Your Cart

Need help? Call +91 9535015489

📖 Print books shipping available only in India. ✈ Flat rate shipping

ತ್ಯಾಜ್ಯ ನಿರ್ವಹಣೆ

ತ್ಯಾಜ್ಯ ನಿರ್ವಹಣೆ “ಕಸಾನ ಅಲ್ಲಿಲ್ಲೆ,ಗಟರದಾಗ ಒಗೀತೀರ್ಯಾಕ? ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ದಾಗ ಕಸದ ಡಬ್ಬೀ ಇಟ್ಟೇವಿ. ಅದರಾಗನ ಹಾಕರಿ. ” “ನಾ ಇಲ್ಲೇ ಒಗ್ಯಾಕಿ. ನಿಂಗೇನ ಮಾಡೂದು? ನಿನ್ನ ಮನೀ ಹತ್ರಂತೂ ಚೆಲ್ಲಿಲ್ಲಾ…” “ರಸ್ತೆದಾಗ ಯಾಕ ಊಟಾ ಮಾಡಿದ ಎಲೀ ಛೆಲ್ಲತೀರೀ? ಕಸದ ಡಬ್ಯಾಗ ಹಾಕ್ರೆಲಾ…” “ಯಾಕರೀ ನಿಮಗ ಮಾಡಲಿಕ್ಕೆ ಕೆಲಸಿಲ್ಲೇನು?ಎಲ್ಲಾರಿಗೂ ಫುಕಟ ಉಪದೇಶ ಕೊಟಗೋತ ಹೊಂಟೀರಿ?” “ಮುಗೀತsss ಮಂಗಳಾರತೀ.. ಊರ ಉಸಾಬರಿ ಮಾಡಿ…” ನಮಗ ಇಂಥಾ ಅನುಭವ ಜೀವನದಾಗ ಭಾಳ ಆಗತಾವರೀ. ಅದಕ ಕಾರಬಾರ […]

ಜಾತ್ರೆಯೆಂಬ ಮಾಯಾಲೋಕ

ಜಾತ್ರೆಯೆಂಬ ಮಾಯಾಲೋಕ ಜಾತ್ರೆ ಎಂದ ಕೂಡಲೇ ಕಣ್ಣಮುಂದೆ ಬರುವುದು ವರ್ಷಕೊಮ್ಮೆ ನಡೆಯೋ ನಮ್ಮೂರಿನ ಗಣಪತಿ ದೇವರ ಜಾತ್ರೆ. ಅದು ನಮಗೆ ವಿಶೇಷದಲ್ಲಿ ವಿಶೇಷ. ಜಾತ್ರೆಗಿನ್ನೂ ತಿಂಗಳಿರುವಾಗಲೇ “ ಏ… ಜಾತ್ರೆ ಬಂತು ಕಣೋ…!” ಅಂತ ಕಣ್ಣರಳಿಸುತ್ತಲೇ ಎದುರಾದವರೊಂದಿಗೆ ಮಾತು ಮೊದಲಾಗುತ್ತಿತ್ತು. ಆಗ ಮೈಯಲ್ಲಿ ಆವಾಹನೆಯಾಗುವ ಗೆಲುವು, ಖುಷಿ, ಸಂಭ್ರಮ ಹೇಳುವುದೇ ಬೇಡ. ಮಜವೋ ಮಜ…! ಒಂದು ವಾರಕ್ಕಿಂತಲೂ ಹೆಚ್ಚು ನಡೆಯುವ ಈ ಜಾತ್ರೆ ಊರವರ ಪಾಲಿಗೆ ಒಂದು ದೊಡ್ಡ ಹಬ್ಬದಂತಯೇ ಮನೆಗೆ ನೆಂಟರಿಷ್ಟರು, ಸಂಬಂಧಿಕರ ಆಗಮನದಿಂದ ಸಂತಸ […]

” ನಾ ‘ನಿನ’-ಗೆಂದೇ ಬರೆದಾ ಪ್ರೇಮದ ಓಲೆ…” ‌‌‌

” ನಾ ‘ನಿನ’-ಗೆಂದೇ ಬರೆದಾ ಪ್ರೇಮದ ಓಲೆ…” ‌‌‌ ಅದು ೧೯೬೮-೬೯ ರ ಸಮಯ. ನನ್ನ B.A ಪದವಿಯ ಫಲಿತಾಂಶ ಅದೇ ತಾನೇ ಬಂದಿತ್ತು. ಪಾಸಾಗಿದ್ದೆ. ಮುಂದೇನು ಎಂಬ ಸಮಸ್ಯೆಯೇನೂ ಇರಲಿಲ್ಲ.ನೌಕರಿಯ ಸಂಭಾವ್ಯತೆ ಇಲ್ಲವೇ ಇಲ್ಲ ಎಂಬಷ್ಟು ದೂರದ ಮಾತು.ಆರು ತಿಂಗಳ ಹಿಂದೆ ಅಕ್ಕನ ಮದುವೆಯಾಗಿ ಮನೆ ನೋಡಿಕೊಳ್ಳುವ ಹೊರೆ ನನ್ನದಾಗಿತ್ತು. ಮನೆಯಲ್ಲಿ ಎಲ್ಲರೂ ದೊಡ್ಡವರೇ ಇದ್ದುದರಿಂದ ಹೆಚ್ಚಿನ ಹೊಣೆ ಏನೂ ಇರಲಿಲ್ಲ.ಆ ವೇಳೆಯನ್ನು ಬಳಸಿಕೊಳ್ಳಲು ಹಾಲಭಾವಿಯವರ school of arts ದಲ್ಲಿ painting class, ಗಾಂಧಿಚೌಕಿನಲ್ಲಿಯ […]

ಜ್ಞಾನದ ಬೆಳಕು…..

