Your Cart

Need help? Call +91 9535015489

📖 Print books shipping available only in India. ✈ Flat rate shipping

ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು…

ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು… “ಅವನು ನನಗಿಂತ ಹದಿಮೂರು ವರ್ಷ ಸಣ್ಣವ, ನಾನು ಎತ್ತಿ ಆಡಿಸಿದ ಮಗು. ಅವನೇ ನನ್ನ ಉತ್ತರಕ್ರಿಯೆ ಮಾಡಬೇಕಿತ್ತು.ಆದರೆ ನಾವು ಮಾಡುತ್ತಿದ್ದೇವೆ. ಇದು ಏಕಾಯಿತು? ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ “ಏನೆಲ್ಲ ಸಾಧನೆ ಮಾಡಿ ಮುಗಿಸಿದ್ದಾನೆ! ಬಹುಶಃ ಆಯ್ತು, ಮಾಡಬೇಕಾದ್ದೆಲ್ಲ ಮಾಡಿ ಮುಗಿಸಿದ್ದೀಯಾ, ವಾಪಸ್ ಬಂದು ಬಿಡು” ಅಂದಿರಬೇಕು ದೇವರು… ‘ತಮ್ಮನಾಗಿ’ ಬಂದು ‘ಅಪ್ಪ’ನಾಗಿ ಹೋಗಿಬಿಟ್ಟ. ನಮ್ಮನ್ನು ಎತ್ತಿ ಒಯ್ದು ಅವನನ್ನು ವಾಪಸ್ ಕರೆಸಿಕೊಳ್ಳಲು ಬರುತ್ತಿದ್ದರೆ ಎಂಥ ಚನ್ನಾಗಿತ್ತು! ಒಂದು ಮಾತು, ಅವನು ದೈಹಿಕವಾಗಿ […]

ಅನುವಾದ ಸಾಹಿತ್ಯ  ಭಾಗ-೨ 

ಅನುವಾದ ಸಾಹಿತ್ಯ  ಭಾಗ-೨ ಮೊದ ಮೊದಲು ಸಣ್ಣ ಪುಟ್ಟ ಲೇಖನಗಳು… ನಂತರ ಕವನಗಳು… ಸ್ವರಚಿತ ಕಥೆಗಳು.. ವಿಜಯಪುರದಿಂದ ಧಾರವಾಡಕ್ಕೆ ಬಂದನಂತರ ನನ್ನ ಗೆಳತಿಯರ ಬಳಗ ಬೆಳೆದಿತ್ತು. ಶುಭದಾ ಅಮಿನಭಾವಿ ಎಂಬ ಹೆಸರಾಂತ ಅನುವಾದಕಿ ನನ್ನ ಆತ್ಮೀಯ ಗೆಳತಿಯಾಗಿ ದೊರಕಿದ್ದಳು. ಅವಳು ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದವಳು. ಭೀಮಸೇನವನ್ನು ಅನುವಾದ ಮಾಡಿದ ಖ್ಯಾತಿ ಅವಳದು. ಆಕೆ ಪ್ರಿಯಾಂಕಾ ಪತ್ರಿಕೆಯಲ್ಲಿ ಬೆನಕ ಅನುವಾದಿತ ಕಥಾಸ್ಪರ್ಧೆಯಲ್ಲಿ ಎರಡು, ಮೂರು ಬಾರಿ ಪ್ರಶಸ್ತಿ ಪಡೆದಿದ್ದಳು. ನಿಜ ಹೇಳಬೇಕೆಂದರೆ […]

ಮಿಸ್ರಿ ಜೇನು….!

