡ್ಡೆ ಹೊರಬರುವಷ್ಟು ಅಗಲವಾಗಿ ತೆರೆದು ಯಾರಾದರೂ ಕಾಣುತ್ತಾರೆಯೇ ಎಂದು ನೋಡುವುದು, ಅಲ್ಲಿಂದ ಅಕಸ್ಮಾತ್ ಜಾರಿಬಿಟ್ಟರೆ ಎಂದು ಹೌಹಾರುವದು, ಹಾರಾಟ ಮುಗಿಸಿದ ನಂತರ ನಿಲುಗಡೆ ಎಲ್ಲಿ? ಹೇಗೇ? ಎಂದು ಕಲ್ಪನೆ ಮಾಡುವುದು, ಒಂದೇ ಎರಡೇ… – ಬಾಲ್ಯದ ಹುಚ್ಚುಚ್ಚಾರಗಳು, ಹುಡುಗಾಟಗಳು… ನಮ್ಮ ಹಳ್ಳಿಯ ಒಬ್ಬ ಹುಡುಗಿಯನ್ನು ಪರದೇಶಕ್ಕೆ ಹೋಗಿಬಂದ ಹುಡುಗನಿಗೆ ಮದುವೆ ಮಾಡಿ ಕೊಟ್ಟಾಗ ಊರಲ್ಲಿ ಜನಜಾತ್ರೆ ಸೇರಿತ್ತು, ಅವನ […]

ಗುರುಪೂರ್ಣಿಮ

  ಓಂ ಶ್ರೀ ಗುರುಭ್ಯೋ ನಮಃ ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ  ವೈ  ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ಎಂದು  ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ ಗುರು ಎಂದರೆ ನಮಗೆ ಯಾರು ಬುದ್ಧಿ ಮಾತು ತಿಳಿಮಾತನ್ನು ಹೇಳುತ್ತಾರೋ ಅವರೆಲ್ಲರೂ ನಮ್ಮ ಗುರುಗಳು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಪುರಂದರದಾಸರು ಸತ್ಯವನ್ನೇ ಹೇಳಿದ್ದಾರೆ. ಭಾರತದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ ನಮ್ಮೆಲ್ಲರ […]

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು ಇದು ನಮ್ಮ ಯುಗದ ಕವಿಯೊಬ್ಬ ಜಗದ ಕವಿಗೆ ಕೊಟ್ಟ ಬಿರುದು! ಇದು ನಮ್ಮ ನಾರಣಪ್ಪನ ಪ್ರತಿಭೆಗೆ ಹಿಡಿದ ಕನ್ನಡಿ.. ಇಂದಿಗೂ ತನ್ನ ಜನಪ್ರಿಯತೆಯನ್ನು ಅಂದಿನOತೆಯೇ ಉಳಿಸಿಕೊಂಡಿರುವ “ಕರ್ಣಾಟಭಾರತಕಥಾಮಂಜರಿ”ಎOಬ ಸುಂದರ ಕೃತಿಯನ್ನು ಜನತೆಗೆ ಇತ್ತಂಥ ಸಾಹಿತ್ಯಶ್ರೇಷ್ಠನೇ ಈ ನಮ್ಮ ಗದುಗಿನ ನಾರಣಪ್ಪ ಎಂದರೆ ನಮ್ಮ ಕುಮಾರವ್ಯಾಸ! ಕನ್ನಡ ಸಾಹಿತ್ಯದ ಎರಡು ಪ್ರತಿಭೆಗಳು ನಮ್ಮ ಸಾಹಿತ್ಯದ ಎರಡು ಪ್ರಮುಖ […]

