ದೇವರಿಗೊಂದು ಪತ್ರ! (40) ಪತ್ರವಿದು ವಿಶೇಷ ಓ ಹರಿಯೆ ಓದು ಈ ಕ್ಷಣಕ್ಕೆ ತಪ್ಪದೆ ನೀನು! ಈ ನಾಲ್ಕು ದಿನದಿಂದ ಅತೀತ ಆನಂದದಲ್ಲಿ ಮನವೆನ್ನ ಮುಳುಗಿಹುದು! ಅರಿಯದ ಸಂತಸದ ಭಾವ ಅನುಭಾವದಲಿ ಆತ್ಮವಿದು ತೇಲುತಿಗುದು ಆನಂದಭಾಷ್ಪ ಕಣ್ಣಂಚಲಿ ಬಿಡದೆ ಜಿನುಗುತಿಹುದು ನೋಡಿದವರು ಎನೆನ್ನುವರೀಪರಿಯ ಭ್ರಾಂತಿಗೆ ಎಂಬಳಕು ಮನದೊಳಿಹುದು! ನೀ ಹುಟ್ಟಿದಾಷ್ಟಮಿಯು ಇಂದು ಜನ್ಮಾಷ್ಟಮಿ ನಿನ್ನದಿಹುದು! ಇಂದು ಕುಳಿತಲ್ಲಿ ನಿಂತಲ್ಲಿ ನಿನ್ನದೇ ಧ್ಯಾನದಲ್ಲಿ ನಾ ಭಿನ್ನ ಪಾತ್ರದಲ್ಲಿ ಕಲ್ಪಿಸಿಹೆನು ನೀ ಹುಟ್ಟಿದಂತೆ ಈ ಕ್ಷಣಕ್ಕೆ ನಾ ದಾದಿಯಾಗಿ ನಿನ್ನ […]