ಜ್ಞಾನದ ಬೆಳಕು….. ಒಮ್ಮೆ ರಮಣ ಮಹರ್ಷಿಗಳ ಬಳಿಗೆ ಬಂದ ಒಬ್ಬ ವ್ಯಕ್ತಿ. ರಮಣರ ಕಾಳಿಗೆ ಬಿಕ್ಕಿ ಬಿಕ್ಕಿ ಅಳುತ್ತ, ಜೀವನದಲ್ಲಿ ತುಂಬ ನೊಂದಿರುವುದಾಗಿಯೂ, ಯಾವ ಕೆಲಸವೂ ಕೈ ಹತ್ತದೇ ಸೋತು ಸುಣ್ಣವಾಗಿರುವೆನೆಂತಲೂ ಬದುಕುವ ದಾರಿ ಕಾಣದೇ ನೊಂದಿರುವ ದಾರಿ ಎಂದು ರೋದಿಸುತೊಡಗಿದ. ಸಂಸಾರದ ತಾಪತ್ರಯದಲ್ಲಿ ನೊಂದು ಬೆಂದು ಆ ವ್ಯಕ್ತಿ, ಸಾವೇ ತನ್ನ ಮುಂದಿನ ದಾರಿ ಎಂದು ರಮಣರಲ್ಲಿ ತನ್ನ ಸಂಕಟ ತೋಡಿಕೊಳ್ಳುತ್ತಿರುವ ಆ ವೇಳೆಯಲ್ಲಿ ಮಹರ್ಷಿಗಳು ಊಟದ ಎಲೆಯನ್ನು ಜೋಡಿಸುತ್ತಿದ್ದರಂತೆ ಶಾಂತ ಚಿತ್ತದಿಂದ ಆತನ ಮಾತುಗಳನ್ನು […]

ಮಕರ ಸಂಕ್ರಮಣ…ಈಗೆಲ್ಲಾ ಭಣಭಣ…

ಮಕರ ಸಂಕ್ರಮಣ…ಈಗೆಲ್ಲಾ ಭಣಭಣ… ‌‌‌‌ ‌‌” ಇವತ್ತ ಪ್ರಾರ್ಥನಾ ಆದಮ್ಯಾಲ ಒಂದನೇಯ ಪೀರಿಯಡ್ ನಡಿಯೂದಿಲ್ಲ, ಎಲ್ಲಾರೂ ಆ ಪೀರಿಯಡ್ನ್ಯಾಗ ಹೆಚ್ಚು ಗದ್ದಲಾ ಮಾಡದ ಉಳಿದ ಎಲ್ಲಾರ್ಗೂ ಎಳ್ಳು ಕೊಡಬಹುದು. ಇಡೀ ದಿನ ಕಂಡ ಕಂಡಲ್ಲೆ ಅದೊಂದನ್ನsss ಮಾಡಕೋತ ತಿರಗ್ಬಾರ್ದಂತ ಈ ವ್ಯವಸ್ಥೆ ಮಾಡೇವಿ, ಸರೀಯಾಗಿ ಒಂದು ತಾಸಿಗೆ ಮೊದಲನೇ ಗಂಟೆ ಆಗ್ತದ ,ಆಗ ಎಲ್ಲಿದ್ರೂ ಬಂದು class ಸೇರ್ಕೋಬೇಕು.ಎರಡನೇ ಬೆಲ್ ಗೆ ಟೀಚರ್ ಒಳಗ ಬರೋದ್ರೊಳಗ ಒಬ್ಬನೇ ಒಬ್ಬ ವಿದ್ಯಾರ್ಥಿ ಹೊರಗ ಕಾಣೋ ಹಂಗಿಲ್ಲ.ತಿಳಿತಿಲ್ಲೋ?”- ಶಾಲೆಯೊಳಗ ಪ್ರತಿವರ್ಷ ಜನೆವರಿ […]

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ 

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ “ಬೆಳೆದದ್ದು ಕನಸು ಕಾಣುತ್ತಲೇ… ಕಂಡ ಕನಸು ಸಾಕಾರಗೊಳಿಸಿಕೊಳ್ಳಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ… ಈಗ ಕನಸು ಸಾಕಾರಗೊಂಡಿವೆ… ಆದರೂ ಮತ್ತೇನಾದರೂ ಮಾಡಬೇಕೆಂಬ ಹಂಬಲ, ತುಡಿತ…” ಇದು ಡಾ ವೀಣಾರವರ ಬಗ್ಗೆ ಹೇಳಬಹುದಾದ ಮಾತು. ಸಂತೂಬಾಯಿಯವರ ಶತಮಾನದ ಹಿಂದಿನ ಕನಸಿಗೆ ತಮ್ಮ ಕಥೆ, ಕಾದಂಬರಿಗಳ, ವೈಚಾರಿಕ ಬರಹಗಳ ಮೂಲಕ ಜೀವ ತುಂಬುತ್ತ ಅವರು ನಡೆದ ಕಾಲುದಾರಿಯನ್ನೇ ಹೆದ್ದಾರಿಯಗಿ ವಿಸ್ತರಿಸಲು ಪ್ರಯತ್ನಿಸಿದ ಲೇಖಕಿಯರ ಸಾಧನೆಯಲ್ಲಿ ಡಾ. ವೀಣಾ ಅವರ ಪಾಲು ಗಮನಾರ್ಹವಾದುದು. ಅನನ್ಯ […]