ರೇಷ್ಮೆ ಮೈಯ ಉಣುಗಲ್ಲದ ಉಣುಗು

ರೇಷ್ಮೆ ಮೈಯ ಉಣುಗಲ್ಲದ ಉಣುಗು… ಭೂಮಿಗೆ ಮೊದಲ ಮಳೆಯ ಸಿಂಚನವಾಗುತ್ತಿದ್ದಂತೆ ಪರಿಸರದಲ್ಲೇನೋ ಹೊಸ ಜೀವ ಸಂಚಾರ ನೆಲದ ಪ್ರಾಕೃತಿಕ ಸೌಂದರ್ಯ ಆಗ ಇಮ್ಮಡಿಗೊಳ್ಳುತ್ತದೆ ಆಗ ಸೃಷ್ಟಿಯ ಈ ಸುಂದರ ರೂಪವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಆನಂದ. ಹಲವಾರು ವಿಸ್ಮಯಗಳ ತಾಣವಾದ ಪ್ರಕೃತಿಯಲ್ಲಿ ಹಲವು ತರದ ಸಸ್ಯಗಳು ಜೀವಿಗಳು ಸೂಕ್ತಕಾಲದಲ್ಲಿ ಪ್ರಕಟಗೊಳ್ಳುತ್ತವೆ. ಹೀಗೆ ಕಾಣಿಸಿಕೊಳ್ಳುವ ಸೂಕ್ಷ್ಮ ಜೀವಿಗಳಲ್ಲಿ ನುಣುಪಾದ ‘ರೇಷ್ಮೆ’ ಮೈಯ ಕೀಟವೂ ಒಂದು. ಎಂತಹವರನ್ನೂ ತನ್ನತ್ತ ಸೆಳೆಯಬಲ್ಲ ಗಾಢ ಬಣ್ಣದ ಮೃದು. ಮೃದುವಾದ ಶರೀರ ಹೊಂದಿರುವ ಈ […]

ಹೀಗೊಂದು ಅಲ್ಬಮ್ ಕಥೆ

ಹೀಗೊಂದು ಅಲ್ಬಮ್ ಕಥೆ… ಇತ್ತೀಚೆಗೆ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳ plan ಆಗಿತ್ತು. ನಾನು ಅವರ ಮದುವೆಯ ಅಲ್ಬಮ್ ತೆಗೆದು ನೋಡಲೆಂದು ಹೊರಗಿಟ್ಟಿದ್ದೆ. ಇಪ್ಪತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡುವದು ನನ್ನ ಉದ್ದೇಶವಾಗಿತ್ತು. ಅದನ್ನು ಸಾಕಷ್ಟು ಮಜಾ ತೆಗೆದುಕೊಂಡು ಒಂದೊಂದೇ ಪುಟ ತೆರೆದು ನೆನಪುಗಳನ್ನು ಮರಳಿ ಮರಳಿ ಮೆಲುಕು ಹಾಕುತ್ತಾ ಹಸಿರಾಗಿಸಿಕೊಂಡದ್ದಾಯಿತು. ಅಲ್ಬಮ್ ತುಂಬಾ ದೊಡ್ಡದಿದ್ದು ಒಂದೇ […]

ಚೈತ್ರದ ಚಿತ್ತಾರ

ಚೈತ್ರದ ಚಿತ್ತಾರ ಚೈತ್ರದ ಚಿಗುರಿನ ಮರೆಯಲಿ ಅವಿತೊಂದು ಹಕ್ಕಿ ಹಾಡು ಹೇಳುತಲಿ ಮನಕೆ ಎಂಥದೋ ಆನಂದ ಪ್ರಕೃತಿ ಸೌಂದರ್ಯದ ಆಹ್ಲಾದ. ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು ಭೂ ತಾಯಿಯ ಧೂಳು ಗೋವಿನ ಪಾಲು ಕೆಂಪಡರಿದ ಮುಗಿಲು ಎಲ್ಲೆಲ್ಲೂ ಹರಸೀತು ಚೆಲುವಿನ ಹೊನಲು. ಚೈತ್ರದ ಚಿತ್ತಾರದಿ ಹೊಸಚಿಗುರು ಮರದಿ ಇಣುಕೀತು ಸವಿನೆನಪು ಕಾಡೀತು ಮನದಿ ಒನಪು. ಕೋಗಿಲೆಯ ತಾರುಣ್ಯ ನವಿಲಿನಾ ಲಾವಣ್ಯ ಕಾಡಿನ ಗಂಧ ಅರಳಿದಾ ಹೂವಿನ ಸುಗಂಧ. ಸ್ವಚ್ಛಂದ ಗಗನ ಮೂಡಿಸಿದೆ ಅಲ್ಲಿ ತನ್ನಯ ನಯನ ಎಲ್ಲೆಲ್ಲೂ […]