ಮಿಸ್ರಿ ಜೇನು….! ಜೇನು ತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಮಿಸ್ರಿ ಜೇನು ಇತರ ಪ್ರಭೇದಗಳಿಗಿಂತ ತೀರಾ ಚಿಕ್ಕದು. ಅತ್ಯಂತ ಗೌಪ್ಯ ಸ್ಥಳಗಳಾದ ಕಲ್ಲಿನ ಸಂದುಗಳು, ಮಣ್ಣಿನ ಗೋಡೆ, ಮರದ ಪೊಟರೆಗಳು ಮತ್ತು ಹಳೆಯ ದೇವಸ್ಥಾನದ ಕಲ್ಲ ಪಡಕುಗಳಲ್ಲಿ ಗೂಡು ಮಾಡಿಕೊಂಡು ಆರೋಗ್ಯದಾಯಕ ಔಷಧಯುಕ್ತ ಜೇನು ನೀಡುವ ಈ ಜೇನು, ಕೊಂಡಿಯಿಲ್ಲದ ಜೇನು, ಗಲಾಟೆ ಇಲ್ಲದೆ ಶಾಂತಿಯಿಂದ ಬದುಕುವ ಈ ಜೇನು ಹುಳುಗಳು ತಮ್ಮ ಗೂಡನ್ನು ಮೇಣದಿಂದ ಮುಚ್ಚಿ, ಎಲ್ಲಿಯೂ ಬೆಳಕು- ಗಾಳಿ ಬರದಂತೆ ಕತ್ತಲ ಕೋಣೆಯಲ್ಲಿ ಜೀವನ ಮಾಡುತ್ತವೆ. […]

ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ…

ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ… ‘ ಅವಳು’ -ಗುಲ್ಬರ್ಗದವಳು. ಹೆಸರು ಕವಿತಾ. ಶಾಲೆಯ ಮೆಟ್ಟಿಲು ಏರಿದವಳಲ್ಲ. ಆಧಾರ ಕಾರ್ಡ್, ರೇಶನ್ ಕಾರ್ಡ್, ಮೋದಿಯವರ Zero bank account, Election Identity, ಇಂಥ ಕಾರಣಗಳಿಗಾಗಿ ಸಹಿ ಮಾಡಲು ಮೂರಕ್ಷರದ ತನ್ನ ಹೆಸರು ಬರೆಯುವದನ್ನು ಕಲಿಯಲು ಮೂರುದಿನ ತೆಗೆದುಕೊಂಡವಳು. ಕುಲ ದೀಪಕನ ಹಂಬಲ ವಿಫಲವಾಗಿ ಹುಟ್ಟಿದ ಮೂವರು ಜನ ಅಕ್ಕ ತಂಗಿಯರು, ಕೊನೆಗೊಬ್ಬ ತಮ್ಮನೊಂದಿಗೆ ತೀವ್ರ ಬಡತನದಲ್ಲಿ ಬೆಳೆದವಳು. ಎಲ್ಲ ಅಕ್ಕಂದಿರ ಮದುವೆಯಾಗುವದರಲ್ಲಿ ಇದ್ದು ಬಿದ್ದುದನ್ನೂ ಕಳೆದುಕೊಂಡ ಮೇಲೆ ಇವಳ ಹೊತ್ತಿಗೆ […]

ಅನುವಾದ ಸಾಹಿತ್ಯ ಭಾಗ -೧

ಅನುವಾದ ಸಾಹಿತ್ಯ “ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ. ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ” ಎಂದು ಭಾಷಾಂತರ ಅಥವಾ ಅನುವಾದದ ಬಗ್ಗೆ ಬಿ. ಎಂ. ಶ್ರೀ. ಯವರು ಹೇಳಿದ್ದಾರೆ. ‘ಭಾಷಾಂತರ ಸೋಮಾರಿಗಳ ಕೆಲಸವಲ್ಲ, ಅದು ಪ್ರತಿಭಾವಂತರು ಕೈಗೊಳ್ಳಬೇಕಾದ ಕಾರ್ಯ ‘ ಎಂದು ದೇ. ಜವರೇಗೌಡರವರು ಹೇಳಿದ್ದಾರೆ. ‘ಒಂದು ಸಂಸ್ಕೃತಿಯ ಸಾಹಿತ್ಯವು ಇನ್ನೊಂದು ಸಂಸ್ಕೃತಿಯಲ್ಲಿ ಮೊದಲು ಪ್ರವೇಶಿಸುವುದೇ ಭಾಷಾಂತರದ ಮೂಲಕ. ಆಮೇಲೆ ಆ ಭಾಷಾಂತರವು ಸ್ವತಂತ್ರ ಸಾಹಿತ್ಯಕೃತಿಗಳಿಗೆ ದಾರಿ ಮಾಡಿಕೊಡುತ್ತದೆ” ಎಂದು ಡಾ. ಎಂ.ಎಂ. ಕಲ್ಬುರ್ಗಿಯವರು ಹೇಳಿದ್ದಾರೆ. ಕುವೆಂಪುರವರು ಹೇಳುವಂತೆ […]

ಸಾರ್ಥಕದ ಸಾವು!

ಸಾರ್ಥಕದ ಸಾವು! ಅನುದಿನವೂ ದಿನಕ್ಕಿಂತ ಹೆಚ್ಚುತ್ತಿದೆ ಶೋಕ ಮೌನದಲ್ಲೂ ಉಕ್ಕುವ ಕಂಬನಿ ತಡೆಯಲಾಗದ ದುಃಖ ಕೇಳಿದಷ್ಟು ಮತ್ತೆ ಮತ್ತೆ ಕೇಳಲು ಬಯಸುತ್ತಿದೆ ನಿನ್ನದೇ ಮಾತು ಈ ಜೀವ ನೋಡಿದಷ್ಟೂ ನೋಡುತ್ತಲೇ ಇರಬೇಕೆನ್ನುವ ಭಾವ ದಿನ ದಿನವೂ ನೀ ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ಮಾಣಿಕ್ಯ ಸಾವ ಕಂಡ ಕ್ಷಣದಿಂದ ಜೀವಂತವಾದ ಪುನೀತ ರಾಜಕುಮಾರ ಬದುಕುವುದಾದರೆ ಹೀಗೆ ಬದುಕಬೇಕೆಂದು ತೋರಿಸಿದ ಭಾಗ್ಯವಂತ ಕೋಟಿ ಕೋಟಿ ಕನ್ನಡಿಗರಿಗೆ ಪ್ರೇಮದ ಕಾಣಿಕೆ ನೀಡಿದ ಸಿರಿವಂತ ನೊಂದ ಹೆಂಗಳೆಯರ ದಾರಿ ದೀಪವಾಗಿ ದಾರಿ […]

ಚಲುವು..

ಚಲುವು… ” ಇನ್ನೆಷ್ಟು ದಿನ ವಿದ್ದೀತು ನನ್ನ ಚಲುವು?.. ನನ್ನವಳು ಕೇಳಿದಳು ಇವತ್ತು.. ” ನಿನಗೆಷ್ಟು ವರ್ಷ ಬೇಕು?.. ಮೂವತ್ತು? ಇಲ್ಲವೇ ಐವತ್ತು..? ನಿನಗೆ ಎಂಬತ್ತಾಗಲಿ..ಆಗ ನೋಡು ನಿನ್ನ ಚಲುವಿನ ಗತ್ತು… ನಿನ್ನಾಯ್ಕೆಯ, ನಿನ್ನೊಲುಮೆಯ ಬದುಕು ನಿನಗಿತ್ತ ಗಟ್ಟಿ ಮೈಮೆರಗು… ಕಾಂತಿಯುತ ಪಕ್ವ ಸೊಬಗು… ಮಾಗಿಯ ಮೆರಗಿಗೆ ಬೆಳ್ಳಿ ಕೂದಲು… ದಶಕಗಳ ಕಲಿಕೆ, ಕೊಡುಕೊಳ್ಳುವಿಕೆ ನಿನ್ನ ಕಣ್ಣಂಚಿನಲ್ಲಿ ಮೂಡಿಸಿದ ಮಿಂಚು ಮಂದಹಾಸ… ಎಂದಾದರೊಮ್ಮೆ ನಿನ್ನ ನೋಡಲು ಬರುವ ಮಕ್ಕಳು ಕಂಡಾರು ತಮ್ಮ ಇತಿಹಾಸ…. ನಿನಗೀಗ ಕಿಂಚಿತ್ತು ಭಯವಿಲ್ಲ….ನಿನಗೆ […]